Wednesday, 27 February 2013

Folk song of a tulu folk dance "chandakku nalike" by Babu ajala Balila

Vocaroo Voice Message
 ಚಂದಕ್ಕು ನಲಿಕೆ  ಒಂದು ಅಪರೂಪದ  ತುಳು ಜಾನಪದ ಕುಣಿತ . ಇದು ಮಹಿಳೆಯರ ಜಾನಪದ   ಕುಣಿತ  . ಒಬ್ಬ ಮಹಿಳೆ ಹಾಡುತ್ತಾರೆ . ಅದಕ್ಕೆ  ಸೊಲ್ಲಿನ ಧ್ವನಿ ಸೇರಿಸಿಕೊಂಡು ಇತರೆ ೭-೮  ಮಹಿಳೆಯರು ವೃತ್ತಾಕಾರವಾಗಿ  ನೃತ್ಯ ಮಾಡುತ್ತಾರೆ . ಕಂಬಳ ಕೋರಿಯ ದಿನದಂದು ಈ   ಜನಪದ ನೃತ್ಯವನ್ನು ಸುಳ್ಯ ಪರಿಸರದಲ್ಲಿ  ಮಾಡುತ್ತಿದ್ದರು. ಇತರೆ ಜಾನಪದ ಕುಣಿತಗಳಂತೆ  ಇದು ಕೂಡ ಈಗ ತೆರೆ ಮರೆಗೆ ಸರಿದಿದೆ.  ಬೈಲ ಮಾರಿ ನಲಿಕೆಯಂತೆ ಈ ಜನಪದ ನೃತ್ಯ   ಕೂಡ  ವಿದ್ವಾಂಸರ ಗಮನಕ್ಕೆ ಬಾರದ ಕಾರಣ ಇನ್ನೂ ಅಜ್ಞಾತವಾಗಿಯೇ ಉಳಿದಿದೆ. ಇದರ ಹಾಡನ್ನು  ಬಾಬು ಅಜಲರು  ಸುಶ್ರಾವ್ಯವಾಗಿ ಹಾಡಿದ್ದಾರೆ . 

No comments:

Post a Comment