Thursday 18 April 2013

ಹೀಗೊಂದು ಎಂ ಫಿಲ್ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

                             

                      
ಕೆಲ ತಿಂಗಳ ಮೊದಲು  ನಾನು ಬೆಳ್ಳಾರೆಗೆ ಹೋದಾಗ ಇಬ್ಬರು ಯುವಕರು ನನ್ನನ್ನು ಬೇಟಿ ಮಾಡಿ "ನಾವು ನಿಮ್ಮ ಮೇಲೆ ಎಂ ಫಿಲ್ ಮಾಡ್ತೇವೆ. ನಿಮ್ಮ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದರು !
ನನಗೆ ಒಂದು ಕ್ಷಣ ಗಡಿ ಬಿಡಿ ಆಯಿತು.ಸುಧಾರಿಸಿಕೊಂಡು "ಸರಿ ನನ್ನ ಬಗ್ಗೆ ಏನು ಯಾವ ತರಹ ಸಂಶೋಧನೆ ? ಕೇಳಿದೆ .ಒಬ್ಬಾತ ಮೇಡಂ "ನಾನು ನಿಮ್ಮ ಕೃತಿಗಳ ಬಗ್ಗೆ ಡಾ.ಲಕ್ಷ್ಮಿ ಜಿ ಪ್ರಸಾದರ ಕೃತಿಗಳು-ಒಂದು ಅಧ್ಯಯನ ಅಂತ ಮಾಡುತ್ತೇನೆ .ಇವನು ನಿಮ್ಮ ಬದುಕಿನ ಕುರಿತು ಮಾಡೋದು" ಅಂತ ಹೇಳಿದ. 
ಹ್ಹಾ !!
ನನ್ನ ಮೇಲೆ ಇಬ್ಬರು ಸಂಶೋಧನೆ ಮಾಡಿ ಎರಡು ಸಂಪ್ರಬಂಧ ರಚನೆಯೆ?! ಇವರು ನನ್ನನ್ನು ಬೇರೆ ಯಾರೋ ಅಂತ ತಪ್ಪು ತಿಳಿದಿರಬಹುದು ಅಂತ ಪುನಃ ವಿಚಾರಿಸಿದೆ .ಇಲ್ಲ ಅವರು ನನ್ನನ್ನೇ ಹುಡುಕಿಕೊಂಡು ಬಂದಿದ್ದರು .ಒಬ್ಬಾತ ಬೆಟ್ಟಂಪಾಡಿ ಇನ್ನೊಬ್ಬಾತ ಸವಣೂರು ಆಸುಪಾಸಿನಲ್ಲಿರುವ ಹುಡುಗ.


"ನನ್ನ ಮೇಲೆ ಸಂಶೋಧನೆ ಮಾಡ್ಲಿಕೆ ಏನಿದೆ? ನಾನಿನ್ನು ಬದುಕನ್ನು ನೋಡುತ್ತಿದ್ದೇನೆ ಅಷ್ಟೆ .ಇನ್ನು ನನ್ನ ಕೃತಿಯಲ್ಲಿರುವ ಅನೇಕ ವಿಚಾರಗಳ ಬಗ್ಗೆ ನನಗೆ ಅನೇಕ ಪ್ರಶ್ನೆಗಳು ಉಳಿದಿವೆ ಇನ್ನು ಅದರಲ್ಲಿ ನೀವೆಂತ ಮಾಡುವುದು ನನ್ನ ಮೇಲೆ? ನಿಮಗೆ ನಿಮ್ಮ ಪರಿಸರದ ಎರಡು ಸಂಶೋದನೆಗೆ ಯೋಗ್ಯವಾದ ವಿಚಾರಗಳನ್ನು ತಿಳಿಸುತ್ತೇನೆ ಅದರ ಮೇಲೆ ಮಾಡಿ" ಎಂದು ಹೇಳಿದೆ
 

ಅರೆ ಒಪ್ಪಿಗೆಯಿಂದ ತಲೆ ಆಡಿಸಿದರು.ಬೆಟ್ಟಂಪಾಡಿ ಸಮೀಪದ ಯುವಕನಲ್ಲಿ "ಪರತಿ ಮಂಗನೆ "ಪಾಡ್ದನದ ಕಥೆ ನಡೆದದ್ದು ಬೆಟ್ಟಂಪಾಡಿ (ಬೊಟ್ಟಿಪಾಡಿ ) ಬಲ್ಲಾಳನ ಬೀಡಿನಲ್ಲಿ .ಆ ಬೀಡಿನ ಕುರುಹು ಐತಿಹ್ಯ ,ಈ ಕಥೆ ನಡೆದಿರಬಹುದಾದ ಸ್ಥಳ ,ಇದೆ ಕಥಾನಕ ಹೊಂದಿರುವ ಪುಕ್ಕೆದಿ ಕವಿತೆ ಹಾಗೂ ಇತರ ಹಾಡುಗಳನ್ನು ತುಲನೆ ಮಾಡಿ ಬರೆಯಿರಿ.ನನ್ನಲ್ಲಿ ಪರತಿ ಮಂಗನೆ ಪಾಡ್ದನ ಮತ್ತು ಪುಕ್ಕೆದಿ ಕವಿತೆ ಇದೆ ಇದನ್ನು ಕೊಡ್ತೇನೆ .ಆ ಬಗ್ಗೆ ಅಧ್ಯಯನ ಮಾಡಿ ಎಂದು ಹೇಳಿದೆ
 

ಸವಣೂರು ಸಮೀಪದ ಹುಡುಗನಲ್ಲಿ ಸವಣೂರು ಪರಣೆಯ ಪ್ರಧಾನ ದೈವ "ಅಬ್ಬೆ ಜಲಾಯ "ದೈವದ ಬಗ್ಗೆ ನಾನು ಸ್ವಲ್ಪ ಅಧ್ಯಯನ ಮಾಡಿ ನನ್ನ ಪುಸ್ತಕದಲ್ಲಿ ಸ್ವಲ್ಪ ಬರೆದದ್ದು ಬಿಟ್ಟರೆ ಬೇರೆಲ್ಲಿಯೂ ಈ ದೈವದ ಅಧ್ಯಯನ ನಡೆದಿಲ್ಲ ಈ ದೈವದ ಹೆಸರು ಕೂಡ ದಾಖಲಾಗಿಲ್ಲ.ಈ ಬಗ್ಗೆ ನಾನು ಸಂಗ್ರಹಿಸಿದ ಮಾಹಿತಿ ಕೊಡ್ತೇನೆ .ಈ ದೈವದ ಬಗ್ಗೆ ಎಂ ಫಿಲ್ ಮಾಡಿ ಎಂದು ಹೇಳಿದೆ .ನಿಮ್ಮ ಮನೆ ಅಡ್ರೆಸ್ಸ್ ನನಗೆ ಮೆಸೇಜ್ ಮಾಡಿ .ನಾನು ಬೆಂಗಳೂರಿಗೆ ಹೋದನಂತರ ಕಳುಹಿಸಿ ಕೊಡ್ತೇನೆ ಮತ್ತು ನಿಮಗೆ ಬೇಕಾದ ಸಹಾಯ ಮಾಡ್ತೇನೆ ಅಂತ ಹೇಳಿ ನನ್ನ ಮೊಬೈಲ್ ನಂಬರ್ ಕೊಟ್ಟು ಅವರ ನಂಬರ್ ತಗೊಂಡು ಬಂದೆ. ಬಂದು ಅನೇಕ   ದಿವಸಗಳು  ಕಳೆದರು ಹುಡುಗರ ಮೆಸೇಜ್ ಇಲ್ಲ ಫೋನ್ ಇಲ್ಲ .
  

ನಾನೇ ಅವರಿಗೆ ಫೋನ್ ಮಾಡಿದೆ "ನಾವು ನಿಮ್ಮ ಮೇಲೆ ಆದ್ರೆ ಮಾಡ್ತೇವೆ ಮೇಡಂ ಮತ್ತೆ ಭೂತದ್ದಕ್ಕೆಲ್ಲ ರಾತ್ರಿ ರೆಕಾರ್ಡ್ ಮಾಡ್ಬೇಕು ಮಾಹಿತಿ ಸಂಗ್ರಹಕ್ಕೆಲ್ಲ ತುಂಬಾ ಓಡಾಡಬೇಕು ಹಾಗಾಗಿ ನೀವು ಹೇಳಿ topics ಬೇಡ ಎಂಬ ಉತ್ತರ ಬಂತು !! ಈಗಿನ ಹುಡುಗರಿಗೆ ದೊಡ್ಡ ಪದವಿ ಬೇಕು ಆದ್ರೆ ತುಸು ಕಷ್ಟ ಪಡ್ಲಿಕ್ಕು ತಯಾರಿಲ್ಲ.

ತುಳುನಾಡಿನಲ್ಲಿ ಅನೇಕ ದೈವಗಳ ಬಗ್ಗೆ ಅಧ್ಯಯನ ನಡೆದಿಲ್ಲ ಅನೇಕ ಪಾಡ್ದನಗಳು ಕವಿತೆಗಳ ಸಂಗ್ರಹ ಕಾರ್ಯ ಆಗಿಲ್ಲ .ಈ ಬಗ್ಗೆ ಗಮನ ಹರಿಸಬೇಕಾದ ತುಳು ಅಕಾಡೆಮಿ ಮಾಡಬೇಕಾದ್ದನ್ನು ಮಾಡದೆ ಹೆಸರಿಗಾಗಿ ಏನೋ ಸನ್ಮಾನ ಅದು ಇದು ಮಾಡ್ತಾ ಇದೆ .
ಯುವಕರು ಪದವಿಗಾಗಿ ಕೂಡ ಸಾಕಷ್ಟು ಪರಿಶ್ರಮ ಬೇಡುವ ಇಂತ ವಿಚಾರಗಳ ಬಗ್ಗೆ ಅಧ್ಯಯನ ಮಾಡಲು ತಯಾರಿಲ್ಲ .ಯಾರಾದ್ರೂ ಒಬ್ಬ ವ್ಯಕ್ತಿ ಬಗ್ಗೆ ಒಂದಷ್ಟು ಫ್ಯಾನ್ ಅಡಿಯಲ್ಲಿ ಕೂತು ಬರೆಯುವುದು ಸುಲಭ ತಾನೇ .ಏನು ಮಾಡುವದು ಹೇಳಿ?!
                                             ಅಬ್ಬೆಜಲಾಯ ಮತ್ತು ಶಿರಾಡಿ ಭೂತ (ಫೋಟೋ)

                                                (ಒಂದು ವರ್ಷದ ಹಿಂದೆ ಬರೆದ ಲೇಖವಿದು )

2 comments:

  1. ಸಂಶೋಧನೆ ಎನ್ನುವುದು ಹೆಸರಿಗೆ ಡಾ. ಎಂಬ ಪೂರ್ವಪ್ರತ್ಯಯವನ್ನು ಅಂಟಿಸಿಕೊಳ್ಳುವ ಸಾಧನವಾಗಿರುವವುದು ನಿಮಗಾದ ಅನುಭವದಿಮದ ವೇದ್ಯ.ಎಂಫಿಲ್ ಮತ್ತು ಪಿ.ಎಚ್‌ಡಿ ಗಳು, ಹಣಕಾಸಿನ ಸೌಲಭ್ಯಕ್ಕಾಗಿ ಮತ್ತುಉದ್ಯೋಗದ ಭದ್ರತೆಗಾಗಿ ಎಂಬ ಭಾವನೆ ಬೆಳದಿರುವುದು ದೊಡ್ಡ ದುರಂತ.ಒಂದೇ ಸಂತೋಷ ಸಂಶೋಧನೆ ಮಾಡಬೇಕು ಎನಿಸಿದೆಯಲ್ಲಾ ಅದೇ ಆಶಾಕಿರಣ. ಸೂಕ್ತ ಮಾರ್ಗದರ್ಶನದ ಕೊರತೆಯೇ ಇದಕ್ಕೆಲ್ಲಾ ಕಾರಣ. ಡಾ. ಲಕ್ಷ್ಮಿ ಪ್ರಸಾದರಂಥಹವರ ಸಂಖ್ಯೆ ಹೆಚ್ಚಿದರೆ ಸಂಶೋಧನೆ ಸರಿದಾರಿಯಲ್ಲಿ ಬರುವುದೇನೋ-.ಅಪ್ಪಾಜಿ

    ReplyDelete
    Replies
    1. ಧನ್ಯವಾದಗಳು ಸರ್ ತಮಗೆ ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ ಸರ್

      Delete