Friday 24 May 2013

ಗಿಳಿ ಬಾಗಿಲು : ಎಂಗಳ ಮಕ್ಕಳ ಭಾಷೆ

                               
ಎಂಗಳ ಭಾಷೆಲಿ  ಸಣ್ಣ  ಮಕ್ಕಳತ್ತರೆ ಮಾತನಾಡುವಗ ಬಳಸುವ ಪದಂಗ ಭಾರಿ ಚೆಂದ, ಆದರೆ  ಎಂಗಳ ನಿತ್ಯದ ಬಳಕೆಯ ಪದಂಗಳ ಬದಲಿನ್ಗೆ ಬೇರೆ ಪದಂಗ ಇದ್ದು .ಇದೆಂತಕೆ ಹೀಂಗೆ ? ದೊಡ್ಡೋರ ಮಾತಿಲಿ ಇಲ್ಲದ್ದೆ ಇಪ್ಪ  ಪದಂಗಳ ಮಕ್ಕೊಗೆನ್ತಕೆ ಹೇಳಿಕೊಡುದು ಹೇಳಿ ತುಂಬ ಸರ್ತಿ ಎನಗೆ ಅನ್ಸಿದ್ದು .ಮೂಲತ ಈ ಪದಂಗಗಳೇ   ಎಂಗಳ ಭಾಷೆಲಿ ಇದ್ದದಾದಿಕ್ಕ ?ಕಾಲ ಕ್ರಮೇಣ ದೊಡ್ಡೋರ  ಮಾತಿಲಿ ಈಗ ಇಪ್ಪ ಪದಂಗ ಸೇರಿಗೊಂಡವ ?ಹಾಂಗಾಗಿ ಮಕ್ಕಳತ್ತರೆ ಮಾತಾಡುವಾಗ ಮಾತ್ರ ಮೂಲ ಪದಂಗಳ ಬಳಕೆ ಹಾಂಗೆ ಒಳುತ್ತಾ?ಎನಗೆ ಗೊಂತಿಲ್ಲೆ .ಹೀಂಗೆ ಆದಿಪ್ಪ ಸಾಧ್ಯತೆ ಇದ್ದು .ಈ  ಸಾಧ್ಯತೆಯ ತೀರಾ  ಸಾರಾ ಸಗಟಾಗಿ ಅಲ್ಲಗಳವಲೆ  ಸಾದ್ಯ ಇಲ್ಲೆ ಆನು ಗಮನಿಸಿದ ಕೆಲವು   ಮಕ್ಕಳ ಭಾಷೆಯ ಪದಂಗ ಹೀಂಗೆ ಇದ್ದು 
ಉಜ್ಜಿ :
 ಕಿಚ್ಚಿಂಗೆ ಅಥವಾ ಬೆಶಿಗೆ ಉಜ್ಜಿ ಹೇಳುವ ಪದವ ಮಕ್ಕಳತ್ತರೆ ಮಾತನಾಡುವಗ ಬಳಸುತ್ತೆಯ .  ಕಿಚ್ಚಿನತ್ತರೆ /ಬೆ ಶಿ ಇಪ್ಪಲ್ಲಿಗೆ ಹೋಗಡ ಹೇಳುಲೆ ಉಜ್ಜಿ ಹತ್ತರೆ ಹೋಗಡಾ ಹೇಳಿ  ಎಂಗ ಹೇಳುತ್ತೆಯ .ಉಜ್ಜಿ ಹೇಳುದು ಉಷ್ಣ ಹೇಳುವ ಪದದ ಹವ್ಯಕ ತದ್ಭವ ರೂಪ ಆದಿಕ್ಕು .ಮಕ್ಕೊಗೆ ಉಷ್ಣ ಹೇಳಿ ಹೇಳುಲೆ ಕಷ್ಟ ಅಕ್ಕು ಹೇಳಿ ಉಜ್ಜಿ ಹೇಳುವ ಪದ ಬಳಕೆಗೆ ಬಂದಿಕ್ಕು .ಕಾಲ ಕ್ರಮೇಣ ದೊಡ್ಡೋರ ಮಾತಿಲಿ ಉಷ್ಣದ ಬದಲಿನ್ಗೆ ಬೆಶಿ  ಹೇಳುವ ಪದ ರೂಡಿಗೆ ಬಂದಿರೆಕ್ಕು .ಆದರೆ ಮಕ್ಕಳತ್ತರೆ ಮಾತನಾಡುವಗ  ಉಜ್ಜಿ ಹೇಳುದು ಹಾಂಗೆ ಒಳುದಿರೆಕ್ಕು .
ದೀಜಿ :
 ಎಂಗಳ ಮಕ್ಕಳ ಭಾಷೇಲಿ ನೀರಿಂಗೆ ದೀಜಿ ಹೇಳುವ ಪದ ರೂಡಿಲಿ ಇದ್ದು .ನೀರಿಂಗೆ ದೀಜಿ ಹೇಳುಲೆ ಎಂತ ಕಾರಣ ಇಕ್ಕು ಹೇಳಿ  ಎನಗೆ ತಲೆಗೆ ಹೊವುತ್ತಿಲ್ಲೆ . ಎಂಗಳ ಮಕ್ಕಳ ಬಾಷೆಲಿ   ಬಿಟ್ರೆ ಬೇರೆಲ್ಲಿಯೂ ನೀರಿಂಗೆ ದೀಜಿ ಹೇಳಿ ಇಪ್ಪದು ಎನಗೆ ಗೊಂತಿಲ್ಲೆ .ಇದರ ಮೂಲ ರೂಪ ಎಂತಾದಿಕ್ಕು ಹೇಳಿ ಎನಗೆ ಗೊಂತಾವುತ್ತಾ ಇಲ್ಲೆ .
ಜಾಯಿ :
ಹಾಲಿನ್ಗೆ ಎಂಗಳ ಮಕ್ಕಳ ಭಾಷೆಲಿ ಜಾಯಿ ಹೇಳಿ ಹೇಳುದು . ಹಾಲು ಹೇಳುವ ಪದ ಜಾಯಿ ಹೇಳಿ ಅಪ್ಪ ಸಾಧ್ಯತೆ ಇಲ್ಲೆ .ಕ್ಷೀರ ಹೇಳುವ ಪದ ಕೂಡ ಜಾಯಿ ಹೇಳಿ ಆಗಿಪ್ಪ ಸಾಧ್ಯತೆ ಕಮ್ಮಿ ಕಾಣುತ್ತು.ಎಂಗಳ ಭಾಷೆಲಿ ಹಾಲಿನ್ಗೆ  ಬೇರೆ ಎಂತಾದರು ಪದ ಇದ್ದಿಕ್ಕ ?ಇಲ್ಲದ್ದರೆ ಮಕ್ಕಳ ಭಾಷೇಲಿ ಮಾತ್ರ ಜಾಯಿ ಹೇಳುವ ಪದ ಹೇಂಗೆ ಬಂತು ? 
ದಾದೆ :
ಎಂಗಳ ಮಕ್ಕಳ ಭಾಷೆಲಿ ಮನುಗು /ಒರಗು ಹೇಳುದಕ್ಕೆ ದಾದೆ ಮಾಡು ಹೇಳುವ ಪದ ಇದ್ದು .ಇದರ ಮೂಲ ರೂಪ ಎಂತಾದಿಕ್ಕು ?ಅಥವಾ ದೊಡ್ದೊರುದೆ ಮನುಗುದಕ್ಕೆ ದಾದೆ ಹೇಳಿಯೇ ಹೇಳಿಗೊಂಡಿತ್ತಿದವ ?
ಚಾಬು : 
ಎರುಗು ,ಹಲ್ಲಿ ,ಹಾತೆ ,ಜೆರಳೆ ,ಮೊಂಟೆ ಮೊದಲಾದ್ದಕ್ಕೆ ಮಕ್ಕಳ ಭಾಷೇಲಿ ಚಾಬು ಹೇಳಿ  ಹೇಳುದು .ತುಂಬ ಸಣ್ಣ ಮಕ್ಕಳತ್ತರೆ ಎಲ್ಲದಕ್ಕೂ ಚಾಬು ಹೇಳಿಯೇ ಹೇಳುದು . ಮಕ್ಕ ರಜ್ಜ ದೊಡ್ಡಪ್ಪಗ ಎರುಗು ಚಾಬು ಹಲ್ಲಿ  ಚಾಬು ಇತ್ಯಾದಿ ಇನ್ನೊಂದು ಪದ ಸೇರ್ಸಿ ಹೇಳ್ತವು .ಹಾವಿಂಗೆ ಕೂಡ ಚಾಬು ಹೇಳಿಯೇ ಹೇಳುದು .ಬಹುಷ ಹಾವು ಹೇಳುವ ಪದವೇ  ಚಾಬು ಪದದ ಮೂಲ ರೂಪ ಆದಿಕ್ಕು ಹೇಳಿ ಎನಗೆ ಅನ್ಸುತ್ತು .ಇದಲ್ಲದೆ ಬೂಚು ,ತಾಚಿ ಮೊದಲಾಗಿ ಸುಮ್ಮಾರು ವಿಶಿಷ್ಟ ಪದಂಗಳ ಬಳಕೆ ಇದ್ದು .ದೊಡ್ಡೋರ ಮಾತಿಲಿ ಇಲ್ಲದ್ದ ಇಂತ  ಪದಂಗ ಮಕ್ಕಳ ಭಾಷೇಲಿ ಮಾತ್ರ ಹೆಂಗೆ ಬಂತು ?ತಿಳುದೋರು ಹೇಳಿದರೆ ಸಂತೋಷ 
ಇನ್ನೊಂದರಿ ಕಾಂಬ 
ನಮಸ್ಕಾರ - ಡಾ.ಲಕ್ಷ್ಮಿ ಜಿ ಪ್ರಸಾದ

No comments:

Post a Comment