Sunday 25 August 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಪೊಡುಂಬು

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಪೊಡುಂಬು

ಅವ ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ ,ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಎಂಗಳ ಕಡೆಯ ಹವ್ಯಕ ಭಾಷೆಲಿ ಈ ಪದದ ಬಳಕೆ ಇದ್ದು.  ಅವಂದು ಬರೀ ಪೊಡುಮ್ಬುತನ/ಪೊಡುಂಬು ಬುದ್ಧಿ  ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಮೂಲ ಎಂತ ಹೇಳಿ ಆಲೋಚನೆ ಮಾಡ್ತಾ ಇತ್ತಿದೆ .ಬೆಂಗಳೂರಿಲಿ ಎಂಗಳ ಮನೆ ಎದುರು ಒಂದು ಮರ ಕೆಲಸದ ಅಂಗಡಿ ಇದ್ದು .ನಿನ್ನೆ ಹೊತ್ತಪ್ಪಗ ಆನು ಮನೆ  ಟೆರೆಸ್ ಹತ್ತಿ ಸುಮ್ಮನೆ ಆಕಡೆ ಈ ಕಡೆ ನೋಡ್ತಾ ಇತ್ತಿದೆ .ಅಂಬಗ ಎದುರಿನ ಅಂಗಡಿಯ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು. ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ "ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕುಮ್ಬಾಗಿ ಮಂಚ ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು "ಹೇಳಿ ಎನ್ನ  ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೋಳುಮ್ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ   ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ  ಬಂದಿಕ್ಕಾ  ಏನೋ ಹೇಳಿ ಅನ್ಸಿತ್ತು ,ನಿಂಗ  ಎಲ್ಲ  ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ
ಇನ್ನೊಂದರಿ ಕಾಂಬ
ನಮಸ್ಕಾರ
     ಡಾ. ಲಕ್ಷ್ಮೀ ಜಿ ಪ್ರಸಾದ

No comments:

Post a Comment