Wednesday, 16 October 2013

ಭೂತಗಳ ಅದ್ಭುತ ಜಗತ್ತು -ತುಳುನಾಡಿನ ಹೆಮ್ಮೆಯ ವೀರರು -ಮುಗೆರ್ಲು ದೈವಗಳು


                   

  ಕೋಟಿ ಚೆನ್ನಯರಂತೆ ಅಸಾಮಾನ್ಯ ಸಾಹಸ ಮೆರೆದು ,ಅನ್ಯಾಯದ ವಿರುದ್ಧ ಸಿಡಿದೆದ್ದು ಹೋರಾಡಿ ದೈವತ್ವವನ್ನು ಪಡೆದು ತುಳುನಾಡನ್ನು ಬೆಳಗಿದ ವೀರರು ಮುಗೆರ್ಲು ಮುಗೇರ್ಲುಮುಗೇರರ ಜಾತಿಯಲ್ಲಿ ಹುಟ್ಟಿ ಬೆಳೆದು, ಅಸಾಮಾನ್ಯ ಪರಾಕ್ರಮ ತೋರಿ, ಅನ್ಯಾಯದ ವಿರುದ್ಧ ಕಿಡಿಕಾರಿ, ಅಕಾಲಿಕ ಮರಣಕ್ಕೆ ತುತ್ತಾದ ಇಬ್ಬರು ವೀರರು. ಈ ಇಬ್ಬರು ವೀರರ ಹೆಸರು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿದೆ. ಎಣ್ಮೂರು ದೆಯ್ಯು, ಕೆಲತ್ತ ಪೆರ್ನಲೆ ಎಂದೂ, ಕೆಲವೆಡೆ ಮಾನ್ಯಲೆ-ಪೆರ್ನಲೆ ಎಂದೂ, ಮುದ್ದ ಕಳಲ ಎಂದು ಪ್ರಚಲಿತವಾಗಿವೆ.copy rights reserved (c)Dr.Lakshmi G Prasad

ಸತ್ಯದಪ್ಪೆ ಜೋಕುಲು ,ಸತ್ಯದ ದೈವೊಲು ಎಂದು ಆರಾಧಿಸಲ್ಪಡುವ ದೈವಗಳು ಇವರು ಮಕ್ಳೆ ಕಟ್ಟುಡು  ಆಣು ಬಾಲೆಲು ಪುಟ್ಟಿ ನಂದಂಡ  ರಾಮೆ ಲಚ್ಚಿಮೆಂದು ಪುದರ್ ದೀದ್ಪೆರ್

ಪೊಣ್ಣು ಬಾಲೆಲು ಪುಟ್ಟಿ ನಂದಂಡ ರಾಮಕ್ಕ ಲಚ್ಚಿಮಿಂದು ಪುದರ್ ದೀದ್ಪೆರ್.

ಅಳಿಯ ಕಟ್ಟುಡು ಆಣು ಬಾಲೆಲು ಪುಟ್ಟಿ ನಂದಂಡ ಕೋಟಿ ಬೈದ್ಯೆರ್ ಚೆನ್ನಯ ಬೈದ್ಯೆರುಂದು ಪುದರ್ ದೀದ್ಪೆರ್.


ಪೊಣ್ಣು ಬಾಲೆಲು ಪುಟ್ಟಿ ನಂದಂಡ ಅಬ್ಬಕ್ಕೆ ದಾರಕ್ಕೆಂದು ಪುದರ್ ದೀದ್ಪೆರ್

 ಎಂಕ್ಲೆನ ಕುಂಜಲಿಗೆದ ಕಟ್ಟುಡು ಆಣು ಬಾಲೆಲು ಪುಟ್ಟಿ ನಂದಂಡ

ದುಂಬು ಪುಟ್ಟಿನಾಯೇ  ಪುಣ್ಯದ ಮುದ್ದೆ

ಪಿರ ಪುಟ್ಟಿನಾಯೇಬಾಳೆ ಕಲಲೆಂದು ಪುದರ್ ದೀಡ್ಪೋ

ಪೊಣ್ಣು ಬಾಲೆಲು ಪುಟ್ಟಿ ನಂದಂಡ ಬಾಗ್ಯ ಬಂದ್ರೊಂದು ಪುದರ್ ದೀದ್ಪೋಯೇ.copy rights reserved (c)Dr.Lakshmi G Prasad

ಕನ್ನಡ ಅನುವಾದ :

ಮಕ್ಕಳ ಕಟ್ಟಿನಲ್ಲಿ ಗಂಡು ಮಕ್ಕಳು ಹುಟ್ಟಿದರೆ ರಾಮ ಲಕ್ಷ್ಮಣ ಎಂದು ಹೆಸರಿಡುವರು

ಹೆಣ್ಣು ಮಕ್ಕಳು ಹುಟ್ಟಿದರೆ ರಾಮಕ್ಕ್ಕ ಲಕ್ಷ್ಮಿ ಎಂದು ಹೆಸರಿಡುವರು

ಅಳಿಯ ಕಟ್ಟಿನಲ್ಲಿ ಗಂಡು ಮಕ್ಕಳು ಹುಟ್ಟಿದರೆ ಕೋಟಿ ಬೈದ್ಯ ಚೆನ್ನಯ ಬೈದ್ಯ ಎಂದು ಹೆಸರಿಡುವರು

ಹೆಣ್ಣು ಮಕ್ಕಳು ಹುಟ್ಟಿದರೆ ಅಬ್ಬಕ್ಕ ದಾರಕ್ಕೆಂದು ಹೆಸರಿಡುವರು

ನಮ್ಮ ಕುಂಜಲಿಗೆಯ ಕಟ್ಟಿನಲ್ಲಿ ಗಂಡು ಮಕ್ಕಳು ಹುಟ್ಟಿದರೆ

ಮೊದಲು ಹುಟ್ಟಿದವನು ಪುಣ್ಯದ ಮುದ್ದ

ನಂತರ ಹುಟ್ಟಿದವನು ಕಳಲ ಎಂದು ಹಸರಿಡುವೆವು

ಹೆಣ್ಣು ಮಕ್ಕಳು ಹುಟ್ಟಿದರೆ ಭಾಗ್ಯ ಬಂದ್ರ ಎಂದು ಹೆಸರಿಡುವೆವು   (ಸಂ :ಡಾ .ಅಭಯ ಕುಮಾರ್ )


       ಇವರ ಹುಟ್ಟು ,ಬದುಕು ,ಅಂತ್ಯದ ಕುರಿತು ಪಾದ್ದನಗಳಲ್ಲಿ ವಿವರಣೆ ಇದೆಯಾದರೂ ಬೇರೆ ಬೇರೆ ಪಾಠ ಗಳಲ್ಲಿ ತುಸು ಭಿನ್ನತೆ ಇದೆ .ಇವರ ಹುಟ್ಟು ಬಂಗಾಡಿಯ ಬಂಗರಸರ ರಾಜ್ಯದಲ್ಲಿ ಆಗುತ್ತದೆ. ಮುಗೇರರ ತಂದೆ ಮೂಲದ ಕೆಲಸಗಾರ. ಆತನಂತೆ ಈ ಮುಗೇರ್ಲು ಕೂಡ ಬಾಲ್ಯದಲ್ಲಿ ತಮ್ಮ ಒಡೆಯನ ಮನೆಯಲ್ಲಿ ದನಕರುಗಳನ್ನು ಮೇಯಿಸುತ್ತಿದ್ದರು

ಮುದ್ದು ಕಂಜಿಲೆಗ್ ಮುಗುರು ಪಂತಿ ಪಿರೆಯೊಂಡು

ಬಾಲೆ ಕಂಜಿಲೆನ್ ಗೊಬ್ಬವೊಂದು.copy rights reserved (c)Dr.Lakshmi G Prasad

ಮುಂದಿಲ್ಗ್ ಬರ್ಪಿ ಕಕ್ಕೆ ಕೋರಿಲೆನ್ ಚೀನ್ಕ್ರುಡು  ಬಿರು ಪಗರಿಡು ಈಯೊಂದು

ಕನ್ನಡ ಅನುವಾದ :

ಮುದ್ದು ಕರುಗಳಿಗೆ ಎಲೆ ಹುಲ್ಲನ್ನು ಹೆರೆದುಕೊಂಡು

ಎಳೆಯ ಕಾರುಗಳನ್ನು ಆಟವಾಡಿಸಿಕೊಂಡು

ಅಂಗದ ಭತ್ತಕ್ಕೆ ಬರುತ್ತಿದ್ದ ಕಾಗೆ ಕೋಳಿಗಳನ್ನು ತೆಂಗಿನ ಸೋಗೆಯ ಕಡ್ಡಿಯಿಂದ ಬಿಲ್ಲು ಬಾಣಗಳಿಂದ

ಓಡಿಸಿಕೊಂಡು ಇವರು ಬಾಲ್ಯದಲ್ಲಿ ಒಡೆಯನ ಮನೆಯ ಮೂಲದ ಕೆಲಸದವರಾಗಿ ಇದ್ದ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ

.       ಬಾಲ್ಯದಲ್ಲಿಯೇ ಇವರಿಗೆ ಮದನಪ್ಪ ಶೆಟ್ಟಿಯ ಪರಿಚಯವಾಗುತ್ತದೆ.ಒಂದು ಪಾದ್ದನದಲ್ಲಿ ಬಂಗಾಡಿ ಬಾರಿ ಮದನಪ್ಪ ದೇಕ್ಕುಲು ಎಂದು ಹೇಳಿದ್ದು ಈತ ಮುಗೆರರ ಒಡೆಯನಾಗಿದ್ದನು ಎಂದು ತಿಳಿದುಬರುತ್ತದೆ.copy rights reserved (c)Dr.Lakshmi G Prasad

    ಒಡೆಯರಾದ ಬಂಗಾಡಿ ಅರಸರ ದನಕರುಗಳನ್ನು ಮೇಯಿಸುವ ಸಮಯದಲ್ಲಿ ಅಲ್ಲಿಗೆ ಸಮೀಪದ ಬಯಲಿನಲ್ಲಿ ಅರಸು ಮಕ್ಕಳು ಪಲ್ಲೆಕಾಯಿ ಮತ್ತು ಕದೆನ್ಜಿಕಾಯಿ ಆಟವಾಡುತ್ತಾ ಇರುತ್ತಾರೆ . ಬಾಲ್ಯ ಸಹಜ ಆಸೆಯಿಂದ ಈ ಮಕ್ಕಳು ಒಡೆಯನ ಮಕ್ಕಳ ಬಲಿ ಹೋಗಿ ತಮ್ಮನ್ನು ಆಟಕ್ಕೆ ಸೇರಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ  ಸ್ವಲ್ಪ ದೊಡ್ಡವರಾದಾಗ ಪಲ್ಲೆಕಾಯಿ ಹಾಗೂ ಕಡೆಂಜಿಕಾಯಿ ಆಟದಲ್ಲಿ ಇತರ ಹುಡುಗರನ್ನು ಸೋಲಿಸುತ್ತಾರೆ. ಯಜಮಾನನ ಮಕ್ಕಳು ಬಂದು ಚಾಡಿ ಹೇಳುತ್ತಾರೆ. ಇದರಿಂದ ಯಜಮಾನ ಮುಗೇರರನ್ನು ಮನೆಯಿಂದ ಹೊರತಳ್ಳುತ್ತಾನೆ. 
ಹಾಗೆ ಈ ವೀರರು ಹಾಗೂ ಅವರ ತಂಗಿ ತನಿಮಾಣಿಗ ಕಾಡಿನಲ್ಲಿ ನಡೆದು ಬರುವಾಗ ಕಾಣುವ ಬೆರ್ಮಸ್ಥಾನದ ಬೆರ್ಮರ ಪೂಜೆಯನ್ನು ಮಾಡುತ್ತಾರೆ. ಬೆರ್ಮರ ಅನುಗ್ರಹದಿಂದ ಅವರಿಗೆ ಕೋಟಿ-ಚೆನ್ನಯರ ತಾಯಿ ದೇಯಿ ಬೈದಿತಿಯ ಆಶ್ರಯ ಇವರಿಗೆ ಸಿಗುತ್ತದೆ. ಬಿಲ್ಲವ ಜಾತಿಗೆ ಸೇರಿದ ದೈಯಿ ಬೈದಿತಿ ಇವರನ್ನು ಹೊರಗಿನ ಮಕ್ಕಳಂತೆ ಸಾಕಿದ್ದರೆ ಕೋಟಿ-ಚೆನ್ನಯರು ಒಳಗಿನ ಮಕ್ಕಳಾಗಿದ್ದರು ಎಂಬವಿವರವು ಪಾಡ್ದನದಲ್ಲಿ ಸಿಗುತ್ತದೆ.
   
 ಕೋಟಿ-ಚೆನ್ನಯರು ಬೇಟೆಗೆ ಹೋದಾಗ ಮುಗೇರ್ಲು ವೀರರು ಜೊತೆಯಲ್ಲಿ ಹೋಗುತ್ತಾರೆ. ಈ ಹಂದಿ ಬೇಟೆಯು ಕೋಟಿ-ಚೆನ್ನಯರ ಹಾಗೂ ಮುಗೇರ್ಲು ವೀರರ ದುರಂತಕ್ಕೆ ಕಾರಣವಾಗುತ್ತದೆ. ಕೆಲವು ಪಾಡ್ದನಗಳ ಪಾಠದಲ್ಲಿ ಹಂದಿಯನ್ನು ಕೊಂದದ್ದು ಯಾರು ಎನ್ನುವ ಬಗ್ಗೆ ಜಗಳ ಹುಟ್ಟಿಕೊಂಡಿತು ಎಂದು ಹೇಳಿದರೆ, ಕೆಲವು ಪಾಠಾಂತರಗಳಲ್ಲಿ ಹಂದಿಯ ಮಾಂಸವನ್ನು ಹಂಚುವಾಗ ಕೋಟಿ-ಚೆನ್ನಯರು ಮೋಸ ಮಾಡಿದರು. ಮುಗೇರರಿಗೆ ಕೇವಲ ಎಲುಬು ಚೂರುಗಳನ್ನು ನೀಡಿದರು. ಇದರಿಂದಾಗಿ ಜಗಳ ಹುಟ್ಟಿಕೊಂಡಿತು ಎಂದು ಹೇಳುತ್ತವೆ. 
 .copy rights reserved (c)Dr.Lakshmi G Prasad
    ಅನಂತರ ಕೋಪದಲ್ಲಿ ಮುಗೇರ್ಲು ಕಡು ಹಾಕಬಾರದ ಬ್ರಹ್ಮರ ಮಡುವಿಗೆ ಕಡು ಹಾಕುತ್ತಾರೆ. ಆಗ ಬೆರ್ಮರ ಆಗ್ರಹಕ್ಕೆ ತುತ್ತಾಗಿ, ಮೀನು ಹಿಡಿಯಲೆಂದು ಮುಳುಗಿದ ಅವರು ಅಲ್ಲಿಯೇ ಸಾವನ್ನಪ್ಪುತ್ತಾರೆ. ಗಂಡ ಮತ್ತು ಅಣ್ಣ ಸತ್ತಿರುವುದನ್ನು ನೋಡಿ ತನ್ನಿಮಾಣಿಗ ಕೂಡ ಸಾವನ್ನಪ್ಪುತ್ತಾಳೆ ಎಂದು ಮುಗೇರ್ಲು ಪಾಡ್ದನದಲ್ಲಿ ಹೇಳಿದೆ. ಆದರೆ ಕೋಟೆದ ಬಬ್ಬು ಪಾಡ್ದನದಲ್ಲಿ ಕೋಟೆಯ ಬಬ್ಬು ಮತ್ತು ತನ್ನಿಮಾಣಿಗ ಒಟ್ಟಗೆ ಮಾಯಾವಾಗುತ್ತಾರೆ ಎಂದಿದೆ.
   
 ಒಟ್ಟಿನಲ್ಲಿ ಎಣ್ಮೂರು ದೆಯ್ಯು, ಕೆಲತ್ತ ಪೆರ್ನೆಯರೆಂಬ ಇಬ್ಬರು ಮುಗೇರ್ಲು ವೀರರು ತಮಗಾದ ಅನ್ಯಾಯವನ್ನು ಪ್ರತಿಭಟಿಸಿ, ಬೆರ್ಮೆರ ಮಡುವಿಗೆ ಕಡು ಹಾಕಿ, ಮೀನು ಹಿಡಿಯಲು ಹೋಗಿ ದುರಂತ ಮರಣವನ್ನಪ್ಪುತ್ತಾರೆ. ಬೆರ್ಮೆರ್ನಡ ಆಗ್ರಹಕ್ಕೆ ತುತ್ತಾಗಿ ಮರಣವನ್ನಪ್ಪಿದ ವೀರರು ನಂತರ ಬೆರ್ಮೆರ್ನ  ಸೇರಿಗೆಯಲ್ಲಿ ಸೇರಿಹೋಗುತ್ತಾರೆ.
.copy rights reserved (c)Dr.Lakshmi G Prasad

     ಇನ್ನೊಂದೆಡೆ ಇವರ ಕುರಿತು ಬೇರೆ ರೀತಿಯ ಕಥಾನಕ ಪ್ರಚಲಿತವಿದೆ .ಇವರು ಯುದ್ಧ ವೀರರು .ಮುದ್ದ ಮತ್ತು ಕಳಲರು ಬಂಗಾಡಿ ಬಾಲೆ ಬಂಗರಸು ಪರವಾಗಿ ಗಾಣದ ಸಂದುವೆಟ್ಟಿಯ ಜೊತೆಗೆ ಯುದ್ಧ ಮಾಡು ತ್ತಾರೆ. ಬಂಗಾಡಿ ಬಾಲೆ ಬಂಗರಸು ಮತ್ತು ಕೊಪ್ಪದರಸುಗಳಿಗೆ ಯಾವುದೋ ಕಾರಣಕ್ಕೆ ಯುದ್ಧವಾಗುತ್ತದೆ .ಕೊಪ್ಪದರಸು ಪರವಾಗಿ ತೆಂಕು ದಿಕ್ಕಿನಿಂದ ನಾಯೆರ್ಲೆ ದಂಡು ,ಪಶ್ಚಿಮ ದಿಕ್ಕಿನಿಂದ ಮುಗೆರ್ಲೆ ವೀರರ ಜಾತಿಗೆ ಸೇರಿದ ಕಿನ್ನಿ ಮುಗೆರರ ದಂಡು ಬರುತ್ತದೆ .ಕೊಪ್ಪದರಸುವಿನ ಸೈನ್ಯ ,ನಾಯೆರ್ಲೆ ದಂಡು ,ಮತ್ತು ಕಿನ್ನಿ ಮುಗೇರರ ದಂಡು ಈ ಮೂರೂ ಸೈನ್ಯಗಳನ್ನು ಮುಗೇರ ಅವಳಿ ವೀರರಾದ ಮುದ್ದ್ದ ಕಳಲರು ಸೋಲಿಸುತ್ತಾರೆ . ನೇರವಾಗಿ ಯುದ್ಧಮಾಡಿ ಇವರನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಶತ್ರುಗಳು ಮರೆಯಲ್ಲಿ ನಿಂತು ಚಕ್ರ ಬಾಳ್  ಎಸೆಯುತ್ತಾರೆ .ಅವರ ಮೋಸದ ಯುದ್ಧದಲ್ಲಿಯೂ ಇವರು ಸಾಹಸವನ್ನು ತೋರುತ್ತಾರೆ .ಆಗ ಶತ್ರುಗಳು ಮೊಸದಿಂದ ಮರೆಯಲ್ಲಿ ನಿಂತು ಪ್ರಯೋಗಿಸಿದ ಒಂದು ಚಕ್ರ ಬಾಳ್ ಬಂದು ಕಳಲನ ಮೇಲೆರಗುತ್ತದೆ .ಆತನ ತಲೆ ಕತ್ತರಿಸಲ್ಪಡುತ್ತದೆ .ಹೀಗೆ ಅನ್ಯಾಯದ ಯುದ್ಧದಿಂದ ಶೂರನಾದ ಕಳಲನ ಅಂತ್ಯವಾಗುತ್ತದೆ .ಅವನ ತಲೆ ಹೋಗಿ ಈಶ್ವರ ಮಂಗಿಲ ದೇವಸ್ಥಾನದ ಅಂಗಳದಲ್ಲಿ ಬೀಳುತ್ತದೆ .copy rights reserved (c)Dr.Lakshmi G Prasad.ಆಗ ಪೂಜಾರಿ ಮತ್ತಿತರರು ನಿಮಿತ ಕೇಳಿದಾಗ ಆಪಿ ತರೆನೋ ಆವಂದಿನ ತರೆನೋ (ಆಗುವ ತಲೆಯೋ ಆಗದಿರುವ ತಲೆಯೋ) ಎಂದು ಕೇಳಿದಾಗ ಆಗುವ ತಲೆ ಎಂದು ಕಂಡು ಬರುತ್ತದೆ .ಹಾಗೆ ಆತನ ತಲೆಯನ್ನು ಅಲ್ಲಿಯೇ ಪ್ರತಿಷ್ಟಾಪಿಸುತ್ತಾರೆ .ಅವನ ತಲೆಯ ಪ್ರತೀಕವಾಗಿ ಈಗ ಕೂಡ ಈಶ್ವರನ್ಗಿಲ ದೇವಾಲಯದಲ್ಲಿ ಒಂದು ಬೆಳ್ಳಿ ಕತ್ತಿನ ತಲೆ ಇದೆ ಎಂದು ಡಾ .ಅಭಯ ಕುಮಾರ್ ಹೇಳಿದ್ದಾರೆ .ಬೆಳಗ್ಗಿನ ಪೂಜೆ ದೇವರಿಗೆ ಸಂದರೆ ಸಂಜೆಯ ಪೂಜೆ ಕಳಲನ ತಲೆಗೆ ಸಲ್ಲುತ್ತದೆ ಎಂಬ ನಂಬಿಕೆ ಇಲ್ಲಿ ಪ್ರಚಲಿತವಿದೆ . ಇನ್ನೊಂದು ಪಾದ್ದನದಲ್ಲಿ ತುಸು ಬೇರೆ ಕಥೆ ಇದೆ .ಯುದ್ದದಲ್ಲಿ ಇವರು ಗೆಲುವು ಸಾಧಿಸಿ ಬರುತ್ತಾರೆ .
      ಆಗ ಇವರನ್ನು ನೇರ ಎದುರಿಸಿ ಕೊಳ್ಳಲು ಸಾಧ್ಯವಿಲ್ಲ ಎಂದರಿತು ಯುದ್ಧದಲ್ಲಿ ಗೆದ್ದು ಇವರು ಹಿಂದಿರುಗುವ ದಾರಿಯಲ್ಲಿ ಬಿದಿರಂಡೆಯನ್ನು ಹೂತು ಇಡುತ್ತಾರೆ . ಮುದ್ದ ಶತ್ರುಗಳ ಕುತಂತ್ರದ ಅರಿವಿಲ್ಲದೆ ಆ ದಾರಿಯಲ್ಲಿ ಬರುತ್ತಾನೆ . ಅವನ ಕಾಲು ಹೂತಿರುವ ಬಿದಿರಂಡೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ .ಆಗ ಅಲ್ಲಿ ಮರೆಯಲ್ಲಿ ಕಾಡು ಕುಳಿತಿದ್ದ ಶತ್ರುಗಳು ಹಿಂದಿನಿಂದ ಬಂದು ಕೊರಳು ಕತ್ತರಿಸಿ ಕೊಳ್ಳುತ್ತಾರೆ . .copy rights reserved (c)Dr.Lakshmi G Prasad
    "ಮುಗೆರ್ಲೆ ನೇಮದಲ್ಲಿ  ಕಳಲನ ಸಾವಿನ ಅಭಿನಯ ಇರುತ್ತದೆ .ಈ ಸಂದರ್ಭದ ಪ್ರದರ್ಶನ ಅತ್ಯದ್ಭುತವಾಗಿ ನಡೆಯುತ್ತದೆ" ಎಂದು ಡಾ . ಅಭಯಕುಮಾರ ಅವರು ಅಭಿಪ್ರಾಯಿಸಿದ್ದಾರೆ .ಕಳಲನ ಭೂತ ತನ್ನ ಅಆಯುಧಗಳ ವರಸೆಯನ್ನು ಪ್ರದರ್ಶಿಸುತ್ತದೆ ತನ್ನ ಹುಟ್ಟು ಪರಾಕ್ರಮ ಮತ್ತು ಸಾವನ್ನು ತಾನೇ ಹೇಳಿಕೊಂಡು ಅಭಿನಯ ಮಾಡುತ್ತಾರೆ .ತಲೆ ತುಂಡ ರಿಸಲ್ಪಟ್ಟದ್ದನ್ನು ಭೂತ ತನ್ನ ತಲೆಗೆ ಕತ್ತಿಯಲ್ಲಿ ಬಡಿದು ಕೊಳ್ಳುವುದರ ಮೂಲಕ ಅಭಿವ್ಯಕ್ತಿಸುತ್ತದೆ 


     ಯುದ್ಧದಿಂದ ಹಿಂದೆ ಬಂದ ಅಣ್ಣ ಮುದ್ದ ಮತ್ತೆ ಕೃಷಿ ಕಾರ್ಯವನ್ನು ಮಾಡುತ್ತಿರುತ್ತಾನೆ ಒಂದು ದಿನ ತನ್ನ ಯಜಮಾನನ ಮನೆಯ ಕಂಬಳ ಗದ್ದೆಯ ಎಲ್ಲ ಕಾರ್ಯವನ್ನು ಮಾಡಿ ಮುಗಿಸುತ್ತಾನೆ ಮರು ದಿನ ಬೆಳಗ್ಗೆ ಗದ್ದೆಯ ಬದುವಿನ ನೀರನ್ನು ಬಿಡಿಸಲು ಹೋದಾಗ ಹಾವು ಕಚ್ಚಿ ಸಾಯುತ್ತಾನೆ . ಈ ವೀರರ ಬಾಲ್ಯದ ಗೆಳೆಯ ಮದನಪ್ಪ ಶೆಟ್ಟಿ ಕೂಡ ಯುದ್ಧಕ್ಕೆ ಹೋಗಿರುತ್ತಾನೆ .ಈತ ಕೂಡಾ ಯುದ್ಧದಲ್ಲಿ ದುರಂತವನ್ನಪ್ಪಿರಬೇಕು .

"ಕೋಟಿ ಚೆನ್ನಯ ಮತ್ತು ಇವರಿಗೆ ಗರೋಡಿ ಮತ್ತು ಸ್ಥಾನದ ಬಗ್ಗೆ ವಿವಾದ ಉಂಟಾಗಿದ್ದು ನಂತರ ಇವರು ಗರೊಡಿಯನ್ನು ಕೋಟಿ ಚೆನ್ನಯರಿಗೆ ಬಿಟ್ಟು ಕೊಟ್ಟರು" ಎಂಬ ತಮ್ಮ ಹಿರಿಯರಿಂದ ಕೇಳಿದ ಐತಿಹ್ಯವನ್ನು ಸಂತೋಷ್ ಕುಮಾರ್ ಮಟ್ಟು ಅವರು ತಿಳಿಸಿದ್ದಾರೆ.copy rights reserved (c)Dr.Lakshmi G Prasad

     ಒಟ್ಟಿನಲ್ಲಿ ಅಸಾಮಾನ್ಯ ಸಾಹಸಿಗಳಾದ ಮುದ್ದ ಕಳಲರೆಂಬ ಮುಗೇರ ವೀರರು ಕೋಟಿ ಚೆನ್ನಯರಂತೆಯೇ ಸಾಹಸವನ್ನು ಮೆರೆದು ಜನಮಾನಸದಲ್ಲಿ ನೆಲೆಗೊಂಡು ದೈವತ್ವಕ್ಕೆರಿ ಭೂತಗಳಾಗಿ ಆರಾಧಿಸಲ್ಪಡು ತ್ತಾರೆ .ಕೋಟಿ ಚೆನ್ನಯರ ಮತ್ತು ಮುದ್ದ ಕಳಲರ ಕಾಲ ಬೇರೆ ಬೇರೆಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ .ಕೋಟಿ ಚೆನ್ನಯರ ಕಥೆಯಲ್ಲಿಯೂ ಹಂದಿ ಬೇಟೆಯ ಪ್ರಸ್ತಾಪ ಇರುವುದರಿಂದ ಇವರ ಹಂದಿ ಬೇಟೆಯ ಕಥಾನಕ ಕೋಟಿ ಚೆನ್ನಯರ ಕಥೆಯೊಂದಿಗೆ ತಳಕು ಹಾಕಿಕೊಂಡಿರಬೇಕು .ಇವರಿಗೆ ಹಂದಿ ಬೇಟೆಯ ಸಂದರ್ಭದಲ್ಲಿ ಅನ್ಯಾಯ ಆಗಿದೆ ಅದಕ್ಕೆ ಕಡು ಹಾಕಬಾರದ ಬೇರ್ಮರ ಮಡುವಿಗೆ ಕಡು ಹಾಕಿ ಮೀನು ಹಿಡಿದು ಇವರು ತಮ್ಮ ಪ್ರತಿಭಟನೆಯನ್ನು ತೋರಿದ್ದಾರೆ .ಮುಂದೆ ಇವರು ಯುದ್ದ್ಧದಲ್ಲಿಯೋ ಅಥವಾ ನೀರಿಗಿಳಿದೋ ದುರಂತವನ್ನಪ್ಪಿದಾಗ ಜನರು ಇವರ ಸಾಹಸವನ್ನು ಮೆಚ್ಚಿ ಆರಾಧಿಸಲು ಆರಂಭಿಸಿರಬಹುದು  .copy rights reserved (c)Dr.Lakshmi G Prasad ಏನೇ ಆದರೂ ಇವರ ಸಾಹಸ ಸ್ವಾಭಿಮಾನ ನೆನೆದಾಗ ಮೈಮನಪುಳಕಿತವಾಗುತ್ತದೆ ಇವರು ತುಳುನಾಡಿನ ರಕ್ಷಕ ದೈವಗಳಾಗಿ ನಾಡನು ಬೆಳಗಿದ ಪರಿ ಅನನ್ಯವಾದುದು 

             ಚಿತ್ರ ಕೃಪೆ -ಶ್ರೀ ಮುಗೆರ್ಕಳ ದೈವಸ್ಥಾನ ,ಕೊಡ್ಯಡ್ಕ
                 


No comments:

Post a Comment