Tuesday 11 February 2014

12 ತಿಂಗಳುಗಳು, 120 ಬರಹಗಳು , 120 ದೇಶಗಳ 22,500 ಓದುಗರು !

                      


ಒಂದು ವರ್ಷದ ,ಬ್ಲಾಗ್ ಅಂದರೆ ಏನು?ಹೇಗೆ  ಎತ್ತ? ಯಾವುದೂ ನನಗೆ ತಿಳಿದಿರಲಿಲ್ಲ ..!

ಆದರೆ ನನಗೂ ಬ್ಲಾಗ್ ಬರೆಯ ಬೇಕು ಎನಿಸುತ್ತಿತ್ತು ಆದರೆ ಹೇಗೆ ಏನು ಎಂದು ಮಾಹಿತಿ ತಿಳಿದಿರಲಿಲ್ಲ !

ಒಂದು ವರ್ಷದ ಮೊದಲು ಆಕಸ್ಮಿಕವಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರ ತುಳುವ ಪತ್ರಿಕೆಯಲ್ಲಿ ಬಂದ ನನ್ನ ಲೇಖನವನ್ನು ನಾನು ಪ್ರೊ| ಉಪಾಧ್ಯ ಹಿರಿಯಡಕ ಅವರ ಬ್ಲಾಗ್ ನಲ್ಲಿ  ನೋಡಿದೆ .ನನ್ನ ಬ್ಲಾಗ್ ಕನಸು ಮತ್ತೆ  ಗರಿಗೆದರಿತು..

ಮುರಳೀಧರ ಉಪಾಧ್ಯರಲ್ಲಿ ಮಾತನಾಡಿ ನನಗೆ ಪರಿಚಯ ಇರಲಿಲ್ಲ .ಆದರೂ ಅವರ ವಿದ್ವತ್ ಹಾಗೂ ಸಜ್ಜನಿಕೆಯ ಬಗ್ಗೆ ನನ್ನ ಗೆಳತಿ ವಿನುತಾರ ಮೂಲಕ ನನಗೆ ತಿಳಿದಿತ್ತು .ಹಾಗಾಗಿ ಧೈರ್ಯ ಮಾಡಿ ಉಡುಪಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಹೆರಂಜೆ ಕೃಷ್ಣ ಭಟ್ ಮೂಲಕ ಫೋನ್ ನಂಬರ್ ಪಡೆದು ಅವರನ್ನು ಸಂಪರ್ಕಿಸಿದೆ .

ಅವರು ಸೂಕ್ತ ಸಲಹೆ ಸೂಚನೆ ನೀಡಿದರು ಮತ್ತು ಬ್ಲಾಗ್ ಗೆ ಸುಂದರ ಆವರಣವನ್ನು ಹಾಕಿ ಕೊಟ್ಟರು .ಮತ್ತೆ ಗೊಂದಲ ಆದಾಗೆಲ್ಲ ಅವರಲ್ಲಿ ಕೇಳಿಕೊಂಡು ನಾನು ಬ್ಲಾಗ್ ನಲ್ಲಿ ಬರೆಯಲಾರಂಭಿಸಿದೆ ! ಈ ನಡುವೆ ಹವ್ಯಕ ಬ್ಲಾಗ್ ಒಂದನ್ನೂ ತೆರೆದೆ ಈ ಸಂದರ್ಭದಲ್ಲಿ ನನಗೆ ಪರಿಚಿತರಾಗಿ  ಪೂರ್ಣ ಬೆಂಬಲ/ಪ್ರೋತ್ಸಾಹ ನೀಡಿದವರು ಪದ್ಯಾಣ ರಾಮಚಂದ್ರಣ್ಣ  ಅವರು .

 ನೋಡ ನೋಡುತ್ತಾ ಒಂದು ವರ್ಷ ಕಳೆಯಿತು ,ಒಟ್ಟು 120 ಬರಹಗಳು ಪ್ರಕಟವಾದವು.ದೇಶ ವಿದೇಶಗಳ ಸಹೃದಯರು ನನ್ನ ಬ್ಲಾಗ್ ಬರಹಗಳನ್ನು ಇಷ್ಟ ಪಟ್ಟು  ಓದುತ್ತಿದ್ದಾರೆ ಎನ್ನುವುದು ನನಗೆ ತುಂಬಾ ಸಂತಸದ ವಿಚಾರ.ನಮ್ಮ ದೇಶ ಮಾತ್ರವಲ್ಲದೆ ಅಮೇರಿಕಾ ,ರಷ್ಯ ,ಅರಬ್ ,ಚೀನ .ಕೊರಿಯಾ ಅಫಾಘನಿಸ್ತಾನ ,ಪಾಕಿಸ್ತಾನ ಸೇರಿದಂತೆ ಸುಮಾರು 120 ದೇಶಗಳ  22500 ಕ್ಕಿಂತ ಜನರು ನನ್ನ ಬರಹಗಳನ್ನು ಬ್ಲಾಗ್  ಮೂಲಕ ಓದಿದ್ದಾರೆ.!

.
ನಾನು ಬ್ಲಾಗ್ ಬರೆಯಲು ಆರಂಭಿಸಿದಾಗ ಒಂದು ವರ್ಷದಲ್ಲಿ ಒಂದು ಸಾವಿರ ಜನರಾದರೂ ಓದಿದರೆ ನಾನು ಬರೆದದ್ದು ಸಾರ್ಥಕವಾಗುತ್ತದೆ ಎಂದು ಕೊಂಡಿದ್ದೆ.ಆದರೆ ತಿಂಗಳಿಗೆ ಒಂದು ಸಾವಿರದಷ್ಟು ಮಂದಿ ಓದಿದ್ದಾರೆ ಎಂಬುದು ನನಗೆ ಇನ್ನೂ ಇದು ಕನಸೋ ವಾಸ್ತವವೋ ಎಂದು ಅನಿಸುತ್ತಿದೆ !

 ಈ ಒಂದು ಹೆಮ್ಮೆಗೆ ಇಂಬು ಕೊಡುವಂತೆ 10-2 -2014 ವಿಜಯ ಕರ್ನಾಟಕ ಪತ್ರಿಕೆ ಎಲ್ಲ ಆವೃತ್ತಿಗಳಲ್ಲಿ ನನ್ನ ಬ್ಲಾಗ್ ಬರಹವನ್ನು ಪ್ರಕಟಿಸಿ ಲಕ್ಷಾಂತರ ಕನ್ನಡಿಗರಿಗೆ ನನ್ನ ಬ್ಲಾಗ್ ಅನ್ನು ಪರಿಚಯಿಸಿದೆ !

ನನ್ನ ಈ ಯಶಸ್ಸಿಗೆ ಪೂರ್ಣಬೆಂಬಲನೀಡಿದ ಪ್ರೊ|ಮುರಳೀಧರ ಉಪಾಧ್ಯ ,ಹಿರಿಯಡಕ ,ಪದ್ಯಾಣ ರಾಮಚಂದ್ರಣ್ಣ  ,ಬ್ಲಾಗ್ ತೆರೆದು ಬರೆಯಲು ಸಹಾಯ ಮಾಡಿದ ನನ್ನ ಮಗ ಅರವಿಂದ ,ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ವಿಜಯ ಕರ್ನಾಟಕ ಪತ್ರಿಕೆಗೆ ,ಹಾಗೂ ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ,ಧನ್ಯವಾದಗಳು


No comments:

Post a Comment