Friday 7 February 2014

ಸಂಶೋಧಕರು ಪ್ರಶ್ನಾತೀತರಲ್ಲ !ಆದರೂ ..



ಹೌದು !ಯಾವುದೇ ಸಂಶೋಧನಾ  ಬರಹಗಳು ಸಮಗ್ರ ಅಲ್ಲ ಹಾಗಂತ ಅಪ್ರಬುದ್ಧವೂ ಅಲ್ಲ !,ಸಂಶೋಧಕರು  ಸಿಕ್ಕ ಮಾಹಿತಿಯ ಪರಿಧಿಯೊಳಗೆ ಬರೆದ ಲೇಖನಗಳು.ತುಳು ನಾಡ ದೈವಗಳ ಬಗೆಗೆ ಮಾಹಿತಿದಾರರು ನೀಡಿದ ಮಾಹಿತಿಯನ್ನು ಬದಲಾಯಿಸದೆ ಬರೆದು ಆ ದೈವದ ಬಗ್ಗೆ ಪ್ರಚಲಿತ ಇರುವ ಐತಿಹ್ಯ ,ಪಾಡ್ದನಗಳು ಸಿಕ್ಕ್ಕರೆ ಅದನ್ನು ಒಟ್ಟು ಮಾಡಿ ಜಾನಪದ ಸಿದ್ಧಾಂತ ಹಾಗೂ ಹಿರಿಯ ವಿದ್ವಾಂಸರು ಹಾಕಿ ಕೊಟ್ಟ ದಾರಿಯಲ್ಲ್ಲಿ ಅವರದೇ ಆದ ನಿಲುವಿಗೆ ಬರುತ್ತಾರೆ ಅದನ್ನು ಲೇಖನದ ಕೊನೆಯಲ್ಲಿ ಹಾಕುತ್ತಾರೆ 

ಇನ್ನು ಜನಪದರು ನೀಡಿದ ಐತಿಹ್ಯ ಪಾದ್ದನಗಳಲ್ಲಿ ತಪ್ಪು ಅನ್ನುವುದಿರುವುದಿಲ್ಲ ,ಆದರೆ ಭಿನ್ನತೆಗಳು ಇರುತ್ತವೆ.ಒಂದೇ ದೈವದ ಮೂಲಕ್ಕೆ ಸಂಬಂಧಿಸಿದಂತೆ ಹಲವು ಪ್ರಕಾರದ ಐತಿಹ್ಯಗಳು ಪಾಡ್ದನಗಳು ಇರುತ್ತವೆ .ಜನಪದ ಕಲಾವಿದರು ಕಂಠಸ್ಥ ಪರಂಪರೆಯಲ್ಲಿ ಕೇಳಿ ಕೊಂಡು ನೋಡಿ ಕೊಂಡು ಬಂದ ಮಾಹಿತಿಯನ್ನು  ನೀಡುತ್ತಾರೆ.

ಬೇರೆ ಬೇರೆ ಪ್ರದೇಶಗಳಲ್ಲಿ ಅಥವಾ ಒಂದೇ ಪರಿಸರದಲ್ಲಿ ಭಿನ್ನ ಭಿನ್ನ ಕಥಾನಕಗಳು ಪ್ರಚಲಿತ ಇರಬಹುದು .ಆಗ ಒಂದು ಪರಿಸರದಲ್ಲಿ ಇರುವ ಕಥಾನಕವನ್ನು ತಿಳಿದ ಕೆಲವು ಜನರು ಇತರ ಪ್ರದೇಶಗಳಲ್ಲಿ ಪ್ರಚಲಿತ ಇರುವ ,ಅಥವಾ ಇತರರು ನೀಡಿರುವ ಮಾಹಿತಿ ತಪ್ಪು ಎಂದು ಭಾವಿಸುವುದು ಉಂಟು !

ತಮ್ಮ ಗಮನಕ್ಕೆ ಬಂದಿಲ್ಲ ಎಂದಾದರೆ ಅದು ಇಲ್ಲವೇ ಇಲ್ಲ ಎಂದು ವಾದಿಸುವುದೂ ಉಂಟು ,ಸಂಶೋಧಕರು  ಈ ಬಗ್ಗೆ ಅನೇಕ ಬಾರಿ ಹೇಳಿದ್ದುಂಟು ನಮಗೆ ಗೊತ್ತಿಲ್ಲವಾದರೆ ಅದು ಇಲ್ಲವೆಂದು ಅರ್ಥವಲ್ಲ ನಮಗೆ ಗೊತ್ತಿಲ್ಲ ಎಂದು ಮಾತ್ರ ಭಾವಿಸಬೇಕು ಎಂದು

ಜನಪದ ಇತರ ಅಧ್ಯಯನ ಶಾಸ್ತ್ರ ಗಳಿಗಿಂತ ಭಿನ್ನವಾದುದು ಇಲ್ಲಿ ಮುಖಿಕ ಪರಂಪರೆಯಲ್ಲಿ ಹರಿದು ಬಂದ ಎಲ್ಲ ಮಾಹಿತಿಗಳೂ ಸರಿ ,ಆದರೆ ಹಾಗೆಂದು ಎಲ್ಲ ಮಾಹಿತಿಗಳು ಒಂದೇ ಅಲ್ಲ ಮಾಹಿತಿಗಳಲ್ಲಿ ಭಿನ್ನತೆ ಇರುತ್ತದೆ.
ಭಿನ್ನತೆ ಇರುವುದನ್ನು ಕೆಲವರು ತಪ್ಪು ಎಂದು ಹೇಳುತ್ತಾರೆ ,ತಪ್ಪು ಎಂದು ಹೇಳುವ ಮೊದಲು ಯಾಕೆ ಎಲ್ಲಿ ಹೇಗೆ ಎಂದು ಸ್ಪಷ್ಟಪಡಿಸುವುದು ತುಂಬಾ ಮುಖ್ಯ ,ಈ ಬಗ್ಗೆ ಒಂದು ಸಮರ್ಪಕ ಲೇಖನ ಬರೆದು ಎಲ್ಲಿ ತಪ್ಪು ಎಂದು ತೋರಿಸಿದರೆ  ಮುಂದಕ್ಕೆ ಲೇಖನ ಬರೆಯುವಾಗ ಅದನ್ನೂ ಸೇರಿಸಿಕೊಳ್ಳುತ್ತಾರೆ  ಅವರ ಹೆಸರನ್ನು ಉಲ್ಲೇಖಿಸಿ ,ಇದರ ಬದಲು ಕೇವಲ ತಪ್ಪು ಎಂದು ಆಧಾರವಿಲ್ಲದೆ ಹೇಳಿದರೆ ಒಪ್ಪಿಕೊಳ್ಳಲಾಗುವುದಿಲ್ಲ.



ಒಬ್ಬರು ಹೇಳಿದ ವಿಚಾರವನ್ನು ಹೀಗೆಯೇ ಎಂದು ನಿಷ್ಕರ್ಷೆಗೆ ಬರಬೇಕಾದರೆ ಸಾಕಷ್ಟು ಅಧ್ಯಯನದ ಅಗತ್ಯ ಇದೆ.ಆ ವಿಚಾರದ ಬಗ್ಗೆ ಆ ತನಕ ನಡೆದ ಅಧ್ಯಯನಗಳು ,ಆಯಾಯ ಕ್ಷೇತ್ರದ ಪರಿಣತ ವಿದ್ವಾಂಸರ ಅಭಿಪ್ರಾಯಗಳನ್ನು ಮೊದಲು ಅಧ್ಯಯನ ಮಾಡಿ ಅದನ್ನೆಲ್ಲ ಸೂಕ್ತವಾಗಿ ಉಲ್ಲೇಖಿಸಿ ನಂತರ ತಮ್ಮ ಅಭಿಪ್ರಾಯವನ್ನು ತಿಳಿಸ ಬೇಕು ಮುಂದೆ ಈ ಹಿಂದಿನವರ ಅಭಿಪ್ರಾಯಕ್ಕೂ ತಮ್ಮ ಅಭಿಪ್ರಾಯಕ್ಕೂ ಇರುವ ವ್ಯತ್ಯಾಸ ,ಅಭಿಪ್ರಾಯ ಬೇಧವನ್ನು ತಿಳಿಸಿ ತಾವು ಹೇಳಿದ್ದು ಯಾಕೆ ಸರಿ ಎಂದು ಸಮರ್ಥಿಸ ಬೇಕೇ ಹೊರತು ಯಾವುದೇ ಆಧಾರವಿಲ್ಲದೆ ಬೇರೆಯವರು ಹೇಳಿದ್ದು ಸರಿಯಲ್ಲ ಎಂದು ಹೇಳುವುದು ಸರಿಯಾದ ವಿಧಾನವಲ್ಲ
  ಸಂಶೋಧಕರು ಸಾಮಾನ್ಯವಾಗಿ ಕೇವಲ ಕ್ಷೇತ್ರ ಕಾರ್ಯ ಮಾತ್ರವಲ್ಲ ಜೊತೆಗೆ ಜಾನಪದ ಸಿದ್ಧಾಂತಗಳ ಶಾಸ್ತ್ರಿಯ ಅಧ್ಯಯನವನ್ನೂ ಮಾಡಿರುತ್ತಾರೆ ಅನೇಕ ವರ್ಷಗಳ   ಅನುಭವವೂ ಇರುತ್ತದೆ  ಹಾಗಾಗಿ ಅವರ ಅಭಿಪ್ರಾಯಗಳನ್ನು ಆಧಾರಗಳಿಲ್ಲದೆ ತಳ್ಳಿ ಹಾಕಲು ಆಗುವುದಿಲ್ಲ
  ಸಂಶೋಧಕರು ಕೂಡ ಕೆಲವೊಮ್ಮೆ ಇತರರ ಅಭಿಪ್ರಾಯಗಳನ್ನು ಖಂಡಿಸಿರುವುದು ಉಂಟು.ಆದರೆ ಇತರರು ಏನು ಹೇಳಿದ್ದಾರೆ ಎಂದು ತಿಳಿಸಿ ನಂತರ ಅವರ ಸ್ವಂತ  ಅಭಿಪ್ರಾಯವನ್ನು ಹೇಳಿ ಅದಕ್ಕೆ ಬೇಕಾದ ಸಾಕ್ಷಿ ಆಧಾರಗಳನ್ನು ನೀಡಿ ತಮ್ಮ  ಅಭಿಪ್ರಾಯ ಸರಿ ಎಂದು ಹೇಳುತ್ತರೆ.ಇದು ಹಿರಿಯರು ಹಾಕಿ ಕೊಟ್ಟ ಮಾರ್ಗ ಕೂಡಾ !

No comments:

Post a Comment