Friday, 30 May 2014

ಸಾವಿರದೊಂದು ಗುರಿಯೆಡೆಗೆ:102 ಕೊರತಿ ಭೂತ (Korati Bhuta)-© Dr.LAKSHMI G PRASAD

                                
© copy rights reserved

ಕೊರತಿ ದೈವದ ಪಾಡ್ದನ ಪ್ರಕಾರ ಕೊರತಿ ಮೂಲತಃ ಪಾರ್ವತಿ ದೇವಿ .ಒಮ್ಮೆ ಈಶ್ವರ ದೇವರು ಬೇಟೆಗೆ ಹೋಗುವಾಗ ಪಾರ್ವತಿದೇವಿ ವೇಷ ಮರೆಸಿಕೊಂಡು ಕಾಡಿಗೆ ಹೋಗುತ್ತಾಳೆ. ಅಲ್ಲಿ ಈಶ್ವರದೇವರಿಗೆ ಕೊರಪ್ಪೊಳು ರೂಪದ ಪಾರ್ವತಿಯ ಮೇಲೆ ಮನಸ್ಸಾಗುತ್ತದೆ. ಅವರ ಸಮಾಗಮವಾಗುತ್ತದೆ. ಕೊರಪ್ಪೊಳು ವೇಷದ ಪಾರ್ವತಿ ಈಶ್ವರದೇವರ ಉಂಗುರ, ಬೆಳ್ಳಿ ಬಿರಡೆಯನ್ನು ಕೇಳಿ ಪಡೆಯುತ್ತಾಳೆ. ಆನಂತರ ಈಶ್ವರನಿಗಿಂತ ಮೊದಲು ಅಡ್ಡದಾರಿಯಲ್ಲಿ ಬಂದು ಮನೆ ಸೇರುತ್ತಾಳೆ. ಈಶ್ವರ ಬಂದಾಗ “ನಿಮ್ಮ ಉಂಗುರ, ಬೆಳ್ಳೆ ಬಿರಡೆ ಎಲ್ಲಿ?” ಎಂದು ಕೇಳುತ್ತಾಳೆ. ಹೀಗೆ ಕೊರಪ್ಪೊಳು ವೇಷದ ಪಾರ್ವತಿಯೇ ‘ಕೊರತಿ’ ಎಂಬ ದೈವವಾಗಿ ಆರಾಧನೆ ಪಡೆಯುತ್ತದೆ.        
ಆದರೆ ಕೊರತಿ ಭೂತ ಭತ್ತ ಕುಟ್ಟುವ ,ಕೇರುವ,ಅಂಗಳ ಗುಡಿಸುವ ಕಾರ್ಯಗಳ ಅಭಿನಯವನ್ನು ಮಾಡುತ್ತದೆ .ಇದು ಮೂಲತಃ ಮಾನವ ಮೂಲದ ಕೊರತಿಯ ಕೆಲಸಗಳನ್ನು ಸಾಂಕೇತಿಸುತ್ತದೆ .
ತುಳು ನಾಡಿನ ದೈವಗಳ ಮೂಲವನ್ನು ಪುರಾಣ ಮೂಲದ ದೇವರುಗಳೊಂದಿಗೆ ಸಮನ್ವಯ ಮಾಡುವುದು ಎಲ್ಲೆಡ ಕಂಡು ಬರುವ ಸಾಮಾನ್ಯ ವಿಚಾರ .ಇಲ್ಲಿ ಕೂಡ ಕೊರತಿ ಭೂತಕ್ಕೆ ಪಾರ್ವತಿಯ ವೇಷ ಬದಲಾಯಿಸಿದ ಕಥೆ ಸೇರಿರಬಹುದು .ವಾಸ್ತವದಲ್ಲಿ ಇದು ಅಸಾಧ್ಯದ ವಿಚಾರ  ದೇವರು ಕಾಡಿಗೆ ಹೋದಾಗ ಪಾರ್ವತಿ ಮೊದಲೇ ವೇಷ ಬದಲಾಯಿಸಿ ಕೊರತಿಯ ರೂಪದಲ್ಲಿ  ಕಾಡಿಗೆ ಹೋಗುವುದು .ಅಲ್ಲಿ ಈಶ್ವರ ದೇವರಿಗೆ ಕೊರತಿ ರೂಪದ ಪಾರ್ವತಿ ಮೇಲೆ ಮನಸಾಗುವುದು .ಇಲ್ಲಿ ಈಶ್ವರ ದೇವರಿಗೆ ತನ್ನ ಮಡದಿ ಎಂದು ತಿಳಿಯದೆ ಇರಲು ಸಾಧ್ಯವೇ ?
ಹಾಗಾಗಿ ಇದು ಈಶ್ವರ ಮತ್ತೆ ಪಾರ್ವತಿಯರ ಕಥೆಯಲ್ಲ ಎಂದು ಹೇಳಬಹುದು.
ಮೂಲತಃ ಇದು ಕೊರಗ ಸಮುದಾಯಕ್ಕೆ ಸೇರಿದ ಹೆಣ್ಣು  ಮಗಳ ಕಥಾನಕ .ಕೊರತಿಗೇಕೆ ದೈವತ್ವ ದೊರೆಯಿತು ಎಂಬ ಬಗ್ಗೆ ಪ್ರಸ್ತುತ ಮಾಹಿತಿ ಸಿಕ್ಕುತ್ತಿಲ್ಲ .ಆದರೆ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವ ಒಂದಕ್ಕೊಂದು ತಳುಕು ಹಾಕಿಕೊಂಡಿದೆ .
ಕೊರತಿ ಪಾದ್ದನಲ್ಲಿನ ಪುರಾಣ ದ ಕಥೆಯನ್ನು ಬಿಟ್ಟು ಅಲ್ಲಿನ ಆಶಯವನ್ನು ಗಮನಿಸಿದಾಗ ಕೊರತಿ ಕಾಡಿಗೆ ಹೋದ ಓರ್ವ ಕೊರಗ ಸಮುದಾಯದ ಹೆಣ್ಣು ಮಗಳು .ಅಲ್ಲಿ ಯಾರೋ ಅರಸ ಅಥವಾ  ಬಲಿಷ್ಠ ವ್ಯಕ್ತಿ ಕೊರತಿಗೆ ತೊಂದರೆ ಕೊಟ್ಟಿರಬಹುದು .
ಮುಂದೆ ಅವಳು ಕೊರತಿ ದೈವವಾಗಿ ಆರಧಿಸಲ್ಪತ್ತಿರ ಬಹುದು .
ಕೊರಗ ತನಿಯನ ತಾಯಿ ಮೈರೆಯೇ ಕೊರತಿ ಎಂದು ಆರಧಿಸಲ್ಪಡುತ್ತಿರುವ ಸಾಧ್ಯತೆ ಕೂಡ ಇದೆ .

No comments:

Post a Comment