Friday, 23 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು: 82 ಕಾರಿಂಜೆತ್ತಾಯ ಭೂತ (Karinjettaya Bhuta)-ಡಾ.ಲಕ್ಷ್ಮೀ ಜಿ ಪ್ರಸಾದ


                               

ಕುಂಬಳೆ ಬದಿಯಡ್ಕ ಸಮೀಪದ ಆನಾಡಿ ಪಳ್ಳಕ್ಕೆ ತುಸು ದೂರದಲ್ಲಿ ಕಾರಿಂಜೇಶ್ವರ ದೇವಾಲಯವಿದೆ. ಕಾರಿಂಜೇಶ್ವರ ದೇವಾಲಯವನ್ನು ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ನಿರ್ಮಿಸಿದ್ದಾನೆ.
ದೇವಾಲಯವನ್ನು ಕಟ್ಟಿಸಿದ ಅನೇಕರು ದೈವತ್ವ ಪಡೆದು ಆರಾಧಿಸಲ್ಪಡುವ ಅನೇಕ ದೃಷ್ಟಾಂತಗಳು ತುಳುನಾಡಿನಲ್ಲಿ ಅಲ್ಲಲ್ಲಿ ಸಿಗುತ್ತವೆ .

ಪಾಲ್ತಾಡು ವಿನಲ್ಲಿ ವಿಷ್ಣು ಮೂರ್ತಿ ದೇವಾಲಯವನ್ನು ಕಟ್ಟಿಸಿದ ಅಚ್ಚು ಬಂಗೇತಿ ಅಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .ಅದೇ ರೀತಿ ಅಡ್ಕತ್ತಾಯ ,ಚೆನ್ನಿಗರಾಯ ಮೊದಲಾದವರು ದೇವಾಲಯ ನಿರ್ಮಿಸಿ ಅವರ ಇಷ್ಟ 
ದೈವಗಳ ಸೇರಿಗೆಗೆ ಸಂದು ಆರಾಧಿಸಲ್ಪಡುತ್ತಾರೆ .

ಅಂತೆಯೇ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿಂಜೆತ್ತಾಯ ಕೂಡಾ ದೈವತ್ವ ಪಡೆದು ಆರಾಧಿಸಲ್ಪದುತ್ತಿದ್ದಾನೆ. 

ಉಳ್ಳಾಕುಲು ದೈವಗಳ ಅನನ್ಯ ಭಕ್ತನಾದ ಈತ ಮರಣಾ ನಂತರ ಕಾರಿಂಜೆತ್ತಾಯ ದೈವವಾಗಿ ಆರಾಧನೆಯನ್ನು ಪಡೆಯುತ್ತಾನೆ. 

ಈತನನ್ನು ಶಿವಾಂಶನೆಂದೂ ಶೈವಗಣವೆಂದೂ ಬಾವಿಸಿ ಜನರು ಆರಾಧಿಸುತ್ತಾರೆ. ಸುಮಾರು ಮೂವತ್ತು ನಲುವತ್ತು ವರ್ಷಗಳ ಹಿಂದೆ ಈ ದೈವಕ್ಕೆ ಕೋಲ ಕಟ್ಟಿ ನೇಮ ನೀಡುತ್ತಿದ್ದರು. ಈಗ ಈ ಆಚರಣೆಯು ನಿಂತು ಹೋಗಿ ಕಾರಿಂಜೆತ್ತಾಯ ದೈವಕ್ಕೆ ತಂಬಿಲ ನೀಡಿ ಆರಾಧಿಸುತ್ತಾರೆ

No comments:

Post a Comment