Friday, 23 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 83-ಕಿನ್ನಿದಾರು (Kinnidaru)--© ಡಾ.ಲಕ್ಷ್ಮೀ ಜಿ ಪ್ರಸಾದ

                     
                                         ಚಿತ್ರ :ನಮ್ಮ ಎಣ್ಮೂರು
                                   ©copy rights reserved
ತುಳುನಾಡಿನ ಅವಳಿ  ವೀರರಾದ ಕೋಟಿ ಚೆನ್ನಯರ ಅಕ್ಕ ಕಿನ್ನಿದಾರು .ಕೋಟಿ ಚೆನ್ನಯರಿಗಿಂತ ಮೊದಲು ಒಂದು ಮಗಳು ದೇಯಿ ಬೈದೆತಿಗೆ ಇದ್ದ ವಿಚಾರ ಕೋಟಿ ಚೆನ್ನಯ ಪಾಡ್ದನದ ಆರಂಭದಲ್ಲಿ ಎಲ್ಲೂ ಪ್ರಸ್ತಾಪ ಗೊಂಡಿಲ್ಲ.

ಮುಂದೆ ಕೋಟಿ ಚೆನ್ನಯರು ಸಾದಗ(ವಿದ್ಯಾಭ್ಯಾಸ )ಮುಗಿಸಿ , ಪಡುಮಲೆ ಬಲ್ಲಾಳನಿಂದ ಭೂಮಿ ಪಡೆದು ಗದ್ದೆ ಸಾಗುವಳಿಗೆ ಮುಂದಾಗಿ,ಸಹಿಸಲಾಗದ ಉಪಟಳ ಕೊಟ್ಟ ಬುದ್ದಿವಂತನನ್ನು ಕೊಂದು ,ಪಡುಮಲೆಗೆ ಗಡಿ ಇಟ್ಟು  ಎಣ್ಮೂರಿಗೆ ಬರುವ ಸಂದರ್ಭದಲ್ಲಿ ಕಿನ್ನಿದಾರುವಿನ ಪ್ರಸ್ತಾಪ ಬರುತ್ತದೆ.ದಾರಿಯಲ್ಲಿ ಬಾಯಾರಿಕೆ ಆಗಿ ನೀರು ಕೋಟಿ ಚೆನ್ನಯರು ಒಂದು ಮನೆಯ ಹೆಂಗಸಿನಲ್ಲಿ ನೀರು ಕೇಳುತ್ತಾರೆ.ಆ ಸಂದರ್ಭದಲ್ಲಿ ಆ ಹೆಂಗಸು ಕೋಟಿ ಚೆನ್ನಯರು ಯಾರು ಎಂದು ವಿಚಾರಿಸುತ್ತಾಳೆ .ಆಗ ಕೋಟಿ ಚೆನ್ನಯರಿಗೆ ಅವಳು ತಮ್ಮ ಅಕ್ಕ ಕಿನ್ನಿ ದಾರು ಎಂದು ತಿಳಿಯುತ್ತದೆ .

ಕಿನ್ನಿದಾರು ಬಂದವರು ತನ್ನ ತಮ್ಮಂದಿರು ಎಂದು ತಿಳಿದು ಸಂಭ್ರಮಿಸುತ್ತಾಳೆ.ಆದರೆ ಇದುಆರಂಭದಲ್ಲಿ  ಅವಳ ಗಂಡ ಪಯ್ಯ ಬೈದ್ಯನಿಗೆ ಇಷ್ಟ ಆಗುವುದಿಲ್ಲ.ನಂತರ ಅವನು ಬಂದವರು ತನ್ನ ಭಾವನ್ದಿರೆಂದು ತಿಳಿದು  ಸಂಭ್ರಮಿಸಿ ಸತ್ಕರಿಸುತಾನೆ ಎಂದು ಕೆಲವು ಪಾಡ್ದನದ ಪಾಠಗಳಲ್ಲಿ ಹೇಳಿದರೆ ,ಕೆಲವು ಪಾಠ ಗಳಲ್ಲಿ ಅವನು ಕೋಟಿ ಚೆನ್ನಯರನ್ನು ಬಂಧಿಸಲು ಕುಟಿಲೋಪಾಯ ಮಾಡುತ್ತಾನೆ.ಎಂದು ಕೂಡಾ ಇದೆ  ಮುಂದೆ ಕೋಟಿ ಚೆನ್ನಯರು ಪಂಜದ ಬಲ್ಲಾಳನಿಂದ ಬಂಧಿಸಲ್ಪಟ್ಟು ಬೆರ್ಮೆರ್ ಅನುಗ್ರಹದಿಂದ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಎಣ್ಮೂರಿನ ಬಲ್ಲಾಳನ ಆಶ್ರಯದಲ್ಲಿ ಅವನ ಬಲ ಗೈ ಬಂಟರಾಗಿ ಇರುತ್ತಾರೆ .ಮುಂದೆ ಪಂಜ ಎಣ್ಮೂರಿನ ಯುದ್ಧದಲ್ಲಿ ನಂಬಿದ ಒಡೆಯನಿಗೆ ಗೆಲುವು ತಂದು ಕೊಟ್ಟು ಅಸು ನೀಗಿ ದೈವತ್ವ ಪಡೆದು ತುಳುವ ಆರಾಧ್ಯ ದೇವತೆಗಳಾಗಿ ಆರಾಧಿಸಲ್ಪಡುತ್ತಾರೆ.

ಇಲ್ಲಿ ಕಿನ್ನಿದಾರುವಿನ ವಿಚಾರದಲ್ಲಿ ಒಂದು ಸಣ್ಣ ಸಂಶಯ ಹುಟ್ಟುತ್ತದೆ ಪಾದ್ದನದಲ್ಲಿ .ಕೋಟಿ ಚೆನ್ನಯರ ಅಕ್ಕನಾದ ಕಿನ್ನಿದಾರುವಿನ ವಿಚಾರ ಅವರ ಆಕಸ್ಮಿಕ ಭೇಟಿಯ ತನಕ ಏಕೆ ಪ್ರಸ್ತಾಪವಾಗಿಲ್ಲ? ಎಂದು .ಅಲ್ಲದೆ ಕಿನ್ನಿದಾರುವಿನ ಸ್ವಂತ ತಮ್ಮಂದಿರು ಕೋಟಿ ಚೆನ್ನಯರು ಎಂದಾಗಿದ್ದರೆ ಅವಳ ಗಂಡ ಯಾಕೆ  ಅವರ ವಿರುದ್ಧ ಷ ಡ್ಯಂತ್ರವನ್ನು ಮಾಡಿದ ? ಎಂದು .
ಬಹುಶ ಕಿನ್ನಿದಾರು ಕೋಟಿ ಚೆನ್ನಯರ ಒಡ ಹುಟ್ಟಿನವಳು ಆಗಿಲ್ಲದೇ ಇರುವ ಸಾಧ್ಯತೆ ಇದೆ .ನೀರು ಕೇಳಿ ಬಂದ ವೀರರ ಸ್ವಾಭಿಮಾನ ಸಾಹಸಗಳು ಇಷ್ಟವಾಗಿ ತನ್ನ ಒಡ ಹುಟ್ಟಿದ ತಮ್ಮಂದಿರಂತೆ ಭಾವಿಸಿ ಅವಳು ಅವರನ್ನು ಸತ್ಕರಿಸಿರಬಹುದು .ಇದು ಅವಳ ಗಂಡನಿಗೆ ಇಷ್ಟವಾಗದೇ ಇದ್ದಿರಬಹುದು.ಅಥವಾ ಆರಂಭದಲ್ಲಿಕೋಟಿ ಚೆನ್ನಯರು ತನ್ನ ಭಾವಂದಿರು ಎಂದು ತಿಳಿಯದೆ ಅವರನ್ನು ಬಂಧಿಸುವಸಂಚುಮಾಡಿರಬಹುದು ,ನಂತರ ಅವರು ತನ್ನಭಾವಂದಿರು ಎಂದು ತಿಳಿದು ಸತ್ಕಾರಮಾಡಿರಬಹುದು .

 :ಎಲ್ಲ ಪಾಠ ಗಳು ತಿಳಿಸುವಂತೆ ಪಯ್ಯ ಕೋಟಿ ಚೆನ್ನಯರನ್ನು ಬಂಧಿಸಲು ಹೊಂಚು ಹಾಕುತ್ತಿದ್ದ ತಂಡದಲ್ಲಿ ಇದ್ದವನು ಅತ್ತು ಅವರಿಂದ ಪೆಟ್ಟು ತಿಂದವನು ಹಾಗಾಗಿ ಅವರನ್ನು ತನ್ನ ಮನೆಯಲ್ಲಿ ಕಂಡಾಗ ಹೆದರಿ ಓಡಿ ಹೋಗುತ್ತಾನೆ.ಒಂದು ಪಾದ್ದನದಂತೆ ಅವನ ಹೆಸರು ಕೆಮರ ಎಂದೂ ಇನ್ನೊಂದು ಪಾದ್ದನದಲ್ಲಿ ಅವನ ಹೆಸರು ಕುಜುಂಬ ಕಾಂಜ ಎಂದು ಇದೆ"  ಎಂದು ಡಾ.ವಾಮನ ನಂದಾವರ ಅವರು ತಮ್ಮ  ಕೋಟಿ ಚೆನ್ನಯ-ಒಂದು ಜಾನಪದೀಯ ಅಧ್ಯಯನ ಎಂಬ  ಪಿಎಚ್ ಡಿ ಪ್ರಬಂಧದ 91ನೆ ಪುಟದಲ್ಲಿ ಬರೆದಿದ್ದಾರೆ.

ಅದು ಏನೇ ಇದ್ದರೂ ಕಿನ್ನಿದಾರು ಕೋಟಿ ಚೆನ್ನಯರ ಅಕ್ಕನೆಂದೇ ಪರಿಗಣಿಸಲ್ಪಟ್ಟು ದೈವತ್ವದ ನೆಲೆಯಲ್ಲಿ ಆರಾಧಿಸಲ್ಪಡುತ್ತಾಳೆ .ಎಣ್ಮೂರಿನಲ್ಲಿ ಕೋಟಿ ಚೆನ್ನಯರ ನೇಮ ಆಗುವಾಗ ಕಿನ್ನಿದಾರು ಅವರನ್ನು ಭೇಟಿ ಆಗುವ ಸಂಪ್ರದಾಯ ಅಲ್ಲಿದೆ .ಕಿನ್ನಿದಾರುವಿಗೆ ಕೂಡಾ ಕೋಲ ಕೊಟ್ಟು ಆರಾಧಿಸುತ್ತಾರೆ .
ಸುಮಾರು 300-350 ವರ್ಷ ಹಿಂದಿನ ಕಿನ್ನಿದಾರುವಿನ ಮನೆ ಈಗ ಕೂಡಾ ಎಣ್ಮೂರು ಸಮೀಪದ ದೋಲ ಎಂಬಲ್ಲಿದೆ .ಇದನ್ನು ದೋಲ ಅರಮನೆ ಎಂದೇ ಕರೆಯುತ್ತಾರೆ .ಮನೆಯ ಮುಂದೆ ಕೋಟಿ ಚೆನ್ನಯರು ನೀರು ಕೂಡಿದ ಭಾವಿ ಕೂಡಾ ಇದೆ .ಕೋಟಿ ಚೆನ್ನಯರ ಪ್ರತೀಕವಾಗಿರುವ ಎರಡು ತಾಳೆಮರ ಗಳು ಅಲ್ಲಿವೆ



                                                       ಕಿನ್ನಿದಾರುವಿನ ಮನೆ

1 comment:

  1. Koti chennayara ottige nema iruvudu kujumba kanjava yemba daivakke, adu payya baidyaralla

    ReplyDelete