Sunday, 25 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು:93 ಕೋಮಾರು ಚಾಮುಂಡಿ(Komaru Chamundi Bhuta)-© Dr.LAKSHMI G PRASAD                           
 ನಡಿಬೈಲು, ಇಚಲಂಗೋಡು ಮೊದಲಾದೆಡೆಗಳಲ್ಲಿ ಕೋಮಾರು ಚಾಮುಂಡಿ ಎಂಬ ದೈವಕ್ಕೆ ಆರಾಧನೆ ಇದೆ. ಕೋಮಾರು ಎಂಬಾತ ಇಚಲಂಗೋಡು ಪರಿಸರದ ಬಾಕುಡ ಸಮುದಾಯದ ಹಿರಿಯ ವ್ಯಕ್ತಿ. ವ್ಯಾಘ್ರ ಚಾಮುಂಡಿ ಅವರ ಆರಾಧ್ಯ ದೈವ. ಕೋಮಾರು ಆರಾಧಿಸಿದ ದೈವ ಕೋಮಾರು ಚಾಮುಂಡಿ ಎಂದು ಒಂದು ಐತಿಹ್ಯವು ಹೇಳಿದರೆ ಇನ್ನೊಂದು ಐತಿಹ್ಯದ ಪ್ರಕಾರ ತನ್ನನ್ನು ಆರಾಧಿಸಿಸಿದ ಕೋಮಾರುವಿನ ಮೇಲೆ ಅನುಗ್ರಹದಿಂದ ಆತನನ್ನು ಮಾಯಮಾಡಿ ತನ್ನ ಸೇರಿಗೆಗೆ ಚಾಮುಂಡಿ ಭೂತ ಸೇರಿಸಿಕೊಳ್ಳುತ್ತದೆ. ಮಾಯವಾದ ಕೋಮಾರುವೇ ಕೋಮಾರು ಚಾಮುಂಡಿ ಎಂಬ ಹೆಸರಿನಲ್ಲಿ ಆರಾಧನೆಗೊಳ್ಳುತ್ತಾನೆ ಎಂದು ಕೂಡಾ ಐತಿಹ್ಯವಿದೆ .
   © copy rights reserved(c)Dr.Laxmi g Prasadಈ ಪ್ರದೇಶವನ್ನು ಕುಮಾರ ಪೆರ್ಗಡೆ ಎಂಬ ಧರ್ಮಸ್ಥಳದ ಅರಸು ಆಳಿದ ಬಗ್ಗೆ ಮಾಹಿತಿ ಇದೆ .ಈತನೇ ಕುಮಾರ ರಾಯ ಆಗಿದ್ದು ಕುಮಾರರಾಯ ಎಂಬುದು ಕಾಲಾಂತರದಲ್ಲಿ ಕೋಮಾರು ಆಗಿರುವ ಸಾಧ್ಯತೆ ಕೂಡಾ ಇದೆ .ಅರಸು ಆರಾಧನೆ ತುಳು ನಾಡಿನ ಸಂಸ್ಕೃತಿಯ ಒಂದು ವಿಶಿಷ್ಟತೆ .ಅಂತೆಯೇ ಇಲ್ಲಿನ ಆರಸು ಕುಮಾರರಾಯ ಕೋಮಾರು ಚಾಮುಂಡಿ ಎಂದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ.
ಬಾಕುಡರಿಗೆ ಅರಸೊತ್ತಿಗೆ ಲಭಿಸಿದ ಬಗ್ಗೆ ಐತಿಹ್ಯಗಳು ಲಭ್ಯವಿವೆ.ಪಟ್ಟದ ಅರಮನೆ ಕೂಡಾ ಇಚಲನ್ಗೊಡಿನಲ್ಲಿದೆ.ಇವರು ತುಂಡರಸರು ಆಗಿದ್ದರು .ಆದರೆ ಅವರಿಗೆ ಯಾರಿಂದ ಹೇಗೆ ಯಾವಾಗ ಅರಸೊತ್ತಿಗೆ ಸಿಕ್ಕಿತು ಎಂಬ ಮಾಹಿತಿ ಇಲ್ಲ .ಒಂದೊಮ್ಮೆ ಈ ಅಧಿಕಾರವನ್ನು ಕುಮಾರ ಪೆರ್ಗಡೆ ಕೊಟ್ಟಿದ್ದಾಗಿದ್ದಲ್ಲಿ ಆತ ಬಾಕುಡ ಸಮುದಾಯದವರ ಆರಾಧ್ಯ ದೈವ  ಚಾಮುಂಡಿಯ ಸೇರಿಗೆ  ದೈವವಾಗಿ ಪರಿಭಾವಿಸಲ್ಪಟ್ಟು ಕೋಮಾರು ಚಾಮುಂಡಿ ಎಂಬ ಹೆಸರಿನಲ್ಲಿ ಆರಧದೆ ಪಡೆದಿರುವ ಸಾಧ್ಯತೆ ಇದೆ    © copy rights reserved(c)Dr.Laxmi g Prasad
ಈ ಬಗ್ಗೆ ಇದಮಿತ್ಥಂ ಎಂಬ ಮಾಹಿತಿ ಲಭ್ಯವಾಗಿಲ್ಲ .ಈ ಬಗ್ಗೆ  ಸಮಗ್ರ ಅಧ್ಯಯನದ ಅಗತ್ಯವಿದೆ.


No comments:

Post a Comment