Wednesday, 11 June 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -107 ಕಬಕ ಬೈಪ್ಪದವಿನ ಕುಂಞಿ ಭೂತ-ಡಾ.ಲಕ್ಷ್ಮೀ ಜಿ ಪ್ರಸಾದ




                             copy rights reserved
ಕುಂಞಿ ಭೂತ ಅಣ್ಣಪ್ಪ ದೈವದ ಸೇರಿಗೆಗೆ ಸಂದು ಹೋಗಿ ಕಬಕ ಪುತ್ತೂರಿನ ಬೈಪ್ಪದವು ಮನೆಯವರಿಂದ ಆರಾಧನೆ ಪಡೆವ  ಭೂತ ಮೂಲತಹ ಮಲೆಯರ ಹುಡುಗಿ. ಬೈಪ್ಪದವು ಮನೆಯಲ್ಲಿ ವರುಷಕ್ಕೊಮ್ಮೆ ಅಣ್ಣಪ್ಪ ಹಾಗೂ ಇತರ ಸೇರಿಗೆ ದೈವಗಳಿಗೆ ಕೋಲ ನೀಡಿ ಆರಾಧಿಸುತ್ತಾರೆ. ಇಲ್ಲಿನ ಸೇರಿಗೆ ದೈವಗಳಲ್ಲಿ ಕುಂಞÂ ಭೂತ ಹೆಚ್ಚು ಮಹತ್ವವನ್ನು ಪಡೆದಿದೆ.

 ಕುಂಞಿ ಭೂತ'ಕ್ಕೆ ಎಳೆಯ ತರುಣಿಯಂತೆ ಸೀರೆ ಉಟ್ಟು ಬೊಟ್ಟು ಇಟ್ಟು ಹೂ ಮುಡಿದು ಭೂತ ಕಟ್ಟುತ್ತಾರೆ. ಮುಖಕ್ಕೆ ಅರದಳ ಹಾಕುವಾಗ ಈ ಭೂತಕ್ಕೆ ಸಂಬಂಧಿದ ಪಾಡ್ದನವನ್ನು ಭೂತ ಮಾಧ್ಯಮರು ಹಾಡುತ್ತಾರೆ.

  ಆ ಏ  ಯೇ

ಬೈಪ್ಪದವು ನಾಲಿಲ್ಲುದ ಉಳಾಯಿ

ಜತ್ತುದು ಬನ್ನಾಗ.......

ಅಪ್ಪೆ ಪಣ್ಣಗ ಉಳ್ಳೇರು ಮಲೆನಾಳು

ಅಮ್ಮೆ ಪಣ್ಣಗ ಉಳ್ಳೆರು ಮಲೆನಾಯೇ

ಅಕುಲೆಗು ಪುಟ್ಟಿನ ಮಗಳು ಪಣ್ಣಾಗ

ಆ   ನಾ   ಯೇ


ಮಲೆಯ ದಂಪತಿಗಳಿಗೆ ಹೆಣ್ಣು ಮಗು ಹುಟ್ಟಿದಾಗ ಮಲೆಯರ ಸಂಪ್ರದಾಯದಂತೆ ಹದಿನಾರನೆಯ ದಿವಸ ಮಡಿವಾಳ್ತಿ ಅಬ್ಬಕ್ಕನನ್ನು ಕರೆಯಿಸಿ ಶುದ್ಧ ಸ್ನಾನ ಮಾಡಿಸಿ ಮಗುವನ್ನು ತೊಟ್ಟಿಲಿಗೆ ಹಾಕುತ್ತಾರೆ,ಸೊಂಟಕ್ಕೆ ನೂಲು ಕಟ್ಟುತ್ತಾರೆ.ಅನ್ನ ಪ್ರಾಶನ ಮಾಡಿ  ಎಂದು ಕುಂಞಿ ಹೆಸರಿಡುತ್ತಾರೆ

ಆಳೆನು ತೊಟ್ಟಿಲುಗು ಪಾಡಿಯೇರು

ನೂಲು ಕಟ್ಟಾದೇರು

ಬಾಯಿದ ನುಣುಪ್ಪು ಮೈಪ್ಪಾದೆರು

ಪುದರು ಪುರಪ್ಪು ಲೆಪ್ಪಾದೇರು

 ಕುಂಞಿ ಕುಂಞಿ ಲೆಂದು

ಮಲೆಯರರ ಹೆಣ್ನು ಮಗು  ಬೆಳೆದು ಕುಂಞಿ ದೊಡ್ಡವಳಾಗುತ್ತಾಳೆ. ಹತ್ತು ಹನ್ನೆರಡು ವರುಷಗಳಾಗುವಾಗ ಅವಳು ಋತುಮತಿಯಾಗುತ್ತಾಳೆ.

ಏಳು ಎಣ್ಮ ಒಂರ್ಬ ಕರಿತುಂಡು ಮಗಳೆಗು

ಪತ್ತು ಪದುರಾಡು  ವರ್ಷ

ಮೆರೆವೊಂಡು ಬರ್ಪುಂಡು ಕುಂಞಿ ಗು

ಒರಿಯನ ಒಡ್ಡಾರಗು ಆತಾಳು ಕುಂಞಿ ಯೇ

ಮಡಿಮುಟ್ಟಾಳು ಪೋತಾಳುಕುಂಞಿ 

ಮದಿಮಾಳು ಆತಾಳು ಕುಂಞಿ '

 ನಾಲ್ಕನೆಯ ದಿವಸ ಸ್ನಾನ ಮಾಡಲೆಂದು "ಆಲಿಕಲ್ಲು" ಎಂಬ ಹೆಸರಿನ ನೀರಿನ ಮಡುವಿಗೆಕುಂಞಿ ಭೂತ' ಇಳಿಯುತ್ತಾಳೆ. ಇದೇ ಹೊತ್ತಿನಲ್ಲಿ ಬೈಪ್ಪದವಿನಲ್ಲಿ ಅಣ್ಣಪ್ಪ ದೈವದ ನೇಮ ನಡೆಯುತ್ತಿದ್ದು ದೈವ ಎದ್ದು ನಿಲ್ಲುತ್ತದೆ. ದೈವದ ದೃಷ್ಟಿ ಬಿದ್ದು ಕುಂಞಿ ಭೂತ' ಮಾಯವಾಗುತ್ತಾಳೆ. ಮಾಯವಾದ ಕುಂಞಿ ಅಣ್ಣಪ್ಪ ದೈವದ ಸೇರಿಗೆಗೆ ಸಂದು ಹೋಗಿ ಕುಂಞÂ ಭೂತವಾಗಿ ಆರಾಧನೆ ಪಡೆಯುತ್ತಾಳೆ.

ಓ ಎನ್ನನು ಲೆಪ್ಪಾಡೇ ಎನ್ನನು ಬುಳ್ಪಾಡೇ

ಬೈಪ್ಪದವು ನಾಲು ಇಲ್ಲುದ ಕತೃಳೆನ

ನಂಬಿಯಾರುನಾಕುಲೆನ ಇಲ್ಲುಡು

ನಂಬಿಯಾರುನಾಕುಲೆನ ದೈವದ ಸೇರಿಗೆಯಾದು

ನಂಬಿಯಾರುನಾಕುಲೆನ ದೈವದ ಚಿತ್ತ ಪತ್ತೊಂಡೇ

ಆ   ನಾ   ಯೇ

 ವಾಸ್ತವಿಕ ನೆಲೆಯಿಂದ ಆಲೋಚಿಸಿದರೆ ಕುಂಞಿ  ಸ್ನಾನ ಮಾಡುವಾಗ ಆಕಸ್ಮಾತ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮರಣ ಹೊಂದಿರ ಬಹುದು .ಇಲ್ಲವೇ ಸ್ನಾನಕ್ಕೆ ಬಂದ ಅವಳಿಗೆ ಯಾರೋ ಒಬ್ಬಾತ ತೊಂದರೆ ಕೊಟ್ಟಿದ್ದು,ಅವಳು ಸಾವಿಗೀಡಾಗಿರಬಹುದು. ಇಂಥಹ ಸಂದರ್ಭಗಳಲ್ಲಿ ದೈವದ ಮಹಿಮೆಯ ಕಥಾನಕಗಳು ಸಹಜವಾಗಿದ್ದು ಇಲ್ಲಿ ಕೂಡಾ ಅಣ್ಣಪ್ಪ ಪಂಜುರ್ಲಿ ದೈವಮಾಯ ಮಾಡಿತೆಂಬ ಕಥಾನಕ ಸೇರಿಕೊಂಡಿರ ಬಹುದು

 ಕಾಲಾಂತರದಲ್ಲಿ ಅವಳು ದೈವತ್ವವನ್ನು ಪಡೆದು ಅಣ್ಣಪ್ಪ ದೈವದೊಂದಿಗೆ ಆ ಪರಿಸರದಲ್ಲಿ ಆರಾಧನೆ ಪಡೆದಿರಬಹುದು.ಚಿಕ್ಕ ಮಕ್ಕಳಿಗೆ ಅನಾರೋಗ್ಯ ಉಂಟಾದಾಗಕುಂಞಿ ಭೂತ' ಕ್ಕೆ ಹಾಲನ್ನು ಎರೆಯುತ್ತೇವೆ ಎಂದು ಹರಿಕೆ ಹೇಳುವ ಪದ್ದತಿ ಇಲ್ಲಿ ಪ್ರಚಲಿತವಾಗಿದೆ.ಕುಂಞಿ  ಎಳೆಯ ಹುಡುಗಿಯಾದ್ದರಿಂದ ಕುಂಞಿ ಭೂತ'ಕ್ಕೆ ಹಾಲನ್ನು ನೀಡುವ ಪದ್ದತಿ ಬಳಕೆಗೆ ಬಂದಿರ ಬಹುದು












No comments:

Post a Comment