Sunday, 29 June 2014

ಸಾವಿರದೊಂದು ಗುರಿಯೆಡೆಗೆ :108-109 ಅಪ್ರತಿಮ ಸಾಹಸಿಗಳಾದ ಕಾಂತಾ ಬಾರೆ ಬೂದಾ ಬಾರೆಯರು-ಡಾ.ಲಕ್ಷ್ಮೀ ಜಿ ಪ್ರಸಾದ

                 

ಕೋಟಿ ಚೆನ್ನಯರಂತೆ ಅಪ್ರತಿಮ ಸಾಹಸ ಮೆರೆದ ವೀರರು ಇವರು .ಮೂಲ್ಕಿಯಾ ಉಳೆಪಾಡಿನಲ್ಲಿ ಇವರ ಆರಾಧನೆ ಕೇಂದ್ರವಿದೆ .ಅವರ ಉಡುಪು ,ಬಿಲ್ಲು ಬಾಣ ,ರಸಬಾವಿ ಮೊದಲಾದ ಅವಶೇಷಗಳು ಅಲ್ಲಿವೆ .
ಇವರ ಹುಟ್ಟಿನ ಕುರಿತಾಗಿ ಭಿನ್ನ ಭಿನ್ನ ದಂತಕಥೆಗಳಿವೆ .ಅವುಗಳಲ್ಲಿ ಒಂದನ್ನುಅಬ್ಬಿನ ಬಂಗಾರು ಪಾದ್ದನದಲ್ಲಿ ಇರುವಂತೆ ಕೆಳಗೆ ನೀಡಲಾಗಿದೆ . 
ಉಳ್ಳೂರು ಗುತ್ತಿನ ಪೆರ್ಗಡೆ ರಾಣಿ ಉಳ್ಳು ಪೆರ್ಗಡತಿ ಸುರತ್ಕಲ್ ಕಟ್ಟೆಯ ಬಳಿ ನಿಂತಿದ್ದ ಅನಾಥ ಬಾಲೆಯನ್ನು ವಿಚಾರಿಸಿ ಅರಮನೆಗೆ ತಂದು ಬೆಳೆಸಿ ಮದುವೆ ಮಾಡುತ್ತಾಳೆ.ಈಕೆಯಿಂದ ಹುಟ್ಟಿದವರು ಕಾಂತಾ ಬೂದಾ ಬಾರೆಯರು .
ತಮ್ಮ ಆಶ್ರಯದಾತ ಸಾಮಂತ ಅರಸರಿಗಾಗಿ ಚೌಟ ಅರಸರ ವಿರುದ್ಧ ಇವರು ಹೋರಾಟ ನಡೆಸುತ್ತಾರೆ.ಕೋಟಿ ಚೆನ್ನಯ ರ ಜೊತೆ ಹೋರಾಟ ಮಾಡಿದ ಕಥಾನಕ ಇದೆ .ಸೋಲುಗೆಲುವು ನಿರ್ಣಯ ವಾಗದೆ ಇದ್ದಾಗ ಬಪ್ಪನಾಡು ದೇವಿ ಪ್ರತ್ಯಕ್ಷ ಆಗಿ ಅವರ ವಿವಾದ ಪರಿಹರಿಸಿ ಕೋಟಿಚೆನ್ನಯರಿಗೆ ಮೂಲ್ಕಿ ಸೀಮೆಯಲ್ಲಿ ಗರೊಡಿಇಲ್ಲ ಇಲ್ಲಿ  ಕಾಂತಾಬಾರೆ ಬೂದಾ ಬಾರೆಯರಿಗೆ ಆರಾಧನೆ ,ಅವರಿಗೆ ಬೇರೆ ಕಡೆ ಇಲ್ಲ ಎಂದು ರಾಜಿ ರಾಜಿ ಮಾಡಿಸಿದಳೆಂದು ಕಥೆ ಇದೆ ಆದರೆ ಈ ಎರಡು ಅಮರ ವೀರರ ಕಾಲ ಬೇರೆ ಬೇರೆ ಎಂಬ ಅಭಿಪ್ರಾಯವೂ ಇದೆ 

ಕಾಂತಾ ಬಾರೆ ಬೂದಾ ಬಾರೆಯರ ಹುಟ್ಟಿನ ಕಥೆ ಯಿರುವ ಅಬ್ಬಿನ ಬಂಗಾರು ಪಾಡ್ದನದ ರೋಚಕ ಕಥೆ ಹೀಗಿದೆ


ಮೂಲ್ಕಿ ಸೀಮೆಯ ಅವಳಿ ವೀರರ ಹುಟ್ಟಿನ ಕುರಿತು ,ಅವರ ತಾಯಿ ಅಬ್ಬಿನ ಬಂಗಾರುವಿನ  ಸಾಹಸ  ಸ್ವಾಭಿಮಾನದ ಕುರಿತು ಅಬ್ಬಿನ ಬಂಗಾರು ಪಾಡ್ದನನದಲ್ಲಿ ವಿಸ್ತೃತ ವರ್ಣನೆ ಇದೆ.ಎದ್ದಾಡಿ ಎನ್ಮೆದಡಿ ಬೂ ಡಿನಲ್ಲಿ ಎಳ್ಳಿನ ಗದ್ದೆ ಕಾಯುತ್ತಾ ಇರುವ ಜಾಣೆ ಹುಡುಗಿ ಅಬ್ಬಿನ ಬಂಗಾರು.

"ಎದ್ದಾಡಿ ಎನ್ಮೆದಡಿ  ಬೂಡುಡು ಉಲ್ಲಾಳು/ಬಂಗಾರು ಅಬ್ಬಿನ ಬಂಗಾರು

ಅಬ್ಬಿನ ಬಂಗಾರು ಎರ್ಮೇನೆ ನೆ ಮೇತೊಂದು ಎನ್ಮೇನೆ ಕಾತೊಂಡು ಉಲ್ಲಾಳು"

 ಅಬ್ಬಿನ ಬಂಗಾರುಬಲು  ಜಾಣ ಹುಡುಗಿ ಬಲು  ಧೈರ್ಯಸ್ಥೆ ಕೂಡ  . ತಾಲಾಡಿ ಸಾದಡಿ ಬೂಡಿನಲ್ಲಿ ರಾಜ ಕುಮಾರ  ಕುಂದಯ  ನಂದಾರ ಇರುತ್ತಾನೆ . ಒಂದು ದಿನ ಕುದುರೆ ಸವಾರಿಮಾಡಿಕೊಂಡು ಅವನು ಬರುವಾಗ ಅವನ ಕುದುರೆಗಳ ಕಾಲಡಿಗೆ ಸಿಕ್ಕಿ ಎಳ್ಳಿನ ಸಸಿಗಳು ಹಾಳಾಗುತ್ತವೆ ಆಗ ಅಬ್ಬಿನ ಬಂಗಾರು"

"ಏರುಂಬೆ ನಂದಾರ  ಕುಂದಯ ನಂದಾರ

ನಿನ್ನ ಅಪ್ಪೆ ಅಮ್ಮೆ ಕಲ್ಪಾಯಿ

 ಬುದ್ದಿಯಂಬೆ ಕುಂದಯ ನಂದಾರ

ಎನ್ಮೇನೆ ದೊಂಕಾದು ಬುಡಿಯತ್ತ "

ಎಂದು ಅವನನ್ನು ಜೋರು ಮಾಡಿ ಬೈಯುತ್ತಾಳೆ  ಇಷ್ಟು ಸೊಕ್ಕಿನ ಹುಡುಗಿಯನ್ನು ಹೀಗೆ ಬಿಡಬಾರದು ಎಂದು ಕೊಂಡು " ಏಳು ಎಲೆಗಳು  ಎಳ್ಳಿನ ಸಸಿಯಲ್ಲಿ ಎಣ್ಣೆ ಎಲ್ಲಿ ಉಂಟು " ಎಂದು ಕೇಳುತ್ತಾನೆಅದಕ್ಕೆ ಅವಳು ಎಳ್ಳಿನ ಸಸಿಗೆ ಏಳು ಎಲೆ ಆದಾಗ ಅದರ ಬೇರಿನಲ್ಲಿ ಎಣ್ಣೆ ಇರುತ್ತದೆ ಎಂದು ಹೇಳಿ ಎಳ್ಳಿನ ಸಸಿಯನ್ನು ಕಿಟ್ಟು ಅದರ ಬೇರಿನಲ್ಲಿ ಎಣ್ಣೆ ಇರುವುದನ್ನು ತೋರಿಸುತ್ತಾಳೆ ಜಾಣ ಹುಡುಗಿ ಅಬ್ಬಿನ ಬಂಗಾರು. ಅನಂತರ ನಿನ್ನ ತಾಯಿ ಮದುಮಗಲಾದಾಗ ನೀನೆಲ್ಲಿದ್ದೆ ಕುಂದಯ ನಂದಾರ ಎಂದು ಪ್ರಶ್ನಿಸುತ್ತಾಳೆ ಅಬ್ಬಿನ ಬಂಗಾರು ಅವನಿಗೆ ಉತ್ತರ ಗೊತ್ತಿರಲಿಲ್ಲ ಅವಮಾನವಾದಂತೆ ತಲೆತಗ್ಗಿಸಿ ಅಲ್ಲಿಂದ ತನ್ನ ಅರಮನೆಗೆ ಹೋಗಿ ಊಟ  ತಿಂಡಿ  ಬಿಟ್ಟು ಕಟ್ಟಲು ಕೋಣೆಯಲ್ಲಿ ಕವ್ವನೆ ಕವುಚಿ ಮಲಗುತ್ತಾನೆ. ತನ್ನ ಮಗನಿಗೆ ಯಾರೇನು ಮಾಡಿದರಪ್ಪ ಎಂದು ನನ್ದಯ ಬಲ್ಲಾಳರು ಬಂದು ಮಗನಲ್ಲಿ ಏನಾಯಿತೆಂದು ಪ್ರೀತಿಯಿಂದ ವಿಚಾರಿಸುತ್ತಾರೆ . ಆಗ ಅವನು  ನನ್ನ ತಾಯಿ ಮದುಮಗಳು ಆದಾಗ ನಾನೆಲ್ಲಿದ್ದೇ? ಎಂದು ಕೇಳುತ್ತಾನೆ . ಅವರಿಗೂ ಉತ್ತರ ಗೊತ್ತಿರಲಿಲ್ಲ ಬೀಡಿನಲ್ಲಿರುವ  ಹಿರಿಯ ಅಜ್ಜನನ್ನು ಕರೆಸುತ್ತಾರೆ  ಹಿರಿಯ ಅಜ್ಜನಲ್ಲಿ ಹೋಗಿ ಈ ಪ್ರಶ್ನೆ ಕೇಳುತ್ತಾನೆ ಕುಂದಯ ನಂದಾರ ಆಗ ಅವರು "ನಿನ್ನಪ್ಪೆ ಮದಿಮಾಲಾನಾಗ ಈಯಂಡಲ ಮಗ 

ನಿನ್ನ ಅಮ್ಮೆರೆ ಬಲತ್ತ ತುಡೆಟ್ಟು ನರಳೊಂದು 
ಪುರಲೊಂದು ಒಲೆತ್ತೊಂದು ಇತ್ತಾಂದು "ನೀನು ನಿನ್ನ ತಂದೆಯ ಬಲತೊಡೆಯಯಲ್ಲಿ  ಇದ್ದೆ ಎಂದು ಹೇಳುತ್ತಾರೆ. ಕೂಡಲೇ ಅವನು ಅಬ್ಬಿನ ಬಂಗಾರುವಿನಲ್ಲಿ ಬಂದು ಈ ಉತ್ತರವನ್ನು ಹೇಳುತ್ತಾನೆ. ಅನಂತರ ಇಷ್ಟು ಸೊಕ್ಕಿನ ಹೆಣ್ಣನ್ನು ಹೀಗೆ ಬಿಡಬಾರದೆಂದು ನಾನು ನಿನ್ನನ್ನು ಮದುವೆ ಆದ್ರೆ  ಏನ್ಮಾಡ್ತೀಯ ? ಎಂದು ಕೆಣಕುತ್ತಾನೆ ಆಗ ಅವಳು "ಮೂರು ವರ್ಷಕ್ಕೆ ಮೂರು ಮಕ್ಕಳನ್ನು ಹೆತ್ತು ಅವರನ್ನು  ಆಡಿಸುತಾ ಇರ್ತೇನೆ ಅಂತ ದಿಟ್ಟತನದಿಂದ ಉತ್ತರಿಸುತ್ತಾಳೆ. ಮದುವೆ ಆಗಿ ಆದರು ಅವಳನ್ನು ಸೋಲಿಸಬೇಕೆಂದು ನಿರ್ಧರಿಸಿ ನಾನು ಅಬ್ಬಿನ ಬಂಗಾರುವನ್ನು ಮದುವೆ ಆಗುತ್ತೇನೆ ಎಂದು ತಂದೆಯಲ್ಲಿ ಹೇಳುತ್ತಾನೆ ಅವಳ ತಂದೆಯನ್ನು ಕರೆಸಿ ನಂದಯ ಬಲ್ಲಾಳರು ಮದುವೆಗೆ ಸಿದ್ಧತೆ ಮಾಡುತ್ತಾರೆ. ನಂತರ ನಿನ್ನ ಮಗಳಲ್ಲಿ ಒಂದು ಪಂಥ ಇದೆ ನಾಳೆ ಬೆಳಗ್ಗೆ ಒಂದು ಸೇರು ಕೋಣನ ಹಾಲನ್ನು ತಂದು ಕೊಡಬೇಕು  ಎಂದು ನಂದಾರರು ಮಗ ಹೇಳಿ ಕೊಟ್ಟಂತೆ ಹೇಳುತ್ತಾರೆ . ಅವಳ ತಂದೆ ಬಹಳ ಚಿಂತೆ ಮಾಡುವುದನ್ನು ನೋಡಿ ಏನೆಂದು ವಿಚಾರಿಸಿದ ಮಗಳು ನೀವೇನು ಚಿಂತೆ ಮಾಡ ಬೇಡಿ ಎಂದು ಹೇಳುತ್ತಾಳೆ ಮರುದಿವಸ . ಅರಸಿನ ಸುಣ್ಣ ಬೆರೆಸಿದ ನೀರಿನಲ್ಲಿ ಬಟ್ಟೆ ಅಡ್ಡಿ ಅದನ್ನು ಅರಸ ನಂದಾರರ ಅರಮನೆಯ ಬಾಗಿಲಿನಲ್ಲಿ ಒಗೆಯಲು ಸುರು ಮಾಡಿದಳು. ಆಗ ಅಲ್ಲಿಗೆ ಬಂದ ಏನು ಮಾಡ್ತ್ತಿದ್ದಿ ಂದು ಕೇಳುವಾಗ ನನ್ನ ತಂದೆಗೆ ಹೆರಿಗೆಯಾಗಿದೆ ಅದಕ್ಕೆ ಬಟ್ಟೆ ಒಗೆಯುತ್ತಿದ್ದೇನೆ ಎಂದು ಹೇಳುತ್ತಾಳೆ ಆಗ ಎಲ್ಲಾದರು ಗಂಡಸರು ಹೇರುತ್ತಾರ ಎಂದು ಕೇಳುತ್ತಾನೆ ಆಗ ಇವಳು ಮತ್ತೆ ಎಲ್ಲಿಯಾದರೂ ಎತ್ತು ಹಾಲು ಕೊಡುತ್ತದೆಯ ಎಂದು ಪ್ರಶ್ನಿಸುತ್ತಾಳೆ ಅಲ್ಲಿ ಕೂಡ ಸೋತು ಸುಮ್ಮನಾಗುವ ಕುಂದಯ ನಂದಾರ ಮದುವೆ ಆಗಿ ಅದರೂ ಅವಳನ್ನು ಸೋಲಿಸಬೆಂದು ನಿರ್ಧರಿಸುತ್ತಾನೆ . ಮಾಡುವೆ ಆದ ದಿನ ರಾತ್ರಿ ಅವಳಿಗೆ ಮೂರು ವರ್ಷಕ್ಕೆ ಬೇಕಾದಷ್ಟು ಅಕ್ಕಿ ಅರಿವೇ ಮೊದಲಾದವುಗಳನ್ನು ನೆಲಮಾಳಿಗೆಯಲ್ಲಿಟ್ಟು ಅವಳನ್ನು ನೆಲ ಮಾಳಿಗೆಯಲ್ಲಿ ಕೂಡ ಹಾಕಿ ಬಾಗಿಲು ಹಾಕಿ ಹೊರಗಿನಿಂದ ಬೀಗ ಹಾಕಿದ . ನಂತರ ತಂದೆಯಲ್ಲಿ ಮೂರುವರ್ಷ ಯಾರು ನೆಲಮಾಳಿಗೆ ಬಾಗಿಲು ತೆರೆಯಬೇಡಿ ಎಂದು ಹೇಳಿ ಮೂರೂ ವರ್ಷದ ದಂಡು ಸಾಧಿಸಲು ಹೋಗುತ್ತಾನೆ . ಅಬ್ಬಿನ ಬಂಗಾರು ಮದುವೆಯಾದರೆ ಮೂರು ವರ್ಷದೊಳಗೆ ಮೂರು ಮಕ್ಕಳನ್ನು ಹೆತ್ತು ಆಟವಾದಿಸುತ್ತೇನೆ ಎಂದು ಹೇಳಿದ್ದನ್ನು ಸುಳ್ಳು ಮಾಡಿ ಅವಳನ್ನು ಸೋಲಿಸಬೇಕೆಂದು ಹೀಗೆ ಮಾಡುತ್ತಾನೆ ಆದರೆ ಅಬ್ಬಿನ ಬಂಗಾರು ಬಹಳ ಗಟ್ಟಿಗಿತ್ತಿ . ಅವಳು ಬಿಳಿಹೆಗ್ಗ ಣ  ಸಹಾಯದಿಂದ ಗೋಡೆ ಕೊರೆದು ಹೊರ ಬಂದು ಹೂ ಮಾರುವ ಬಾಯಮ್ಮನ ವೇಷ ಧರಿಸಿ ಬಂದು ಕುಂದಯ ನನ್ದಾರನನ್ನು ಹುಡುಕಿ ಅವನಿರುವಲ್ಲಿಗೆ ಹೋಗಿ ಅವನಿಗೆ ತಾನು ಯಾರೆಂದು ಗೊತ್ತಾಗದಂತೆ ರೂಪ ಬದಲಾಯಿಸಿ ವಯ್ಯಾರದಿಂದ ಅವನನ್ನು ತನ್ನ ಬುಟ್ಟಿಗೆ ಹಾಕೊಂಡು ಅವನೊಂದಿಗೆ ಸಂಸಾರ ಮಾಡುತ್ತಾಳೆ ಒಂದು ವರ್ಷ ಆಗುವಾಗ ಒಂದು ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ ಮತ್ತೊಂದು ವರ್ಷ ಆಗುವಾಗ ಎರಡು ಅವಳಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ ಮೂರೂ ಮಕ್ಕಳನ್ನು ಆಡಿಸಿಕೊಂಡು ಕುಂದಯ ನನ್ದಾರನ  ಜೊತೆ ಚೆನ್ನಾಗಿ  ಸಂಸಾರ ಮಾಡುತ್ತ  ಮಕ್ಕಳು ಹಠ ಮಾಡುತ್ತವೆ ಅವರಿಗೆ ಆಡಲೆಂದು ಹೇಳಿ ಅವನ ಬೆಳ್ಳಿ ಬುರುಡೆ ಬಂಗಾರದ ನೇಗಿಲು ಚಿನ್ನದ ಉಂಗುರಗಳನ್ನು ಕೇಳಿ ತೆಗೆದುಕೊಳ್ಳುತ್ತಾಳೆ . ಮೂರು ವರ್ಷ ಆಗುವುದರ ಹಿಂದಿನ ದಿನ ರಾತ್ರಿ ಮಕ್ಕಳೊಂದಿಗೆ ನೆಲಮಾಳಿಗೆಗೆ ಬಂದು ಸೇರುತ್ತಾಳೆ . ಮೂರೂ ವರ್ಷ ಆದ ದಿನ ತಾನು ಈ ಭಾರಿ ಅವಳನ್ನು ಸೋಲಿಸಿ ಬಿಟ್ಟೆಎಂದು ಕೊಂಡು ತಾನು ಗೆದ್ದ ನಗುವಿನೊಂದಿಗೆ ನೆಲಮಾಳಿಗೆ ಬಾಗಿಲು ತೆರೆದು ಬಂದು ನೋಡಿದರೆ ಅಬ್ಬಿನ ಬಂಗಾರು ಮೂರೂ ಮಕ್ಕಳೊಂದಿಗೆ ಆಟವಾಡುತ್ತಾ ಇರುತ್ತಾಳೆ . ಗುರುತಿಗಾಗಿ ಅವನ ಬೆಳ್ಳಿ ಬುರುಡೆ ಬಂಗಾರದ ನೇಗಿಲು
ಹಾಗೂ ಉಂಗುರ ತೋರಿಸುತ್ತಾಳೆ . ತನ್ನ ಹೆಂಡತಿಯ ಜಾಣ್ಮೆ ಸಾಹಸಕ್ಕೆ ಮೆಚ್ಚಿದ  ಕುಂದಯ ನಂದಾರ ಅವಳನ್ನು ಅರಮನೆಗೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾನೆ . ಅವರಿಗೆ ಹುಟ್ಟಿದ ಅವಳಿ ಮಕ್ಕಳು ಕಾಂತ ಬಾರೆ ಬೂದ ಬಾರೆಯರು ಮುಂದೆ ಮುಲ್ಕಿ ಸೀಮೆಯ ವೀರ ಪುರುಷರಾಗಿ  ಸಾಹಸ ಮೆರೆದು ಜನರ ಆರಾಧ್ಯ ದೈವಗಳಾಗುತ್ತಾರೆ. ಅಬ್ಬಿನ ಬಂಗಾರು ಎಂದು ನಾನು ಹೆಸರಿಸಿರುವ ಈ ಪಾಡ್ದನದ ಪೂರ್ಣ ಪಾಠ   ನನ್ನ ಪಾಡ್ದನ ಸಂಪುಟ ಕೃತಿಯಲ್ಲಿದೆ ಆಸಕ್ತರು ನೋಡಬಹುದು .


ಅಬ್ಬಿನ ಬಂಗಾರು ಪಾದ್ದನವನ್ನು ನೀಡಿದ ಶಾರದಾ ಜಿ ಬಂಗೆರೆರರಿಗೆ ಹಾಗೂ ಸೂಕ್ತ ಫೋಟೋ ನೀಡಿದ ಬ್ಯೂಟಿ ಆಫ್ ತುಳುನಾಡು ಗೆ ಋಣಿಯಾಗಿದ್ದೇನೆ

1 comment:

  1. Mam nanu kelida kanthabare boodha bare kathegu e kathegu ajagajanthara ide . kantha bare matthu booda bareyara thayi aachu baidedi ,seemantha mugisi thannuru mulki maganege maraluva samayadai kollurina thakate marada adiyalli jodu makkalige janmavithu avarannu ade thakate maradalli seereyalli thottilu katti thooguthale .e vishaya thilida . achuvina saku thayi pulla pergadthi avrannu boodige karedu kondu hoguthare . 16 divasadlli achu maranavapputhale . nanathara beleda avali veerara sahasagathe rochakavagide. Idara bagge swalpa gamana harisi

    ReplyDelete