Sunday, 19 October 2014

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 125-ನಾರಳತ್ತಾಯ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ           
 copy rights reserved
ನಾರಳತ್ತಾಯ ಕಡೇಶ್ವಾಲ್ಯದ/ಕಡೆಶಿವಾಲಯ  ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ. ಪರವ ಜನಾಂಗದವರು ಇಲ್ಲಿ ನಾರಳತ್ತಾಯ ಭೂತವನ್ನು ಕಟ್ಟುತ್ತಾರೆ. ನಾರಳತ್ತಾಯ ದೈವಕ್ಕೆ ಸಂಬಂಧಿಸಿದಂತೆ ವೈದಿಕ ಮೂಲ ಹಾಗೂ ಜನಪದ ಮೂಲ ಐತಿಹ್ಯಗಳು ಲಭ್ಯವಿದೆ.
ವೈದಿಕ ಮೂಲ ಐತಿಹ್ಯದ ಪ್ರಕಾರ ನಾರಳತ್ತಾಯ ಎಂದರೆ ಸೋದೆ ಮಠದಲ್ಲಿ ಆರಾಧಿಸಲ್ಪಡುವ ಭೂತರಾಜ. ಭೂತರಾಜನ ಮೂಲ ರಾಮಾಯಣದಲ್ಲಿದೆ ಎನ್ನುತ್ತಾರೆ. ರಾವಣ ಬ್ರಾಹ್ಮಣನಾದ್ದರಿಂದ ರಾಮನಿಗೆ ಬ್ರಹ್ಮ ಹತ್ಯೆಯ ದೋಷ ಬಾಧಿಸುತ್ತದೆ. ಆಗ ಬ್ರಾಹ್ಮಣನೊಬ್ಬ ರಾಮನಿಗೆ ತಗುಲಿದ ಬ್ರಹ್ಮ ಹತ್ಯೆಯ ಪಾತಕವನ್ನು ದಾನವಾಗಿ ಪಡೆಯುತ್ತಾನೆ. ಆಗ ಅವನು ಬ್ರಹ್ಮರಾಕ್ಷಸನಾಗುತ್ತಾನೆ. ಆನಂತರ ಅವನ ಒಂದು ಭಾಗವು ನಾರಾಯಣ ಆಚಾರ್ಯ ಎಂಬ ಬ್ರಾಹ್ಮಣನಾಗಿ ಹುಟ್ಟುತ್ತಾನೆ. ಮಧ್ವಾಚಾರ್ಯರ ಕೆcopy rights reserved © ಡಾ.ಲಕ್ಷ್ಮೀ ಜಿ ಪ್ರಸಾದ ಲಸವನ್ನು ಕದ್ದು ನೋಡುತ್ತಾನೆ. ಅದರ ಫಲವಾಗಿ ಆತ ಬ್ರಹ್ಮರಾಕ್ಷಸನಾಗಿ ಬದಲಾಗುತ್ತಾನೆ. ನಂತರ ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳಲು ಮಧ್ವಾಚಾರ್ಯರು ನೀನು ಅಮಾಕಾವೈಕೋನಸ್ನಾತಃ ಎಂದು ಎಲ್ಲರಲ್ಲಿ ಕೇಳು. ಈ ಪ್ರಶ್ನೆಗೆ ಉತ್ತರಿಸದವರನ್ನು ತಿಂದು ಹೊಟ್ಟೆ ಹೊರೆದುಕೋ. ಯಾರು ಈ ಪ್ರಶ್ನೆಗೆ ಉತ್ತರಿಸುತ್ತಾರೋ ಅವರು ನಿನಗೆ ಮುಕ್ತಿಯನ್ನು ಕರುಣಿಸುತ್ತಾರೆ”. ಎಂದು ಹೇಳುತ್ತಾರೆ. ಅಂತೆಯೇ ಈ ಬ್ರಹ್ಮರಾಕ್ಷಸ ಎಲ್ಲರಲ್ಲಿ ಅಮಾಕಾವೈಕೋನಸ್ನಾತಃ?” ಎಂದು ಪ್ರಶ್ನಿಸುತ್ತಾನೆ. ಉತ್ತರಿಸದಿದ್ದಾಗ ಅವರನ್ನು ತಿಂದು ಅಲೆಯುತ್ತಾ ಇರುತ್ತಾನೆ. ಹೀಗೆ ಅನೇಕ ವರ್ಷಗಳು ಕಳೆಯುತ್ತವೆ. ಒಂದು ದಿನ ವಾದಿರಾಜರು ಎದುರಾಗುತ್ತಾರೆ. ಅವರಲ್ಲಿಯೂ ಈ ಪ್ರಶ್ನೆಯನ್ನು ಬ್ರಹ್ಮರಾಕ್ಷಸ ಕೇಳುತ್ತಾನೆ. ಆಗ ವಾದಿರಾಜರು ನೀನುಎಂದು ಉತ್ತರಿಸುತ್ತಾರೆ. ಆಗ ಆಶ್ಚರ್ಯಗೊಂಡ ಬ್ರಹ್ಮರಾಕ್ಷಸ ಅದು ಹೇಗೆ? ಎಂದು ಪ್ರಶ್ನಿಸಲು ಆಷಾಢ, ಮಾಘ, ವೈಶಾಖಗಳಲ್ಲಿ ನಿನ್ನಂಥವರು ತೀರ್ಥಸ್ನಾನ ಮಾಡುವುದಿಲ್ಲ ಎಂದು ಹೇಳುತ್ತಾರೆ. ಮುಂದೆ ವಾದಿರಾಜರು ಆತನಿಗೆ ಮುಕ್ತಿ ಕರುಣಿಸಿ ಭೂತರಾಜನೆಂಬ ಅಭಿದಾನವಿತ್ತು ಆರಾಧಿಸುತ್ತಾರೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 

ಇನ್ನೊಂದು ಐತಿಹ್ಯದ ಪ್ರಕಾರ ಈತ ವಾದಿರಾಜರ ಗಿಂಡೆ ಹಿಡಿಯ ಯುವಮಾಣಿ. ಶ್ರೀ ಹರಿಯು ಕುದುರೆ ರೂಪದಿಂದ ಬಂದು ವಾದಿರಾಜರು ನೀಡುತ್ತಿದ್ದ ಹಯಗ್ರೀವವನ್ನು ತಿನ್ನುವ ವಿಚಾರ ತಿಳಿದು ಅದನ್ನು ಕದ್ದು ನೋಡುತ್ತಾನೆ. ಇದರಿಂದಾಗಿ ಆತ ಬ್ರಹ್ಮರಾಕ್ಷಸನಾಗುತ್ತಾನೆ. ಮುಂದೆ ವಾದಿರಾಜರ ಕೃಪೆಯಿಂದ ಭೂತರಾಜನಾಗಿ ಆರಾಧಿಸಲ್ಪಡುತ್ತಾನೆ. ವಾದಿರಾಜರು ಕಡೇ ಶಿವಾಲಯಕ್ಕೆ ಬಂದಾಗ ಭೂತರಾಜ ಕೂಡಾ ಜೊತೆಗೆ ಬರುತ್ತಾನೆ. ಆದ್ದರಿಂದ ಭೂತರಾಜನ ಮೂಲ ಹೆಸರು ನಾರಾಯಣ ಆಚಾರ್ಯ ಎಂಬುದನ್ನು ನಾರಳತ್ತಾಯ ಎಂದು ಕೂಡಾ ಹೇಳಿದ್ದು, ಇಲ್ಲಿ ನಾರಳತ್ತಾಯ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ ಎಂದು ಸ್ಥಳ ಐತಿಹ್ಯವು ತಿಳಿಸುತ್ತದೆ. ಆದರೆ ಭೂತರಾಜನಿಗೆ ಇಲ್ಲಿ ಬಿಟ್ಟರೆ ಬೇರೆಲ್ಲಿಯೂ ಭೂತದ ನೇಮದ ರೂಪದಲ್ಲಿ ಆರಾಧನೆ ಇಲ್ಲ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 

ನಾರಳತ್ತಾಯ ದೈವದ ಆರಾಧನೆ ಸಂದರ್ಭದಲ್ಲಿ ಹೇಳುವ ಸಂಧಿ ಬೇರೆಯದೇ ಕಥೆಯನ್ನು ಹೇಳುತ್ತದೆ. ಕಡೇ ಶಿವಾಲಯ ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರಿಲ್ಲದಾದಾಗ ಕೆದಿಲಾಯರಿಗೆ ಹೇಳಿ ಕಳುಹಿಸುತ್ತಾರೆ. ಆಗ ಅವರು ನಾರಳ ಪೊಯ್ಯ ಮಠದಿಂದ ನಾರಾಯಣ ತಂತ್ರಿ ಎಂಬ ಬ್ರಾಹ್ಮಣರನ್ನು ಕಳುಹಿಸಿಕೊಡುತ್ತಾರೆ. ಹೀಗೆ ನಾರಾಯಣ ತಂತ್ರಿ ಕಡೇ ಶಿವಾಲಯ ದೇವಾಲಯದ ಅರ್ಚಕರಾಗಿರುತ್ತಾರೆ. ಅವರು ತುಂಬ ಬಡವರಾಗಿರುತ್ತಾರೆ. ಅವರಿಗೊಬ್ಬ ಬೆಳೆದುನಿಂತ ಮಗಳಿರುತ್ತಾಳೆ. copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 

ಅವಳ ಮದುವೆಯ ಸಂದರ್ಭದಲ್ಲಿ ದೇವಸ್ಥಾನದ ಚಿನ್ನದ ತಂಬಿಗೆ ಒಂದಕ್ಕೆ ನಾರಾಯಣ ತಂತ್ರಿ ಕೈ ಹಾಕುತ್ತಾರೆ. ಆಗ ಅವರು ಆರಾಧಿಸುತ್ತಿದ್ದ ದೈವಕ್ಕೆ ಕೋಪ ಬಂದು ಅವರನ್ನು ಮಾಯ ಮಾಡುತ್ತದೆ. ಈ ಪಾಡ್ದನ ಪ್ರಕಾರ ದುರಂತವನ್ನಪ್ಪಿದ ನಾರಾಯಣ ತಂತ್ರಿ ಎಂಬ ಅರ್ಚಕನೇ ಮುಂದೆ ನಾರಳತ್ತಾಯ ದೈವವಾಗಿ ಅರಾಧಿಸಲ್ಪಡುತ್ತಾನೆ. 

ಈತನ ವೇಷಭೂಷಣಗಳು ಕೂಡಾ ಬ್ರಾಹ್ಮಣನನ್ನು ಹೋಲುತ್ತಿದ್ದವು. ಈತನಿಗೆ ಹಣೆಯಲ್ಲಿ ನಾಮ, ಕಾಲಿಗೆ ಬಿಳಿ ಪಂಚೆಯ ಕಚ್ಚೆ ಇತ್ತು. ಈಗ ವೇಷಭೂಷಣ ಬದಲಾವಣೆಯಾಗಿದೆ ಎಂದು ಇಲ್ಲಿ ನಾರಳತ್ತಾಯ ಭೂತವನ್ನು ಕಟ್ಟುವ ದೇಜಪ್ಪ ಅವರು ಹೇಳುತ್ತಾರೆ. 

ದುರ್ಮರಣಕ್ಕೀಡಾದ ನಾರಾಯಣ ಎಂಬ ಬ್ರಾಹ್ಮಣ ನಾರಳತ್ತಾಯ ಎಂಬ ದೈವವಾಗಿರುವುದು ತುಳುನಾಡಿನಲ್ಲಿ ಅಸಾಮಾನ್ಯ ವಿಚಾರವೇನೂ ಅಲ್ಲ. ದುರಂತವನ್ನಪ್ಪಿದ ಕೋಟಿ-ಚೆನ್ನಯ, ಕೋಟೆದ ಬಬ್ಬು, ಕೊರಗ ತನಿಯ, ಮೂಲದ ಬಬ್ಬು, ಬಾಳು-ಬಾಳಕ್ಕ ಮೊದಲಾದವರು ದೈವತ್ವಕ್ಕೇರಿ ಆರಾಧಿಸಲ್ಪಟ್ಟಂತೆ ಇಲ್ಲಿ ಕೂಡ ನಾರಾಯಣ ತಂತ್ರಿ  ನಾರಾಣ(ಳ)ತ್ತಾಯ ದೈವವಾಗಿರಬಹುದು. ಈ ನಾರಳತ್ತಾಯ ಎಂಬ ಹೆಸರು ಭೂತರಾಜನಿಗೂ ಕೂಡಾ ಇದೆ. ಅಲ್ಲದೆ ಕಡೇ ಶಿವಾಲಯಕ್ಕೆ ವಾದಿರಾಜರು ಬಂದ ಐತಿಹ್ಯವಿದ್ದು ಅಲ್ಲೊಂದು ವಾದಿರಾಜರ ಮಠ ಕೂಡ ಇದೆ. ಆದ್ದರಿಂದ ನಾರಳತ್ತಾಯ ದೈವ ಭೂತರಾಜನೊಂದಿಗೆ ಸಮೀಕರಣಗೊಂಡಿರುವ ಸಾಧ್ಯತೆ ಇದೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಬೆರ್ಮೆರ್ ಹಾಗೂ ಭೂತರಾಜನಿಗೆ ಅನೇಕ ಸಾಮ್ಯತೆಗಳಿವೆ. ಬೆರ್ಮೆರ್ ಹಾಗೂ ನಾಗರಿಗೆ ಏಕತ್ರ ಆರಾಧನೆ ಇದೆ. ನಾಗ ಮತ್ತು ಸುಬ್ರಹ್ಮಣ್ಯರಿಗೂ ಏಕತ್ರ ಆರಾಧನೆ ಇದೆ. ಭೂತರಾಜ ಹಾಗೂ ನಾಗರಿಗೆ ಉಡುಪಿ ಸೋದೆ ಮಠದಲ್ಲಿ ಆರಾಧನೆ ಇದೆ. ಬೆರ್ಮೆರಂತೆ ಭೂತರಾಜನಿಗೆ ಕಮಲಶಿಲೆಯಲ್ಲಿ ಆರಾಧನೆ ಇರುತ್ತದೆ. ಬೆರ್ಮೆರಂತೆ ಭೂತರಾಜನಿಗೆ ಕೂಡ ಆಯುಧವಾಗಿ ಬಿಲ್ಲು ಬಾಣಗಳಿವೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಅಂತೆಯೇ ಇಲ್ಲಿ ನಾರಳತ್ತಾಯ ದೈವ ಕಟ್ಟುವಾಗ ನಾಗಮುಡಿಯನ್ನು ಕಟ್ಟುತ್ತಾರೆ.

No comments:

Post a Comment