Saturday, 25 October 2014

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು-137:ಪಿಲಿ ಚಾಮುಂಡಿ-ಡಾ.ಲಕ್ಷ್ಮೀ ಜಿ ಪ್ರಸಾದ

            
  copy rights reserved ಪಿಲಿಚಾಮುಂಡಿ ಭೂತವನ್ನು ದುರ್ಗೆಯ ಅಂಶ ಎನ್ನುವ ದೃಷ್ಟಿಯಿಂದ ಜುಮಾದಿಗೆ ಸಮಾನವಾದುದು ಎಂದು ಭಾವಿಸಿದ್ದಾರೆಎಂದು ವಿವೇಕ ರೈ ಹೇಳುತ್ತಾರೆ. ಹುಲಿಯನ್ನೇರಿ ಯುದ್ಧ ಮಾಡಿ ಚಂಡಮುಂಡರನ್ನು ಸಂಹಾರ ಮಾಡಿರುವ ಶಕ್ತಿಸ್ವರೂಪಿಗೆ ದೇವಿಯನ್ನು ಚಾಮುಂಡಿ ಚಾಮುಂಡೇಶ್ವರಿ ಎಂದು ಕರೆಯುತ್ತಾರೆ. (C).ಡಾ.ಲಕ್ಷ್ಮೀ ಜಿ ಪ್ರಸಾದ
ಆದರೆ ಹುಲಿಯನ್ನೇ ಕುಲದೈವವಾಗಿರಿಸಿಕೊಂಡ ಜನಾಂಗಗಳ ಆರಾಧನೆಗೆ ಪೌರಾಣಿಕ ಕಲ್ಪನೆ ಸೇರಿ ಅದು ಪಿಲಿಚಾಮುಂಡಿ ಭೂತವಾಗಿರಬಹುದು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. 
ಪಿಲಿಚಾಮುಂಡಿಯ ಉಗಮಕ್ಕೆ ಸಂಬಂಧಿಸಿದ ಪಾಡ್ದನಗಳು ಲಭ್ಯವಿಲ್ಲ. ಆದರೆ ಅದರ ಪ್ರಸರಣವನ್ನು, ಮಹಿಮೆಯನ್ನು ಹೇಳುವ ಪಾಡ್ದನಗಳಿವೆ. ಪಾಡ್ದನಗಳ ಪ್ರಕಾರ ಮಂಜುಪೂಂಜನು ಕಳ್ಳರಿಂದ ರಕ್ಷಣೆ ಪಡೆಯುವುದಕ್ಕಾಗಿ ಪಿಲಿಚಾಮುಂಡಿ ಭೂತವನ್ನು ತರುತ್ತಾನೆ. 
ಆದರೆ ತಮ್ಮ ಕುಲದೈವವಾದ ಪಿಲಿಚಾಮುಂಡಿಯನ್ನು ಹಣದ ಆಸೆಯಿಂದ ಬಾಳೊಳಿಯವರು ಮಂಜುಪೂಂಜನಿಗೆ ಕೊಡುತ್ತಾರೆ. ಆದ್ದರಿಂದ ಮಂಜುಪೂಂಜನಿಗೆ ಅದು ನಾನಾವಿಧವಾದ ತೊಂದರೆಗಳನ್ನು ಉಂಟುಮಾಡುತ್ತದೆ. ನಂತರ ಸ್ಥಾನವನ್ನು ಕೇಳಿ ಪಡೆದು ನೆಲೆ ನಿಲ್ಲುತ್ತದೆ. 
ಪಿಲಿಚಾಮುಂಡಿ ಖಡ್ಗವನ್ನು ಕೇಳಿ ಪಡೆಯುತ್ತದೆ. ಪಿಲಿಚಾಮುಂಡಿ ಭೂತದ ಆಯುಧ ಖಡ್ಗವೇ ಆಗಿದೆ. ಇನ್ನೊಂದು ಪಾಡ್ದನದ ಪ್ರಕಾರ ಓಬಾದೇಶಿ ಎನ್ನುವವರು ನೆಕರೆಯ ಕೈಯಿಂದ ವೀಳ್ಯದೆಲೆಯಲ್ಲಿ ಮಂತ್ರಿಸಿದ ಪಿಲಿಚಾಮುಂಡಿ ಭೂತವನ್ನು ತರುತ್ತಾರೆ. ಆದರೆ ಅದರ ಶಕ್ತಿಯನ್ನು ತಡೆಯಲು ಸಾಧ್ಯವಾಗದೆ, ಕೋಲ, ಬಲಿ ನೀಡಿ ಅದನ್ನು ಶಾಂತಗೊಳಿಸುತ್ತಾರೆ. ಜೈನರಲ್ಲಿ ಚಾಮುಂಡಾಎಂಬ ಹೆಸರಿನ ಯಕ್ಷಿಯ ಆರಾಧನೆ ಇದೆ.(C).ಡಾ.ಲಕ್ಷ್ಮೀ ಜಿ ಪ್ರಸಾದ


No comments:

Post a Comment