Monday, 20 October 2014

see and say ಸರಣಿ 22 :ಎಡಮಂಗಲದ ಅಧಿದೈವ ಮಾಲಿಂಗರಾಯ-ಡಾ.ಲಕ್ಷ್ಮೀ ಜಿ ಪ್ರಸಾದ






http://www.seeandsay.in/kannada/view.php?menu=113&id=75



ಎಡಮಂಗಲದ ಅಧಿ ದೈವ ಮಾಲಿಂಗರಾಯ

Published On:11:48:47:IST
ಪಂಜ ಸೀಮೆಯ ಎಡಮಂಗಲ ಗ್ರಾಮದ ಅಧಿದೈವ ಮಾಲಿಂಗರಾಯ. ಎಣ್ಮೂರಿನಲ್ಲಿಯೂ ಈತನಿಗೆ ಆರಾಧನೆ ಇದೆ. ಮಾಲೆಂಗ್ರಿಯ ಪಿಲಿಕುಂಜ ಮಾಳ್ಯ ಈತನ ಮೂಲ ಆರಾಧನ ಸ್ಥಾನವಾಗಿದೆ. ಮಾಲಿಂಗರಾಯ ದೈವವು ಎಡಮಂಗಲದ ಮಾಲೆಂಗ್ರಿಗೆ ಸಂಬಂಧಿಸಿದ್ದಾಗಿದ್ದು, ಮಾಲೆಂಗ್ರಿಯರಾಯ ಮಾಲಿಂಗರಾಯ ಎಂದೆನಿಸಿಕೊಂಡಿರುವ ಸಾಧ್ಯತೆ ಇದೆ. ಪಾಡ್ದನದ ಪ್ರಕಾರ ಈ ದೈವ ವೊದ್ರ್ರ ಗಟ್ಟದಲ್ಲಿ ಹುಟ್ಟಿಕೊಂಡಿದೆ.
 
 
 
 
ಮರ್ದೂರಿನ ಬಲ್ಲಾಳರು ಗಟ್ಟಕ್ಕೆ ದಂಡಿಗೆಯನ್ನು ಕೊಂಡು ಹೋಗಿ ತೊಟ್ಟಿಲ ಮಗುವನ್ನು ಕರೆತರುವಾಗ ದಂಡಿಗೆಯ ಕೋಡಿನಲ್ಲಿ ಕುಳಿತುಕೊಂಡು ಈ ದೈವ ಬಂದು ಎಡಮಂಗಲ ಪಂಚಲಿಂಗೇಶ್ವರ ದೇವರ ಸನ್ನಿಧಿಗೆ ಬಂದು ಬಂಟ ಮಾಲಿಂಗರಾಯನೆಂದು ಕರೆಸಿಕೊಳ್ಳುತ್ತದೆ.ಮಾಲಿನ್ಗರಾಯ ದೈವಕ್ಕೆ ಎರಡು ಕೊಂಬು ಗಳಿರುವ ವಿಶಿಷ್ಟ ಮುಖವಾಡ ಇದೆ .

ಮಾಲಿಂಗರಾಯ ದೈವ ವಿಷ್ಣುಮೂರ್ತಿ ದೈವದಂತೆ ಬೆಂಕಿಗೆ ಬೀಳುವ ಆಚರಣೆ ಇರುತ್ತದೆ. ದಂಡನ್ನು ತೆಗೆದುಕೊಂಡು ಹೋದ ಬಲ್ಲಾಳನೇ ಮುಂದೆ ದೈವತ್ವಕ್ಕೇರಿ ಮಾಲಿಂಗರಾಯನೆಂದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ. ಈತನಿಗೆ ತೆಂಗಿನ ತಿರಿಯಿಂದ ಮಾಡಲ್ಪಟ್ಟ ಅಣಿ, ಮುಡಿಗಳ ಅಲಂಕಾರವಿದೆ. ಎರಡು ಕೊಂಬು ಹಾಗೂ ಮೀಸೆ ಇರುವ ಒಂದು ವಿಶಿಷ್ಟ ಮುಖವಾಡ ಇದೆ. ಈ ಪಾಡ್ದನದಲ್ಲಿ ಮಂಜನ ನಾಯಕ ಮತ್ತು ದಂಡಪ್ಪ ನಾಯಕರೆಂಬ ಐತಿಹಾಸಿಕ ವ್ಯಕ್ತಿಗಳನ್ನು ಉಲ್ಲೇಖಿಸುತ್ತದೆ.

ಡಾ.ಲಕ್ಷ್ಮೀ ಜಿ ಪ್ರಸಾದ
ಉಪನ್ಯಾಸಕರು ಮತ್ತು ಸಂಶೋಧಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ
ಸುಳ್ಯ ತಾಲೂಕು ,ದ ಕ ಜಿಲ್ಲೆ

No comments:

Post a Comment