Monday, 27 October 2014

see and say ಸರಣಿ 23:ಜತೆ ಕುಲೆ -ಡಾ.ಲಕ್ಷ್ಮೀ ಜಿ ಪ್ರಸಾದ



                                         
 ತುಳುವರಲ್ಲಿ ಗತಿಸಿದ ಆತ್ಮಗಳನ್ನು ಕುಲೆ ಎನ್ನುತ್ತಾರೆ .ಪಿತೃ ಆರಾಧನೆಯ ಮೇಲೆ ಭೂತಾರಾಧನೆ ಬೀರಿದ ಪ್ರಭಾವದಿಂದ ಕುಲೆ ಭೂತಗಳ ಆರಾಧನೆ ಪ್ರಾರಂಭವಾಗಿರಬೇಕು.copy rights reserved (c)Dr.Laxmi g Prasad
ತುಂಡು ಭೂತಗಳ ಕುರಿತು ಚರ್ಚಿಸುತ್ತಾ "ಉಡುಗೆ ತೊಡುಗೆ ಕ್ರಿಯೆ ಇತ್ಯಾದಿಗಳನು ಲಕ್ಷಿಸಿದರೆ ತುಂಡು ಭೂತಗಳಲ್ಲಿ ಕೆಲವು ಭೂತಗಳೆಂಬ ಸ್ಥಾನಮಾನಕ್ಕೆ ಏರದೆ ಇನ್ನೂ ಕುಲೆ'ಯ ಸ್ಥಿತಿಯಲ್ಲಿ ಇರುವಂತೆ ತೋರುತ್ತದೆ. ಪ್ರೇತಾರಾಧನೆಗೂ ಭೂತಾರಾಧನೆಗೂ ಸಂಬಂಧವಿದ್ದು ಅನೇಕ ಭೂತಗಳು ಕುಲೆ'ಯ ಸ್ಥಿತಿಯನ್ನು ದಾಟಿದ ಬಳಿಕವೇ ಭೂತತ್ವವನ್ನು ಹೊಂದಿರುವುದಾಗಿದೆ. ಇಂದು ಭೂತಗಳ ವಿಕಾಸಪಥದ ಒಂದು ಅವಸ್ಥೆಯೂ ಅಹುದು. ಕೆಲವು ಕುಲೆಗಳು ಭೂತಸ್ಥಿತಿಗೆ ದಾಟದೆ ಇನ್ನೂ ಕುಲೆಯ ರೂಪದಲ್ಲೆ ಕಾಣಿಸಿಕೊಳ್ಳುತ್ತದೆ. ಕುಲೆಮಾಣಿಗ, ಕುcopy rights reserved (c)Dr.Laxmi g Prasadಲೆ ಬಂಟೆತ್ತಿ, ಜತೆಕುಲೆ, ಬ್ರಾಣ ಕುಲೆ, ಗುರು ಕಾರ್ನೂರು ಮೊದಲಾದ ಕುಲೆಗಳು ಪರಿಷ್ಕೃತ ಪ್ರೇತಗಳೇ ಆಗಿವೆ' ಎಂದು ಡಾ|| ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.ಕೆಲೆವಡೆ ಪ್ರೇತ ಕೋಲ ಎಂಬ ಆರಾಧನ ಪದ್ಧತಿ ಪ್ರಚಲಿತವಿದೆ .copy rights reserved (c)Dr.Laxmi g Prasad
ಎರಡು ದೈವಗಳನ್ನು ಒಟ್ಟಿಗೆ ಜತೆ ಕುಲೆ ಎಂದು ಕರೆದು ಕೋಲ ನೀಡಿ, ತಂಬಿಲ ನೀಡಿ ಆರಾಧಿಸುವ ಪದ್ಧತಿ ಗುತ್ತಿಗಾರಿನ ಮೊಗ್ರಾಲ್ ಹಾಗೂ ಮಡಪ್ಪಾಡಿಗಳಲ್ಲಿ ಪ್ರಚಲಿತವಿದೆ. ಜತೆ ಕುಲೆಗಳಿಗೆ ವಿಶೇಷವಾದ ವೇಷಭೂಷಣ ಏನೂ ಇರುವುದಿಲ್ಲ. ಇಬ್ಬರು ವ್ಯಕ್ತಿಗಳು ತಲೆಗೆ ಅಂಗವಸ್ತ್ರವನ್ನು ಹೊದೆದುಕೊಂಡು ಕುಲೆಗಳಾಗಿ ಅಭಿನಯಿಸುತ್ತಾರೆ. ಕರಿಯಣ್ಣ ನಾಯಕ ಅಥವಾ ಬಚ್ಚನಾಯಕರೊಂದಿಗೆ ಜತೆಕುಲೆಗಳಿಗೆ ಇಲ್ಲಿ ಆರಾಧನೆ ಸಲ್ಲಿಸುತ್ತಾರೆ. ಕುಲೆಗಳಿಗೆ ತಂಬಿಲವನ್ನು ಕುಚ್ಚಿಲಕ್ಕಿಯ ಸಪ್ಪೆ ಕಡುಬನ್ನು ನೀಡಿ ಸಲ್ಲಿಸುತ್ತಾರೆ. ಆರಾಧನೆಯ ಸಂದರ್ಭದಲ್ಲಿ ಕುಲೆಗಳನ್ನು ಉಳ್ಳಾಕುಲುಗಳ ಜೊತೆ ಸೇರಿಕೊಳ್ಳಿ ಎನ್ನುತ್ತಾರೆ.copy rights reserved (c)Dr.Laxmi g Prasad
"
ಬಾರೆಲೆ ಕುಲೆಕುಲೆ ಬಾರೆಲೆ ಕುಲೆಕುಲೆ
ಪದ್ರಾಡೊಕ್ಕೆಲು ಸ್ಥಾನೊಗು ಬಾರೆಲೆ
ಕೂಡೊನುಲೆ ಕುಲೆಕುಲೆ
ಉಳ್ಳಾಕುಲೆ ಬಲತ್ತೊಟ್ಟುಗು ಕೂಡೊನುಲೆ
ಬಾರೆಲೆ ಕುಲೆಕುಲೆ ಉಳ್ಳಾಕುಲೆ ಸ್ಥಾನೊಗು ಬಾರೆಲೆ
ಬಾರೆಲೆ ಕುಲೆಕುಲೆ ಉಳ್ಳಾಕುಲು ಸ್ಥಾನೊಡು ಬಾರೊನುಲೆ"
"
ಬಾಳಿರಿ ಕುಲೆಗಳೆ ಬಾಳಿರಿ ಕುಲೆಗಳೆ
ಹನ್ನೆರಡೊಕ್ಕೆಲು ಸ್ಥಾನಕ್ಕೆ ಬನ್ನಿರಿcopy rights reserved (c)Dr.Laxmi g Prasad
ಸೇರಿಕೊಳ್ಳಿರಿ ಕುಲೆಗಳೆ
ಉಳ್ಳಾಕುಲುಗಳ ಬಲದೆಡೆಯಲ್ಲಿ ಸೇರಿಕೊಳ್ಳಿರಿ
ಬಾಳಿರಿ ಕುಲೆಗಳೆ ಉಳ್ಳಾಕುಲು ಸ್ಥಾನಕ್ಕೆ ಬನ್ನಿರಿ:
ಆ ನಂತರ ಬಂದ ಕುಲೆಗಳು ಪೂಜಾರಿಯಲ್ಲಿ ಆಹಾರ ಕೇಳುತ್ತವೆ.
"
ಸ್ಥಾನತ ಪೂಜಾರಿಯೇ
ಪೂಜಾರಿ ಬಂಜಿ ಗುಡುಗುಡು ಪಣ್ಪುಂಡು"
"
ಸ್ಥಾನದ ಪೂಜಾರಿಯೇ
ಪೂಜಾರಿ ಹೊಟ್ಟೆ ಹಸಿವಿನಿಂದ ಗುಡುಗುಡು ಎನ್ನುತ್ತಿದೆ"
ಎಂದು ಕುಲೆಗಳು ಕೇಳಿದಾಗ
"
ಚಪ್ಪೆ ಅರಿತ ಪುಂಡಿ ಪರ್ಪುದ ಪರಂದ್
ತಿನ್ನೊಂದು ಪೋಲೆ
ಕಂಡದ ಗಡಿ ಕಡಪ್ಪುನಗ
ಡುರ್ರೊಂದು ಪೋವಡು ಕುಲೆಕುಲೆ"
"
ಸಪ್ಪೆ ಅಕ್ಕಿಯ ಕಡುಬು ಪರ್ಪು (?) ಹಣ್ಣು
ತಿಂದುಕೊಂಡು ಹೋಗಿರಿ
ಗದ್ದೆಯ ಗಡಿ ದಾಟುವಾಗ
ಡುರ್ರೆಂದು ಹೋಗಿ ಕುಲೆಗಳೆ"copy rights reserved (c)Dr.Laxmi g Prasad
ಹೊಟ್ಟೆ ತುಂಬ ತಿಂದುಕೊಂಡು ತೃಪ್ತಿಯಿಂದ ಡುರ್ರೆಂದು ತೇಗಿಕೊಂಡು ಹೋಗಬೇಕೆಂದು ಕುಲೆಗಳಲ್ಲಿ ವಿನಂತಿ ಮಾಡುತ್ತಾರೆ. ಉಳ್ಳಾಕುಲುಗಳ ಇಬ್ಬರು ಭಕ್ತರು ಆರಾಧನೆಯ ಸಂದರ್ಭದಲ್ಲಿ ಮರಣವನ್ನುಪ್ಪುತ್ತಾರೆ. ಅವರೇ ಕುಲೆಗಳು. ಅವರು ಮುಂದೆ ಉಳ್ಳಾಕುಲುಗಳ ಸೇರಿಗೆಯಲ್ಲಿ ಸಂದು ಹೋಗಿ ಜತೆಕುಲೆಗಳೆಂಬ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ ಎಂದು ಐತಿಹ್ಯ ಮಡಪ್ಪಾಡಿ ಪರಿಸರದಲ್ಲಿ ಪ್ರಚಲಿತವಿದೆ.
ಡಾ.ಲಕ್ಷ್ಮೀ ಜಿ ಪ್ರಸಾದ ,ಸಂಶೋಧಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್ ,ಬೆಳ್ಳಾರೆ
ಸುಳ್ಯ ತಾಲೂಕು ,ದ.ಕ ಜಿಲ್ಲೆ.
samagramahithi@gmail.com

No comments:

Post a Comment