Tuesday, 11 November 2014

ಸಾವಿರದೊಂದು ಗುರಿಯೆಡೆಗೆ :145 -146-ತುಳುನಾಡ ದೈವಗಳು -ಬಚ್ಚನಾಯಕ -ಕೋಟಿ ನಾಯಕ -ಡಾ.ಲಕ್ಷ್ಮೀ ಜಿ ಪ್ರಸಾದ
copy rights reserved ಬಚ್ಚನಾಯಕ ದೈವದ ಕುರಿತಾದ ಪಾಡ್ದನದ ಅನೇಕ ಪಾಠಾಂತರಗಳು ಪ್ರಚಲಿತವಿದೆ. ಸುಳ್ಯ, ಗುತ್ತಿಗಾರು, ಯೇನೆಕಲ್ಲುಗಳಲ್ಲಿ ಈತನನ್ನು ಆರಾಧಿಸುತ್ತಾರೆ. 
ಯೇನೆಕಲ್ಲಿನ ಐದು ಹಳ್ಳಿಗಳು ಬಲ್ಲಾಳರ ಆಳ್ವಿಕೆಗೆ ಒಳಪಟ್ಟಿದ್ದವು. ಯೇನೆಕಲ್ನಲ್ಲಿ ಮಾಗಣೆಯ ನಾಲ್ಕೂರುಗುತ್ತು ಮನೆಯ ಸುಬ್ಬ ಗೌಡ (ಸಬ್ಬಣ ಗೌಡ) ನ ಆಡಳಿತವಿತ್ತು . ಯೇನೆಕಲ್ಲಿನ ಸುಬ್ಬ ಗೌಡ  ಕಪ್ಪಕಾಣಿಕೆ ಕೊಡುತ್ತಾ ಬಂದಿದ್ದನು ಯಾವುದೊ ಕಾರಣಕ್ಕೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ .. ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಕಪ್ಪ ಕಾಣಿಕೆ ಕೊಡುವುದನ್ನು ನಿಲ್ಲಿಸುತ್ತಾನೆ. ಸಿಟ್ಟಿಗೆದ್ದು ಪಂಜದ ಬಲ್ಲಾಳ ಗಟ್ಟದ ಮೇಲಿನಿಂದ ದಂಡು ತರಿಸಿ ಯುದ್ಧ ಸಾರುತ್ತಾನೆ.
 
copy rights reserved (c)Dr.Laxmi g Prasad
ಸುಬ್ಬ ಗೌಡನನ್ನು ಮಣಿಸುವುದಕ್ಕಾಗಿ ಪಂಜದ ಬಲ್ಲಾಳ ಘಟ್ಟದ ಮೇಲಿನಿಂದ ಬಚ್ಚನಾಯಕನನ್ನುಕರೆಸುತ್ತಾನೆ. ಪಂಜ, ಕಡಬದ ಅರಸ ಮತ್ತು ಬಚ್ಚನಾಯಕನ ಸೇರಿ ಯೇನೆಕಲ್ಲು ಗ್ರಾಮವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಐಗೂರಿನಲ್ಲಿ ಕೋಟೆ ರಕ್ಷಕನಾಗಿದ್ದ ಬಚ್ಚನಾಯಕ ತುಳುನಾಡಿಗೆ ಹೋಗುವ ವಿಚಾರ ತಿಳಿಸಿದಾಗ ಅವನ ತಂದೆ ನೀನು ಹೋಗಬಾರದು ಎಂದು ತಿಳಿಸುತ್ತಾನೆ. ಆಗ ಬಚ್ಚನಾಯಕ, ನಾನು ಕಡಬದ ಅರಸರಿಗೆ ಮಾತು ಕೊಟ್ಟಿದ್ದು, ಹೋಗಿಯೇ ಹೋಗುತ್ತೇನೆ ಎಂದುದಿಟ್ಟವಾಗಿ ನುಡಿದು ಮನೆ ಮಂದಿಯ ವಿರೋಧವನ್ನು ಲೆಕ್ಕಿಸದೆ ಹೊರಡುತ್ತಾನೆ .. ಬಚ್ಚನಾಯಕನ ತಂಗಿ ತುಂಬು ಗರ್ಭಿಣಿಯಾಗಿದ್ದು ತವರು ಮನೆಗೆ ಬಂದಿರುತ್ತಾಳೆ. ಬಚ್ಚನಾಯಕನ ಮಾಡದಿ ಬಸುರಿಯಾಗಿದ್ದು ಯುದ್ಧಕ್ಕೆ ಹೊರಟ ಗಂಡನನ್ನುತಡೆಯುತ್ತಾಳೆ. ಸಿಟ್ಟಿಗೆದ್ದ ತಂಗಿಯನ್ನು ತುಳಿಯುತ್ತಾಳೆ. ತಂಗಿಗೆ ಗರ್ಭಪಾತವಾಗುತ್ತದೆ.
copy rights reserved (c)Dr.Laxmi g Prasadಬಚ್ಚನಾಯಕನ ಮಾಡದಿ ಬಸುರಿಯಾಗಿದ್ದು ಗಂಡನನ್ನು ತಡೆಯುತ್ತಾಳೆ ಎಂಬ ಕಥೆಯೂ ಇದೆ 

ಮನೆಯವರ ವಿರೋಧ ಲೆಕ್ಕಿಸದೆ ರಾಜ ವೇಷ ತೊಟ್ಟು ಕುದುರೆ ಏರಿ ಕೊಮ್ಬಾರಿಗೆ ಬಂದು ಯೇನೆಕಲ್ಲು ನಲ್ಲಿ ಮುನ್ನುರೊಕ್ಲುಗೆ ಗೌಡನಾಗಿದ್ದ ಸುಬ್ಬ ಗೌಡನ ಮೇಲೆ ಯುದ್ಧ ಸಾರುತ್ತಾನೆ ,ಕುದುರೆ ಏರಿ ನೇರವಾಗಿ ಸುಬ್ಬ ಗೌಡನ ಮನೆಗೆ ಬರುತ್ತಾನೆ ,ಗೂಡಾಚಾರರ ಮೂಲಕ ಇದನ್ನು ತಿಳಿದ ಸಬ್ಬಣ ಗೌಡ  ಬಚ್ಚನಾಯಕ ಬರುವುದನ್ನು ತಿಳಿದ ಅವನನ್ನು ದಾರಿಯಲ್ಲಿಯೇ ಕೊಲ್ಲಿಸುತ್ತಾನೆ.
ಸುಬ್ಬ ಗೌಡನ ಅಣತಿಯಂತೆ ಮುಗೇರನೊಬ್ಬ ವಿಷ ಸವರಿದ ಬಾಣವನ್ನು ಬಚ್ಚನಾಯಕನ ಮೇಲೆ ಬಿಡುತ್ತಾನೆ. ಬಾಣಕ್ಕೆ ಬಲಿಯಾದ ಬಚ್ಚನಾಯಕ ಹೊಂಡದಲ್ಲಿ ಬಿದ್ದು ನರಳುತ್ತಾನೆ. ಆಗ ಸುಬ್ಬ ಗೌಡನ ಹೆಂಡತಿಯರು ಅವನ ಕೊರಳಿನ ಮೇಲೆ ನಿಂತು, ನಾಲಿಗೆ ತುಂಡರಿಸಿ ಕೊಲ್ಲುತ್ತಾರೆ. ಸಾಯುವ ಸಂದರ್ಭದಲ್ಲಿ ಪಶ್ಚಾತ್ತಾಪಪಟ್ಟು ಕ್ಷಮೆ ಕೇಳುವ ಬಚ್ಚನಾಯಕ ಮುಂದೆ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಾನೆ. 

ಸುಳ್ಯ, ಗುತ್ತಿಗಾರು, ಯೇನೆಕಲ್ಲುಗಳಲ್ಲಿ ಈತನನ್ನು ಆರಾಧಿಸುತ್ತಾರೆ. copy rights reserved (c)Dr.Laxmi g Prasadಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಯೇನೆಕಲ್ಲು ಗ್ರಾಮದಲ್ಲಿ ಬಚ್ಚನಾಯಕ ದೈವ ಕಾರಣಿಕ ದೈವವಾಗಿ ನೆಲೆಯಾಗಿದೆ 
  
 ಸಹೋದರನನ್ನು ಕೊಂದ ವಿಷಯ ತಿಳಿದ ಬಚ್ಚನಾಯಕನ ತಮ್ಮ ಕೋಟಿನಾಯಕ ಯುದ್ಧಕ್ಕೆ ಹೊರಡುತ್ತಾನೆ.

ಮಾಗಣೆಗೌಡರಿಗೂ ಗಟ್ಟದ ದಂಡಾಳುಗಳಿಗೆ ಯುದ್ಧವಾಗಿ ಕೋಟಿನಾಯಕನೂ ಸಾಯುತ್ತಾನೆ. 

ಕರಿಯಣ್ಣ ನಾಯಕ ಕೂಡ ಬಚ್ಚನಾಯಕನ ಸಹೋದರ ಅವನು ಕೂಡ ಯುದ್ಧಕ್ಕೆ ಬಂದು ಸಾಯುತ್ತಾನೆ ,
ಅವನ ತಮ್ಮ ಬೈಸುನಾಯಕ ನೆರವಾಗಿ ಯುದ್ಧ ಸಾರದೆ ನೀರು ಕೇಳುವ ನೆಪದಿಂದ ಬಂದು ಸುಬ್ಬ ಗೌಡನ ತುಂಬು ಗರ್ಭಿಣಿ ಮಡದಿಯನ್ನು ಕೊಂಡು ಪ್ರತೀಕಾರ ಮಾಡುತ್ತಾನೆ ಎಂಬ ಐತಿಹ್ಯ ಬೈಸುನಾಯಕ ದೈವದ ಕಥನಕದಲ್ಲಿದೆ .ಬಚ್ಚನಾಯಕ ಮತ್ತು ಆತನ ಸಹೋದರರ ಶಕ್ತಿಯಿಂದ ಸುಬ್ಬಗೌಡರ ಕುಟುಂಬ (ಮಾಗಣೆಗೌಡರ)ಅನೇಕ ತೊಂದರೆಗೆ ಒಳಗಾಗುತ್ತದೆ .ಹಾಗೆ ನಂತರ ಅವರು ದೈವತ್ವ ಪಡೆದು ತುಳುನಾಡಿನ ವಿಶಿಷ್ಟ ಸಂಸ್ಕೃತಿಯಂತೆ ಭೂತವಾಗಿ ಆರಾಧಿಸಲ್ಪಡುತ್ತಾರೆ .

copy rights reserved (c)Dr.Laxmi g Prasad
(ಚಿತ್ರ ಕೃಪೆ: ಅಂತರ್ಜಾಲvijaya karnataka indian express.com)

10 comments:

 1. Replies
  1. ನಿಮ ನಿರಂತರ ಬೆಂಬಲಕ್ಕೆ ನಾನು ಆಭಾರಿ ಸರ್ ಧನ್ಯವಾದಗಳು

   Delete
 2. you are reasearching n upholds the tradation of Tulunadu Madam...

  ReplyDelete
 3. Dr. Purushothama Bilimale also quoted this. People in and around Ainekallu worship Bachnayaka.These are Part of Oral History. Ballalas were the Vassel kings of Igoor (Keladi) Nayakas.
  Background of Religious & Political Conflicts are discussed in my Book "IN PURSUIT OF OUR ROOTS". It was a Grand plan by Sringeri Matha and Igoor Nayakas to take control of Temples and Land in Dakshina Kannada from Vaishnavits, Jains and Matrilenial families. Arround year 1530 Ikkeri Nayakas Re-allocated Gowda families from Ikkeri Samsthana Under the leadership of Ikkeri Dhandanayakas like Thimma Nayaka Who settles in Hari Hara Pallathadka after defeating Balagodu- Rathnapuri Ballala and Takes control of Subrahamanya Temple. Subrahamanya Temple remained under the administration of Koojugodu family (Descendants of Thimma Nayaka) from 1530 to 2005 Jointly Patronized by Ikkeri Nayakas and Haleri Dynasty of Kodagu. Likewise Dhanda Nayaka and Ullalthi took control of Puttur Mahalingeshwara Temple and were Ministers to Bangarasa of Puttur and settled in "Bala Nadu" of Puttur Mahalingeshwara after a Bloody conflict with Ballalas' of Balanadu.
  Four brothers and one sister, followers of Aadhinatha Sampradaya (Avadhootha Natha Pantha) - Jogi Siddapurusha Ramanaswamy, Ramaswamy, Viswanatha Guruswamy, Jade Jogi Bharavaswamy and their sister Jogithi Purushathi were disciples of Bhairaveshwara(A form of Aadhinatha - Shiva) of Kigga Matha near Sringeri, were trained by Navanatha Jogis in Kashi and attained supernatural Tantrik powers. They were deputed to coastal Karnataka by Sringeri Matha and Ikkeri Nayakas around 1560 to consolidate their Rule and control of Temples of Coastal Karnataka. The Jogis under took a tour of Coastal Karnataka and Bhagamandala (In Kodagu) propagating Sheiva Sampradaya. Jogi Viswanatha Guruswamy settles in Kadri near mangalore and revived Matsendranatha Matha, Jade Jogi Bhairavaswamy settles in Vittala, Jogi Ramaswamy or Kumaraswamy settles in Subrahamanya as Hosaligamma. Jogi Ramana swamy (Purusha Jogi) goes over to Kandrapady and succeeds transfer of land to Gowda families after the demise of Issue less Akkamma & Duggamma Ballalthis of Kandrapadi 5 Villages. In response to hostilities of Jains, Purusha Jogi exterminates them. Purusha Bhootha of Kandrapadi is being worshiped by the people.

  ReplyDelete
  Replies
  1. ಮಾಹಿತಿಗಾಗಿ ಧನ್ಯವಾದಗಳು ಸರ್

   Delete