Wednesday, 12 November 2014

ಸಾವಿರದೊಂದು ಗುರಿಯೆಡೆಗೆ ;150-ಜಾನು ನಾಯ್ಕ /ಬೈದ್ಯ-ಡಾ.ಲಕ್ಷ್ಮೀ ಜಿ ಪ್ರಸಾದ                                      ಚಿತ್ರ ಕೃಪೆ ಬ್ರಹ್ಮ ಬೈದರ್ಕಳ ಗರೋಡಿ ಅಗತಾಡಿ

ಅತ್ತಾವರದಲ್ಲಿ ವೈದ್ಯ ನಾಥ ದೈವದ ಸೇರಿಗೆಯಾಗಿ ಬಂಡಿರಾಮ ಮತ್ತು ಜಾನು ನಾಯ್ಕ /ನಾಯ್ಗ ಎಂಬ ಎರಡು ದೈವಗಳಿಗೆ ಆರಾಧನೆ ಇದೆ .ಜಾನು ನಾಯ್ಕದೈವವನ್ನು ಜಾನು ಬೈದ್ಯ ಎಂದು ಕೂಡ ಕರೆಯುತ್ತಾರೆ .

ಜಾನು ನಾಯ್ಕ ಸುಜೆರ್ ವೈದ್ಯನಾಥ ಭಂಡಾರ ಮನೆಯ ಮೂಲ ಪುರುಷ . ವೈದ್ಯನಾಥ ದೈವದ ಆರಾಧನೆಯನ್ನು ಪ್ರಾರಂಭಿಸಿದ ಈತ ವೈದ್ಯನಾಥ ದೈವದ ಅನನ್ಯ ಭಕ್ತ .copy rights reserved (c)Dr.Laxmi g Prasad
ತಮ್ಮ ಆರಾಧ್ಯ ದೇವರಿಗೆ ದೈವಗಳಿಗೆ ದೇವಸ್ಥಾನ ದೈವಸ್ಥಾನ ಕಟ್ಟಿಸಿದವರುಅವರವರ ಆರಧ್ಯಾ ದೈವಗಳ ಸನ್ನಿಧಿಗೆ ಸೇರಿ ದೈವಿಕ ನೆಲೆಯಲ್ಲಿ ಆರಾಧಿಸಲ್ಪದುವುದು ತುಳು ಸಂಸ್ಕೃತಿಯಲ್ಲಿ ಅಲ್ಲಿಲ್ಲಿ ಕಂಡು ಬರುವ ವಿಚಾರವಾಗಿದೆ .

ವಿಷ್ಣುಮೂರ್ತಿ ದೈವದ ಆಲಯ ಕಟ್ಟಿಸಿದ ಅಚ್ಚು ಬಂಗೆತಿ ,ಚೆನ್ನಕೇಶವ ದೇವಾಲಯ ಕಟ್ಟಿಸಿದ ಚೆನ್ನಿಗೆ ರಾಯ ,ಕಾರಿಂಜೇಶ್ವರ ದೇವಾಲಯ ಕಟ್ಟಿಸಿದ ಕಾರಿನ್ಜೆತ್ತಾಯ,ಹಿರಿಯಡಕದಲ್ಲಿ ವೀರಭದ್ರನನ್ನು ಪ್ರತಿಷ್ಟಾಪಿಸಿದ ಅಡ್ಕತ್ತಾಯ ಮೊದಲಾದವರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.
ಅಂತೆಯೇ ರಕ್ತೇಶ್ವರಿ ದೈವದ ಅನನ್ಯ ಭಕ್ತೆಯಾದ ಅಕ್ಕಚ್ಚು ,ಭಗವತಿಯ ಅನನ್ಯಭಕ್ತೆ  copy rights reserved (c)Dr.Laxmi g Prasadಒರುಬಾಣಿಯೆತ್ತಿಮೊದಲಾದವರು ದೈವತ್ವ ಪಡೆದುಅವರ ಆರಾಧ್ಯ ದೈವದ ಸೇರಿಗೆಗೆ ಸಂದು ಆರಾಧಿಸಲ್ಪಡುತ್ತಿದ್ದಾರೆ .
ಅಂತೆಯೇವೈದ್ಯ ನಾಥ ದೈವದಆರಾಧನೆಯನ್ನುಆರಂಭಿಸಿದ ಅನನ್ಯ ಭಕ್ತ ಜಾನು ಬೈದ್ಯ ವೈದ್ಯನಾಥ ದೈವದ ಸೇರಿಗೆಗೆ ಸಂದು ಆರಾಧಿಸಲ್ಪಡುತ್ತಿರ ಬಹುದು .copy rights reserved (c)Dr.Laxmi g Prasad

ಈತ ಬಹುಶ ಓರ್ವ ಸೇನಾ ನಾಯಕನಿರಬಹುದು ,ಹಾಗಾಗಿಯೇ ನಾಯಕ>ನಾಯ್ಕ  ಎಂಬ ಹೆಸರು ಬಂದಿರಬಹುದು.ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ
ಮಾಹಿತಿ ನೀಡಿದ ಸಂಕೇತ್ ಪೂಜಾರಿ ಹಾಗೂ ಶೈಲೇಶ್ ಸಾಲಿಯಾನ್,ಫೋಟೋ ಒದಗಿಸಿಕೊಟ್ಟ ಬ್ರಹ್ಮ ಬೈದರ್ಕಳ ಗರೋಡಿ ಅಗತಾಡಿ ಇವರಿಗೆ ಕೃತಜ್ಞತೆಗಳು

No comments:

Post a Comment