Thursday, 13 November 2014

ಸಾವಿರದೊಂದು ಗುರಿಯೆಡೆಗೆ:153:ತುಳುನಾಡ ದೈವಗಳು -ರಕ್ತೇಶ್ವರಿ:ಡಾ.ಲಕ್ಷ್ಮೀ ಜಿ ಪ್ರಸಾದ



copy rights reserved ರಕ್ತೇಶ್ವರಿ ಪುರಾಣ ಮೂಲ ದೈವ ಎಂದು ಭಾವಿಸಲಾಗಿದೆ .ಈ ದೈವಕ್ಕೂ ಮಾನವ ಮೂಲದ ಒಂದು ಐತಿಹ್ಯ ಸಿಕ್ಕಿದೆಯಾದರೂ ಆ ಬಗ್ಗೆ ಬರೆಯಲು ಸಿಕ್ಕ ಮಾಹಿತಿಯ ಸ್ಪಷ್ಟತೆ ಸಾಲದು .ಪುರಾಣ ಮೂಲದ ಕಥಾನಕ ಹೀಗಿದೆ
ರಕ್ತೇಶ್ವರಿಯು ರಾಕ್ಷಸರನ್ನು ನಾಶ ಮಾಡಲು ಬಂದ ಶಕ್ತಿ. ಆದಿಶಕ್ತಿಯು ರಕ್ತಬೀಜಾಸುರನನ್ನು ನಾಶ ಮಾಡಲು ಸೃಷ್ಟಿಸಿದ ರೂಪವೇ ರಕ್ತೇಶ್ವರಿ. ನಾಗನ ಬಲಭಾಗದಲ್ಲಿ ಕುಳಿತು ಭೂಮಿಗೆ ಇಳಿದ ಶಕ್ತಿ ಎಂದು ಪಾಡ್ದನದಲ್ಲಿ ಹೇಳಿದೆ. 
copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಸಪ್ತದೇವಿಯರು ಮೇಲಿನ ಲೋಕದಿಂದ ಭೂಲೋಕಕ್ಕೆ ಬಂದು ದಕ್ಷಿಣದಿಕ್ಕಿನಲ್ಲಿ ಒಂದು ಸತ್ಯದ ಕಟ್ಟೆಯಲ್ಲಿ ವಿಶ್ರಾಂತಿ ಪಡೆಯಲು ನಿಶ್ಚಯಿಸುತ್ತಾರೆ. ಬಾಯಾರಿಕೆ ಕಳೆದುಕೊಳ್ಳಲು ಸೀಯಾಳವನ್ನು ರಾಣಿ ಎನ್ನುವ ಕೆಲಸದ ಹೆಣ್ಣು ಕೆತ್ತಿ ಕೊಡುವಾಗ, ಸೀಯಾಳಕ್ಕೆ ಅವಳೇ ಬಾಯಿ ಹಾಕುತ್ತಾಳೆ. ಆಗ ದೇವಿ ಕೋಪದಿಂದ ಆ ಹುಡುಗಿಯನ್ನು ಮಾಯ ಮಾಡುತ್ತಾಳೆ. ಮೇಲಿನ ಲೋಕಕ್ಕೆ ಒಯ್ಯುತ್ತಾರೆ. 

ಮುಂದೆ ಆದಿಶಕ್ತಿಯು ರಕ್ತಬೀಜಾಸುರನ ಜೊತೆ ಯುದ್ಧ ಮಾಡುವಾಗ, ಆರು ಜನ ತಂಗಿಯರು ದೇವಿಯಲ್ಲಿ ಆ ದಿನ ಮಾಯ ಮಾಡಿದ ಹುಡುಗಿಯನ್ನು ಕರೆಸಿ ಎನ್ನುತ್ತಾರೆ. ಆಗ ಅವಳು ನನ್ನ ಶರೀರದಲ್ಲಿ ಲೀನವಾಗಿದ್ದಾಳೆ. ರಕ್ತೇಶ್ವರಿ ಎಂಬ ಹೆಸರಿನಲ್ಲಿ ಅವತರಿಸುತ್ತಾಳೆ. ಅಂತೆಯೇ ಅವಳು ರಕ್ತಬೀಜಾಸುರನ ರಕ್ತವನ್ನು ಹೀರಿ ಸಂಹಾರ ಮಾಡುತ್ತಾಳೆ. ರಕ್ತ ಬೀಜಾಸುರನ ಸಂಹಾರದ ನಂತರ ಹುಡುಗಿ ತಾಯಿ ಇನ್ನು ಮೇಲೆ ನನಗೇನು ನೆಲೆ?” ಎಂದು ಕೇಳುತ್ತಾಳೆ. ಆಗ ನೀನು ಭೂತಕ್ಕೆ ದೊಡ್ಡವಳು, ದೇವರಿಗೆ ಸಣ್ಣವಳಾಗಿ ನಾಗನ ಜೊತೆ ಆರಾಧನೆ ಪಡೆ. ನಾಗನಿಗೆ ತಂಗಿಯಾಗಿ, ನಾಗಾರಾಧನೆ ಮಾಡುವಾಗ ಜೊತೆಯಲ್ಲಿ ಆರಾಧನೆ ಪಡೆ ಎಂದು ಹೇಳಿ ಹುಡುಗಿಯನ್ನು ಮಾಯ ಮಾಡುತ್ತಾರೆ. copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ

ಅವಳು ಮಾಯದಲ್ಲಿ ಬಂದು ದೈವಗಳಿಗೆ ಮಾತೆಯಾಗಿ, ನಾಗರಿಗೆ ತಂಗಿಯಾಗಿ ಲೋಕರಕ್ಷಣೆ ಮಾಡುತ್ತಾಳೆ ಎಂಬ ಕಥೆಯು ಪ್ರಚಲಿತವಿದೆ. ನಾಗಬ್ರಹ್ಮ ರಕ್ತೇಶ್ವರಿ ಎಂದೂ ಕರೆಯುತ್ತಾರೆ.  ಲೆಕ್ಕೇಸಿರಿ ಎಂಬುದು ರಕ್ತೇಶ್ವರಿ ಎಂಬ ದೈವ ಹೆಸರೇ ಆಗಿದೆ. ಲೆಕ್ಕಿಮರದಡಿಯಲ್ಲಿ ನಿಂತ ಪದ್ಮಾವತಿ ಯಕ್ಷಿಗೂ ಲೆಕ್ಕೀಸಿರಿಗೂ ಅನೇಕ ಸಮಾನ ಅಂಶಗಳು ಇವೆ. 

ಲೆಕ್ಕೇಸಿರಿ ಮತ್ತು ಪದ್ಮಾವತಿ ಯಕ್ಷಿಯರಲ್ಲಿ ಹಲವು ಸಾಮ್ಯತೆಗಳಿವೆ. ಲೆಕ್ಕೇಸಿರಿ ದೈವದ ಬಣ್ಣ ಕೆಂಪು. ಆದ್ದರಿಂದ ಈ ದೈವವನ್ನು ರಕ್ತೇಶ್ವರಿ ಎನ್ನಲಾಗುತ್ತದೆ.

 ಜೈನರ ಯಕ್ಷಿಯರಲ್ಲಿ ಒಂದಾದ ಪದ್ಮಾವತಿ ಯಕ್ಷಿಯ ಬಣ್ಣ ರಕ್ತ ಬಣ್ಣ. ಕನ್ನಡ ನಾಡಿನಲ್ಲಿ ಪದ್ಮಾವತೀ ಯಕ್ಷಿ ಬಹಳ ಪ್ರಸಿದ್ಧವಾದ ಯಕ್ಷಿ. ಧರಣೇಂದ್ರ ಯಕ್ಷ ಹಾಗೂ ಪದ್ಮಾವತಿ ಯಕ್ಷಿ ಸತಿಪತಿಯರು. 

ಇವರಿಗೆ ನಾಗಸಂಬಂಧಿ ಕಥೆಯ ಹಿನ್ನೆಲೆ ಇದೆ. ಕಮಠನೆಂಬ ತಪಸ್ವಿ ಪಂಚಾಗ್ನಿಯಲ್ಲಿ ಕುಳಿತು ತಪಸ್ಸು ಮಾಡುತ್ತಿರುವಾಗ ರಾಜಕುಮಾರ ಪಾಶ್ರ್ವನಾಥರು ಬಂದು ಓ ತಪಸ್ವಿಯೇ ಯಾಕೆ ನೀನು ವ್ಯರ್ಥವಾಗಿ ಹಿಂಸೆ ಮಾಡುತ್ತಿರುವೆ ಎಂದು ಕೇಳುತ್ತಾರೆ. ಆಗ ಆತ ನಾನೇನು ಹಿಂಸೆ ಮಾಡುತ್ತಿರುನೆಂದು ಕೇಳಲು, ಪಾಶ್ರ್ವನಾಥರು ಉರಿಯುತ್ತಿರುವ ಬೆಂಕಿಯಿಂದ ಒಂದು ಕೊಳ್ಳಿಯನ್ನು ಹೊರಗೆಳೆದು ಸೀಳಿದರು. ಅದರಿಂದ ಅರ್ಧ ಸುಟ್ಟ ನಾಗ-ನಾಗಿಣಿಯರು ಹೊರಬಂದು ಕೆಲಕ್ಷಣಗಳಲ್ಲಿ ಮರಣಿಸಿ ಯಕ್ಷಲೋಕದಲ್ಲಿ ಧರಣೇಂದ್ರ ಯಕ್ಷ-ಪದ್ಮಾವತಿ ಯಕ್ಷಿಯರಾಗಿ ಜನಿಸಿದರು. copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ

ಭಗವಾನ್ ಪಾಶ್ರ್ವನಾಥರ ಸೇವೆಗೆ ಕಂಕಣಬದ್ಧರಾದರು ಎಂಬ ಕಥೆ ಇದೆ. ಮೇಘಮಾಲಿಯ ಆಜ್ಞೆಯಂತೆ ಮುಸಲಧಾರೆ ಮಳೆಯಾದಾಗ ತಮ್ಮ ಹೆಡೆ ಬಿಚ್ಚಿ ಪಾಶ್ರ್ವನಾಥರ ಧ್ಯಾನವನ್ನು ರಕ್ಷಿಸುತ್ತಾರೆ. ಬೌದ್ಧರ ತಾರಾ, ಜೈನರ ಪದ್ಮಾವತಿ, ವೈದಿಕರ ಗೌರಿ ಮೂರೂ ಒಂದೇ ಸ್ವರೂಪ ಎಂಬ ಬಗ್ಗೆ ಕುಮಾರಸ್ವಾಮಿ ಮತ್ತು ಮೋತಿಚಂದ್ರರು ಬೆಳಕು ಚೆಲ್ಲಿದ್ದಾರೆ. ಜೈನಧರ್ಮದ ಮೂಲ ಉತ್ಥಾನ ಮಗಧ ದೇಶದಲ್ಲಾಯಿತು. ಅಲ್ಲಿನ ನಾಗಸಂಪ್ರದಾಯದ ಜೊತೆಗೆ ಸಮಾನತೆಯನ್ನು ಪದ್ಮಾವತಿಯ ಉಪಾಸನೆಯಲ್ಲಿ ನೋಡಬಹುದು ಎಂದು ಡಾ. ಹಂಪನಾ ಹೇಳಿದ್ದಾರೆ.
ರಕ್ತೇಶ್ವರಿ ದೈವ ನಾಗ ನೊಂದಿಗೆ ಆರಾಧಿಸಲ್ಪಡುತ್ತದೆ.


2 comments: