Sunday, 16 November 2014

ಸಾವಿರದೊಂದು ಗುರಿಯೆಡೆಗೆ :158:ತುಳುನಾಡಿನ ದೈವಗಳು -ಪನ್ನೆಬೀಡಿನ ದಾಲ್ಸೂರಾಯ : ಡಾ.ಲಕ್ಷ್ಮೀ ಜಿ ಪ್ರಸಾದ

                    
ಈ ದೈವ ದಾಲ್ಸೂರಾಯ, ಜಾಲ್ಸೂರಾಯ ಎಂಬ ಹೆಸರಿನಲ್ಲಿ ಜಾಲ್ಸೂರು, ಪನ್ನೆ ಬೀಡು, ಬೆಳ್ಳಾರೆ, ಕುಂಡುಳಿ, ನೇರೆಂಕಿಗಳಲ್ಲಿ ಆರಾಧಿಸಲ್ಪಡುತ್ತದೆ. ದಾಲ್ಸೂರಾಯಿ ಎಂದು ಕೂಡ ಹೇಳುತ್ತಾರೆ. ಗದ್ದೆಯ ಕೋರಿಯಂದು ಹಾಗೂ ಕಾವೇರಿ ಸಂಕ್ರಮಣದಂದು ಈತನಿಗೆ ಆರಾಧನೆ ಇರುತ್ತದೆ. ಹೊಸ ಅಕ್ಕಿ ಊಟ (ಪುದ್ವಾರ್)ದಂದು ಈತನಿಗೆ ವಿಶೇಷ ಆರಾಧನೆ ಇರುತ್ತದೆ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
    ಸಿಕ್ಕಿರುವ ಪಾಡ್ದನದ ಪ್ರಕಾರ ನೇರೆಂಕಿ ಬಂಡಾಡಿಯ ಅರಸರು ತಂದೆ-ತಾಯಿಯರಿಗೆ ಪಿಂಡ ಪ್ರದಾನ ಮಾಡಲು ತಲಕಾವೇರಿಗೆ ಹೋಗುತ್ತಾರೆ. ದಾರಿಯಲ್ಲಿ ಕೇಮರ ಬಲ್ಲಾಳ ಸಿಕ್ಕಿ ‘ಕಾವೇರಿ ತೀರ್ಥಕ್ಕೆ ಹೋಗುವವರು ಇಲ್ಲೆ ಹೋದಿರಿ. ಬರುವಾಗಯಾವ ದಾರಿಯಲ್ಲಿ ಬರುವುದೆಂದು’ ಪ್ರಶ್ನಿಸುತ್ತಾನೆ. ಆಗ ಬಲ್ಲಾಳರು ಹೋಗುವಾಗಲೂ ಇದೇ ದಾರಿ ಬರುವಾಗಲೂ ಇದೇ ದಾರಿ ಎಂದುತ್ತರಿಸಿ ಮುಂದುವರಿಯುತ್ತಾರೆ. ತಲಕಾವೇರಿಯ ಬಲ್ಲಾಳರ ಎಳೆಯ ಹೆಣ್ಣು ಮಗಳನ್ನು ಮದುವೆ ಮಾಡಿಕೊಡುವಂತೆ ನೇರೆಂಕಿ-ಬಂಡಾಡಿಯ ಬcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದಲ್ಲಾಳ ಅರಸರು ಕೇಳುತ್ತಾರೆ. copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದಬಲ್ಲಾಳರ ಒತ್ತಾಯಕ್ಕೆ ಕಟ್ಟು ಬಿದ್ದು ಮಗಳನ್ನು ಮದುವೆ ಮಾಡಿಕೊಡುತ್ತಾನೆ. ತಲಕಾವೇರಿಯ ಬಲ್ಲಾಳ ಅರಸು ದಂಡಿಗೆಯನ್ನು ಶೃಂಗರಿಸಿ ಬರುವಾಗ, ತಲಕಾವೇರಿ ಬಲ್ಲಾಳನಿಂದ ಆರಾಧಿಸಲ್ಪಡುವ ಈ ದೈವ ದಂಡಿಗೆಯ ಕೋಡಿನಲ್ಲಿ ಕುಳಿತು ಬರುತ್ತಾನೆ. ಮುಂದೆ ಈ ದೈವ ಕಳಸ ಕಂಡಲ್ಲಿ ಉದ್ಭವವಾಗಿ ದಾಲ್ಸೂರಿನಲ್ಲಿ ನೆಲೆಯೂರುತ್ತಾನೆ. ಬೆಳ್ಳಾರೆಯ ಪನ್ನೆ ಬೀಡಿನ ಗುಡ್ಡಕ್ಕೆ ಬಂದು ಬೊಳ್ಳೆ ಶಾಸ್ತ್ರದ ಹುಂಜವಾಗಿ ಕಾಣಿಸಿಕೊಂಡು ಆರಾಧನೆ ಪಡೆಯುತ್ತದೆ. ಜಲ ಅಂದರೆ ನೀರಿನಲ್ಲಿ ಉದ್ಭವವಾದ ಕಾರಣ ಈತನನ್ನೆ ಜಾಲ್ಸೂರಾಯ/ದಾಲ್ಸೂರಾಯ ಎಂದು ಕರೆಯುತ್ತಾರೆ ಎಂದು ಪನ್ನೆ ಬೀಡಿನ ಹಿರಿಯರು ಹೇಳುತ್ತಾರೆ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
    ಪಾಡ್ದನದಲ್ಲಿ ಬರುವ ಕೇಮರ ಬಲ್ಲಾಳ ಹಾಗೂ ಆತನ ಪ್ರಶ್ನೆಯು ಸಂಘರ್ಷವನ್ನು ಸೂಚಿಸುತ್ತದೆ. ನೇರೆಂಕಿ-ಬಂಡಾಡಿಯ ಬಲ್ಲಾಳನೊಂದಿಗೆ ಬಂದ ದಾಲ್ಸೂರಾಯ ಮನುಷ್ಯಮೂಲ ಲಕ್ಷಣವನ್ನು ಹೊಂದಿದೆ. ಸಂಘರ್ಷದಿಂದ ಮರಣವಪ್ಪಿರಬಹುದಾದ ಜನಾನುರಾಗಿ ಬಲ್ಲಾಳನೇ ದಾಲ್ಸೂರಾಯನೆಂಬ ಹೆಸರಿನಲ್ಲಿ ಆರಾಧನೆ ಪಡೆಯುವ ಸಾಧ್ಯತೆ ಇದೆ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕಳಸ ಕಂಡಲ್ಲಿ ಉದ್ಭವ ಆಗುತ್ತಾನೆ ಎಂಬುದು ಆಯ ಸಂಗ್ರಹಿಸುವ ಅಧಿಕಾರವನ್ನು ಸೂಚಿಸುತ್ತದೆ .ಈ ಪರಿಸರದಲ್ಲಿ ಬತ್ತದ ಕೊಯ್ಲಿನಂದು ಬಂದು ನೋಡಿ ಬೆಳೆದ ಬೆಳೆಗನುಗುಣವಾಗಿ ರಾಯ /ಆಯ ಸಂಗ್ರಹಿಸುವ ಜನ್ನು ರಾಗಿ ರಾಯ ನಿದ್ದನೆಂದು ಐತಿಹ್ಯವಿದೆ .ಆದ್ದರಿಂದ ಆ ರಾಯನೇ ಜನ ಮೆಚ್ಚುಗೆಗೆ ಪಾತ್ರನಾಗಿ ಇಲ್ಲವೇ ತಲಕಾವೇರಿಗೆ ಹೋಗಿ ಬರುವಾಗ ದುರಂತವನ್ನಪ್ಪಿ ದೈವತ್ವ ಪಡೆದಿರುವ ಸಾಧ್ಯತೆ ಇದೆ .
ತಲಕಾವೇರಿ ಯಲ್ಲಿ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಮಾಡಿ ಕೊಡುವಂತೆ ಕೇಳಿದ್ದು ಅದು ಅಲ್ಲಿನ ಆಕೆಯ ತಂದೆ ಬಲ್ಲಾಳ ರಿಗೆ ಇಷ್ಟವಿರಲಿಲ್ಲ ಎಂಬಲ್ಲಿ ಸಂಘರ್ಷ ಉಂಟಾಗಿರುವ ಸಾಧ್ಯತೆಯ ಸೂಚನೆ ಇದೆ .ಎಳೆಯ ವಯಸ್ಸಿನ ಮಗಳನ್ನು ಕೊಡದೆ ಇದ್ದಾಗ ಅಲ್ಲಿ ಯುದ್ಧವಾಗಿರುವ ಸಾಧ್ಯತೆ ಕೂಡ ಇದೆ ,ಇದಲ್ಲದೆ ಕೇಮರ ಬಲ್ಲಾಳ ನಿಗೂ ವಿರೋಧ ಇದ್ದ ಸೂಚನೆ ಇದೆ .ಹೀಗೆ ಯಾವುದೋ ಕಾರಣಕ್ಕೆ ದುರಂತವನ್ನಪ್ಪಿ ತುಳು ಸಂಸ್ಕೃತಿಯಂತೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ

ಈತ ಬೆಳ್ಳಾರೆ ಬೀಡಿನ ಅಡ್ಯಂತಾಯ ದೈವದ ಸಹೋದರ ಎಂಬ ಅಭಿಪ್ರಾಯವಿದೆ .ಮೂವ ದೈವದ ಪಾದ್ದನದಲ್ಲಿ ಐವರು ರಾಜಕುಮಾರರ ಉಲ್ಲೇಖವಿದೆ ,ಇವರಲ್ಲಿ ಅಡ್ಯಂತಾಯ ಹಿರಿಯನಾಗಿದ್ದು ಬೆಳ್ಳಾರೆ ಬೀಡನ್ನು .ಜಾಲ್ಸೂರಾಯ/ದಾಲ್ಸೂರಾಯ ಜಾಲ್ಸೂರನ್ನು ,ದುಗ್ಗ್ಗಲಾಯ ದುಗ್ಗಲಡ್ಕ .ಮಾಲಿಂಗ ರಾಯ  ಮಾಲೆಂಗ್ರಿ ಪಿಲಿಕುಂಜ  ಆಳ್ವಿಕೆ ನಡೆಸಿರುವ ಸಾಧ್ಯತೆ ಇದೆ .ಮೂರನೆಯವನು ಮೂವ ಇರಬಹುದು ಏನೇ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಬೆಳ್ಳಾ

ರೆಯ ಇತಿಹಾಸಕ್ಕೆ ಬಲವಾದ ಆಧಾರ ದೊರೆಯಬಹುದು

No comments:

Post a Comment