Tuesday, 25 November 2014

ಸಾವಿರದೊಂದು ಗುರಿಯೆಡೆಗೆ :163:ತುಳುನಾಡ ದೈವಗಳು -ಪುದರುಚಿನ್ನ ಬಂಟ:ಡಾ.ಲಕ್ಷ್ಮೀ ಜಿ ಪ್ರಸಾದ



ಗುತ್ತಿಗಾರಿನ ಮೊಗ್ರಾಲ್‍ನಲ್ಲಿ ನಲವತ್ತೆಂಟು ದೈವಗಳಿಗೆ ಆರಾಧನೆ ಇದೆ. ಇವುಗಳಲ್ಲಿ ಉಳ್ಳಾಕುಲು, ಚಾಮುಂಡಿ, ಪಂಜುರ್ಲಿಯಂಥಹ ಕೆಲವು ಪ್ರಸಿದ್ಧ ದೈವಗಳ ಬೇರೆಬೇರೆ ವೇಷಭೂಷಣಗಳನ್ನು ಧರಿಸಿ, ಪಾಡ್ದನ ಹೇಳಿ ನೇಮ ನೀಡುತ್ತಾರೆ. ಇನ್ನು ಕೆಲವನ್ನು ಹೆಸರು ಮಾತ್ರ ಹೇಳಿ ಒಂದು ಸುತ್ತು ನರ್ತಿಸಿ ನಾಮಕಾವಸ್ಥೆ ನೇಮ ನೀಡುತ್ತಾರೆ. ಪುದರುಚಿನ್ನ ಬಂಟ ಇಂಥಹ ಒಂದು ಉಪೇಕ್ಷಿತ ದೈವ. ಪುದರ್ ಎಂದರೆ ಹೆಸರು ಎಂದರ್ಥ. ಹೆಸರು ಚಿನ್ನ ಬಂಟ ಎಂಬುದು ಇದರ ಶಬ್ದಶಃ ಅರ್ಥವಾಗಿದೆ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ

ಆದರೆ ಹೆಸರು ಚಿನ್ನ ಬಂಟ ಎಂಬ ವಾಕ್ಯ ದೈವದ ಹೆಸರಿರಲಾರದು. ಪುದರಿಜ್ಜಾಂದಿ ಬಂಟ ಅಂದರೆ ಹೆಸರಿಲ್ಲದ ಸೇವಕ ಅಥವಾ ಸೈನಿಕ ಎಂಬ ಶಬ್ದವೇ ಕಾಲಾಂತರದಲ್ಲಿ ಪುದರ್‍ಚಿನ್ನ ಬಂಟ ಎಂದಾಗಿರುವ ಸಾಧ್ಯತೆ ಹೆಚ್ಚಿದೆ. 

ಹೆಸರು ಗೊತ್ತಿಲ್ಲದ ದೈವವಾಗಿರುವುದರಿಂದ ಆ ದೈವವನ್ನು ಪುದರಿಜ್ಜಾಂದಿ ದೈವ/ಹೆಸರಿಲ್ಲದ ದೈವ ಎಂದು ಕರೆದು ನೇಮ ನೀಡಿರಬಹುದು. ಹೆಸರಿನಲ್ಲಿಯೇ ತಿಳಿಸಿರುವಂತೆ ಈತನ ಕಥೆ, ಐತಿಹ್ಯವಿರಲಿ ಹೆಸರು ಕೂಡ ತಿಳಿದು ಬರುವುದಿಲ್ಲ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಈ ದೈವದ ಆಯುಧ ಶೂಲ,ಹಾಗಾಗಿ ಈತ ಒಬ್ಬ ಸೈನಿಕ ಇದ್ದಿರುವ ಸಾಧ್ಯತೆ ಇದೆ.ಬಂಟ ಎಂಬ ಶಬ್ದಕ್ಕೆ ವೀರ ಎಂಬ ಅರ್ಥವೂ ಇದೆ .ಹಾಗಾಗಿ ಈತ ಯುದ್ಧವೀರನಿರಬಹುದು .
ಇಂಥ ಹೆಸರು ಅಸ್ತಿತ್ವ ಕಳೆದು ಹೋಗಿ ಸಮೂಹದಲ್ಲಿ ಆರಾಧನೆ  ಇರುವ ದೈವತ್ವ ಪಡೆದ  ಅನೇಕ ಸಾಂಸ್ಕೃತಿಕ ವೀರರ ಚರಿತೆ ಇಂದು ಕಳೆದು ಹೋಗಿರುವುದು ದುರಂತವೇ ಸರಿ


No comments:

Post a Comment