Sunday, 22 March 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -173 ಅಲೇರ ಪಂಜುರ್ಲಿ (c) ಡಾ.ಲಕ್ಷ್ಮೀ ಜಿ ಪ್ರಸಾದ



 ಚಿತ್ರ ಕೃಪೆ :ಪ್ರವೀಣ್ ಸಾಲಿಯಾನ್
ಅಲೇರ ಪಂಜುರ್ಲಿ ಎಂದರೆ ಪಂಜುರ್ಲಿ ದೈವವಲ್ಲ .ಪಂಜುರ್ಲಿ ದೈವದ ಸೇರಿಗೆಗೆ ಸಂದ ದೈವವಿದು.ಸಾರಾಮಣಿ ಎಂಬ ಸತಿ ಯೇ ಅಲೇರ ಪಂಜುರ್ಲಿ ದೈವವಾಗಿ ಆರಧಿಸಲ್ಪದುತ್ತ್ತಾಳೆ ಎಂಬ ಐತಿಹ್ಯವಿದೆ .ಸತಿ ಹೋದವರು ದೈವತ್ವ ಪಡೆದು ಅರಧಿಸಲ್ಪಡುವ ವಿಚಾರ ಅಸಹಜವೇನೂ ಅಲ್ಲ copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ
ಆದರೆ ಅಲೇರ ಪಂಜುರ್ಲಿ ಬಗ್ಗೆ ಇನ್ನೊಂದು ರೀತಿಯ ಕಥಾನಕವೂ ಪ್ರಚಿಲಿತವಿದೆ.
ಹಿಂದೆ ಸವರ್ಣಿಯರು ನಾಡಿನಲ್ಲಿ ವಾಸಿಸುತ್ತಿದ್ದಾರೆ ಕಾಡಿನಲ್ಲಿ ಅವರ್ಣಿಯರು ಇದ್ದರು .ಅವರ್ಣಿಯರು ಸವರ್ಣಿಯರನ್ನು ಮುಟ್ಟಿದರೆ ಆ ಸವರ್ಣೀಯರನ್ನು ಕಾಡಿಗೆ ಅಟ್ಟುವ ಪದ್ದತಿ ಇತ್ತಂತೆ ಇದನ್ನು ಅರಿತ ಅವರ್ಣೀಯರು ನಾಡಿಗೆ ಬಂದು ಸವರ್ಣೀಯ ಹುಡುಗಿಯರನ್ನು ಮುತ್ತಿ ಕಾಡಿಗೆ ಎತ್ತಿಕೊಂಡು ಹೋಗುತ್ತಿದ್ದರಂತೆ .ಆಗ ಇವರು ಶಿವ ನನ್ನು ಪ್ರಾರ್ಥಿಸಲು ಆತ ಒಂದು ಭೂತವನ್ನು ನಾಡಿಗೆ ಕಳುಹಿಸುತ್ತಾನೆ .ಆ ದೈವವೇ ಅಲೇರ ಪಂಜುರ್ಲಿ .ಆ ದೈವ ನಾಡಿಗೆ ಬಂದು ದಾಳಿ ಮಾಡುವ ಕಾಡಿನ ಮಂದಿಯನ್ನು ಕಾಡಿಗೆ ಅಟ್ಟುತ್ತದೆ .copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದಹಾಗೆ ಭಯಗೊಂಡ ಕಾಡಿನ ಮಂದಿ ಅಲೇರ ಪಂಜುರ್ಲಿಯನ್ನು ಆರಾಧಿಸುತ್ತಾರೆ
ಈ ಕಥಾನಕವನ್ನು ಉದ್ದೇಶ ಪೂರ್ವಕ ಕಟ್ಟಿದ ಹಾಗೆ ತೋರುತ್ತದೆ .ಕಾಡಿನ ಮುಗ್ಧ ಜನರು ಎಂದಿಗೂ ನಾಡಿನ ಮಂದಿಗೆ ತೊಂದರೆ ಕೊಟ್ಟ ಉದಾಹರಣೆಗಳಿಲ್ಲ .ನಾಡಿನ ಮಂದಿಯೇ ಅವರನ್ನು ವಿವಿಧ ವಿಧಿ ನಿಷೇಧಗಳನ್ನು ಹೇಳಿ ದೂರ ಇಟ್ಟಿದ್ದರು ಹಾಗಿರುವಾಗ ಅವರು ಇವರಿಗೆ ಕಾಟ ಕೊಟ್ಟರು ಅದಕಾಗಿ ದೇವರು ಅಲೇರ ಪಂಜುರ್ಲಿ ಭೂತವನ್ನು ಸೃಷ್ಟಿಸಿ ನಾಡಿಗೆ ಕಳುಹಿಸಿದ ಎಂಬ ಕಥೆ ಸತ್ಯಕ್ಕೆ ದೂರವಾಗಿದೆcopy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ


ಸತಿಯೊಬ್ಬಳು ದೈವತ್ವ ಪಡೆದು ಪಂಜುರ್ಲಿ ದೈವದ ಸೇರಿಗೆಯಾಗಿ ಆರಾಧಿಸಲ್ಪಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ .ಆದರೂ ಅಲೇರ ಎಂಬ ಪದಕೆ ಅರ್ಥವೇನು ?ಸತಿ ಸಾರಾಮಣಿಗೆ ಅಲೇರ ಪಂಜುರ್ಲಿ ಎಂದು ಹೆಸರು ಬರಲು ಕಾರಣವೇನು ?ಇತ್ಯಾದಿ ಅನೇಕ ಸಂದೇಹಗಳಿಗೆ ಉತ್ತರ ಸಿಗುವುಡಿಲ್ಲ
ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಮಾಹಿತಿ ದೊರೆಯಬಹುದು

No comments:

Post a Comment