Sunday, 12 April 2015

ಸಾವಿರದೊಂದು ಗುರಿಯೆಡೆಗೆ :177ಅಂತ ಬೈದ್ಯ (ಮಲೆ ಸಾವಿರ ದೈವ ) (c) ಡಾ.ಲಕ್ಷ್ಮೀ ಜಿ ಪ್ರಸಾದ

                   
 ಮಲೆ ಚಾಮುಂಡಿ (ಅಂತ ಬೈದ್ಯ ?) ಚಿತ್ರ ಕೃಪೆ :ಪುಷ್ಪ ರಾಜ ಗೌಡ
ತುಳುನಾಡಿನ ದೈವಗಳಲ್ಲಿ ಹೆಚ್ಚಿನವರೂ ಮಾನವ ಮೂಲವನ್ನು ಹೊಂದಿವೆ .ಅಸಮಾನ್ಯ ಸಾಹಸ ಮೆರೆದವರು ,ದೈವಗಳ ಆಗ್ರಹಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ಕೋಟಿ-ಚೆನ್ನಯ ,ಮುಗೆರ್ಲು ,ಆಲಿ ಭೂತ, ಮೂಕಾಂಬಿ ಗುಳಿಗ ಅರಬಿ ಭೂತ ,ಚೀನೀ ಭೂತಗಳು ,ಅಕ್ಕಚ್ಚು ಅಚ್ಚು ಬಂಗೆತಿ ,ಮದನಕ್ಕೆ ದೈಯಾರ್ ,ನುರ್ಗಿ ಮದಿಮ್ಮಾಲ್ ,ಕುಕ್ಕೆತ್ತಿ ಬಳ್ಳು,ಮೈಯೊಂತಿ ಕಚ್ಚೆ ಭಟ್ಟ,ಭಟ್ಟಿ ಭೂತ ,ಬ್ರಾಣ ಭೂತ ಮೊದಲಾದ ದೈವಗಳು ಮೂಲತಃ ಮಾನವರಾಗಿದ್ದು ದೈವತ್ವವನ್ನು ಪಡೆದವರೇ ಆಗಿದ್ದಾರೆ ,copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಅಂತೆಯೇ ಅಂತ ಬೈದ್ಯ/ಅಂತಯ್ಯ ಬೈದ್ಯ ಎಂಬಾತ ಕೂಡ ದೈವತ್ವ ಪಡೆದು.ಮಲೆ ಚಾಮುಂಡಿ , ಮಲೆ ಜುಮಾದಿ ,ಮಲೆಸಾವಿರ ದೈವ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದ್ದಾನೆ.
ಈ ದೈವದ ಬಗ್ಗೆ ಅಧ್ಯಯನ ಮಾಡಿರುವ ಬನ್ನಂಜೆ ಬಾಬು ಅಮೀನ್ ಅವರು ಅಂತ ಬೈದ್ಯ ದೈವದ ಕುರಿತಾಗಿ ಪ್ರಚಲಿತವಿರುವ ಎರಡು  ರೀತಿಯ ಕಥಾನಕಗಳನ್ನು ಸಂಗ್ರಹಿಸಿದ್ದಾರೆ .
ಹಿಂದೆ ಈಶ್ವರ ದೇವರಿಗೆ ಅಮೃತ (ಕಳ್ಳು) ಅನ್ನು ತಂದು ಕೊಡಲು ಅಂತ ಬೈದ್ಯ ಎಂಬಾತ ನಿಯೋಜಿತನಾಗಿರುತ್ತಾನೆ .ಈತ ಈಶ್ವರ ದೇವರ ಅನನ್ಯ ಭಕ್ತನಾಗಿದ್ದನು ಈಶ್ವರ ದೇವರ ಆಪ್ತ ಸೇವಕನಾಗಿದ್ದನು .
ಒಂದು ದಿನ ಕಳ್ಳು ತೆಗೆಯಲು ಮರ ಹತ್ತಿದಾಗ ಬಿದ್ದು ಕೈಕಾಲು ಮುರಿದು ಕಣ್ಣುಗಳನ್ನು ಕೂಡ ಕಳೆದುಕೊಳ್ಳುತ್ತಾನೆ .ಆಗ ಅವನು ಈಶ್ವರ ದೇವರಲ್ಲಿ ಅರಿಕೆ ಮಾಡಿಕೊಂಡಾಗ ದೇವರು "ಇನ್ನು ನೀನು ಮಾನವ ರೂಪ ಕಳೆದು ದೈವವಾಗಿ ಮಲೆ ಸಾವಿರ ದೈವ ಎಂಬ ಹೆಸರಿನಲ್ಲಿ ಆರಾಧನೆಯನ್ನು ಪಡೆ ನಿನ್ನ ಜೊತೆ ಸಾವಿರ ಭೂತಗಳಿಗೆ ಆರಾಧನೆಯಾಗಲಿ ,` ನಿನ್ನ ನಂಬಿದ ಜನರನ್ನುರಕ್ಷಿಸು ಎಂದು ಅನುಗ್ರಹ ಮಾಡುತ್ತಾರೆ .ಹಾಗೆ ಅಂತ ಬೈದ್ಯ ಮಲೆ ಸಾವಿರ ದೈವವಾಗಿ ನೆಲೆ ನಿಲ್ಲುತ್ತಾನೆ.
ಇನ್ನೊಂದು ಐತಿಹ್ಯದಲ್ಲಿ ಸ್ವಲ್ಪ ಬೇರೆ ರೀತಿಯ ಕಥೆ ಇದೆ
ತೆಂಕಣದಲ್ಲಿ ಬೇಲಾಡಿ ಎಂಬ ಸ್ಥಳದಲ್ಲಿ ಅಂತಯ್ಯ ಬೈದ್ಯ ಎಂಬ ಮಂತ್ರವಾದಿ ಇದ್ದನು ಆತ ಶಿರ್ವ ನಡಿಬೆಟ್ಟು ಚಾವಡಿಯ ಜೈನ ಗುತ್ತಿನವರಲ್ಲಿ ಗೇಣಿಗೆ ಭೂಮಿ ಕೇಳುತ್ತಾನೆ ,ಅವರು ಅವನಿಗೆ ಕಟ್ಟಿಂಗೇರಿ ಯ ಭೂಮಿಯನ್ನು ಗೇಣಿಗೆ ಕೊಡುತ್ತಾರೆ.ಹೀಗೆ ಗೇಣಿಯನ್ನು ವರ್ಷ ವರ್ಷ ಸಂದಾಯ ಮಾದುತ್ತ್ತ ಬೇಸಾಯ ಮಾಡುತ್ತಿದ್ದನು .ಒಂದು ವರ್ಷ ಬೆಳೆ ಕೆಟ್ಟು ಹೋಗಿ ಫಸಲು ಇಲ್ಲವಾಗುತ್ತದೆ .ಆದರೆ ಒಡೆಯ ಗೇಣಿ ಕೊಡಲೇ ಬೇಕು ಎನ್ನುತ್ತಾರೆ .ಆಗ ಮಂತ್ರವಾದಿಯಾದ ಅಂತಯ್ಯ ಬೈದ್ಯನು ತನ್ನ ಮಂತ್ರ ಶಕ್ತಿಯಿಂದ ನೀರಿನ ಮುಡಿಯನ್ನು ಮಾಡಿ ಒಪ್ಪಿಸುತ್ತಾನೆ .ಒಡೆಯ ಅದನ್ನು ಕೋಲಿನಿಂದ ಚುಚ್ಚಿ ಪರೀಕ್ಷೆ ಮಾಡುವಾಗ ನೀರಿನ ಮುಡಿ ಎಂದು ತಿಳಿಯುತ್ತದೆ .ಆಗ ಅವರು ಗುತ್ತಿನ ದೈವ ಕಿನ್ಯದ್ಕ ಜುಮಾದಿಗೆ ದೂರು ನೀಡುತ್ತಾರೆ .ಮರುದಿನ ಕಿನ್ಯದ್ಕ ಜುಮಾದಿ ಅಂತಯ್ಯ ಬೈದ್ಯನನ್ನು ಮಾಯ ಮಾಡುತ್ತದೆ .copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಮಾಯವಾದ ಅಂತಯ್ಯ ಬೈದ್ಯನು ತನ್ನ ಅಣ್ಣಂದಿರಿಗೆ ಕಾಣಿಸಿಕೊಂಡು ನನ್ನನ್ನು ಮೋಸದಿಂದ ಬಾಲಿ ತೆಗೆದು ಕೊಂದ ವಿಚಾರ ಹೇಳಿ ತನಗೆ ಸೀಯಾಳ ತೆಗೆದು ಇಡಲು ಹೇಳುತ್ತಾನೆ ಮತ್ತೆ ಅವನ ಅಣ್ಣಂದಿರು ಅವನಿಗೆ ಕಟ್ಟಿಂಗೆರ್ ತುಂಬಡ ಬಾಕ್ಯರ್ ನಲ್ಲಿ ಧೂ ಪೆ ಕಟ್ಟುತ್ತಾರೆ ಆ ಧೂಪೆಯ ಸ್ಮಾರಕ ಈಗ ಕೂಡ ಇದೆ ಎಂದು ಬನ್ನಂಜೆ ಬಾಬು ಅಮೀನ್ ಅವರು ತಿಳಿಸಿದ್ದಾರೆ .
ಅಲೌಕಿಕ ನೆಲೆಯನು ಬಿಟ್ಟು ವಾಸ್ತವಿಕ ನೆಲೆಯಲಿ ಚಿಂತಿಸುವಾಗ ಅಂತ ಬೈದ್ಯ ಮೂರ್ತೆಗಾಗಿ ಮರ ಹತ್ತಿದಾಗ ಬಿದ್ದು ದುರಂತವನ್ನಪ್ಪಿ ದೈವತ್ವ ಪಡೆದಿರಬೇಕು ಅಥವಾ ಗೇಣಿ ಕೊಡದ್ದಕ್ಕೆ  ಒಡೆಯನಿಂದ ಶಿಕ್ಷಿತನಾಗುವ ಆತ ದುರಂತವನ್ನಪ್ಪಿ ದೈವತ್ವ ಪಡೆದಿರುವ ಸಾಧ್ಯತೆ ಕೂಡ ಇದೆ
ಒಟ್ಟಿನಲ್ಲಿ ಈತ :ಬಡಗಣ ವಲಯದಲ್ಲಿ ಮಲೆ ಸಾರ (ಮಲೆ ಸಾವಿರ) ಎಂದೂ ತೆಂಕಣ ಪ್ರದೇಶದಲ್ಲಿ ಮಲೆ ಜಿಮಾದಿ ಎಂದೂ ಮೂಡಣದಲ್ಲಿ ಅಂತ ಬೈದ್ಯ ಎಂದೂ ಕರೆಯಲ್ಪಡುತ್ತಾನೆ"ಎಂದು ಬನ್ನಂಜೆ ಬಾಬು ಅಮೆನ್ ಹೇಳಿದ್ದಾರೆ .ಮಲೆ ಚಾಮುಂಡಿ ಎಂದು ಕೂಡ ಈತನನ್ನು ಆರಾಧಿಸುತ್ತಾರೆ .

ಆಧಾರ ಗ್ರಂಥ
ದೈವ ನೆಲೆ _ಡಾ||ಬನ್ನಂಜೆ ಬಾಬು ಅಮೀನ್


4 comments:

  1. Replies
    1. Thanks,all credits goes to Dr.Bannaje baabu amin

      Delete
  2. SHRIVA NADI BETTU MANETANA JAINA GUTTUTHA ? PRESENT SHETTY NAGALA UNDERDE ENCHA AAND ? PLS GIVE ME INFORMATION

    ReplyDelete