Thursday, 16 April 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು -182 ಬೀರ್ನಾಚಾರಿ (c)ಡಾ.ಲಕ್ಷ್ಮೀ ಜಿ ಪ್ರಸಾದ



                 copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ : ಕಾಸರಗೋಡು ಜಿಲ್ಲೆಯ ಕಳಿಯೂರು ಗ್ರಾಮದಲ್ಲಿ ಆರಾಧನೆ ಹೊಂದುವ ದೈವ ಬೀರ್ನಾಚಾರಿ. ಹೆಸರೇ ಸೂಚಿಸುವಂತೆ ಬೀರ್ನಾಚಾರಿ ಮೂಲತಃ ಬಡಗಿ. ಕಳಿಯೂರು ಗ್ರಾಮದಲ್ಲಿ ರಕ್ತೇಶ್ವರಿ ದೈವದೊಂದಿಗೆ ಅಣ್ಣ-ತಮ್ಮ ಅರಸು ದೈವಗಳಿಗೆ ಆರಾಧನೆ ಇರುತ್ತದೆ.
ಆರಂಭದಲ್ಲಿ ಅಣ್ಣ ದೈವಕ್ಕೆ ಆರಾಧನೆ ಇರುತ್ತದೆ. ಅಣ್ಣ ದೈವಕ್ಕೆ ಒಂದು ಮರದ ಮುಖವಾಡ ಇದ್ದು, ಇದಕ್ಕೆ ಒಂದು ಕಿವಿ ಮಾತ್ರ ಇದೆ. ಅಣ್ಣ ದೈವದ ಮುಖವಾಡವನ್ನು ಒಂದೇ ರಾತ್ರಿಯಲ್ಲಿ ಮಾಡಿ ಮುಗಿಸಬೇಕೆಂಬ ನಿಯಮ ಇರುತ್ತದೆ. ಬೀರ್ನಾಚಾರಿ ಎಂಬ ಬಡಗಿ ಅಣ್ಣ ದೈವದ ಮರದ ಮುಖವಾಡವನ್ನು ಒಂದೇ ರಾತ್ರಿಯಲ್ಲಿ ಬೆಳಗಾಗುವುದರೊಳಗೆ ತಯಾರಿಸುತ್ತಾನೆ. ಬೆಳಗಾಗುವಾಗ ಒಂದು ಕಿವಿಯ ಕೆತ್ತನೆ ಆಗಿರುವುದಿಲ್ಲ. reserved(c)ಡಾ.ಲಕ್ಷ್ಮೀ ಜಿ ಪ್ರಸಾದಆಗ ಕೋಪಗೊಂಡ ದೈವ ಬೀರ್ನಾಚಾರಿಯನ್ನು ಮಾಯ ಮಾಡಿ, ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ರಕ್ತೇಶ್ವರಿ ದೈವದ ನೇಮದ ನಂತರ ಅಣಿಯನ್ನು ಬಿಚ್ಚಿ ಅದೇ ವೇಷಭೂಷಣದಲ್ಲಿ ಬೀರ್ನಾಚಾರಿಗೆ ನೇಮ ಕೊಡುತ್ತಾರೆ. ಮರದ ಉಳಿ ಈತನ ಆಯುಧ



ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳು .ಇಲ್ಲಿ ಒಂದು ರಾತ್ರಿ ಒಳಗೆ ಮುಗವನ್ನು ತಯಾರಿಸ ಬೇಕೆಂಬ ನಿಯಮ ಇತ್ತು .ಅದನ್ನು ಒಪ್ಪಿದ ಬೀರ್ನಾಚಾರಿ .ಆ ಮುಖವಾಡವನ್ನು ಒಂದು ರಾತ್ರಿಯಲ್ಲಿಯೇ ತಯಾರಿಸುತ್ತಾನೆ .ಆ ಮುಖವಾದ ಈಗ ಕೂಡ ಕಳಿಯುರಿನಲ್ಲಿದೆ,ನಾನಾ ಮಗ ಅದರ ಫೋಟೋ ಕೂಡ ಹಿಡಿದಿದ್ದು ಪ್ರಸ್ತುತ ನನ್ನಲ್ಲಿ ಕಳೆದು ಹೋಗಿದೆ .ಇರಲಿ ,ಇಷ್ಟು ಸುಂದರವಾದ ಮುಖವಾಡವನ್ನು ರಾತ್ರಿಯ ಒಳಗೆ ಮಾಡಿದವನನ್ನು ಹೀಗೆ ಬಿಡಬಾರದು ಎಂದು ಭೂತ ಮಾಯಾ ಮಾಡಿತು ಎಂದು ಒಂದು ಐತ್ಯವು ತಿಳಿಸಿದರೆ ಮುಖವಾಡದಲ್ಲಿ ಒಂದು ಕಿವಿಯನ್ನು ಕೆತ್ತುವಾಗ ದೋಷ ಉಂಟಾದದ್ದಕ್ಕೆ ದೈವ ಮಾಯ ಮಾಡಿತು ಎಂದು ಇನ್ನೊಂದು ಕಥಾನಕ ತಿಳಿಸುತ್ತದೆ .reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಇಂಥ ಕುಶಲ ಕರ್ಮಿ ಇನ್ನೊಂದು ಕಡೆ ಇಂಥ ಸುಂದರ ಮುಖವಾಡವನ್ನು ತಯಾರಿಸಬಾರದು ಎಂಬ ಮತ್ಸರದಿಂದ ಕಲ್ಕುಡ ನ ಕೈಕಾಲು ಕಡಿದು ಸಾಯಿಸಿದಂತೆ ಇಲ್ಲೂ ಏನಾದರೂ ದುರಂತವಾಯಿತೇ?ಅಥವಾ ದೋಷ ಉಂಟು ಮಾಡಿದ್ದಕ್ಕೆ ಸ್ಥಳೀಯ ಪಾಳೆಗಾರ ,ಅರಸ ಆತನನ್ನು ಶಿಕ್ಷಿಸಿದನೆ  ?ಆಗ ದುರಂತವನ್ನಪ್ಪಿ ಕಾಲಾಂತರದಲ್ಲಿ ದೈವತ್ವ ಪಡೆದು ಆರಧಿಸಲ್ಪಟ್ಟಿರುವ ಸಾಧ್ಯತೆ ಕೂಡ ಇದೆ .ತಮ್ಮ ತಪ್ಪನ್ನು ಮುಚ್ಚಿ ಹಾಕಲು ಭೂತ ಮಾಯ ಮಾಡಿತು ಎಂದು ಹೇಳಿರುವ ಸಾಧ್ಯತೆ ಕೂಡ ಇದೆ .ಅಥವಾ ಆಟ ಆಕಸ್ಮಿಕವಾಗಿ ದುರಂತವನ್ನಪ್ಪಿದ್ದು ಅದಕ್ಕೆ ದೈವ ಮಹಿಮೆಯ ಕಥಾನಕ ಸೇರಿರುವ ಸಾಧ್ಯತೆ ಕೂಡ ಇದೆ .ಏನೇ ಆದರೂ ಇಂಥ ಚೆನ್ಗುಳಿ/.ತುಂಡು ಭೂತಗಳ ಕುರಿತು ಸಮಗ್ರ ಅಧ್ಯವಾಗಬೇಕಾದ ಅಗತ್ಯವಿದೆ .

ಆಧಾರ :ತುಳುನಾಡಿನ ಅಪೂರ್ವ ಭೂತಗಳು -ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment