Friday, 17 April 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು-186 ಪಂಜುರ್ಲಿ (c)ಡಾ.ಲಕ್ಷ್ಮೀ ಜಿ ಪ್ರಸಾದ

                 
ಚಿತ್ರ ಕೃಪೆ :ಸಂಧ್ಯಾ ಲಕ್ಷ್ಮಿ,ಮುಳಿಯಾಲ
copy rights reserved ತುಳುನಾಡಿನ ಕೆಲವು ಭೂತಗಳು ಪ್ರಾಣಿ ಮೂಲ ವನ್ನು ಹೊಂದಿವೆ ,ಜಗತ್ತಿನಾದ್ಯಂತ ಪ್ರಾಣಿಗಳ ಆರಾಧನೆ (throtam) ಪ್ರಚಲಿತವಿದೆ .ಕ್ರೂರ ಪ್ರಾಣಿಗಳಿಂದ ಪ್ರಾಣ ಹಾಗೂ  ಬೆಳೆ ರಕ್ಷ ಣೆಗಾಗಿ ಪ್ರಾಣಿ ಆರಾಧನೆ ಪ್ರಾರಂಭವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ
ಪಂಜುರ್ಲಿ ಭೂತ ಮೂಲತ ಪ್ರಾಣಿ ಮೂಲ ದೈವ .

ತುಳುನಾಡಿನಹೆಚ್ಚಿನ ಭಾಗವನ್ನು ಪಶ್ಚಿಮ ಘಟ್ಟ ಆವರಿಸಿಕೊಂಡಿದೆ .ಆದ್ದರಿಂದ ಇಲ್ಲಿ ಸಹಜವಾಗಿಯೇ ಹಂದಿಗಳ ಕಾಟ ಹೆಚ್ಚು .ಬೆಳೆಯನ್ನು ಹಾಳು ಮಾಡುವ ಹಂದಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಪಂಜುರ್ಲಿ (ಪಂಜಿ(ಹಂದಿ ) ಕುರ್ಲೆ (ಮರಿ ))ಆರಾಧನೆ ಪ್ರಾರಂಭವಾಗಿದೆ
ತುಳುನಾಡಿನ ಭೂತಾರಾಧನೆ ಮೇಲೆ ಪುರಾಣಗಳು ಅಪಾರವಾದ ಪ್ರಭಾವವನ್ನು ಬೀರಿವೆ .ಆದ್ದರಿಂದ ಹೆಚ್ಚಿನ ದೈವ ಕಥಾನಕಗಳು ಪುರಾಣದ ಕಥೆಗಳೊಂದಿಗೆ ಪುರಾಣದ ದೇವರುಗಳೊಂದಿಗೆ ತಳಕು ಹಾಕಿಕೊಂಡಿದೆ .ಅಂತೆಯೇ ಪಂಜುರ್ಲಿ ಭೂತಕ್ಕೆ ಕೂಡ  ಪುರಾಣ ಮೂಲದ ಕಥಾನಕ ಸೇರಿಕೊಂಡಿದೆcopy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕೈಲಾಸ ಪರ್ವತದಲ್ಲಿ ಈಶ್ವರದೇವರು ಬೇಟೆಗೆ ಹೊರಡುವಾಗ ಪಾರ್ವತಿ ದೇವಿಯೂ ಹೊರಡುತ್ತಾರೆ. ಗಂಡಸರು ಹೋಗುವಲ್ಲಿ ಹೆಂಗಸರು ಬರಬಾರದು ಎಂದು ಹೇಳಿದರೂ ಪಾರ್ವತಿ ದೇವಿ ಹಠಮಾಡುತ್ತಾಳೆ. ಆಗ ಈಶ್ವರದೇವರು “ನೀನು ನೋಡಿದ್ದನ್ನು ನೋಡಿದೆ ಎನ್ನಬಾರದು ಕೈ ತೋರಿ ಕೇಳಬಾರದು” ಎಂಬ ಶರತ್ತು ವಿಧಿಸಿ ಕರೆದೊಯ್ಯುತ್ತಾರೆ. ಕಾಡಿನಲ್ಲಿ ಗುಜ್ಜಾರ ಮತ್ತು ಕಾಳಿ ಎಂಬ ಎರಡು ಹಂದಿಗಳ ಐದು ಮರಿಗಳು ಈಶ್ವರನ ನಂದನ ಕೆರೆಯಲ್ಲಿ ಹೊರಳಾಡುತ್ತಿರುತ್ತವೆ. ಈಶ್ವರ ಗುಜ್ಜಾರನಿಗೆ ಬಾಣ ಬಿಡುತ್ತಾನೆ. ಕಾಳಿ ಓಡುತ್ತದೆ. ಆ ಐದು ಮರಿಗಳಲ್ಲಿ ಒಂದನ್ನು ಹಠ ಮಾಡಿ ಪಾರ್ವತಿ ಕೈಲಾಸಕ್ಕೆ ತೆಗೆದುಕೊಂಡು ಹೋಗಿ ಪ್ರೀತಿಯಿಂದ ಸಾಕುತ್ತಾರೆ. ಅದನ್ನು ಮಾಳಿಗೆಯಲ್ಲಿ ದುಂಡುಸಂಕೋಲೆಯಲ್ಲಿ ಕಟ್ಟಿ ಹಾಕುತ್ತಾರೆ. ಕೈಲಾಸದಲ್ಲಿ ಒಂದು ಸಮಾರಾಧನೆಯ ದಿವಸ ಈ ಹಂದಿಮರಿ ಬಿಡಿಸಿಕೊಂಡು ಊಟದ ಎಲೆಗಳಿಗೆ ಬಾಯಿ ಹಾಕುತ್ತದೆ. ಈಶ್ವರ ದೇವರಿಗೆ ಸಿಟ್ಟು ಬಂದು ‘ನೀನು ಕೈಲಾಸದಲ್ಲಿರಬಾರದು. ಭೂಮಿಗಿಳಿದು ದೈವವಾಗಿರಬೇಕು’ ಎಂದು ವರ ಕೊಡುತ್ತಾರೆ.5 ಬ್ರಾಹ್ಮಣರೂಪದಲ್ಲಿ ಭೂಮಿಗಿಳಿದು, ಗಣಾಮಣಿಯಾಗಿ, ಘಟ್ಟ ಇಳಿದು ನೆಲ್ಯಾಡಿ ಬೀಡಿಗೆ ಬರುತ್ತಾನೆ. ಇದು ಪಂಜುರ್ಲಿಯ ಮೂಲಕಥೆ. ಅನಂತರ ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಅಣ್ಣಪ್ಪ ಪಂಜುರ್ಲಿ, ಮಲಾರ ಪಂಜುರ್ಲಿ, ಒರ್ತೆ  ಪಂಜುರ್ಲಿ, ವರ್ಣಾರ ಪಂಜುರ್ಲಿ, ಪೊಟ್ಟ  ಪಂಜುರ್ಲಿ ಇತ್ಯಾದಿ ಹೆಸರುಗಳನ್ನು ಪಡೆದು ಆರಾಧನೆ ಪಡೆಯುತ್ತದೆcopy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಆದರೆ ಪಂಜುರ್ಲಿ ಎಂಬ ಒಂದು ಹೆಸರು ಇದ್ದ ಮಾತ್ರಕ್ಕೆ ಎಲ್ಲವೂ ಪಂಜುರ್ಲಿ ಆರಾಧನೆ ಎಂದು ಹೇಳಲು ಸಾಧ್ಯವಿಲ್ಲ .ಪಂಜುರ್ಲಿ ಎಂಬ ಹೆಸರು ಇದ್ದರೂ ಅದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ .ಉದಾಹರಣೆಗೆ ಹೇಳುದಾದರೆ ಅಣ್ಣಪ್ಪ ಪಂಜುರ್ಲಿ ಪಂಜುರ್ಲಿ ದೈವವಲ್ಲ ಪಂಜುರ್ಲಿ ಸೇರಿಗೆಗೆ ಸಂದ ಅಣ್ಣಪ್ಪ ಎಂಬಾತನೇ ಅಣ್ಣಪ್ಪ ದೈವವಾಗಿ ನೆಲೆ ನಿಂತಿದ್ದಾನೆ .ಸೇಮಿ ಕಲ್ಲ ಪಂಜುರಿ ಕೂಡ ಪಂಜುರ್ಲಿ ದೈವವಲ್ಲ ಸಿರ್ಯ ಶಾಪಕ್ಕೆ ಒಳಗಾಗಿ ದೈವತ್ವ ಪಡೆದಾತ ಸೇಮಿ ಕಲ್ಲ ಪಂಜುರ್ಲಿ ಎಂದು ಆರಾಧಿಸಲ್ಪದುತ್ತಿರುವುದು ಕಂಡು ಬರುತ್ತಿದೆ .ಹೀಗೆ ಒಂದೇ ಪಂಜುರ್ಲಿ ಎಂಬ ಅಹೆಸರಿನಲ್ಲಿ ಅನೇಕ ದೈವಗಳು ಆರಾಧನೆ ಪಡೆಯುತ್ತಿರುವುದು ಇದೆ ..

No comments:

Post a Comment