Wednesday, 22 April 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು_198 ಭೂತ ರಾಜ (c)ಡಾ.ಲಕ್ಷ್ಮೀ ಜಿ ಪ್ರಸಾದ                                   

                      ಚಿತ್ರ ಕೃಪೆ :ಜಯಪ್ರಕಾಶ್ ಪ್ರಭು ಶಿರ್ವ (ಅಂತರ್ಜಾಲದಿಂದ ಹೆಕ್ಕಿದ್ದು )
ಸೋದೆ ಮಠದಲ್ಲಿ ಹಾಗೂ ಉಡುಪಿ ಕೃಷ್ಣಮಠದ ಬೃಂದಾವನದಲ್ಲಿ ಭೂತರಾಜನಿಗೆ ಆರಾಧನೆ ಇದೆ. ಈತನನ್ನು ನಾರಾಯಣ ರೂಪನೆಂದೂ, ಧನುರ್ಬಾಣ ಧರಿಸಿದವನೆಂದೂ ಹೇಳಲಾಗಿದೆ.  ಮಠದಲ್ಲಿ  ಭೂತರಾಜನಿಗೆ ಮೂರ್ತರೂಪವಿಲ್ಲ. ಪದ್ಮಶಿಲೆಯಲ್ಲಿ ಈತನನ್ನು ಆರಾಧಿಸುತ್ತಾರೆ. ಈಗ ಒಂದು ಮುಖವಾಡವನ್ನು ರಚಿಸಿದ್ದಾರೆ. copy rights reserved (c) Dr.Laxmi g Prasad 

ಉತ್ಸವದ ದಿನ ಭೂತರಾಜನ ಪೂಜೆ ಬದಲಿಗೆ ಪಲ್ಲಪೂಜೆಯನ್ನು ಮಾಡುತ್ತಾರೆ. ವಾದಿರಾಜರು ಈ ಭೂತರಾಜನ ಪದ್ಮಶಿಲೆಯನ್ನು ಸದಾ ತಮ್ಮ ಬಳಿಯಲ್ಲಿ ಇರಿಸಿಕೊಂಡು ಪೂಜಿಸುತ್ತಿದ್ದರು ಭೂತರಾಜನ ಬಗೆಗೆ ಒಂದು ಐತಿಹ್ಯವು ಪ್ರಚಲಿತವಿದೆ. ರಾಮಾಯಣ ಯುದ್ಧದ ನಂತರ ರಾವಣನನ್ನು ಹತ್ಯೆ ಮಾಡಿದ್ದಕ್ಕಾಗಿ ರಾಮನಿಗೆ ಬ್ರಹ್ಮಹತ್ಯಾ ದೋಷವು ಬಾಧಿಸುತ್ತದೆ.

 ಆಗ ಬ್ರಾಹ್ಮಣನೊಬ್ಬನು ಅಹಂಕಾರದಿಂದ ಈ ದೋಷವನ್ನೇ ಸ್ವೀಕರಿಸಲು ಮುಂದೆ ಬರುತ್ತಾನೆ. ಆಗ ರಾಮ ಅವನನ್ನು ಬ್ರಹ್ಮರಾಕ್ಷಸನಾಗೆಂದು ಶಪಿಸುತ್ತಾನೆ. ಆಗ ಆ ಬ್ರಾಹ್ಮಣನ ಒಂದಂಶ ಬ್ರಾಹ್ಮಣನಾಗಿಯೂ, ಇನ್ನೊಂದು ಅಂಶ ಬ್ರಹ್ಮರಾಕ್ಷಸನಾಗಿಯೂ ಜನ್ಮವನ್ನು ಪಡೆಯುತ್ತದೆ. ಅವನು ಬ್ರಾಹ್ಮಣನಾಗಿ ನಾರಳ ಎಂಬ ಸ್ಥಳದಲ್ಲಿ ಹುಟ್ಟುತ್ತಾನೆ. ಅವನು ನಾರಾಯಣ ಆಚಾರ್ಯ ಎಂಬ ಪ್ರಕಾಂಡ ಪಂಡಿತನಾಗಿ ಮಧ್ವರ ಅನುಯಾಯಿಯಾಗಿರುತ್ತಾನೆ. 
ಒಂದು ದಿನ ಆತ ಕದ್ದು ಮಧ್ವರ ನಡೆಯನ್ನು ಪರೀಕ್ಷಿಸುತ್ತಾನೆ. ನಂತರ ಪಶ್ಚಾತ್ತಾಪದಿಂದ ಕ್ಷಮೆ ಕೇಳುತ್ತಾನೆ. ಆಗ ಮಧ್ವರು ಅವನಿಗೆ ಬ್ರಹ್ಮರಾಕ್ಷಸನಾಗೆಂದು ಶಪಿಸುತ್ತಾರೆ. ತಪ್ಪನ್ನು ಕ್ಷಮಿಸಬೇಕೆಂದು ದಯನೀಯವಾಗಿ ಪ್ರಾರ್ಥಿಸಿದ ನಾರಾಯಣ ಆಚಾರ್ಯರ ಮೇಲೆ ಕನಿಕರಗೊಂಡು ನೀನು ಬ್ರಹ್ಮರಾಕ್ಷಸನಾಗಿ ಹುಟ್ಟಿದ ನಂತರ ಅಮಾಕಾವೈಕೋನಸ್ನಾತಃ ಎಂಬ ಪ್ರಶ್ನೆಯನ್ನು ಕೇಳು? ಆ ಪ್ರಶ್ನೆಗೆ ಯಾರಾದೂ ಉತ್ತರಿಸಿದರೆ ಅವರಿಂದ ನಿನಗೆ ಮುಕ್ತಿ ಎಂದು ಶಾಪವಿಮೋಚನೆಯ ಮಾರ್ಗವನ್ನು ಸೂಚಿಸುತ್ತಾರೆ. copy rights reserved (c) Dr.Laxmi g Prasad ಆ ಬ್ರಹ್ಮರಾಕ್ಷಸನುಸಿಕ್ಕಸಿಕ್ಕವರನ್ನು ಹಿಡಿದು, ಅಮಾಕಾವೈಕೋನಸ್ನಾತ? ಎಂದು ಹೇಳಿ ಉತ್ತರ ಕೊಡದವರನ್ನು ತಿನ್ನುತ್ತಿದ್ದನು.

ಮುಂದೊಂದು ದಿನ ವಾದಿರಾಜರ ಎದುರಿಗೆ ಒಂದು ಅಮಾಕಾವೈಕೋನಸ್ನಾತಃ? ಎಂದು ಕೇಳಲು ವಾದಿರಾಜರು ನೀನು ಎಂದು ಉತ್ತರಿಸುತ್ತಾರೆ. ಆಗ ನಾನೇ? ಎಂದು ಬ್ರಹ್ಮರಾಕ್ಷಸ ಅಚ್ಚರಿಯಿಂದ ಕೇಳಲು, ಹೌದು ಆಷಾಢ, ಮಾಘ, ಕಾರ್ತೀಕ, ವೈಶಾಖದಲ್ಲಿ ನಿನ್ನಂಥ ಬ್ರಹ್ಮರಾಕ್ಷಸನು ಪುಣ್ಯಸ್ನಾನ ಮಾಡುವುದಿಲ್ಲ ಎಂದು ವಿವರಿಸಿದರು. ಅನಂತರ ಅವನಿಗೆ ಮೋಕ್ಷ ಕರುಣಿಸಿ ಭೂತಗಳ ಅಧಿಪತಿಸ್ಥಾನವನ್ನು ನೀಡಿ ಭೂತರಾಜನೆಂಬ ಅಭಿದಾನವನ್ನಿತ್ತು. ಅವನನ್ನು ನಾರಾಯಣ ಅಂಶರೂಪಿಯೆಂದು ಆರಾಧಿಸುತ್ತಾರೆ.

ಈ ಐತಿಹ್ಯದ ಪ್ರಕಾರ ಭೂತರಾಜನು ಮೂಲತಃ ಬ್ರಹ್ಮರಾಕ್ಷಸ, ಈತನಿಗೆ ಮೂರ್ತರೂಪವಿಲ್ಲ. ಕಮಲಶಿಲೆಯಲ್ಲಿ ಈತನನ್ನು ಸಂಕಲ್ಪಿಸಲಾಗಿದೆ. ಬ್ರಹ್ಮಲಿಂಗವನ್ನು ಕಮಲಶಿಲೆಯಲ್ಲಿ ಪ್ರತಿಷ್ಠಾಪಿಸುತ್ತಾರೆ. copy rights reserved (c) Dr.Laxmi g Prasad 

ನಾಗಬ್ರಹ್ಮ ಮೂರ್ತಿಯ ತಲೆಯಲ್ಲಿ ನಾಗಹೆಡೆಯಿರುವಂತೆ ಭೂತರಾಜನ ತಲೆಯಲ್ಲಿ ಕೂಡ ನಾಗಹೆಡೆಯಿದೆ.  ಭೂತರಾಜನ ಅಯುಧ ಧನುಸ್ಸು ಮತ್ತು ಬಾಣ. ಬೆರ್ಮೆರಿನ ಆಯುಧ ಕೂಡ ಬಿಲ್ಲು ಬಾಣ. ಬೆರ್ಮೆರಂತೆ ಭೂತರಾಜನು ಕೂಡ ಭೂತಗಳ ಅಧಿಪತಿ. ಬೆರ್ಮರಿಗೂ ಮೂರ್ತರೂಪವಿಲ್ಲ. ನಾಗಮಂಡಲ, Àಕ್ಕೆಬಲಿ ಹಾಗೂ ಸುಬ್ರಹ್ಮಣ್ಯ ಆರಾಧನೆಯಲ್ಲಿ ಪಲ್ಲಕ್ಕೆ ಪೂಜೆ ಮಾಡುವಂತೆ ಭೂತರಾಜನ ಆರಾಧನೆಯಲ್ಲಿ ಕೂಡ ಪಲ್ಲಪೂಜೆಯಿದೆ. ನಾಗ ಹಾಗೂ ಬೆರ್ಮರಿಗೆ ಏಕತ್ರ ಆರಾಧನೆ ಇರುವಂತೆ ಭೂತರಾಜನ ಗುಡಿಯಲ್ಲಿ ಭೂತರಾಜ ಹಾಗೂ ನಾಗರಿಗೆ ಏಕತ್ರ ಆರಾಧನೆ ಇದೆ. ಬೆರ್ಮೆರ್ ಹಾಗೂ ಭೂತರಾಜರ ನಡುವಿನ ಅನೇಕ ಸಾಮ್ಯತೆಗಳು ಈ ಎರಡೂ ಶಕ್ತಿಗಳು ಒಂದೇ ಆಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಮೂಲತಃ ಬೆರ್ಮೆರ್ ಕಾಲಾಂತರದಲ್ಲಿ ವೈಷ್ಣವ ಪಂಥದ ಪ್ರಭಾವದಿಂದ ಭೂತರಾಜನೆಂದು ಆರಾಧನೆ ಪಡೆದಿರುವ ಸಾಧ್ಯತೆ ಇದೆ.copy rights reserved (c) Dr.Laxmi g Prasad 

 ಕಡೇಶಿವಾಲಯದಲ್ಲಿ ನಾರಳತ್ತಾಯ ಎಂಬ ಭೂತಕ್ಕೆ ಆರಾಧನೆ ಇದೆ .ನಾರಳತ್ತಾಯನನ್ನು ಅಲ್ಲಿ ಭೂತ ರಾಜ ಎಂದು ಕೂಡ ಕರೆಯುತ್ತಾರೆ .ಆದರೆ ನಾರಳತ್ತಾಯ ಭೂತ ಕೋಲ ಆಗುವಾಗ ಹೇಳುವ ಪಾದ್ದನದಲ್ಲಿ ಬೇರೆ ರೆತಿಯ ಕಥನವಿದೆ .ಆದ್ದರಿಂದ ನಾರಳತ್ತಾಯ ದೈವ ಭೂತರಾಜ ಇರಲಾರದು .
ಕಾರ್ಕಳದ ಕೆಲ್ಲ ಪುತ್ತಿಗೆ ಕೆಲ್ಲ ಜೈನ ಅರ ಮನೆಯ ಪ್ರಧಾನ ಐದು ಭೂತಗಳಲ್ಲಿ   ಭೂತರಾಜ ಕೂಡ ಒಂದು ಆಗಿದೆ .copy rights reserved (c) Dr.Laxmi g Prasad 
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ -ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment