Friday 1 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:203 ಜತ್ತಿಂಗ © ಡಾ.ಲಕ್ಷ್ಮೀ ಜಿ ಪ್ರಸಾದ

                                          
© copy rights reserved(c) ಡಾಲಕ್ಷ್ಮೀ ಜಿ ಪ್ರಸಾದ ಚಿತ್ರ ಕೃಪೆ :ಚಿತ್ತರಂಜನ್ ತುಳುನಾಡು

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿಗ ಎಂಬ  ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಜಟ್ಟಿಗ ಮತ್ತು ಜತ್ತಿಂಗ ರನ್ನು ಹೆಸರಿನ ಸಾಮ್ಯತೆಯಿಂದಾಗಿ ಒಂದೇ ಭೂತ ಎಂದು ಜನರು ಭಾವಿಸಿದ್ದಾರೆ.
 ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜತ್ತಿಂಗ  ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಈ ದೈವವನ್ನು ಜತ್ತಿಂಗೆ /ಜಟ್ಟಿಂಗ ಎಂದೂ ಕರೆಯುತ್ತಾರೆ

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಈತನನ್ನು ಜಟ್ಟಿಗರಾಯ ಎಂದು ಕರೆಯಬೇಕಿದ್ದರೆ ,ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .
ಅಥವಾ ತಂತ್ರಿಗಳು/ತಂತ್ರಿದಾರ್ ಎಂಬುದು ಕಾಲಾಂತರದಲ್ಲಿ ತಂತ್ರಿಗ >ಜತ್ತಿಂಗ >ಜಟ್ಟಿಗ ಆಗಿ ಬದಲಾಗಿರುವ ಸಾಧ್ಯತೆ ಇದೆ 



ಅರಮನೆ ಜಟ್ಟಿಗ .ಕೋಟೆ ಜಟ್ಟಿಗ ಮೊದಲಾದ ದೈವಗಳು ಮೂಲತಃ ಜಟ್ಟಿಗರೇ/ಕುಸ್ತಿ ಪಟುಗಳೇ ಆಗಿರಬೇಕು /ಆದರೆ ಜತ್ತಿಂಗ ಮಾತ್ರ ಮೂಲತ ಓರ್ವ ಬ್ರಾಹ್ಮಣ ತಂತ್ರಿ .ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ್ದಕ್ಕೆ ದೈವ ಆತನನ್ನು ಮಾಯಾ ಮಾಡಿದೆ .ದೈವದ ಆಗ್ರಹಕ್ಕೆ ಸಿಲುಕಿ ಮಯವದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ.ಹಾಗೆಯೇ ಇಲ್ಲಿ ಕೂಡ ದ್ರೋಹವೆಸಗಿ ಚಾಮುಂಡಿ ದೈವದ ಆಗ್ರಹಕ್ಕೆ ತುತ್ತಾದ ಬ್ರಾಹ್ಮ ತಂತ್ರಿ ದೈವತ್ವ ಪಡೆದು ಜತ್ತಿಂಗ ದೈವವಾಗಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ .
ಈ ಭೂತದ ವೇಷ ಭೂಷಣ ಅಭಿನಯ ಅಭಿವ್ಯಕ್ತಿಗಳು ಕೂಡ ಇದನ್ನು ಸಮರ್ಥಿಸುತ್ತದೆ .
ಜತ್ತಿಂಗ ಭೂತಕ್ಕೆ ಸಾಮಾನ್ಯವಾಗಿ ಬ್ರಾಹ್ಮಣರು ಧರಿಸುವ   ಜನಿವಾರ ಕಚ್ಚೆ ನಾಮ ಹಾಕಿ ಭೂತ ಕಟ್ಟುತ್ತಾರೆ .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು 



No comments:

Post a Comment