Wednesday, 6 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 205 ಅಸುರಾಳನ್ ದೈವ (c)ಡಾ.ಲಕ್ಷ್ಮೀ ಜಿ ಪ್ರಸಾದ

                       
                              ಚಿತ್ರ ಮತ್ತು ಮಾಹಿತಿ ಕೃಪೆ :ಅದ್ಕ ಭಗವತಿ ಟೆಂಪಲ್ ಫೇಸ್ ಬುಕ್                   
ತುಳುವರ ಭೂತಾರಾಧನೆ ಬಹಳ ಅನನ್ಯವಾದುದು .ಇಲ್ಲಿ ಅನೇಕ ಅಸುರರರೂ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ .
ಕೆಟ್ಟ ದುಷ್ಟ ಶಕ್ತಿಗಳೆಂದು ಪರಿಗಣಿಸಲ್ಪಟ್ಟಿರುವ ಅಸುರರು ರಾಕ್ಷಸರು ಸಾಮಾನ್ಯವಾಗಿ ಆರಾಧಿಸಲ್ಪಡುವುದಿಲ್ಲ.ಅವರು ದೈವತ್ವದ ವಿರೋಧಿಗಳು .ಅಂಥಹ ಅಸುರರೂ ಇಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿರುವುದು ಸೋಜಿಗದ ವಿಚಾರವೇ ಆದರೂ ಇದು ಸತ್ಯ !
ರೆಂಜಾಸುರ ,ಸೋಮಕಾಸುರ,ರಕ್ಕಸ ತಗೆ.ಕಾಳ ಭಂಡಾಸುರ  ಮೊದಲಾದವರು ಅಸುರ ಮೂಲದ ಭೂತಗಳು.ಇವರುಗಳ ಕಥಾನಕ ಪೌರಾಣಿಕ ಹಿನ್ನೆಲೆಯನ್ನು ಹೊಂದಿವೆ .
ಅಂತೆಯೇ ವರ್ಕಾಡಿ ನಡಿಬೈಲು ಒಂದು ಕುಂದ ನಲ್ಪ ಭೂತಗಳ ಸಮೂಹ ಆರಾಧನೆಯಲ್ಲಿ ಅಸುರಾಳೆ ಎಂಬ ಒಂದು ಅಸುರ ಮೂಲ ದೈವಕ್ಕೆ ಆರಾಧನೆ ಇರುವ ಬಗ್ಗೆ ಭೂತ ಕಟ್ಟುವ ಕಲಾವಿದ ಅಪ್ಪಣ್ಣು ನಲಿಕೆ ತಿಳಿಸಿದ್ದಾರೆ  .ಇಲ್ಲಿ ಈತನ ಕಥಾನಕ ತಿಳಿದು ಬರುವುದಿಲ್ಲcopy rights reserved (c) Dr.Laxmi g Prasad 
ಅಡ್ಕ ಭಗವತಿ ಟೆಂಪಲ್  ಮುಖ ಪುಟದಲ್ಲಿ ಅಸುರಾಳನ್ ಎಂಬ ದೈವದ ಫೋಟೋ ಹಾಕಿದ್ದರು ಆಗ ನಾನು ಆ ದೈವ ಅಸುರಾಳೆ ಇರುವ ಸಾಧ್ಯತೆ ಇರಬಹುದು ಎಂದು ಅವರಲ್ಲಿ ಆ ದೈವದ ಬಗ್ಗೆ ಮಾಹಿತಿ ಕೇಳಿದೆ .ಆಗ ಅವರು ಅಸುರಾಳನ್ ದೈವದ ಪೌರಾಣಿಕ ಮೂಲದ ಕಥಾನಕವನ್ನು ಹೀಗೆ ನೀಡಿದ್ದಾರೆ "
ಭಗವತಿಯು ದಾರಿಗಾಸುರನನ್ನು ಸಂಹರಿಸಲು ಗುಳಿಗನ್ನು ಸೇರಿಸಿಕೊಂಡು ದಾರಿಗಾಸುರನ ಕೋಟೆಯನ್ನು ಆಕ್ರಮಿಸುತ್ತಾರೆ,ಅಸುರಾಳನ್ ದಾರಿಗಾಸುರನ ಕಾವಲುಗಾರ,ಕೋಟೆಗೆ ಆಕ್ರಮಿಸುವಾಗ ಭಗವತಿಯು ಅಸುರಾಳನ ಸ್ವಾಮಿನಿಷ್ಟೆಯನ್ನು ಕಂಡು ಭಗವತಿಯು ಅಸುರಾಳನನ್ನು ಅಸುರ ಬುದ್ದಿಯಿಂದ ವಿಮೋಚಿಸಿ ದೈವತ್ವಕ್ಕೇರಿಸುತ್ತಾರೆ"
ಅಸುರನ ಆಳು/ಕಸೇವಕ /ಕೆಲಸಗಾರ ಎಂಬ ಅರ್ಥದಲ್ಲಿ ಅಸುರಾಳನ್ ಪದ ಬಳಕೆಯಾಗಿದೆ ಇಲ್ಲಿ .
.ಗುತ್ತಿಗಾರಿನಲ್ಲಿ ಅತುಲ ಸ್ವಾಮಿ ನಿಷ್ಠೆ ತೋರಿದ ಪರವನೊಬ್ಬ ಪರವ ಭೂತವಾಗಿ ಆರಾಧಿಸಲ್ಪಡುತ್ತಾನೆ .ಅಂತೆಯೇ ಇಲ್ಲಿ ದಾರಿಕಾಸುರನ ಕಾವಲುಗಾರ ತನ್ನ ಸ್ವಾಮಿ ನಿಷ್ಟೆಯಿಂದಾಗಿ ಭಗವತಿಯ ಮೆಚ್ಚುಗೆಗೆ ಪಾತ್ರನಾಗಿ ದೈವತ್ವ ಪಡೆದು ಅಸುರಾಳನ್ ದೈವವಾಗಿ ಆರಾಧನೆ ಪಡೆಯುತ್ತಾನೆ .ತುಳುನದಿನಲ್ಲೇ ದೈವತ್ವ ಪಡೆಯುವವರು ಎಲ್ಲರೂ ಸಾತ್ವಿಕರೇ ಎಂದು ಹೇಳುವಂತಿಲ್ಲ ಆದರೆ ದೈವತ್ವ ಪಡೆದ ನಂತರ ಇವರು ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಸಾತ್ವಿಕ ಶಕ್ತಿಗಳು ,ಎಲ್ಲರಿಗೂ ಒಂದೇ ರೆತಿಯ ಭಕ್ತಿಯ ನೆಲೆ ಇದು ತುಳುವ ಸಂಸ್ಕೃತಿಯ ವೈಶಿಷ್ಟ್ಯ .
ಅಸುರಾಳನ್ ದೈವ ಮತ್ತು ಅಸುರಾಳೆ ದೈವ ಒಂದೇ ಇರಬಹುದು.ಪ್ರಸ್ತುತ ಅಸುರಾಳನ್ ದೈವಕ್ಕೆ ಮಲೆಯಾಳ ಶೈಲಿಯ ವೇಷ ಭೂಷಣ ಮತ್ತು ಆರಾಧನೆ ಇದೆ.ಮೀಸೆ ಗಡ್ಡ ಕಟ್ಟಿ ಗುರಾಣಿಗಳ ವೇಷ ಭೂಷಣ ಈತನೊಬ್ಬ ಶೂರ ಎಂಬುದನ್ನು ದ್ಯೋತಿಸುತ್ತದೆ .

ಚಿತ್ರ ಮತ್ತು ಮಾಹಿತಿಗಾಗಿ adka bhagavti temple ಮುಖ ಪುಟ ಗೆಳೆಯರಿಗೆ ಕೃತಜ್ಞತೆಗಳು

No comments:

Post a Comment