Friday, 29 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 223:ಮಿತ್ತೂರು ನಾಯರ್ ದೈವ (c)ಡಾ.ಲಕ್ಷ್ಮೀ ಜಿ ಪ್ರಸಾದ
ಮಂಜ್ಞನಡ್ಕದಲ್ಲಿ ಒಬ್ಬ ವ್ಯಕ್ತಿ ಸಾವಿರ ಜನರನ್ನು ಒಟ್ಟು ಮಾಡಿಕೊಂಡು ತನ್ನದೇ ಆದ ತಂಡವನ್ನು ಮಾಡಿಕೊಂಡಿದ್ದ.ಉಲ್ಲಾಕುಳು ಬರುವಾಗ ದಾರಿಯಲ್ಲಿ ಇವರನ್ನು ನೋಡಿ ತನ್ನ ಜೊತೆಗೆ ಬಾ ಎಂದು ಕರೆದುಕೊಂಡು ಹೋಗುತ್ತಾರೆ .ಅವನಿಗೆ ತನ್ನ ಪ್ರಧಾನಿ ಪಟ್ಟ ಕೊಡುತ್ತಾರೆ.ಒಂದು ದಿನ ಉಲ್ಲಾಕುಳು ಬರುವಾಗ ಈತ ಎದ್ದು ನಿಂತು ಗೌರವ ಕೊಡುವುದಿಲ್ಲ ಆಗ ಕೋಪಗೊಂಡು ಉಲ್ಲಾಕುಳು ಆತನನ್ನು ಮಾಯ ಮಾಡುತ್ತಾರೆ ,ಹೀಗೆ ಮಾಯವಾದ ವ್ಯಕ್ತಿ ದೈವತ್ವ ಪಡೆದು ಮಿತ್ತೂರು ನಾಯರ್ ದೈವವಾಗಿ  ನೆಲೆ ನಿಲ್ಲುತ್ತಾನೆ" ಎಂದು ಭೂತ ಕಟ್ಟುವ ಕಲಾವಿದ ಶೀನ ಪರವರು ನಾಯರ್ ದೈವದ ಕುರಿತಾದ ಪ್ರಚಲಿತ ಐತಿಹ್ಯವನ್ನು ಹೇಳಿದ್ದಾರೆ.copy rights reserved (c) Dr.Laxmi g Prasad 
ಈತನೊಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದು ಪನ್ನೇ ಬೀಡಿನ ಬಲ್ಲಾಳರ ವಂಶಕ್ಕೆ ಸೇರಿದ ಯುದ್ಧವೀರನಾಗಿದ್ದಾನೆ .ಪನ್ನೆ ಬೀಡಿನ ಸೋಮು ಬಲ್ಲಾಲ್ತಿಗೆ ಕೇರಳದ ನಾಯರ್ ಒಂದಿಗೆ ಮದುವೆಯಾಗಿದ್ದು ಅವರಿಗೆ ಕಣ್ಣ ಬಲ್ಲಾಳನೆಂಬ ಮಗ ಹುಟ್ಟುತ್ತಾನೆ.ಆತ ಸುಳ್ಯದ ಪನ್ನೆ ಬೀಡಿನಲ್ಲಿ ನಿಂತು ಆಡಳಿತ ಮಾಡದ ತಿರುಗಾಡುತ್ತಾ ಹೋಗಿ ತಾಡಚ್ಚೆರಿಯ ಮಾದಮಂಗಳದಲ್ಲಿ ನಾಯರ್ ಹುಡುಗಿಯನ್ನು ಮದುವೆಯಾಗುತ್ತಾನೆ .ಅವರಿಗೆ ಚಾತು ಚಾಂದು ಎಂಬ ಮಕ್ಕಳು ಹುಟ್ಟುತ್ತಾರೆ .ಚಂದು  ಮಂಜ್ಞನಡ್ಕಕ್ಕೆ ಬಂದು ಅಲ್ಲಿ ತಂಡ ಕಟ್ಟಿ ಪಾಳೆಗಾರಿಕೆ ಮಾಡುತ್ತಾನೆ.ಮುಂದೆ ಭಗವತಿಯ ಸೇರಿಗೆಗೆ ಸಂದು ಹೋಗುತ್ತಾನೆ .copy rights reserved (c) Dr.Laxmi g Prasad ಚಾತು ಸುಳ್ಯಕ್ಕೆ ಬಂದು ತನ್ನ ಮೂಲದ ಪನ್ನೆ  ಬೀಡಿನ ಗಡಿ ಹಿಡಿದು ಆಡಳಿತ ನಡೆಸುತ್ತಾನೆ.ಈತನನ್ನು ಕೂಡ ಉಳ್ಳಾಕುಳು ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾರೆ ಎಂಬ ಐತಿಹ್ಯ ಕೂಡ ಪ್ರಚಲಿತವಿದೆ.ನಾಯರ್ ದೈವಗಳು ಇಬ್ಬರು ಇದ್ದರೂ ಎರಡು ದೈವಗಳಿಗೆ ಒಂದೇ ಹೆಸರಿನಲ್ಲಿ ಕೋಲ ಕಟ್ಟಿ ಆರಾಧಿಸುತ್ತಾರೆ.ಯುದ್ಧದ ಅಣಕ ದಂತೆ ಇರುವ ಅಡ್ಡಣ ಪೆಟ್ಟು ಈತನ ಅರಾಧನೆಯಲ್ಲಿದೆ .ಇದು ಈತ ಯುದ್ಧ ವೀರ ಎಂಬುದನ್ನು ಸೂಚಿಸುತ್ತದೆ.ಗಂಗ ವಂಶಜರಾದ ಉಲ್ಲಾಕುಳು ಗಳೊಂದಿಗೆ ಈತ ಯುದ್ಧ ಮಾಡಿ ಹತನಾಗುತ್ತಾನೆ ಎಂಬ ಅಭಿಪ್ರಾಯವೂ ಇದೆ .ಇಲ್ಲಿ ಆರಾಧನೆ ಪಡೆಯುವುದು ಚಾತುವೋ ಚಾಂದುವೋ ಎಂಬ ವಿಷಯದಲ್ಲಿ ಜಿಜ್ಞಾಸೆ ಇದೆ.ಡಾ.ಚಂದ್ರ ಶೇಖರ ದಾಮ್ಲೆಯವರು ಚಾತು ಎಂದು ಅಭಿಪ್ರಾಯಿಸಿದ್ದಾರೆ ಡಾ.ವಾಮನ ನಂದಾವರ ಅವರು ಚಂದು ಎಂದು ಹೇಳಿದ್ದಾರೆ .


No comments:

Post a Comment