Friday, 9 October 2015

ಸಾವಿರದೊಂದು ಗುರಿಯೆಡೆಗೆ :243-244 :ತುಳುನಾಡ ದೈವಗಳು :ಗಿರಾವು ಮತ್ತು ಕೊಡಕಲ್ಲಾಯ ಭೂತಗಳು (c)ಡಾ.ಲಕ್ಷ್ಮೀ ಜಿ ಪ್ರಸಾದ


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿಗೆ ಸೇರಿದ ಮುಡಿಪು ಸಮೀಪದ ಕುರ್ನಾಡು ಎಂಬ ಪ್ರದೇಶದಲ್ಲಿ ಆರಾಧಿಸಲ್ಪಡುವ ಅತಿ ಅಪರೂಪದ ಪ್ರಸಿದ್ಧ ದೈವತವಿದು .
ಅಪಸ್ಮಾರ ರೋಗಕ್ಕೆ ಇಲ್ಲಿಗೆ ಕೋಳಿ ಕೊಡುವ ಹರಿಕೆ ತುಂಬಾ ಪ್ರಸಿದ್ಧವಾದುದು .
ಗಿರಾವು ಭೂತ  ಎಂಬುದು ಗ್ರಹ ಭೂತ ಎಂಬುದರ ಅಪಭ್ರಂಶ ರೂಪ ಎಂದು ಅಲ್ಲಿನ ತಂತ್ರಿಗಳಾದ ರಘುನಾಥ ತಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ .
ಇಲ್ಲಿನ ಗ್ರಹ/ಗಿರಾವು ಭೂತ ಮೂಲತ ಸ್ತ್ರೀ ದೈವ .ಇದಕ್ಕೆ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ
ಈ ಪರಿಸರವನ್ನು ಚೌಟರಸರು ಆಳುತ್ತಿದ್ದರು .ಅವರ ಅರಮನೆ ಕೂಡ ಅಲ್ಲಿಯೇ ಸಮೀಪದಲ್ಲಿ ಇತ್ತಂತೆ ,ಅದರ ಕುರುಗಳು ಈಗ ಕೂಡ ಇದೆ ಎಂದು   ಹೇಳುತ್ತಾರೆ. copy rights reserved .(c)ಡಾ.ಲಕ್ಷ್ಮೀ ಜಿ ಪ್ರಸಾದ
ಒಂದು ದಿನ ಚೌಟ ಅರಸರು ಅರಮನೆಯಿಂದ ಹೊರಟು ಅಂಗಳದ ಮೆಟ್ಟಿಲು ಇಳಿದು ಬಾಕಿಮಾರು ಗದ್ದೆಗೆ ಬರುತ್ತಾರೆ .ಆಗ ಅವರಿಗೆ ಕೊಡೆ ಹಿಡಿದ ವ್ಯಕ್ತಿ ಕೊಡೆಯೊಂದಿಗೆಮಾಯ ಆಗುತ್ತಾನೆ ,ಕುದುರೆ ಕೂಡ ಮಾಯವಾಗುತ್ತದೆ .
ಇದೇನು ವಿಚಿತ್ರ ಎಂದು ಬಲಿಮೆಯಲ್ಲಿ ನೋಡಿದಾಗ ಗ್ರಹ ಭೂತ ಬಂದಿದೆ ಅದನ್ನು ಅರಾಧಿಸಬೇಕು ಎಂದು ಕಂಡು ಬಂತು .ಅಲ್ಲಿಂದ ಚೌಟ ಅರಸರು ಅಲ್ಲಿ ಗ್ರಹ/ಗಿರಾವು ಭೂತವನ್ನು ನಂಬಿ ಕೋಲ ಕೊಟ್ಟು ಆರಾಧನೆ ಆರಂಭಿಸಿದರು .
ಅವರ ಬಿಳಿ ಛತ್ರ /ಕೊಡೆ ಮಾಯವಾದ ಆ ಬಾಕಿಮಾರು ಗದ್ದೆಗೆ ಬೊಲ್ಗೊಡೆಮಾರು ಎಂದು ಕರೆಯುತಾರೆ copy rights reserved .(c)ಡಾ.ಲಕ್ಷ್ಮೀ ಜಿ ಪ್ರಸಾದ ಅಲ್ಲಿ ಅರಸರ ಬಿಳಿ ಕೊಡೆ ಮಾಯವಾದ ಕಾರಣ ಆ ಗದ್ದೆಗೆ ಹಾಗೆ ಹೆಸರು ಬಂತು ಎಂದು ರಘುನಾಥ ತಂತ್ರಿಗಳು ಮಾಹಿತಿ ನೀಡಿದ್ದಾರೆ.
ಗಿರಾವು ಎಂದರೆ ಹುಚ್ಚು ಎಂದು ಅರ್ಥ ,ಆದರೆ ಆ ದೈವದ ಆರಾಧನೆಯಲ್ಲಿ ಹುಚ್ಚುತನದ ಅಭಿವ್ಯಕ್ತಿಯಿಲ್ಲ ,
"ಯಾನು ನಟ್ಟುಂಡ ದಾನೆ ಬಲ್ಲಾಳರೆ?ಕುರ್ನಾಡುದ ಭೂತನೇ ನಟ್ಟುದುಂಡೆ "ಎಂಬ ಪಾಡ್ದನದ ಸಾಲುಗಳು ಈಜೋ ಮಂಜೊಟ್ಟಿ ಗೋಣ ಪಾದ್ದನದಲ್ಲಿವೆ ,ಅಲ್ಲಿ ಹೇಳಿದ ಭಿಕ್ಷೆ ಬೇಡಿದ ದೈವ ಯಾವುದು ?ಗಿರಾವು ಭೂತವೇ?ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ ,ಇದಲ್ಲದೆ ಇಲ್ಲಿ ಕೊಡಕಲ್ಲಾಯ ಎಂಬ ದೈವಕ್ಕೆ ಆರಾಧನೆ ಇದೆ
ಇಲ್ಲಿಗೆ ಸಮೀಪದಲ್ಲಿ ಕೊಡಕಲ್ಲು ಎಂಬ ಹೆಸರಿನ ಜಾಗವಿದೆ .ಬಹುಶ ಅಲ್ಲಿಗೆ ಸಂಬಂಧಿಸಿದ ದೈವ ಇದು ಇರಬಹದು ಅಲ್ಲಿ ನೆಲೆ ನಿಂತ ಯಾವುದಾದರೂ ದೈವಕ್ಕೂ ಹಾಗೆ ಕರೆದಿರುವ ಸಾಧ್ಯತೆ ಇದೆ.ಅಥವ ಕೊಡಕಲ್ಲು ಗೆ ಸೇರಿದ ವ್ಯಕ್ತಿ ಯಾವುದಾದರೂ ಕಾರಣಕ್ಕೆ ದೈವತ್ವ ಪಡೆದು ಕೊಡಕಲ್ಲಾಯ ಎಂದು ಆರಧಿಸಲ್ಪಡುತ್ತಿರುವ ಸಾಧ್ಯತೆ ಇದೆ copy rights reserved .(c)ಡಾ.ಲಕ್ಷ್ಮೀ ಜಿ ಪ್ರಸಾದಈ ಬಗೆ ಏನೊಂದೂ ಮಾಹಿತಿ ಲಭ್ಯವಾಗಿಲ್ಲ
ಈ ಬಗ್ಗೆ ಹೆಚ್ಚ್ಚಿನ ಮಾಹಿತಿ ಇದ್ದವರು.ಫೋಟೋ ಇದ್ದವರು  ತಿಳಿಸಬೇಕಾಗಿ ವಿನಂತಿ
ಮಾಹಿತಿ ನೀಡಿದ ಶ್ರೀಯುತ ರಘುರಾಮ ತಂತ್ರಿಗಳಿಗೆ ಧನ್ಯವಾದಗಳು

No comments:

Post a Comment