Sunday, 1 November 2015

253 ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು:ಮೈರೆ /ಕೊರಪ್ಪೋಲು ದೈವ (c)ಡಾ.ಲಕ್ಷ್ಮೀ ಜಿ ಪ್ರಸಾದ

                ಅಗ್ನಿ ಕೊರತಿ ಚಿತ್ರ ಕೃಪೆ :ಸಿಂಚನ ಶ್ಯಾಮ್ (ವಿ ಕೆ ಕಡಬ ಬ್ಲಾಗ್ ಮೂಲಕ ಎರವಲು ಪಡೆದದ್ದು  )
ವೃದ್ಧರಿಂದ ಹಿಡಿದು ಎಳೆಯ ಮಕ್ಕಳವರೆಗೆ ಎಲ್ಲರು ನೋಡಿರುವ ಇಷ್ಟ ಪಡುವ ದೈವ ಕೊರಗ ತನಿಯ .ಎಲ್ಲ್ಲ ಭೂತಗಳು ತನ್ನ ಉಗ್ರ ಅಟ್ಟಹಾಸ ಕುಣಿತಗಳಿಂದ ಜನರ ಮನದಲ್ಲಿ ಭಯ ಬಿತ್ತಿ ನಡುಕ ಉಂಟು ಮಾಡಿದರೆ ಕೊರಗ ತನಿಯ ಹಾಸ್ಯದ ಅಭಿವ್ಯಕ್ತಿಯಿಂದ ಜನರಿಗೆ ಹತ್ತಿರವಾಗಿದ್ದಾನೆ.ಈತ ಬಹಳ ಸಾತ್ವಿಕ ಗುಣದ ದೈವತ.ಮಕ್ಕಳಿಗೆ ಈತ ಬಹಳ ಪ್ರಿಯನಾದವನು .ಮನೆಯಲ್ಲಿ ಯಾವುದಾದರೊಂದು ವಸ್ತು ಕಾಣೆಯಾದರೆ ,ಕಳ್ಳತನವಾದರೆ ಕೊರಗ ತನಿಯನನ್ನು ನೆನೆದು ಆತನಿಗೆ ಹರಿಕೆಯಾಗಿ ಒಂದು ಕುಪ್ಪಿ ಕಳ್ಳು  ಅಥವಾ ಸಾರಾಯಿ ಕೊಡುತ್ತೇನೆ ಎಂದು ಹರಿಕೆ ಹೇಳಿದರೆ ಸಾಕು ಕಳ್ಳತನ ವಾದ ವಸ್ತುಗಳು ಕಾಣೆಯಾದ ವಸ್ತುಗಳು ಪತ್ತೆಯಾಗಿ ಬಿಡುತ್ತವೆ .ದನ ಕಾರುಗಳಿಗೆ ಏನಾದರು ತೊಂದರೆ ಆದರು ಕೊರಗ ತನಿಯನಿಗೆ ಮೊರೆ ಹೋಗುತ್ತಾರೆ ತುಳುವರು.ಎಲ್ಲರ ದನ ಕರು ಬೆಳೆಗಳ ರಕ್ಷಣೆಯ ಕಾರ್ಯವನ್ನು ಕೊರಗತನಿಯ ಭೂತ ಮಾಡುತ್ತದೆ copy rights reserved  (c)ಡಾ.ಲಕ್ಷ್ಮೀ ಜಿ ಪ್ರಸಾದ
ಕೊರಗ ತನಿಯನ ತಾಯಿ ಮೈರೆ ಅನೇಕ ಪ್ರದೇಶಗಳಲ್ಲಿ ಕೊರಗ ತನಿಯ ಣಿಗೆ ಆರಾಧನೆ ಆಗುವಾಗ ಆತನ ತಾಲ್ಯಿ ಮೈರೆ ಗೆ ಕೂಡ ಆರಾಧನೆ ಇರುತ್ತದೆ .ಮೈರೆ ಯನ್ನು ಕೊರಪ್ಪೋಲು ಎಂದು ಕೂಡ ಕರೆಯುತ್ತಾರೆ ,ಅನೇಕರು ಅದರಿಂದಾಗಿ ಮೈರೆ /ಕೊರಪೊಳು ದೈವವನ್ನು ಕೊರತಿ  ಎಂದು ಗೊಂದಲಕ್ಕೆ ಒಳಗಾಗಿದ್ದಾರೆ
ಕೊರತಿ ಮತ್ತು ಕೊರಪ್ಪೋಲು ಅಥವ ಮೈರೆ ಬೇರೆ ಬೇರೆ ದೈವಗಳು .
ತುಳುನಾಡಿನ ಎಲ್ಲೆಡೆಗಳಲ್ಲಿ ಆರಾಧಿಸಲ್ಪಡುವ  ಕೊರಗತನಿಯ ದೈವ ವನ್ನು  ಅಗೇಲು ಹಾಗೂ ಕೋಲ ನೀಡಿ ಆರಾಧಿಸುತ್ತಾರೆ. ಕೊರಗತನಿಯ ಕೊರಗ ಜನಾಂಗದಲ್ಲಿ ಹುಟ್ಟಿ  ಅಸಹಜ ಮರಣವನ್ನಪ್ಪಿದ ಅಸಾಮಾನ್ಯ ವೀರ. ಹಾಳೆಯ ಮುಟ್ಟಾಳೆ ಧರಿಸುವ ಈ ದೈವದ ವೇಷ ವಿಶಿಷ್ಟವಾದುದು.ಇತರ ಭೂತಗಳಂತೆ ಈತನಿಗೆ ದೊಡ್ಡದಾದ ಅಣಿ  ಜಕ್ಕೆಳಣಿಗಳುಇರುವುದಿಲ್ಲ.ಈತನ ಕುಣಿತದಲ್ಲಿ ಉಗ್ರತೆ ಇರುವುದಿಲ್ಲ .ಈತನ ಹುಟ್ಟು ಕೊರಗರ ಕೊಪ್ಪದಲ್ಲಿ ಆಗುತ್ತದೆ

               ಕೊರಗೆರ್ ಪುಟ್ಯೇರ್‍ಯಾ ಓಲು ಪನ್ನಗ (c)ಡಾ.ಲಕ್ಷ್ಮೀ ಜಿ ಪ್ರಸಾದ

ಕಾಂತಣ ಕದ್ರಡು, ಬೆಂದ್ರಣ ಬೆದ್ರಡು

ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .

ಕೊರಗರು ಹುಟ್ಟಿದರು, ಎಲ್ಲಿ ಎಂದು ಹೇಳುವಾಗ

ಕಾಂತಣ ಕದಿರೆಯಲ್ಲಿ, ಬೆಂದಣ ಬಿದರೆಯಲ್ಲಿ

ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . . (c)ಡಾ.ಲಕ್ಷ್ಮೀ ಜಿ ಪ್ರಸಾದ

ಎಂದು ಪ್ರಾರಂಭವಾಗುವ ಕೊರಗ ತನಿಯ ಪಾಡ್ದನವು ಕೊರಗ ಜನಾಂಗ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶವನ್ನು ಅಂದರೆ ಕದ್ರಿ, ಮೂಡಬಿದ್ರೆ, ಜಪ್ಪು, ಮೂಲ್ಕಿ ಮುಂತಾದ ಪ್ರದೇಶಗಳನ್ನು ನಿರ್ದೇಶಿಸುತ್ತದೆ. ಇಂತಹ ಒಂದು ಕೊಪ್ಪದಲ್ಲಿ ಕೊರಗ ಮತ್ತು ಕೊರಪ್ಪೊಳುಗೆ ವುರವನ ಓಡಿ ಎಂಬ ಮಗ ಹುಟ್ಟುತ್ತಾನೆ. ಈತ ಹುಡುಗಾಟ ಬಿಟ್ಟು ದೊಡ್ಡವನಾದಾಗ ಈತನಿಗೊಂದು ಒಪ್ಪುವ ಹೆಣ್ಣನ್ನು ಹುಡುಕುತ್ತಾರೆ. ಅವನ ಸೋದರಮಾವ ತಿರ್ತಮಲೆ ಕೊಪ್ಪದಲ್ಲಿ ಹುಡುಗಿ ಇದ್ದಾಳೆಎನ್ನುತ್ತಾನೆ. ಅಲ್ಲಿ ಕಡ್‍ಮಮಲೆಕೊಪ್ಪದಲ್ಲಿ ಇದ್ದಾಳೆ ಎಂದು ಹೇಳುತ್ತಾರೆ. ಏಳುಮಲೆಯ ಕೊರಗರೆಲ್ಲ ಸೇರಿ ಅಲ್ಲಿಗೆ ಹೋದಾಗ ಕೊರಪಳು ಮೈರೆ ತಂದೆಯ ತಲೆಯ ಹೇನು ಹೆಕ್ಕಿ ಆಯಾಸಗೊಂಡು ಮೇಲೆ ನೋಡುತ್ತಾಳೆ. ಆಗ ಮನೆಗೆ ನೆಂಟರು ಬರುವುದನ್ನು ಕಂಡು ನಮ್ಮ ಮನೆಗೆ ನೆಂಟರು ಬರುವ ಚಂದ ನೋಡುಎನ್ನುತ್ತಾಳೆ. ಆಗ ತಂದೆ ನೀನು ಇಷ್ಟು ಚಿಕ್ಕವಳು, ನಿನಗೆ ಗಂಡಿನ ನೆನಪಾಯಿತೆ? ನಿನ್ನ ಅಂಗೈಯ ಗೆರೆ ಮಾಸಿಲ್ಲ, ಕಂಕುಳಡಿಯ ಹುಟ್ಟುಕಂಪು ಅಡಗಲಿಲ್ಲಎಂದು ಹೇಳುತ್ತಾನೆ. ಆಗ ಅವಳು ಆಯಾಸವಾಗಿ ತಲೆ ಎತ್ತಿ ನೋಡಿದಾಗ ಕಂಡಿತೆಂದು ಹೇಳುತ್ತಾಳೆ ಮೇರೆ. ಒಳಗೆ ಹೋಗು, ಬಾಜಿರ ಉಜ್ಜಿ ಕಸ ಗುಡಿಸಿ, ಅತ್ತರು ಹಾಕು, ನೀರು ತಾ ಮಾಡಿನಡಿಯಲ್ಲಿ ಇಡುಎಂದು ಆದೇಶಿಸಿದ ತಂದೆ, ಮನೆಗೆ ಬಂದವರನ್ನು ಸ್ವಾಗತಿಸಿ, ಮುಟ್ಟಾಳೆಯಲ್ಲಿ ಚಿಗುರು ವೀಳ್ಯ, ಎಲೆ ಅಡಿಕೆ ಹೋಳು, ಗಡಿಗೆಯ ಕಳ್ಳು ಕೊಟ್ಟು ಸತ್ಕರಿಸುತ್ತಾನೆ. ಬಂದ ನೆಂಟರು ಕೊಡುವ ಕೊರಪಳು ಉಂಟೋ ಮಾರುವ ಡೋಲು ಉಂಟೋ?’ ಎಂದು ಕೇಳುತ್ತಾರೆ. ಕೊಡುವ ಹೆಣ್ಣನ್ನು ಕೊಟ್ಟು ಆಗಿದೆ, ಮಾರುವ ಡೋಲನ್ನು ಮಾರಿ ಆಗಿದೆಎಂದು ಮೈರೆ ತಂದೆ ಹೇಳುತ್ತಾನೆ. ಆಗ ಕೊಟ್ಟ ಹೆಣ್ಣಿನ ಬಗ್ಗೆ ಕೇಳುವುದಕ್ಕೆ ನಾವು ಬಂದಿಲ್ಲ. ಮಾರಿದ ಡೋಲಿನ ಕ್ರಯ ಕೇಳಲಾರೆವು. ಇರುವ ಹುಡುಗಿಯನ್ನು ಕೊಡುತ್ತೀರೊ?’ ಎಂದು ನೆಂಟರು ಕೇಳುತ್ತಾರೆ. ಆಗ ಇರುವ ಒಬ್ಬಳೆ ಹುಡುಗಿ ತೀರ ಚಿಕ್ಕವಳು, ಏನೊಂದೂ ಕೆಲಸ ಮಾಡಿ ಅಭ್ಯಾಸವಿಲ್ಲದವಳು, ನಾಲ್ಕು ಮೂಲೆಯ ಕಸವನ್ನು ಒಂದು ಕಡೆ ಮಾಡಲರಿಯದವಳುಎನ್ನುತ್ತಾನೆ ತಂದೆ. (c)ಡಾ.ಲಕ್ಷ್ಮೀ ಜಿ ಪ್ರಸಾದ  ಆಗ ನಮ್ಮ ಕೊಪ್ಪದಲ್ಲಿ ಮೊದಲು ಬಂದ ಕೊರಪ್ಪೊಳು ಇದ್ದಾರೆ. ಹೇಳಿ ಕಲಿಸುತ್ತಾರೆ. ನಮಗೆ ಕಾಲ ತಡವಾಗುತ್ತದೆಎಂದಾಗ ಒಪ್ಪಿದ ತಂದೆ ಮದುವೆಗೆ ದಿನ ನಿಶ್ಚಯ ಮಾಡಿ ಅಡಿಕೆ ವೀಳ್ಯ ಬದಲಿಸಿಕೊಳ್ಳುತ್ತಾರೆ. ಮದುವೆಯ ಸಿದ್ಧತೆ ಆರಂಭವಾಯಿತು. ಹೆಣ್ಣಿನ ಕಡೆಯಲ್ಲಿ ಬಾಳೆ ಕಡಿದು ಅಲಂಕಾರ ಮಾಡಿ ಚಪ್ಪರ ಹೊದಿಸಿದರು. ಎರಡೂ ಕಡೆಯ ನೆಂಟರು ಬಂದು ಸೇರಿದರು. ನಾನಾವಿಧದ ಅಡಿಗೆ ಮಾಡಿಸಿದರು. ಊಟ ಉಪಚಾರ ನಡೆಯಿತು. ಕ್ರೀಡೆ, ಹಾಸ್ಯಗಳು ನಡೆದವು. ಊಟದ ನಂತರ ವುರವನ ಓಡಿಯನ್ನು ಕೊರಪಳು ಮೈರೆಯನ್ನು ಅಲಂಕರಿಸಿ ಸೇಸೆಗೆ ಪ್ರದಕ್ಷಿಣೆ ಮಾಡಿಸಿ, ಧಾರೆಮಣೆಯಲ್ಲಿ ಕುಳ್ಳಿರಿಸಿ ಕೈಧಾರೆ ಪೂರೈಸಿದರು.

       ಮದುವೆಯಾಗಿ ಕೆಲದಿನಗಳ ನಂತರ ಮೈರೆ ಋತುಸ್ನಾನ ಮಾಡಿದಳು. ತನ್ನ ಕೊಪ್ಪಕ್ಕೆ ಬಂದು ಇದೊಂದು ನೀರು  ನಿಂತರೆ (ಗರ್ಭ ಧರಿಸಿದರೆ) ಕಾಂತಾವರ ದೇವರನ್ನು ನೋಡುವೆ, ಹಿಡಿ ಹಣ ಹರಕೆ ಹಾಕುವೆ, ಉಳ್ಳಾಯನನ್ನು ನೋಡಿ ಮೂಲಕ್ಕೆ ನೀರು ಹೊಯ್ಯುವೆಎಂದಳು. ಮೈರೆ ಚೊಚ್ಚಲ ಗರ್ಭ ಧರಿಸಿದಳು. (c)ಡಾ.ಲಕ್ಷ್ಮೀ ಜಿ ಪ್ರಸಾದ  ಏಳು ತಿಂಗಳಾದಾಗ ಬಯಕೆ ಸಮ್ಮಾನ ಮಾಡಿದರು. ಹತ್ತನೇ ತಿಂಗಳಿನಲ್ಲಿ ಬೆನ್ನಿನಲ್ಲಿ ಬ್ರಹ್ಮದೇವರ ಬೇನೆ, ಹೊಟ್ಟೆಯಲ್ಲಿ ಮಗುವಿನ ಬೇನೆ ಬರುತ್ತದೆ. ಕಂಡ ಬೇನೆಯಲ್ಲಿ ನಮ್ಮ ಕೊರಪಳು ಮೈರೆ ಮಗುವನ್ನು ಪಡೆದರೆ ನಾವು ನಂಬಿದ ಕುಲದೈವಗಳಿಗೆ ಕೋಳಿ ಅಟ್ಟು ಔತಣ ಕೊಡುತ್ತೇವೆ ಎಂದು ಹರಿಕೆ ಹೇಳಿದರು. ಗಂಡುಮಗುವಿಗೆ ಜನ್ಮವಿತ್ತಳು ಮೈರೆ. ಹನ್ನೊಂದನೆಯ ದಿನ ಅಮೆ ಮಾಡಿದರು. ಶನಿವಾರ ಹುಟ್ಟಿದ ಮಗುವಿಗೆ ತನಿಯ ಎಂದು ಹೆಸರಿಟ್ಟರು. ಮಗುವನ್ನು ನೋಡುವಾಗ ಈಶ್ವರ ದೇವರ ಶಾಪ ನೆನಪಾಗುತ್ತದೆ ಮೈರೆಗೆ. ಅವಳ ಮದುವೆಯಾದ ಹೊಸತರಲ್ಲಿ ಕಾಡಿಗೆ ಹೋಗಿ ಬಳ್ಳಿ ಹೆರೆಯುತ್ತಿರುವಾಗ ಲೋಕಬಾರಿ ಈಶ್ವರದೇವರು ಬಂದು, ಮೈರೆಯ ಮುಡಿ ನೋಡಿ ಪಾರ್ವತಿಯಂತೆ ಭಾಸವಾಗಿ ಅವಳಲ್ಲಿ ಮೋಹಗೊಳ್ಳುತ್ತಾರೆ. ಅವಳನ್ನು ಮೋಹಿಸಿ ಸೇರಲು ಬಂದ ಈಶ್ವರನನ್ನು ದೇವರೆಂದು ಉಪಚರಿಸಿ, ತಂದೆಯೆಂದು ಗೌರವ ತೋರಿ ದೂರ ಇರಿಸುತ್ತಾಳೆ. ಆಗ ಈಶ್ವರ ದೇವರು ನಿನ್ನ ಹೊಟ್ಟೆಯಲ್ಲಿ ಗಂಡು ಹುಳ ಹುಟ್ಟಲಿ. ಅದು ಹುಟ್ಟಿದ ನಂತರ ನಿನ್ನ ಸಂತಾನ ನಾಶವಾಗಲಿ ಎಂದು ಶಾಪ ಕೊಟ್ಟಿರುತ್ತಾನೆ. ಈಶ್ವರದೇವರ ಶಾಪವೊ ಎಂಬಂತೆ ಕೊರಗ ತನಿಯ ಮೊಲೆ ಹಾಲು ಕುಡಿಯವ ಸಮಯದಲ್ಲಿ ತಾಯಿಗೆ ಅಳಿವಾಗುತ್ತದೆ. (c)ಡಾ.ಲಕ್ಷ್ಮೀ ಜಿ ಪ್ರಸಾದ

ಮೈರೆಯ ಕಥಾನಕದಲ್ಲಿ ದುರಂತವನ್ನು ಕಾಣುತ್ತೇವೆ .ಅವಳದಲ್ಲದ ಕಾರಣಕ್ಕೆ ಅವಳು ಶಿಕ್ಷೆಗೆ ಒಳಗಾಗುತ್ತಾಳೆ
  . ಕೊರಗ ತನಿಯನ ತಂದೆ-ತಾಯಿ ವುರವನ ಓಡಿ ಹಾಗೂ ಮೈರೆಯರು ವಿವಾಹವಾದ ಹೊಸತರಲ್ಲಿಯೇ ಈಶ್ವರ ದೇವರ ಆಗ್ರಹಕ್ಕೆ ತುತ್ತಾಗಬೇಕಾಗುತ್ತದೆ. ಕಾಡಿನಲ್ಲಿ ಬಳ್ಳಿಯನ್ನು ಹೆರೆಯಲು ಹೋದಾಗ ಬೇಟೆಗೆ ಬಂದ ಈಶ್ವರಬಾರಿದೇವರು ಮೈರೆಯ ಮುಡಿಯನ್ನು ನೋಡಿ, ಅವಳು ಪಾರ್ವತಿಯಂತೆ ಭಾಸವಾಗಿ ಅವಳನ್ನು ಮೋಹಿಸುತ್ತಾರೆ. ಅವಳು ನಿರಾಕರಿಸಿದಾಗ ಅವಳಿಗೆ ಗಂಡುಮಗು ಹುಟ್ಟಿದ ನಂತರ ಅವಳ ವಂಶ ನಿರ್ವಂಶವಾಗುವಂತೆ ಶಾಪ ಕೊಡುತ್ತಾರೆ. ಶಾಪ ಕೊಡಲು ಇಲ್ಲಿ ಮೈರೆಯ ತಪ್ಪಾದರೂ ಏನಿತ್ತು? ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡದ್ದು ಅವಳ ತಪ್ಪೇ? ತಾನೊಲಿದವಳು ತನಗೊಲಿಯಲಿಲ್ಲ ಎಂಬ ಕಾರಣಕ್ಕೆ ಮಗು ಹುಟ್ಟಿದ ನಂತರ ವಂಶ ಅಳಿಯುವಂತೆ ಶಾಪ ಕೊಟ್ಟರೆ, ಇದರಿಂದ ಈಶ್ವರದೇವರು ಸಾಧಿಸಿದ್ದಾದರೂ ಏನನ್ನು? ಎಂಬ ಪ್ರಶ್ನೆ ಉಂಟಾಗುತ್ತದೆ. ಹುಟ್ಟಿದ ಮಗು ತಂದೆ-ತಾಯಿಯರನ್ನು, ಬಂಧು ಬಳಗವನ್ನು ಕಳೆದುಕೊಂಡು, ಅನಾಥನಾಗಿ ದಿಕ್ಕಿಲ್ಲದವನಾಗಿ ಬೆಳೆದರೆ, ಮೈರೆಯ ಮೇಲೆ ದ್ವೇಷ ಸಾಧಿಸಿದಂತೆ ಆಗುತ್ತದೆಯೇ? ಇಷ್ಟಕ್ಕೂ ಬಂದಾತ ಈಶ್ವರ ದೇವರೆಯೆ? ಹಿಂದೆ ನಮ್ಮಲ್ಲಿ ಆಳುವ ರಾಜರನ್ನು, ಅವರ ಪರಿವಾರದವರನ್ನು ದೇವರಿಗೆ ಸಮೀಕರಿಸುವ ಪರಿಪಾಠವಿತ್ತು. ಆದ್ದರಿಂದ ಬೇಟೆಗೆ ಬಂದವರು ಆಳುವ ವರ್ಗದವರು ಯಾರೋ ಇದ್ದಿರಬೇಕು. ಮೈರೆ ಆತನನ್ನು ತಿರಸ್ಕರಿಸಿದಾಗ ಅವಮಾನಗೊಂಡು ಹಿಂತಿರುಗಿದವರು ಸ್ವಲ್ಪ ಸಮಯದ ನಂತರ ಸೇನೆಯೊಂದಿಗೆ ಬಂದು ಆಕ್ರಮಣ ಮಾಡಿರಬಹುದು.  (c)ಡಾ.ಲಕ್ಷ್ಮೀ ಜಿ ಪ್ರಸಾದ ಈ ಗಲಭೆಯಲ್ಲಿ ಕೊರಗರೆಲ್ಲ ಎಲ್ಲೆಲ್ಲೋ ಚದುರಿ ಹೋಗಿರಬಹುದು. ಕಷ್ಟಕ್ಕೀಡಾಗಿ ಅಜ್ಞಾತವಾಗಿ ಬದುಕಬೇಕಾಗಿ ಬಂದ ಮೈರೆ ಮತ್ತು ವುರವನ ಓಡಿಗಳಿಗೆ ಸರಿಯಾದ ಆಹಾರ, ಔಷಧಗಳು ಸಿಕ್ಕದೆ ಮರಣವನ್ನಪ್ಪಿರಬಹುದು. ಅಥವಾ ನೇರವಾಗಿ ಆಳುವ ವರ್ಗದ ಅಥವಾ ಮೇಲು ವರ್ಗದವರ ಆಕ್ರಮಣಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು. ಎಳೆಯ ಮಗು ಕೊರಗತನಿಯ ಹೇಗೋ ಬದುಕಿ ಉಳಿದು, ಬೈರಕ್ಕೆಯ ಮಾತೃವಾತ್ಸಲ್ಯದಿಂದ ಬೆಳೆದು ದೊಡ್ಡವನಾಗಿ, ಅಪ್ರತಿಮ ಬಲಶಾಲಿಯೂ ವೀರನೂ ಸಾಹಸಿಯೂ ಆಗಿ ಬೆಳೆಯುತ್ತಾನೆ.
ಇಂತಹ ಬಲಶಾಲಿ ದುರಂತ ನಾಯಕನ ತಾಯಿ ಆದ ಕಾರಣಕ್ಕೆ ಮೈರೆ ಕೂಡ ಆರಾಧನೆ ಪಡೆಯುತ್ತಾಳೆ.
ಕೊರಪ್ಪೋಲು ಸವ್ವಿನ ನಂತರ ಅವಳನ್ನು ಕಾಷ್ಟಕ್ಕೆ ಇಡುವುದರ ಪ್ರತೀಕವಾಗಿ ಕೆಲವೆಡೆ ಕೊರತಿ ಅಗ್ನಿ ಮೇಲೆ ಬೀಳುವ ಪ್ರಸಂಗದ ಅಭಿನಯ ಇರುತ್ತದೆ ಹಾಗಾಗಿ ಮೈರೆ ಯನ್ನು ಅಗ್ನಿ ಕೊರತಿ ಎಂದೂ ಕರೆಯುತ್ತಾರೆ . (c)ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment