Tuesday, 10 November 2015

ಸಾವಿರದೊಂದು ಗುರಿಯೆಡೆಗೆ:256 :ತುಳುನಾಡ ದೈವಗಳು ಅಜ್ಜಿ ಬೆರಂತಲು (c)ಡಾ.ಲಕ್ಷ್ಮೀ ಜಿ ಪ್ರಸಾದ

 

"ಕೆಲಸ ಆಯ್ತು ,ಪಿಎಚ್ ಡಿ ಆಯ್ತು ಇನ್ನು ಭೂತ ಕೋಲ ಪಾಡ್ದನ ಅಂತ ಓಡಾಡುದನ್ನು (ಒದ್ದಾಡುದನ್ನು?! ) ಬಿಟ್ಟು ನೆಮ್ಮದಿಯಿಂದ ಇರು "

ಕೆಲ ವರ್ಷಗಳೇ ಹಿಂದೆ ನನಗೆ ಸರ್ಕಾರಿ ಉದ್ಯೋಗ ದೂರೆತ ಸಮಯದಲ್ಲಿ ಅಮ್ಮ ಹೇಳಿದ ಮಾತಿದು .ತನ್ನ ಮಗಳು ಎಲ್ಲರಂತೆ ಉಂಡು ತಿಂದು ಸುಖವಾಗಿರಲಿ ಎಂದೇ ಎಲ್ಲ ಅಮ್ಮಂದಿರು ಆಶಿಸುತ್ತಾರೆ ಅದಕ್ಕೆ ನನ್ನ ಅಮ್ಮನೂ ಹೊರತಲ್ಲ .ಹಾಗಾಗಿಯೇಅನೇಕ ವರ್ಷಗಳಿಂದ ಊಟ ತಿಂಡಿ ನಿದ್ದೆ ಬಿಟ್ಟು ಮಾಡುವ ನನ್ನ  ಕ್ಷೇತ್ರ ಕಾರ್ಯ ದ ಸಂಶೋಧನೆಯ ಓಡಾಟ,ಒದ್ದಾಟಗಳನ್ನೂ ನೋಡುತ್ತಿದ್ದ ಅಮ್ಮ ನನಗೆ ಹೇಳಿದ ಬುದ್ಧಿ ಮಾತಿದು .
ಆದರೆ ಈ ಓಡಾಟ ಅಲೆದಾಟ ಗಳಲ್ಲಿಯೇ ನನಗೆ ನೆಮ್ಮದಿ ಇದ್ದರೆ ಏನು ಮಾಡಲಿ ?ಅಮ್ಮನಿಗೆ ಏನೆಂದು ಹೇಳಲಿ ?ಸುಮ್ಮನೆ ಅಂದು ಹೂ ಗುಟ್ಟಿದ್ದೆ ಅಷ್ಟೇ !

ಅಂದೂ ಅಷ್ಟೇ ಇಂದೂ ಅಷ್ಟೇ ಅಪರೂಪದ ಭೂತಗಳ ಕುರಿತಾಗಿ ನನ್ನದು ವಿಪರೀತ ಕುತೂಹಲ ಅದಕ್ಕಾಗಿಯೇ ಅಂತ ದೈವಗಳ ಬಗ್ಗೆ ಮಾಹಿತಿ ಹುಡುಕಾಟ ಮಾಡುತ್ತಲೇ ಇರುತ್ತೇನೆ .ಒಂದು ದೈವದ ಹೆಸರು ಸಿಕ್ಕ ನಂತರ ಆ ದೈವದ ಹುಟ್ಟು ಪ್ರಸರಣ ವೇಷ ಭೂಷಣ ಆರಾಧನಾ ಸ್ವರೂಪ ತಿಳಿಯುವವರೆಗೆ ನನ್ನ ಮನಸ್ಸು ಸದಾ ಅದರ ಸುತ್ತಲೇ ಗಿರಕಿ ಹೊಡೆಯುತ್ತಾ ಇರುತ್ತದೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಕೆಲ ತಿಂಗಳ ಮೊದಲು ಅಭಿಷೇಕ್ ಅವರು ಅಜ್ಜಿ ಬೆರಂತಲು ದೈವದ ಬಗ್ಗೆ ಮಾಹಿತಿ ಇದೆಯಾ ಎಂದು ಕೇಳಿದ್ದರು ,ಆ ಹೆಸರನ್ನು ಕೇಳಿದ್ದೆನಾದರೂ ಮಾಹಿತಿ ನನ್ನಲ್ಲಿರಲಿಲ್ಲ

ಅದಕ್ಕಾಗಿ ಹುಡುಕಾಟನಡೆಸುತ್ತಲೇ ಇದ್ದೆ .
ಈ ಬಗ್ಗೆ whatsup ನಲ್ಲಿ ಹಾಕಿದಾಗ ಸ್ನೇಹಿತರೊಬ್ಬರು ನವೀನ ಸುವರ್ಣ ಅವರಿಗೆ ಈ ಬಗ್ಗೆ ತಿಳಿದಿರಬಹುದು ಎಂದು ಹೇಳಿದರು ಆದರೆ ಅವರನ್ನು ನನಗೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ
ಮಂಗಳೂರಿಗೆ ಹೋಗಿದ್ದಾಗ ಪುಸ್ತಕ ಮಳಿಗೆಯಲ್ಲಿ ನವೀನ ಸುವರ್ಣ ಅವರ ಕೃತಿಗಳು ಇವೆಯೇ ಎಂದು ಹುಡುಕಿ ಎರಡು ಮೂರೂ ಪುಸ್ತಕಗಳನ್ನು ಕೊಂಡು ತಂದೆ.
ಅದರಲ್ಲಿ ಅದ್ರಷ್ಟವಶಾತ್ಒಂದು ಪುಸ್ತಕದಲ್ಲಿ ಅಜ್ಜಿ ಬೆರಂತೊಳು ಬಗ್ಗೆ ಮಾಹಿತಿ ಇತ್ತು .ಅದಕ್ಕೆ ನನಗೆ ಸಿಕ್ಕ ಮೌಖಿಕ ಮಾಹಿತಿಗಳನ್ನು ಸೇರಿಸಿ ಅಜ್ಜಿ ಬೆರಂತೊಳು ಬಗ್ಗೆ ಬರೆದಿದ್ದೇನೆ ..copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ


ಅಜ್ಜಿ ಬೆರಂತಲು ಕೋಟೆದ ಬಬ್ಬು ದೈವದ ಅನನ್ಯ ಭಕ್ತೆ .ಅವಳು ಕೋಟೆದ ಬಬ್ಬುವಿನ ತಾಯಿ ಕಚ್ಚೂರ ಮಾಲ್ಡಿ ಯ ಸಮಕಾಲೀನೆ .
ಮುಂಡಾಲ ಜಾತಿಗೆ ಸೇರಿದ ಹೆಣ್ಣು ಮಗಳು .ಮುಂಡಾಲರ ಅನಾಥ ಹೆಣ್ಣು ಮಗು ಮಾಲತಿ ಯನ್ನು ಸಿರಿಕೊಂಡೆ ಉಳ್ಳಾಲ್ತಿ ಮತ್ತು ಕೊಡಂಗೆ ಬನ್ನಾರರು ಸಾಕಿದ್ದು ಅವಳು ಸತ್ಯದ ಬಸಿರನ್ನು ಪಡೆದು ಕೋಟೆದ ಬಬ್ಬುವಿಗೆ ಜನ್ಮ ಕೊಟ್ಟ ವಿಚಾರ ಅಜ್ಜಿ ಬೆರಂತಲು ಗೆ ತಿಳಿದಿತ್ತು .
ಅಂದಿನಿಂದ ಅವಳಿಗೆ ಕೋಟೆದ ಬಬ್ಬುವನ್ನು ನೋಡಬೇಕು ಎಂಬ ಆಸೆ ಇತ್ತು ಆದರೆ ಅರಮನೆಯಲ್ಲಿ ಬೆಳೆಯುತ್ತಿರುವ ಅವನನ್ನು ಸಾಮಾನ್ಯ ಹೆಣ್ಣು ಮಗಳು ಅಜ್ಜಿ ಬೆರಂತಲುಗೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಆದರೆ ಆ ದಿನವನ್ನು ಅವಳು ಕಾಯುತ್ತಲೇ ಇದ್ದಳು .
ಸ್ವಲ್ಪ ಸಮಯದ ನಂತರ ಮಂಗ;ಊರು ಅರಸನ ಬುದ್ದ್ಯಂತನ ಬಾವಿಯ ನೀರ ಸೆಲೆ ಬಿಡಿಸಲೆಂದು ಹೋದ ಬಬ್ಬು ಹಿಂದೆ ಬರಲಿಲ್ಲ ಎಂಬ ಸುದ್ದಿ ಅವಳಿಗೆ ಸಿಗುತ್ತದೆ .
ಆಗ ಅವಳು ಗಾಬರಿಯಾಗಿ ಕೋಟೆಯ ಬಬ್ಬುವನ್ನು ಹುಡುಕಿಕೊಂಡು ಬಡಗು ನಾಡಿನಿಂದ ಮಾಬುಕಳ ಹೊಳೆ ದಾಟಿ ದಕ್ಷನ ಭಾಗಕ್ಕೆ ಬರುತ್ತಾಳೆ.
ದಾರಿಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ದಾರಿ ಕೇಳಿಕೊಂಡು ಪುತ್ರಭಾವಕ್ಕೆ ಬರುತ್ತಾಳೆ ಅಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತರುಣರ ಮೂಲಕ ಕೋಟೆದ ಬಬ್ಬು ದೈವವಾಗಿ ನೆಲೆನಿಂತ ಬಗ್ಗೆ ತಿಳಿಯುತ್ತಾಳೆ.
ಪುತ್ರ ಭಾವದ ಕೋಟೆದ ಬಬ್ಬು ಗುಡಿಗೆ ಬಂದು "ಓ ಎನ್ನ ಮೊಕೆದ ಕೋರ್ದಬ್ಬೋ.ನಿನ್ನನು ನದೊಂದು ನಾಡೊಂದು ಈದೆ ಮುತ್ತ ಬತ್ತೆ ನನ್ನನೋರ ತೂಪಿನ ಭಾಗ್ಯ ಕೊರು"ಎಂದು ಭಕ್ತಿಯಿಂದ ಪ್ರಾರ್ಥಿಸಿದಾಗ ಅವಳ ಮುಗ್ಧ ಭಕ್ತಿಗೆ ಒಲಿದ ಕೋಟೆದ ಬಬ್ಬು ತನ್ನ ನಿಜ ಸ್ವರೂಪವನ್ನು ತೋರಿ ನಿನಗೇನೂ ಬೇಕು ಎಂದು ಕೇಳುತ್ತಾನೆ ಆಗ ನಿನ್ನನ್ನು ನೋಡಿದ ಮೇಲೆ ನನಗಿನ್ನೇನು ಬೇಕು ನಿನ್ನ ಪಾದದಲ್ಲಿ ಸೇವೆ ಮಾಡುವ ಅವಕಾಶ ಕೊಡು ಎಂದು ಕೇಳುತ್ತಾಳೆ .
ಆಗ ಕೋಟೆದ ಬಬ್ಬು ಹಾಗಾದರೆ ನಿನ್ನನ್ನು ಮಾಯ ಮಾಡಿ ದೈವ ಸ್ವರೂಪ ನೀಡಿ ನನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತೇನೆ ನನಗೆ ನೇಮ ಕೋಲ ಆಗುವಾಗೆಲ್ಲ್ಲ ನಿನಗೂ ಒಂದು ಕೊಡಿ ಸೇವೆಯನ್ನು ಕೊಡಿಸುತ್ತೇನೆ ಎಂದು ಅಭಯ ನುಡಿದು ಅವಳನ್ನು maaya ಮಾಡಿ ಅವಳನ್ನು ತನ್ನ ಸೇರಿಗೆಯ ದೈವವನ್ನಾಗಿ ಮಾಡುತ್ತಾನೆ
ಕೋಟೆದ ಬಬ್ಬುವುನ ಆರಾಧನೆ ಇರುವಲ್ಲಿ ಎಲ್ಲ ಕಡೆಯೂ ಅಜ್ಜಿ ಬೆರಂತಲು ಗೂ ಸಾಂಕೇತಿಕವಾಗಿ ಆರಾಧನೆ ಇರುತ್ತದೆ .
ನೇರವಾಗಿ ಕೋಲ ಕೊಡುವ ಪದ್ಧತಿ ಇಲ್ಲದಿದ್ದರೂ ನೇಮ ಕೋಲಕ್ಕೆ ಸಂವಾದಿಯಾಗಿರುವ ದರ್ಶನ ಎಂಬ ರೀತಿಯ ಆರಾಧನೆ ಇರುತ್ತದೆ .
ಆಗ ದರ್ಶನ ಪಾತ್ರಿ ಕೆಂಪು  ಪತ್ತೆ ಸೀರೆ ಸುಣ್ಣದ ಬಿಳಿ ಬೊಟ್ಟು  ಸೀರೆ ಉಟ್ಟು ಕೋಲು ಹಿಡಿದು ಕೆಮ್ಮ್ಮುತ್ತಾ ಅಜ್ಜಿಯಂತೆಯೇ ಅಭಿನಯಿಸುತ್ತಾನೆತೆಂಗಿನ ಕಡ್ಡಿಯ ಹಿಡಿ ಸೂಡಿ ಇಡಿದು ಗುಡಿಸುವ ಅಭಿನಯ ಇರುತ್ತದೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ವಾಸ್ತವದಲ್ಲಿ ಅಜ್ಜಿ ಬೇರಂತಲು ಕೋಟೆದ ಬಬ್ಬುವಿನ ಅನನ್ಯ ಭಕ್ತೆಯಾಗಿದ್ದು ಗುಡಿಯನ್ನು ನಿತ್ಯ ಗುಡಿಸಿಒರಸಿ ಶುದ್ಧ ಗೊಳಿಸುವ ಕಾಯಕ ಮಾಡುತ್ತಿದ್ದ ಹೆಣ್ಣು ಮಗಳು ಕಾಲಾಂತರದಲ್ಲಿ  ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.ಪ್ರಧಾನ ದೈವಗಳ ಅನುಗ್ರಹಕ್ಕೆ ಒಳಗಾದವರು ಅದೇ ದೈವದ ಸಾನ್ನಿಧ್ಯಕ್ಕೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾದ ವಿಚಾರವೇ ಆಗಿದೆ
(ಅಜ್ಜಿ ಬೆರಂತೊಳು ಚಿತ್ರವನ್ನು ಕೊಟ್ಟು ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ವರ ಹೆಸರನ್ನು ನಾನು ನನ್ನ ಮೊಬೈಲ್ ನೋಟ್ ನಲ್ಲಿ ಬರೆದಿಟ್ಟಿದ್ದು ಮೊಬೈಲ್ ಕಳೆದು ಹೋಗಿ ಅವರ ಹೆಸರು ಕಳೆದು ಹೋಗಿದೆ ನನಗೆ ಅವರ ಹೆಸರು ಈಗ ನೆನಪಾಗುತ್ತ ಇಲ್ಲ  ಹೆಸರು ಮರತದ್ದಕ್ಕೆ ಕ್ಷಮೆ ಕೇಳುತ್ತಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ) )No comments:

Post a Comment