Tuesday, 1 December 2015

ಕನಸಿನಲ್ಲೂ ಭೂತಗಳ ಅದ್ಭುತ ಜಗತ್ತು ! -ಡಾ.ಲಕ್ಷ್ಮೀ ಜಿ ಪ್ರಸಾದ

                        

ನನಗೆ ನಿನ್ನೆ ರಾತ್ರಿ ಒಂದು ಕನಸು ಬಿತ್ತು!"ಎಂತ ಇದು ಕನಸು ಕಾಣುವ ವಯಸೇ ಇವರದು ಏನಾಗಿದೆ ಈ ಮೇಡಂ ಗೆ " ಎಂದು ಬೈದುಕೊಳ್ಳಬೇಡಿ ಮತ್ತೆ! .
ನನಗೆ ಎಲ್ಲರಿಗೆ ಬೀಳವಂತ ಕನಸುಗಳು ಬಿದ್ದಿಲ್ಲ
ಸುಮಾರು ಹತ್ತು ವರ್ಷ ಹಿಂದೆ ಕೂಡಾ ನನಗೆ ಇದೇ ಮಾದರಿಯ ಕನಸು ಬಿದ್ದಿತ್ತು ,ಅದು ಮತ್ತೆ ಮತ್ತೆ ಬಿದ್ದು ಕಾಡುತ್ತಾ ಇತ್ತು ಅಲ್ಲಿಗೆ ಹೋಗಿ ನೋಡಿ ಬರುವ ವರೆಗೆ !

ಆಗ ನಾನು ಡಾ.ಸುರೇಶ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಎಂ ಫಿಲ್ ಪದವಿಗಾಗಿ ಸಂಶೋಧನಾ ಪ್ರಬಂಧ ಸಿದ್ಧ ಪಡಿಸುತ್ತಾ ಇದ್ದೆ .
ನನ್ನ ಎಂ ಫಿಲ್ ಸಂಪ್ರದಂಧದ ವಿಷಯ ಈಜೋ ಮಂಜೊಟ್ಟಿ ಗೋಣ ಪಾಡ್ದನ -ಒಂದು ವಿಶ್ಲೇಷಣಾತ್ಮಕ ಅಧ್ಯಯನ .ಗದ್ದೆಯಲ್ಲಿ ಕಂಬಳ ಕೋರಿಯಂದು ಮಾಯವಾದಕೋಣ ಮತ್ತು ಉಳುಮೆ ಮಾಡುವಮೂಲದ ಹುಡುಗ ಬಬ್ಬು ವಿಗೆ ಸಂಬಂಧಿಸಿದ ಕಥಾನಕ ಇದರಲ್ಲಿದೆ .
ಈ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ನಾನು ನಮ್ಮ ತಂದೆ ಮನೆಯ ಕಂಬಳ ಕೋರಿ ಹಿಡಿದು ಬೇರೆ ಬೇರೆ ಕಡೆಗಳಲ್ಲಿ ಕ್ಷೇತ್ರ ಕಾರ್ಯ ಮಾಡಿ ಭೂತ ಕೋಲ ರೆಕಾರ್ಡ್ ಮಾಡುತ್ತಾ ಇದ್ದೆ .

ಆ ಸಮಯದಲ್ಲಿ ನನಗೆ ಮತ್ತೆ ಮತ್ತೆ ಒಂದು ಕನಸು ಬೀಳುತ್ತಾ ಇತ್ತು .ಅಕ್ಕ ಪಕ್ಕದ ಎರಡು ಗದ್ದೆಗಳು ,ಆ ಎರಡೂ ಗದ್ದೆಗಳಲ್ಲಿ ಏಕ ಕಾಲಕ್ಕೆ ಕಂಬಳ ಕೋರಿ ಮಾಡಿ ಒಂದರಲ್ಲಿ ಪೂಕರೆ ಹಾಕಿಇನ್ನೊಂದರಲ್ಲಿ ಬಾಳೆ ಹಾಕಿ ಭೂತ ಕೋಲ ಮಾಡುತ್ತಾ ಇದ್ದರು .ಒಂದು ಗದ್ದೆಯಲ್ಲಿ ಕೊರಗ ತನಿಯ ದೈವಕೆ ಕೋಲ ಆಗುತ್ತಾ ಇರುತ್ತದೆ .ಅದೇ ಸಮಯದಲ್ಲಿ ಇನ್ನೊಂದು ಗದ್ದೆಯಲ್ಲಿ ಕೋಟೆದ ಬಬ್ಬು ಕೋಲ ಆಗುತ್ತಾ ಇತ್ತು .
ಎರಡೂ ಗದ್ದೆಗಳ ಯಜಮಾನ ಒಬ್ಬಾತನೆ ಆಗಿದ್ದು ಅವರು ಸಾಂಪ್ರದಾಯಿಕವಾಗಿ ಜುಟ್ಟು ಬಿಟ್ಟು ಕಿವಿಗೆ ಒಂಟಿ ಧರಿಸಿ ಕೈಗೆ ಎರಡು ಚಿನ್ನದ ಬಳೆ ಹಾಕಿಕೊಂಡು ತೇಜೋಮಯಿಯಾಗಿ ತುಸು ಕಪ್ಪು ಬಣ್ಣದಲ್ಲಿ ಕಾಣಿಸುತ್ತಾ ಇದ್ದರು ,ಶುಭ್ರ ಬಿಳಿ ಕಚ್ಚೆ ಧರಿಸಿದ ಮೂರೂ-ನಾಲ್ಕು ಮೆಟ್ಟಿಲು ಇರುವ ಎತ್ತರದ ಮನೆಯಲ್ಲಿ ಅವರು ನಿಂತು ಕೋಲ ಕಟ್ಟುವ ಕಲಾವಿದರಿಗೆ ಎಣ್ಣೆ ಬೂಲ್ಯ ಕೊಡುತ್ತಿದ್ದ ಅವರ ಚಿತ್ಈಗಲೂ ನನಗೆ ಕಣ್ಣಿಗೆ ಕಟ್ಟುತ್ತದೆ .
ಅಲ್ಲಿಗೆ ಹೋಗುವ ದಾರಿ ಕೂಡ ನನಗೆ ಕನಸಿನಲ್ಲಿ ಕಾಣಿಸಿತ್ತು.
ಕಾಸರಗೋಡು -ಮಂಗಳೂರು ಹೆದ್ದಾರಿಯಲ್ಲಿ ಎಕ್ಕೂರು ಬಳಿ ಒಳಗೆ ಸುಮಾರು 4-5 ಕಿಲೋಮೀಟರು ದೂರದಲ್ಲಿ ಗದ್ದೆಗಳಲ್ಲಿ ಕೋಲ ನಡೆದಂತೆ ನನಗೆ ಕನಸಿನಲ್ಲಿ ಮತ್ತೆ ಮತ್ತೆ ಕಾಣುತ್ತಾ ಇತ್ತು .

ನಾನು ಈ ಬಗ್ಗೆ ಡಾ.ಸುರೇಶ ಪಾಟೀಲ್ ಅವರಲ್ಲಿ ಒಂದಿನ ಹೇಳಿದೆ .ಆಗ ಅವರು ನೀವು ಭೂತಾರಾಧನೆ ಕುರಿತು ಅತೀವ ಆಸಕ್ತರಾಗಿದ್ದುದರಿಂದ ನಿಮಗೆ ಇಂಥಹ ಕನಸು ಬೀಳುತ್ತಾ ಇರಬಹುದು .ಅದು ಏನೇ ಇದ್ದರೂ ನೀವೊಮ್ಮೆ ಕನಸಿನಲ್ಲಿ ಕಾಣಿಸಿದ ಜಾಗಕ್ಕೆ ಏಕೆ ಹೋಗಿ ಬರಬಾರದು?ಒಮ್ಮೆ ಹೋಗಿ ಬನ್ನಿ" ಎಂದುಸಲಹೆ ನೀಡಿದರು .
ನಂತರದ ಬೇಸಗೆ ರಜೆ ಸಿಕ್ಕಾಗ ನಾನು ಕನಸಿನಲ್ಲಿ ಕಾಣುತ್ತಿದ್ದ ಜಾಗವನ್ನು ಹುಡುಕಿಕೊಂಡು ಹೋದೆ .ನಾನು ಪಿಯುಸಿ ಯನ್ನು ಮಂಗಳೂರಿನ ಸರ್ಕಾರಿ ಕಾಲೇಜ್ ನಲ್ಲಿ (ಈಗಿನ ವಿಶ್ವ ವಿದ್ಯಾಲಯ ಕಾಲೇಜ್ ) ಓದಿದ್ದು ,ನನ್ನ ನತಂದೆಮನೆ ಕೋಳ್ಯೂರಿನಿಂದಸುಂಕದ ಕಟ್ಟೆ ಗೆ ಬಂದು ಅಲ್ಲಿಂದ ಬಸ್ ಹಿಡಿದು ಹೊಸಂಗಡಿ ಬಂದು ಮಂಗಳೂರಿಗೆ ದಿನಾಲೂ ಹೋಗಿ ಬರುತ್ತಾ ಇದ್ದೆ ,ಹಾಗಾಗಿ ಎಕ್ಕೂರು ತನಕ ಹೋಗುವುದು ನನಗೇನೂ ಕಷ್ಟದ ವಿಚಾರವಾಗಿರಲಿಲ್ಲ .

ಅಲ್ಲಿಂದ ಒಳಕ್ಕೆ ಸಾಗುವಾಗ ಎದೆ ದಬ ಡಬ ಹೇಳುತ್ತಿತ್ತು.ಕೇವಲ ಕನಸಿನಲ್ಲಿ ಕಂಡ ಜಾಗವನ್ನು ಹುಡುಕುವುದು ಗೊತ್ತಾದರೆ ಯಾರಾದರೂ ನನ್ನ ಮೂರ್ಖತನಕ್ಕೆ ಏನೆಂದಾರು ?ಎಂದು ಅಳುಕು ಕೂಡಾ ಕಾಡುತ್ತಾ ಇತ್ತು .ಕೆ ಕಾಸರಗೋಡು -ಮಂಗಳೂರು ಮುಖ್ಯ ರಸ್ತೆ ಬಿಟ್ಟು ಎಕ್ಕೂರು ನಿಂದ ಒಳಭಾಗಕ್ಕೆ ನಾನು ಒಮ್ಮೆ ಕೂಡ ಹೋಗಿರಲಿಲ್ಲ ಆ ಪರಿಸರವನ್ನು ಕಾಣುವ ಸಾಧ್ಯತೆಯೇ ಇರಲಿಲ್ಲ .

ಆದರೂ ಅಲ್ಲಿಂದ ಒಳಗೆ ಹೋಗುವಾಗ ನನಗೆ ಆ ದಾರಿ ಅಪರಿಚಿತ ಎನಿಸಲಿಲ್ಲ ಯಾಕೆಂದರೆ ಕನಸಿನಲ್ಲಿ ಅನೇಕ ಬಾರಿ ಆ ದಾರಿಯನ್ನು ನೋಡಿದ್ದೇನಲ್ಲ ?ಕನಸಿನಲ್ಲಿ ಕಂಡ ದಾರಿಯಲ್ಲಿ ಸುಮಾರು 4 ಕಿಲೋಮೀಟರು ನಡೆದಾಗದಾರಿಯಲ್ಲಿ ಸೊಪ್ಪು ಹೊತ್ತುಕೊಂಡು ಹೋಗುತ್ತಿದ್ದ ಒಬ್ಬ ಮಹಿಳೆ ಚಿನ್ನಕ್ಕ ಎಂಬಾಕೆ ಸಿಕ್ಕಿದರು .ಅವರಲ್ಲಿ ಇಲ್ಲಿ ಸಮೀಪದಲ್ಲಿ ಎಲ್ಲಾದರೂ ಪೂಕರೆ ಕಂಬಳ ಗದ್ದೆ ಇದೆಯಾ ಕೇಳಿದೆ .ಆಗ ಅವರು ಹೌದು ಇಲ್ಲೇ ಸಮೀಪದಲ್ಲಿ ಎರಡು ಗದ್ದೆಗಳಲ್ಲಿ ಒಂದರಲ್ಲಿ  ಪೂಕರೆ ಹಾಕುತ್ತಾರೆ ಇನ್ನೊಂದರಲ್ಲಿ ಬಾಳೆ ಹಾಕುತ್ತಾರೆ ತೋರಿಸುತ್ತೇನೆ ಬನ್ನಿ ಎಂದು ಕರೆದುಕೊಂಡು ಹೋದರು .
ಹೌದು !ಅಲ್ಲಿಂದ ಎರಡು ಪರ್ಲಾಂಗು ಒಳಗೆ ಕಾಲು ದಾರಿಯಲ್ಲಿ ನಡೆದಾಗ ನಾನು ಕನಸಿನಲ್ಲಿ ಕಂಡ ಜಾಗ ಸಿಕ್ಕಿತು ಅಲ್ಲಿ ಎರಡು ಅಕ್ಕ ಪಕ್ಕದ ಗದ್ದೆಗಳಲ್ಲಿ 12 ಗಣೆಯ ಪೂಕರೆ ಕಂಬಹಾಗೂ ಇನ್ನೊಂದರಲ್ಲಿ ಬಾಳೆ ಸಸಿ  ನೆಟ್ಟಿದ್ದರು ,ನಾನು ಕನಸಿನಲ್ಲಿ ಕಂಡ ಗದ್ದೆಗಳು ಅವೇ ಆಗಿದ್ದವು .ಇದನ್ನು ಇಲ್ಲಿ ಯಾರು ಹಾಕುತ್ತಾರೆ ಎಂದು ಆ ಮಹಿಳೆಯಲ್ಲಿ ಕೇಳಿದೆ ಆಗ ಅವರು ಈ ಗದ್ದೆಗಳ ಒಡೆಯರು ಈಗ ತೀರಿಹೊಗಿದ್ದಾರೆ ಅವರ ಮಕ್ಕಳು ಬಾಂಬೆ ಯಲ್ಲಿ ಎಲ್ಲೋ ಇದ್ದಾರೆ.ವರ್ಷಕೊಮ್ಮೆ ಬಂದು ಶಾಸ್ತ್ರಕೆ ಮಾತ್ರ ಗದ್ದೆ ಉಳುಮೆ ಮಾಡಿ ಕಂಬಳ ಕೋರಿ ಮಾಡಿ ಪೂಕರೆ ಹಾಕಿಸಿ ಹೋಗುತ್ತಾರೆ ಎಂದರು .ಆಗ ನಾನು ಅಲ್ಲಿ ಯಾವ ದೈವಗಳ ಕೋಲ ಇರುತ್ತದೆ ಎಂದು ಕೇಳಿದಾಗ ಅವರು ಒಂದರಲ್ಲಿ ಕೊರಗ ತನಿಯ ಇನ್ನೊಂದು ಗದ್ದೆಯಲ್ಲಿ ಯಾವುದು ಅಂತ ಗೊತ್ತಿಲ್ಲ ಎಂದರು ,ಕೋಟೆದ ಬಬ್ಬು ಇರಬಹುದ ಎಂದು ಕೇಳಿದಾಗ ಇರಬಹುದು ಎಂದು ಹೇಳಿದರು.
 ಆ ಜಾಗದ ಒಡೆಯರು ಹಿಂದಿನ ದಿನವಷ್ಟೇ ಅವರು ಬಂದು ಕಂಬಳ ಕೋರಿ ನಡೆಸಿ ಪೂಕರೆ ಹಾಕಿಸಿ ಕೋಲ ಕೊಟ್ಟು ಅವರ ಊರಿಗೆ ಹಿಂದಿರುಗಿದ್ದರು
ಆ ಜಾಗದ/ಬೀಡಿನ ಒಡೆಯರ ಫೋನ್ ನಂಬರ್ ಗಾಗಿ ಎಷ್ಟು ಯತ್ನಿಸಿದರೂ ಸಿಗಲಿಲ್ಲ .
ಅದಾಗಿ ನಾಲ್ಕು ಐದು ವರ್ಷ ಕಳೆದು ನಾನು ಅಲ್ಲಿಗೆ ಮತ್ತೊಮ್ಮೆ ಹೋಗಲು ಯತ್ನಿಸಿದೆನಾದರೂ ಕೃಷಿ  ದೆ ಎಲ್ಲ ಮಾಯವಾಗಿ ಅಲ್ಲಿ ಕಾಂಕ್ರಿಟ್ ಕಾಡು ತುಂಬಿದ್ದು ನಾನು ಕನಸಿನಲ್ಲಿ ಕಂಡು ನಂತರ ನಿಜಕೂ ನೋಡಿದ್ದ ಗದ್ದೆಗಳು ತೋಟ ಪೂಕರೆ ಕಂಬ ಯಾವುದೂ ಇರಲಿಲ್ಲ ಅಲ್ಲಿದ್ದ ದೈವಗಳಿಗೆ ಎಲ್ಲೋ ಗುಡಿ ಕಟ್ಟಿಸಿದ್ದಾರೆ ಎಂದು ಅಲ್ಲಿ ಯಾರೋ ಹೇಳಿದ್ದರು.
ಇಂದು ನೆನಪಾದಾಗಲೂ ನನಗೆ ಸೋಜಿಗವಾಗುತ್ತದೆ ನಾನು ಎಂದೂ ಕಾಣದ ಜಾಗ ಕನಸಿನಲ್ಲಿ ಹೇಗೆ ಕಾಣಿಸಿತು ಮತ್ತು ಅದರಲ್ಲಿ ಕಂಡ ವಿಚಾರ ನಿಜವಾಗಿ ನಡೆದಿರುವದೆ ಆಗಿತ್ತು ಎಂದು !

 ಇಂದು ಮತ್ತೆ ನೆನಪಾಯಿತು .ಅದು  ಮತ್ತೆನೆ ನಪಾಗಲು ಒಂದು ಬಲವಾದ ಕಾರಣವೂ ಇದೆ .
ನಿನ್ನೆ ರಾತ್ರಿ ನಾನು ಮತ್ತೆ ಒಂದು ಭೂತ ಕೋಲದ ಕನಸನ್ನು ಕಂಡೆ .ಆ ಕೋಲದಲ್ಲಿ ಎರಡು ದೈವಗಳಿಗೆ ಆರಾಧನೆ ನಡೆಯುತ್ತಾ ಇತ್ತು .ಎರಡೂ ದೈವಗಳಿಗೆ ಪಾಡ್ದನ ಹೇಳಿದ್ದರು ಎರಡೂ ದೈವಗಳು ಮೂಲತ ಮನವರಾಗಿದ್ದು ಯಾವುದೊ ಕಾರಣಕ್ಕೆ ದುರಂತವನ್ನಪಿ ದೈವತ್ವ ಪಡೆದವರು ಕನಸಿನಲ್ಲಿ ಕೇಳಿದ ಕಥೆ ಈಗ ನೆನಪಾಗುತ್ತಾ ಇಲ್ಲ
ಒಂದು ದೈವದ ಹೆಸರು ಮಾಡಲಾಯಿ,ಈ ದೈವದ ಹೆಸರು ನನ್ನ ಪಟ್ಟಿಯಲ್ಲಿದೆ .ಇನ್ನೊಂದು ದೈವದ ಹೆಸರು ಗುರುಕುಳ್ ಬಾಗಿಲ್ತಾಯ ಎಂದು ಈ ಹೆಸರನ್ನು ನಾನು ಈ ಹಿಂದೆ ಎಲ್ಲೂ ಕೇಳಿಲ್ಲ
ಅಂದು ಕಂಡ ಕನಸು ನಿಜವಾಗಿದ್ದಂತೆ ನಿನ್ನೆ ಕಂಡ ಕನಸೂ ನಿಜವಿರಬಹುದೇ ?ಅಥವಾ ಸದಾ ದೈವಗಳ ಹುಡುಕಾಟದಲ್ಲಿ ಇರುವ ನನ್ನ ಮನಸು ಸುಮ್ಮನೆ ಕನಸು ಕಂಡಿತ್ತೆ ?
ಭೂತಗಳ ಅದ್ಭುತ ಜಗತ್ತಿನ ಒಳಗಿನ ಪಯಣ ಕನಸಿನಲೂ ಪ್ರತಿಫಲಿಸುತ್ತಿದೆಯೇ ? ಅಥವಾ ದೈವ ಪ್ರೇರಣೆಯೇ ?ಇದು ಭ್ರಮೆಯೇ ?!ನನಗಂತೂ ಅಯೋಮಯವಾಗಿದೆ !
(ಟಿಪ್ಪಣಿ :
ಕಂಬಳ ಗದ್ದೆಯನ್ನು ಉತ್ತು ಬಿತ್ತನೆಗೆ ತಯಾರಿ ಮಾಡುದನ್ನು ಕಂಬಳ ಕೋರಿ ಎನ್ನುತ್ತಾರೆ
ಕಂಬಳ ಕೋರಿ ಯಂದು ಕೆಲವು ಗದ್ದೆಗಳಿಗೆ ಒಂದು 7-13 ಗಣೆಗಳಿಂದ ಅಲಂಕೃತ ಕಂಬವನ್ನು ಹುಗಿದು ಅದರ ಸಮೀಪ ಭೂತ ಕೋಲ ನಡೆಸುತ್ತಾರೆ

ಈ ಅಲಂಕೃತ ಕಂಬಕ್ಕೆ ಪೂ /ಹೂ ಕರೆ ಕಂಬ ಎಂದು ಹೆಸರು
ಕಂಬಳ ಕೊರಿಯನ್ನು ಗದ್ದೆಯ ಮದುವೆ ಎನ್ನುತ್ತಾರೆ
ಗದ್ದೆ ಮದುಮಗಳು ಪೂಕರೆ ಕಂಬ ಮದುಮಗ ಎಂಬ ನಂಬಿಕೆ ಇದೆ)

4 comments:

 1. ನಿಜವಾಗಿಯೂ ಬಹಳ ಕುತೂಹಲಕರವಾಗಿದೆ.. ಆ ದೈವಗಳೇ ನಿಮ್ಮ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿರುವುದಂತೂ ನಿಜ..ನಿಮ್ಮ ಮುಂದಿನ ಬರಹಗಳಿಗಾಗಿ ಕಾಯುತ್ತಿರುತ್ತೇನೆ....

  ReplyDelete
  Replies
  1. ಓದಿ ಅಭಿಪ್ರಾಯಿಸಿ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು

   Delete


 2. ಆಶ್ಚರ್ಯಕರ! ನೀವು ಭೂತಗಳ ಚರಿತ್ರೆಯನ್ನು ಇಷ್ಟು ನಿಷ್ಠೆಯಿಂದ ಕಲೆಹಾಕುತ್ತಿದ್ದೀರಿ. ಹಾಗಾಗಿ ನಿಮಗೆ ಕನಸುಗಳ ಮೂಲಕ ಅವರೇ ಮಾರ್ಗದರ್ಶನ ನೀಡುತ್ತಾ ಇರಬಹುದು.

  ReplyDelete
 3. Really Akka odovaga jummannatte. . daiva devare nimma benna hinde iddare akka

  ReplyDelete