Friday, 15 January 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 289 -ಗಿಡಿ ರಾವಂತ .- (c)ಡಾ.ಲಕ್ಷ್ಮೀ ಜಿ ಪ್ರಸಾದ


 

ಕೋಣ ವ್ಯಾಪಾರಿ ಶಿವಪ್ಪರಿಗೆ ಒಬ್ಬಳು ತಂಗಿ .ಮದುವೆಯಾಗಿ ಒಂದು ವರ್ಷದಲ್ಲಿ ಎರಡು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟು ಮರಣವನ್ನಪ್ಪುತ್ತಾಳೆ.ಅನಾಥರಾದ ಸೊಸೆಯಂದಿರನ್ನು ಮಾವ ಕೊಂಡಾಟದಿಂದ ಸಾಕುತ್ತಾರೆ .
ಒಂದು ದಿನ ಮಾವ ಶಿವಪ್ಪರು ಎತ್ತುಗಳನ್ನು ಮಾರಾಟ ಮಾಡಲು  ಸುಬ್ರಹ್ಮಣ್ಯದ ಕುಲ್ಕುಂದಕ್ಕೆ ಹೊರಡುತ್ತಾರೆ .ಆಗ ಹಠ ಮಾಡಿ ಅವರ ಸೊಸೆಯಂದಿರಾದ ಕಿನ್ಯ ಗೋಣೆಂದಿ ಮತ್ತು ಮಲ್ಲ ಗೋಣೆಂದಿಯರು ಹೊರಡುತ್ತಾರೆ .
ಮಾವ ಎಷ್ಟು ತಿಳಿ ಹೇಳಿದರೂ ಕೇಳುವುದಿಲ್ಲ .copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಸಾವಿರ ಜೊತೆ ಎತ್ತುಗಳನ್ನು ಎಬ್ಬಿ ಕೊಂದು ಕುಲ್ಕುಂದ ಕೆ ಬರುತ್ತಾರೆ .ಅಲ್ಲಿ ಹೆಚ್ಚು ವ್ಯಾಪಾರ ಆಗಲಿಲ್ಲ .ಉಳಿದ ಎತ್ತುಗಳನ್ನು ಹಿಡಿದುಕೊಂಡು ಧರ್ಮಸ್ಥಳಕ್ಕೆ ಬರುತ್ತಾರೆ ಅಲ್ಲಿಂದ ಕಾರ್ಕಳಕ್ಕೆ ಬರುತ್ತಾರೆ 
ಕಾರ್ಕಳ ರೆಂಜಾಳ ಬರಿಕೆಯ ಕಾಂತ ಬೈದ್ಯ ಊರಿಗೆ ಸಿರಿವಂತ .ಅವರು ಕೋಣಗಳನ್ನು ಕೊಳ್ಳಲು ಇವರಿರುವಲ್ಲಿಗೆ ಬರುತ್ತಾನೆ .ಅಲ್ಲಿ ಒಂದು ಒಳ್ಳೆ ಕೋಣವನ್ನು ನೋಡಿ ಆಯ್ಕೆ ಮಾಡುತ್ತಾರೆ .ಆಗ ಶಿವಪ್ಪರು ಇದು ಒಳ್ಳೆ ಜಾತಿಯ ಕೋಣ ಕಂಬಳಕ್ಕೆ ಸೂಕ್ತವಾದುದು ಎಂದು ಹೇಳುತ್ತಾರೆ ಆಗ ನನಗೂ ಅಂತ ಕೋಣ ವೆ ಬೇಕಾಗಿದೆ ಬೆಲೆ ಎಷ್ಟು ಹೇಳಿ ಎಂದು ಹೇಳುತ್ತಾರೆ .
ನಿಮಗೆ ಬೆಲೆ ಹೇಳಲು ಉಂಟೆ ?ನಿಮ್ಮ ಮನೆಹ ಬಾಯಿ ಹುಲ್ಲು ಎಷ್ತರದ್ದು ?ಎಂದು ಹೇಳುತ್ತಾರೆ ಅಗಾ ಹಾಗೆಲ್ಲ ರಾಜಿ ಬೇಡ ,ಎಂದು ಹೇಳಿ ದುಡ್ಡು ಕೊಟ್ಟು ಕಡಿಮೆಯಾದರೆ ಹೇಳಿ ಎಂದು ಕಾಂತ ಬೈದ್ಯ ಹೇಳುತ್ತಾರೆ 
ಈ ಕೋಣವನ್ನು ನನ್ನ ಸಣ್ಣ ಸೊಸೆ ಕಿನ್ಯಗೋಣೆಂದಿ ತುಂಬಾ ಮುದ್ದಿನಿಂದ ಸಾಕಿದ್ದಾಳೆ .copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ  ಹಾಗಾಗಿಅವಳೇಬಳ್ಳಿಬಿಡಿಸಿಕೊಡಲಿಎಂದುಹೇಳಿಅವಳಲ್ಲಿಹಗ್ಗಬಿಚ್ಚಿಕೊಡಲುಸೊಸೆಗೆಹೇಳುತ್ತಾರೆ .
ಆಗ ಆಗ ಅವಳು ಆ ಕೋಣದ ತಲೆ ಅಕ್ಕರೆಯಿಂದ ಕೈಇಟ್ಟುನೇವರಿಸಿ "ಮಾವಇದೊಂದುಕೋಣಕರುವನ್ನುಮಾರಬೇಡಿಇದುನನಗೆಬೇಕುಎಂದುಹೆಇಹಠಹಿಡಿಯುತ್ತಾಳೆ .
ಆಗ ಹೆಣ್ಣೇ ಹಾಗೆ ಹೇಳಬಾರದು ನಾವು ವ್ಯಾಪಾರಕ್ಕೆ ಬಂದದ್ದಲ್ಲವ ?ಎಂದು ಬುದ್ದಿ ಹೇಳಿ ಕೋಣ ದ ಬಳ್ಳಿ ಬಿಡಿಸಿ ಕಾಂತ ಬೈದ್ಯರಿಗೆ ಕೊಡುತ್ತಾರೆ .ಕಾಂತ ಬೈದ್ಯ ಕೋಣ ತೆಗೆದುಕೊಂಡು ಹೋಗುವಾಗ ಇವಳು ದುಃಖಿಸಿ ದುಃ ಖಿಸಿ ಅಳುತ್ತಾಳೆ .
ಅಲ್ಲಿ ಸುಮಾರು ಎರಡು ತಿಂಗಳು ವ್ಯಾಪಾರ ನಡೆಸಿ ಶಿವಪ್ಪ ಊರಿಗೆ ಹೋಗುತ್ತಾರೆ ಆಗ ಒಂದು ತಪ್ಪು ನಡೆದು ಹೋಯಿತು .ಬೆಳಗ್ಗಿನ ಜಾವ ಹೊರಡುವಾಗ ಕಿನ್ಯ ಗೋಣೆಂದಿ ನಿದ್ರೆ ಮಾಡುತ್ತಾ ಇದ್ದಳು ಅವಳನ್ನು ಮರೆತು ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ .
ಇತ್ತ ಕಿನ್ಯ ಗೋಣೆಂದಿಗೆ ಎಚ್ಚರಾಗುವಾಗ ಅಲ್ಲಿ ಯಾರೂ ಇರುವುದಿಲ್ಲ .ಅವಳು ಜೋರಾಗಿ ಅಳುತ್ತಾಳೆ .ಅವಳ ಅಳು ಮುರ್ತೆಗೆ ಬಂದ ಕಾಂತ ಬೈದ್ಯರಿ ಗೆ ಕೇಳಿಸುತ್ತದೆ .ಅವರು ಅವಳ ಹತ್ತಿರ ಬಂದು ವಿಚಾರಿಸಿದಾಗ ಅವಳು ತಾನು ಮಾವನೊಂದಿಗೆ ಪೈರಿಗೆ/ವ್ಯಾಪಾರಕ್ಕೆ ಬಂದಿದ್ದೆ ಈಗ ಮಾವ ಯಾರೂ ಕಾಣಿಸುತ್ತಾ ಇಲ್ಲ ಎಂದು ಹೇಳುತ್ತಾಳೆ .
ಆಗ ಅವರು ಅಳಬೇಡ ನನ್ನ ಮನೆಗೆ ಬಾ ಎಂದು ಕರೆದುಕೊಂಡು ಹೋಗುತ್ತಾರೆ .ಅಲ್ಲಿ ಅವಳು ಪ್ರೀತಿಯ್ನ್ಸ ಸಾಕಿದ ಕೋಣ ನನ್ನು ನೋಡಿ ಸಂತೋಷ ಪಡುತ್ತಾಳೆ ಅವಳು ..copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಒಂದು ವರ್ಷ ಕಳೆಯುತ್ತದೆ .
ಕಿನ್ಯ ಗೋಣೆಂದಿ ದೊಡ್ಡವಳಾಗುತ್ತಾಳೆ .ಆಗ ಮನ್ಯಲ್ಲಿರುವ ನಾಲ್ಕು ಸೊಸೆಯಂದಿರನ್ನು ಕಾಂತ ಬೈದ್ಯ ಮದುವೆ ಮಾಡಿಕೊಡುತ್ತಾರೆ .ಆಗ ಎಲ್ಲರೂ ಕಾಂತ ಬೈದ್ಯನಿಗೆ ಮದುವೆ ಆಗು ಎಂದು ಒತ್ತಾಯಿಸುತ್ತಾರೆ .ಆದರೆ ಕಾಂತ ಬೈದ್ಯ ಮದುವೆಯಾಗಲು ಆಸಕ್ತಿ ತೋರುವುದಿಲ್ಲ 
ಆಟಿ ತಿಂಗಳು ಬರುತ್ತದೆ ಬೆಳಗ್ಗೆ ಆರಂಭವಾದ ಮಳೆ ಸಂಜೆ ಆದರೂ ನಿಲ್ಲುವುದಿಲ್ಲ ಒಂದು ಕ್ಷಣ ಕೂಡ ಹನಿ ಕಡಿಯುದಿಲ್ಲ.
ರಾತ್ರಿ ಮಿಂಚು ಮಿಂಚುತ್ತ ಇರುತ್ತದೆ ಮಿನ್ವ್ಹಿನ ಬೆಳಕಿನಲ್ಲಿ ಅವರು ಕಿನ್ಯ ಗೋಣೆಂದಿಯನ್ನೂ ನೋಡುತ್ತಾರೆ .ಆಗ ಅವರ ಮನಸಿನ ಹಿಡಿತ ತಪ್ಪಿ ಅವಳ ಸಮೆಪಕ್ಕೆ  ಬಂದು ಕೆಮ್ಮುತ್ತಾರೆ .
ಎಚ್ಚರಾದ  ಕಿನ್ಯ ಗೋಣೆಂದಿಗೆ ಗಾಬರಿಯಾಗುತ್ತದೆ ಯಾರು ಎಂದು ಕೇಳಿದಾಗ ನಾನು ಎಂದು ಬೈದ್ಯರು ಹೇಳುತ್ತಾರೆ .
ಆಗ ಅವಳು ಮಾವ ನಿಮ್ಮನ್ನು ನಾನು ಮಾವ ಎಂದು ಆವತ್ತೇ ಕರೆದೆ ನೀವು ಸೊಸೆಯಂತೆ ನನ್ನನ್ನು ಸಾಕಿದ್ದೀರಿ .ಈಗ ನೀವು ಹೀಗೆ ಮಾಡುವುದೇ ? ಹೊಲ ಮೇದರೆ ಬೆಳೆ ಹೇಗೆ ಉಳಿದೀತು ಎಂದು ಕೇಳುತ್ತಾಳೆ .
ಆಗ ತಮ್ಮ ತಪ್ಪಿನ ಅರಿವಾಗಿ ಅಲ್ಲಿಂದ ಎದ್ದು ಹೋಗುತ್ತಾರೆ .
ಕುಟುಂಬದವರನ್ನು ಕರೆದು ತನಗೊಂದು ಹೆಣ್ಣು ನೋಡುವಂತೆ ಹೇಳಿ ಕೋಂಟು ಜಾಲ ಬರ್ಕೆಯ ದೇಜಣ್ಣರ ಮಗಳು ಸೇಸಿಯನ್ನು ಮದುವೆಯಾಗುತ್ತಾರೆ.
ಕಿನ್ಯ ಗೋಣೆಂದಿಗೆ  ಅವಳು ನಾನಾ ವಿಧವಾಗಿ ಕಿರುಕುಳ ಕೊಡುತಾಳೆ .ಸ್ವಲ್ಪ ಸಮಯ ಕಳೆಯಲು ಸೆಸಿ ಗರ್ಭಿಣಿ ಆಗುತಾಳೆ ಏಳನೇ ತಿಂಗಳು ಬಯಕೆ /ಸೀಮಂತ ಇಡುತ್ತಾರೆ .ಎಲ್ಲರೂ ಬರುತ್ತಾರೆ ಆದರೆ ಸೇಸಿಗೆ ದಿನಕ್ಕೆ  ಮೊದಲೇ  ಹೆರಿಗೆಯಾಗುತ್ತದೆ.
ಹಾಗಾಗಿ ತಂದೆ ಮನೆಗೆ ಬಾಣಂತನ ಕ್ಕೆ ಹೋಗಲು ಆಗುವುದಿಲ್ಲ 
ಹದಿನಾರನೇ ದಿನ ಶುದ್ಧ ಸ್ನಾನವಾಗಿ ಮಗುವಿಗೆ ಹೆಸರಿತ್ತು ತೊಟ್ಟಿಲಿಗೆ ಹಾಕುತ್ತಾರೆ ಮರುದಿನ ತಂದೆ ಮನೆಗೆ ಹೋಗಲು ಸಿದ್ದವಾಗುತ್ತಾರೆ ..copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಆಗ ತೊಟ್ಟಿಲು ಮಗುವನು ಹೊರಲು ಯಾರನ್ನು ಕರೆಯುವುದು ಎಂದು ಕಾಂತ ಬೈದ್ಯ ಕೇಳಲು ಯಾರನ್ನು ಯಾಕೆ ಕರೆಯುವುದು ?ಮನೆಯಲ್ಲಿಯೇ ಬಿತ್ತಿ ಊಟ ಮಾಡಿಕೊಂಡು ಇದ್ದಾಳಲ್ಲ ಕಿನ್ಯ ಗೋಣೆಂದಿ.ಅವಳೇ ತೊಟ್ಟಿಲು ಹೊತ್ತುಕೊಂಡು ಬರಲಿ ಎಂದು ಹೇಳುತ್ತಾಳೆ .
ಇದನ್ನು ಕೇಳಿಸಿಕೊಂಡ ಅವಳು ಓ ದೇವರೇ ನಾನು ಗತಿ ಇಲ್ಲದವಳಾದೆನನ್ನನು ಹೇಳುವವರು ಕೇಳುವವರು ಯಾರೂ ಇಲ್ಲವಾಯಿತೇ ?ಓ ಪಂಜುರ್ಲಿ ದೈವವೇ ನಿನಗೂ ಇದು ಸರಿ ಕಾಣುತ್ತದೆಯೇ ಎಂದು ದುಃಖಿಸಿ ಅಳುತ್ತಾಳೆ 
ಮರುದಿನ ಸೆಸಿ ಸ್ನಾನ ಮಾಡುತ್ತಾಳೆ ಮಗುವನ್ನು ಸ್ನಾನ ಮಾಡಿಸಿ ತಂದೆ ಮನೆಗೆ ಹೊರಡುತ್ತಾರೆ .ತೊಟ್ಟಿಲು ಮಗುವನ್ನು
ಕಿನ್ಯ ಗೋಣೆಂದಿಯ ತಲೆಗೆ ಇಡುತ್ತಾರೆ .ಮುಂದೆ ಅವಳು ಅವಳ ಹಿಂದಿನಿಂದ ಸೆಸಿ ಅವಳ ಹಿಂದೆ ಕಾಂತ ಬೈದ್ಯ ಬರುತ್ತಾರೆ ಬಾಕಿಮಾರ ಗದ್ದೆ ಕಳೆಯಿತು ಕಟ್ಟಪುಣಿ/ಬದುವಿನಲ್ಲಿ ಹೋಗುವಾಗ ಗೆನ್ದಾಳಿ ತೆಂಗಿನ ಮರದ ಅಡಿಗೆ ಬರುತ್ತಾರೆ .ಆಗ ಒಂದು ಕೆಂಪು ಹದ್ದು ಬಂದು ಮಗುವನ್ನು ಕಿತ್ತುಕೊಂಡು ಹಾರಿ ಹೋಯಿತು .ಮಗುವನ್ನು ಮಾಯ ಮಾಡಿತು
ಸೆಸಿ ಅರಿಯೋ ಮುರಿಯೋ ಅಳುತ್ತಾಳೆ ಕಿನ್ಯ ಗೋಣೆಂದಿಗೆ ಹೊಡೆಯುತ್ತಾಳೆ .copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಮರುದಿನ ಬಲ್ಯಾಯರ ಬಾಲಿ ಹೋಗಿ ನಿಮಿತ್ತ ಕೇಳಿದಾಗ ಹದ್ದಿನ ರೂಪದಲ್ಲಿ ಬಂದದ್ದು ದೈವ ಪಂಜುರ್ಲಿ ಅದಕ್ಕೆ ಸ್ಥಾನ ಕಟ್ಟಿಸಿ ಆರಾಧನೆ ಮಾಡಿ ಎಂದು ಹೇಳುತ್ತಾರೆ .ಅಂತೆಯೇ ಅವರು ಸ್ಥಾನ ಕಟ್ಟಿ ಆರಾಧಿಸುತ್ತಾರೆ .
"ಕಾರ್ಕಳ ನಡಿಬೆಟ್ಟು ಪೆರ್ಣಂಕಿಲ ಕಟಪಾಡಿ ಮಲ್ಪೆ ಗಳಲ್ಲಿ ಈ ದೈವಕ್ಕೆ ಆರಾಧನೆ ಇದೆ ಈ ದೈವಕ್ಕೆ ಕಟ್ಟುವಾಗ ಮುಖಕೆ ರಣ ಹದ್ದಿನ ಕೊಕ್ಕಿನ ಆಕೃತಿಯನ್ನು ಜೋಡಿಸುತ್ತಾರೆ .ಅಣಿ ಕಟ್ಟಿದ ನಂತರ ದೈವ ಮಾಧ್ಯಮರು  ಕೃತಕವಾಗಿ ನಿರ್ಮಿಸಿದ ಒಂದು ಮರದ ಬೊಡ್ದೆಯನ್ನು ಏರಿ ಕುಳಿತುಕೊಳ್ಳುತ್ತಾರೆ .ಮೂಲದಲ್ಲಿ ದೈವವು ಮಗುವನ್ನು ಮಾಯ ಮಾಡಿದ್ದರ ಪ್ರತೀಕವಾಗಿ ಈ ದೈವವು ಸುತ್ತು ಬಲಿ ಮುಕ್ತಾಯದ ಹಂತದಲ್ಲಿ ಸೆರಗೊಡ್ಡಿ ನಿಂತ ಕುಟುಂಬದ ತಾಯಂದಿರಿಗೆ ಹಿಂಗಾರ ಕೊಡುತ್ತದೆ "ಎಂದು ಡಾ.ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ 
ಅಲೌಕಿಕ ನೆಕೆಯನ್ನು ಬಿಟ್ಟು ವಾಸ್ತವಿಕವಾಗಿ ಆಲೋಚಿಸಿದಾಗ ಮಗು ವಿನ ಮರಣ ಮತ್ತು ದೈವ ಕರನಿಕದ ಕಥಾನಕ ತಾಲೂಕು ಹಾಕಿದ್ದು ಗೋಚರವಾಗುತ್ತದೆ .ಮಗು ಸಮಯಕ್ಕೆ ಮೊದಲೇ ಹುಟ್ಟಿರುತ್ತದೆ ಹಾಗಾಗಿ ಮರಣವನ್ನಪಿರಬಹುದು 
ಅದಕ್ಕೆ ದೈವದಕಾರಣಿಕದ ಕಥೆ ಸೇರಿಕೊಂಡಿರುವ ಸಾಧ್ಯತೆ ಇದೆ.  ತುಮಕೂರು ಬಳಿಯ ಗ್ರಾಮ ವೊಂದರ ಅಧಿದೈವ ಭೂತಪ್ಪ ನ ಕುರಿತಾಗಿಯೂ ಇದೇ ಕಥೆಯನ್ನು ಹೋಲುವ ಕಥನವಿದೆ
.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಈ ಬಗೆ ಹೆಚ್ಚಿನ ಅಧ್ಯಯನನಡೆದರೆ ಹೆಚ್ಚಿನ ಮಾಹಿತಿ ದೊರೆಯಬಹುದು 
ಆಧಾರ ಗ್ರಂಥಗಳು 
1 ಮೈಮೆ :ಚಂದ್ರಹಾಸ ಕಣಂತೂರು 
2 ದೈವ ನೆಲೆ :ಡಾ.ಬನ್ನಂಜೆ ಬಾಬು ಅಮೀನ್ 
3 ಪಾದ್ದನಗಳಲ್ಲಿ ತುಳು ಸಂಸ್ಕೃತಿಯ ಅಭಿವ್ಯಕ್ತಿ (ಪಿಎಚ್ ಡಿ ಸಂಶೋಧನಾ ಮಹಾ ಪ್ರಬಂಧ )ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment