Friday 15 January 2016

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು :290-291 ಮಾಯೊಲು ಮತ್ತು ಮಾಯೊಲಜ್ಜಿ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂಗಳೂರು ಬಜಪೆ ,ಅದ್ಯಪಾಡಿ ಸುತ್ತ ಮುತ್ತ ಮಾಯೊಲು ಮತ್ತು ಮಾಯೊಲಜ್ಜಿ ಎಂಬ ಎರಡು ದೈವಗಳಿಗೆ ಆರಾಧನೆ ಇದೆ
ಎರಡೂ ಶಕ್ತಿಗಳನ್ನು ಒಟ್ಟಾಗಿ ಮಾಯೊಲು ಎಂದು ಕರೆಯುತ್ತಾರೆ .
ಇವರಲ್ಲಿ ಒಂದು ಗಂಡು ದೈವ  ಇನ್ನೊಂದು ಹೆಣ್ಣು ದೈವ ವೃದ್ಧರ ರೂಪದ ವೇಷ ಭೂಷಣ ಇರುತ್ತದೆ ಇವರು ಕೆಮ್ಮಿಕೊಂಡು .ಹಾಸ್ಯದ ಅಭಿವ್ಯಕ್ತಿಯನ್ನು ಮಾಡುತ್ತಾರೆ .ಈ ದೈವಗಳ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ .
ಪ್ರಚಲಿತ ಐತಿಹ್ಯದ ಪ್ರಕಾರ ಇಬ್ಬರು ಒಂದು ಗಂಡು ಇನ್ನೊಂದು ಹೆಣ್ಣು ಶಕ್ತಿಗಳು ಬಜಪೆ ಬೈಲ ಬೀಡಿಗೆ ಬರುತ್ತಾರೆ .ಅಲ್ಲಿ ಮೀನು ಹಿಡಿಯುತ್ತಾರೆ .ಆಗ ಅಲ್ಲಿ ಇದ್ದ ಮುಸ್ಲಿಮರು ಇವರನ್ನು ನೋಡಿ ಹಾಸ್ಯ ಮಾಡಿ ನಗಾಡುತ್ತಾರೆ .ಆಗ ಅವರು ಮಾಯವಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಬೇಕಾಗಿ ವಿನಂತಿ

No comments:

Post a Comment