Saturday, 16 January 2016

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು :293-294 ಮಾಯಂದಾಲ್ ,ದುಗ್ಗಮೆ ಮತ್ತು ತನ್ನಿ ಮಾನಿಗ (c)ಡಾ.ಲಕ್ಷ್ಮೀ ಜಿ ಪ್ರಸಾದ

ಸೋದರ ಸೊಸೆ ಮಾಣಿಬಾಲೆಯನ್ನು ಸೋದರ ಮಾವನಾದ ಆಲಿಬಾಲಿ ನಾಯಕನು ರಜಪತಿ ಬೈದ್ಯನ ಮಗನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಕೆಲವು ವರ್ಷ ಕಳೆದರೂ ಸಂತಾನ ಭಾಗ್ಯ ಒದಗದಿರಲು ಬೆರ್ಮರಿಗೆ ಹರಕೆ ಹೇಳಿದ ಮೇರೆಗೆ ಆಕೆ ಗರ್ಭವತಿಯಾಗುತ್ತಾಳೆ. ಸಂಭ್ರಮದ ಸೀಮಂತ ನಡೆದ ಬಳಿಕ ಆಕೆ ಹೆರಿಗೆಗಾಗಿ ತನ್ನ ಸೋದರ ಮಾವನಾದ ಆಲಿಬಾಲಿ ನಾಯಕನ ಮನೆಗೆ ಬರುತ್ತಾಳೆ. ನವ ಮಾಸ ತುಂಬಿದ ಮಾಣಿಬಾಲೆ ಗಂಡು ಮಗುವಿಗೆ ಜನ್ಮ ನೀಡು‍ತ್ತಾಳೆ. ಅದೇ  ಮಾಗಣೆಗೆ  ಸೇರಿದ  ಗುಡ್ಡೆಯ  ಮೂಡಂದಾಲ  ಪಟ್ಟದ  ಬೀಡಿನ  ಪಾಂಗೊಲ್ಲ  ಬನ್ನಾರ  ಎಂಬ  ಜೈನ  ಜಮೀನ್ದಾರನು  ಜುಮಾದಿ  ಭೂತವನ್ನು   ನಂಬಿಕೊಂಡು  ಅದಕ್ಕೆ  ಗುಡಿ  ನಿರ್ಮಿಸಿ  ಕೋಲಕ್ಕೆ  ದಿನ  ನಿಗದಿಪಡಿಸುತ್ತಾನೆ.  
ಊರಿನ  ಜನರಿಂದ  ಕೋಲಕ್ಕಾಗಿ ಸಿರಿ  ಸೀಯಾಳ ಕೊಡಲು ಆಲಿ ಬಾಲಿ ನಾಯಕನಿಗೆ ಹೇಳಿ ಕಳುಹಿಸುತ್ತಾನೆ. ಆಲಿ ಬಾಲಿ ನಾಯಕ ಕೊಡುವುದಿಲ್ಲ ದಕ್ಕೆ ದೈವ ಅವನ ಸೊಸೆ ಮತ್ತು ಮಗುವನ್ನು ಮಾಯ ಮಾಡುತ್ತದೆ.ಮಾಯ ವಾದ ಅವರು ದೈವಗಳಗಿ ನೆಲೆ ನಿಲ್ಲುತ್ತಾರೆ 

ಜುಮಾದಿ ಸೇರಿಗೆಗೆ ಸೇರಿದ ಮಾಯಂದಾಲ್ ಅಲ್ಲಿಂದ ಪಾಂಗೊಲ್ಲ ಬನ್ನಾಯರ ಮನೆಗೆ ಬರುತ್ತಾಳೆ ಅಲ್ಲಿ ಅವರ ಸೋದರ ಸೊಸೆ ದುಗ್ಗಮೆ ಇರುತ್ತಾಳೆ 
ಅವಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾಳೆ .ಅಲ್ಲಿ ಮಾಣಿ ಬಾಳೆ ಬರುವುದನ್ನು ತನ್ನಿ ಮಾನಿಗ ಎಂಬ ಕೆಲಸದ ಹೆಣ್ಣು ನೋಡುತ್ತಾಳೆ ."ನೀನು ಇಲ್ಲಿ ಏನು ಮಾಡುತ್ತಿದ್ದಿ ಅಲ್ಲಿ ನಿನ್ನ ಮಾವ ಆಲಿ ಬಾಲಿ ನಾಯಕ ನಿನ್ನನ್ನು ಹುಡುಕುತ್ತಾ ಇದ್ದಾರೆ" ಎಂದು ಹೇಳುತ್ತಾಳೆ .ಇವಳು ತನ್ನನ್ನು ನೋಡಿರುವುದನ್ನು ಬೇರೆಯವರಿಗೆ ಹೇಳುವುದು ಬೇಡ ಎಂದು ಮಾಯಂದಾಲ್ ತನ್ನಿ ಮಾನಿಗ ಳನ್ನು ಕೂಡ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸುತ್ತಾಳ
ಇಲ್ಲಿನ ತನ್ನಿ ಮಾನಿಗ ಮುಗೆರೇರ ತಂಗಿಯಲ್ಲ ಇದು ಬೇರೆಯೇ ದೈವ

ತಮಗೆ ಸಲ್ಲ ಬೇಕಾದ ಸೇವೆಯನ್ನು ಸಲ್ಲಿಸದೆ  ಇದ್ದಾಗ ದೈವಗಳು ಕೊಪಿಸ್ಕೊಂದು ಶಿಕ್ಷಿಸುವ ವಿಚಾರ ಅನೇಕ ಪಾದ್ದನಗಳಲ್ಲಿದೆ .ಇಲ್ಲಿ ಕೂಡ ಆಲಿ ಬಾಲಿ ನಾಯಕನ  ಮೇಲಿನ ಕೋಪದಿಂದ ಅವನನ್ನು ಶಿಕ್ಷಿಸುವ ಸಲುವಾಗಿ ಅವನ ಸೋದರ ಸೊಸೆಯನ್ನು ಮಗುವನ್ನು ದೈವ ಮಾಡಿರಬಹುದು .ಅದಕ್ಕೆ ಪ್ರತೀಕಾರವಾಗಿ ಪಾಂಗೊಲ್ಲ ಬನ್ನಾಯನ ಸೊಸೆಗೆ ತೊಂದರೆ ಕೊಟ್ಟಿರಬಹುದುದೆ 
ವಾಸ್ತವಿಕತೆಯ ನೆಲೆ ಗಟ್ಟಿ ನಲ್ಲಿ ಯೋಚಿಸಿದಾಗ ಬಾಣಂತಿ ಮಗು ಆಕಸ್ಮಿಕವಾಗಿ ಮರವನ್ನ್ನಪ್ಪಿರಬಹುದು ಅದಕ್ಕೆ ದೈವದ ಕಾರಣಿಕದ ಕಥಾನಕ ಸೇರಿ, ಅವಳ ಮಗು ಮತ್ತು ಅವಳು ಕೂಡ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು.ಅಂತೆಯೇ ದುಗ್ಗಮೆ ಮತ್ತು ತನ್ನಿಮಾನಿಗ ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ
ಮಾಯಂದಾಲ್ ದೈವಕ್ಕೆ ಸ್ತ್ರೀ ಸಹಜ ವೇಷದಲ್ಲಿ ಭೂತ ಕಟ್ಟಿ ಕೋಲ ನೀಡುತ್ತಾರೆ .ತಾಯಿಯೊಂದಿಗೆ ಮಗುವಿಗೆ ಸಾಂಕೇತಿಕವಾಗಿ ಕೋಲ ನೀಡುತ್ತಾರೆ.ದುಗ್ಗಮೆಗೆ ಮಾಯಂದಾಲ್ ವೇಷ ಭೂಷಣ ದಲ್ಲಿಯೇ ಸಾಂಕೇತಿಕವಾಗಿ ಕೋಲ ಕೊಡುತ್ತಾರೆ .ತನ್ನಿ ಮಾನಿಗನಿಗೂ ಸಾಂಕೆತಿಕವಾದ ಆರಾಧನೆ ಇರುತ್ತದೆ

No comments:

Post a Comment