Friday, 20 May 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 308-ಪಟ್ಟೋರಿತ್ತಾಯ -ಡಾ.ಲಕ್ಷ್ಮೀ ಜಿ ಪ್ರಸಾದ

 

ತುಳುನಾಡಿನ ಅನೇಕ ದೈವಗಳು ಘಟ್ಟದಿಂದ ಇಳಿದು ಬಂದವುಗಳು ಎಂಬ ಬಗ್ಗೆ ಪಾಡ್ದನಗಳಲ್ಲಿ ,ನುಡಿಗಟ್ಟುಗಳಲ್ಲಿ ಉಲ್ಲೇಖಗಳು ಸಿಗುತ್ತವೆ .ಭೂತಾರಾಧನೆ ತುಳುನಾಡಿನ ಸಂಸ್ಕೃತಿ .ಇಲ್ಲಿ ಆರಾಧಿಸಲ್ಪಡುವ ಹೆಚ್ಚಿನ ದೈವಗಳು ಮಾನವ ಮೂಲವನ್ನು ಹೊಂದಿದ್ದು ಅಸಾಮಾನ್ಯ ಕಾರಣಕ್ಕೆ ದೈವಿಕತೆ ಪಡೆದು ಆರಾಧಿಸಲ್ಪಡುವ ಸಾಂಸ್ಕೃತಿಕ ವೀರರೇ ಆಗಿದ್ದಾರೆ.
ಇವರಲ್ಲಿ ಅನೇಕರು  ಸ್ಥಳೀಯ ಅರಸುಗಳೂ ಸೇರಿದ್ದಾರೆ ,ಅನೇಕರು ಹೊರಗಿನಿಂದ ಬಂದವರೂ ಇದ್ದಾರೆ ,
ಕೆಲವು ಅರಸು ದೈವಗಳ ಮೂಲ ಸಿಗುವುದಿಲ್ಲ ,ಉದಾಹರಣೆಗೆ ಹೇಳುವುದಾದರೆ ಅತ್ತಾವರ ದೈವಗಳು ,ತೋಡ ಕುಕ್ಕಿನಾರ್ ಮೊದಲಾದ ದೈವಗಳು  ಪಾಡ್ದನಗಳಲ್ಲಿ ಇವರು ಘಟ್ಟದಿಂದ ಇಳಿದು ಬಂದ ಹಾಗೆ ಚಿತ್ರಿತವಾಗಿದೆ .
ಒಂದೆಡೆ ಪಶ್ಚಿಮ ಘಟ್ಟಗಳ ಸಾಲು ಇನ್ನೊಂದೆಡೆ ಸುತ್ತುವರಿದ ಸಮುದ್ರಗಳ ಕಾರಣದಿಂದ ಇಲ್ಲಿಗೆ ಬರುವ ಹೊಸಬರ ಕುರಿತಾಗಿ ಹೆಚ್ಚಿನ ಮಾಹಿತಿ ಜನ ಸಾಮಾನ್ಯರಿಗೆ ಇಲ್ಲವಾಗಿರುವ ಸಾಧ್ಯತೆ ಇದೆ ಇದರಿಂದಾಗಿ ಹೊರಗಿನಿಂದ ಬಂದ ಅಂದರೆ ಘಟ್ಟದ ಮೇಲಿನಿಂದ ಬಂದ ಅರಸುಗಳ ಬಗ್ಗೆ ನಾಯಕರ ಬಗ್ಗೆ ಮಾಹಿತಿ ಸಿಗದೇ ಇರುವುದರಿಂದ ಅವರುಗಳು ದೈವತ್ವ ಪಡೆದಾಗಘಟ್ಟದಿಂದ ಇಳಿದು ಬಂದ ದೈವಗಳು ಎಂದು ಪಾದ್ದನಗಳಲಿ ಹೇಳುತ್ತಾರೆ .ಇದರಿಂದಾಗಿ ಇಂಥಹ ದೈವಗಳ ಮೂಲದ ಬಗೆ ಮಾಹಿತಿ ಸಿಗುವುದಿಲ್ಲ ತುಳುನಾಡಿಗೆ ಇಳಿದು ಬಂದ ನಂತರದ ಪ್ರಸರಣದ ಮಾಹಿತಿಗಳು ಮಾತ್ರ ಸಿಗುತ್ತವೆ
ಇಂಥಹ ದೈವಗಳಲ್ಲಿ ಒಂದು ಮಂಗಳೂರು -ಕೊಣಾಜೆ ಸಮೀಪದ ಪಟ್ಟೋರಿ ಎಂಬಲ್ಲಿ ಆರಾಧನೆ ಹೊಂದುವ ಪಟ್ಟೋರಿತ್ತಾಯ ದೈವ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಪಟ್ಟೋರಿತ್ತಾಯ ದೈವದ ಬಗ್ಗೆ ಸ್ಥಳೀಯ ಉತ್ಸಾಹಿ ತುಳುಸಂಸ್ಕೃತಿ ಅಭಿಮಾನಿಗಳಾದ ಪ್ರವೀಣ್ ಕುಮಾರ್ ಅವರು ಮಾಹಿತಿ ಸಂಗ್ರಹಿಸಿಕ ಳುಹಿಸಿ ಕೊಟ್ಟಿದ್ದಾರೆ .

ಪಟ್ಟೋರಿತ್ತಾಯ ದೈವವು ಘಟ್ಟದಿಂದ ಇಳಿದು ಬಂದ ದೈವ .ಘಟ್ಟದಿಂದ ಇಳಿದು ಬರುವಾಗ ಕಣಂತೂರಿನ ಉಳ್ಳಾಲ್ತಿ ದೈವವನ್ನು ಭೇಟಿ ಮಾಡುತ್ತದೆ .ಅಲ್ಲಿಂದ ಸನ್ಯಾಸಿ ರೂಪದಲ್ಲಿ  ಬೀರೂರು ಗುತ್ತಿಗೆ ಬಂದು ಕುಡಿಯಲು ನೀರು ಕೇಳುತ್ತದೆ .ಅಲ್ಲಿನ ಗುಟ್ಟಿನ ಒಡತಿ ಗೆ ಸಂತಾವಿರುವುದಿಲ್ಲ ,ಹುತ್ತ್ತಿದ ಮಕ್ಕಳೆಲ್ಲ ಅಕಾಲ ಮರಣವನ್ನಪ್ಪಿರುತಾರೆ.ಹಾಗಾಗಿ ನಮ್ಮ ಕೈಯಿಂದ ನೀರು ಕುಡಿಯುವಿರಾ ಎಂದು ಸಂದೇಹದಿಂದ ಕೇಳಿ  ನೀರು ಕೊಡುತ್ತಾರೆ .ಅವರ ಸಂಕಷ್ಟವನ್ನು ಅರ್ಥ ಮಾಡಿಕೊಂಡ ದೈವ ಅವರು ನೀರು ತರಲೆಂದು ಒಳಗೆ ಹೋದಾಗ ಒಂದು ಆಲವ್ಯದ ತುಂಡು (ಮಂತರಿಸಿದ ಅಲೌಕಿಕ ಶಕ್ತಿ ಇರುವಲೋಹದ ಗುಂಡು ಅಥವಾ ಚಂದನ   ಗಿಡಮೂಲಿಕೆ )ಯನ್ನು ತೊಟ್ಟಿಲಲ್ಲಿ ಇಡುತ್ತಾರೆ .ನಂತರ ನಿಮಗೆ ಮುಂದೆ ನಮ್ಮ ಕಾರಣಿಕದಲ್ಲಿ /,ಮಹಿಮೆಯಲ್ಲಿ ಯಲ್ಲಿ ಮಕ್ಕಳಾಗಿ ಬಾಳು ಬದುಕು ಬೆಳಗಿದರೆ ನಮಗೆ ಸೇವೆ ಕೊಡಬೇಕು ,ಬೀರೂರು ಗುತಿಗೆ ಮುಲ್ಯಾದಿಗೆ ಮತ್ತು ಮಧ್ಯಸ್ತಿಕೆ ಎಂದು ಆದೇಶಿಸುತ್ತದೆ .
ಅದರಂತೆ ಅವರಿಗೆ ಗಂಡು ಸಂತಾನವಾಗಿ,ಅಲ್ಲಿ ಆ ದೈವವನ್ನು ಪಟ್ಟೋರಿ ಯಲ್ಲಿ ಆರಾಧಿಸುತ್ತಾರೆ .ಇಲ್ಲಿಂದ ದೈವ ಬೇರೆಡೆಗೆ ಪ್ರಸರಣಗೊಂಡು ಮುಂದೆ ಸಾಗುತ್ತದೆ .ಆಗ ದಾರಿಯಲ್ಲಿ ಅಲ್ಲಿನ ಸ್ಥಳೀಯ ದೈವಗಳಾದ ಜುಮಾದಿ ಹಾಗೂ ಪಂಜುರ್ಲಿಗಳು ಬಂದು ನಾವೇ ಈ ಬಡ ರಾಜ್ಯದಲ್ಲಿ ಕಷ್ಟದಲ್ಲಿ ಇರುವಾಗನೀವು ಇಲ್ಲಿಗೆ ಬರುವುದು ಸರಿಯಲ್ಲ ಎಂದು ಹೇಳುತ್ತವೆ ಆಗ  ನಾವು ಈ ರಾಜ್ಯವನ್ನು ವೈಭವದಿಂದ ಆಳುತ್ತೇವೆ ನಮಗೆ ಕೊಡುವ ನೇಮ ಉತ್ಸವಗಳಲ್ಲಿ ನಿಮಗೂ ಒಂದು ಪಾಲು ಇರುತ್ತದೆ ಎಂದು ಹೇಳುತ್ತದೆ ಅದರಂತೆ ನಡೆದುಕೊಂಡು ಬಂದಿದ್ದು ಇಂದಿಗೂ ಪಟ್ಟೋರಿ ತ್ತಾಯ ದೈವದ ನೇಮ ಆಗುವಾಗ ಈ ದೈವಗಲಿಗೂ ಸೇವೆ ಇರುತ್ತದೆ .

ಮುಂದೆ ಅಲ್ಲಿಂದ ಕೊಣಾಜೆ ಬೀಡಿಗೆ ಬಂದು ಅಲ್ಲಿನ ನಾಗ  ಬ್ರಹ್ಮ ಮಾಡದ ಭಂಡಾರ ಮನೆಗೆ ಬರುತ್ತದೆ ಅಲ್ಲಿ ಆ ಭಂಡಾರ ಮನೆ ಬೀರೂರು ಗುತ್ತಿಗೆ ಸಂಬಂಧ ಹೊಂದಿರುತ್ತದೆ .ಅಲ್ಲಿ ತೀರ್ಥ ಸ್ನಾನ ಮಾಡಿ ಭಸ್ಮ ಧರಿಸಿ ಪಟ್ಟೋರಿ ಯ ದೊಡ ಮನೆತನದ ಪಟ್ಟೋರಿ ಚಾವಡಿಗೆ ಬರುತ್ತದೆ ಅಲ್ಲಿ ನಿಂತು ನೋಡುವಾಗ ಕೋಡಿ ಸ್ಥಾನದಲ್ಲಿ ಹಸು ಮತ್ತು ಹುಲಿ ಹಾವು ಮತ್ತು ಮುಗುಸಿಗಳು ಸಹಜ ವೈರತ್ವ ಮರೆದು ಅನ್ಯೊಂಯವಾಗಿರುವುದನ್ನು ಕಂಡು ತನಗೆ ನೆಲೆಯಾಗಲು ಅದೇ ಪ್ರಶಸ್ತವಾದ ಜಾಗ ಎಂದು ನಿರ್ಧರಿಸುತ್ತದೆ ಅಲ್ಲಿ ಬಂದು ಅಡುಗೆ ಮಾಡಿ ಊಟ ಮಾಡುವಾಗ ಬೋಲ್ನಾಡಿನ ಮಲರಾಯ ದೈವ ಅಥಿತಿಯಾಗಿ ಬರುತ್ತದೆ ಅತ್ಹಿತಿಗೆ ಮೊದಲ ಸ್ಥಾನ ನೀಡುವ ಪಟ್ಟೋರಿತ್ತಾಯ ದೈವ ತನ್ನ ಆರಾಧನಾ ಸಮಯದಲ್ಲಿ ಕೂಡ ಮೊದಲ ಸ್ಥನವಮ್ಮು ನೀಡುತ್ತದೆ ಆದ್ದರಿಂದ ಈಗ ಕೂಡ ಪಟ್ಟೋರಿತ್ತಾಯ ದೈವದ ನೇಮ ಆಗುವಾಗ ಮೊದಲು ಮಲರಾಯ ದೈವಕ್ಕೆ ಆರಾಧನೆ ಮಾಡುವ ಸಂಪ್ರದಾಯವಿದೆ .ಇದು ಆ ನೆಲೆ ಮೂಲತಃ ಮಲರಾಯ ನಿಗೆ ಸೇರಿದ್ದು ಎಂಬುದನ್ನು ದ್ಯೋತಿಸುತ್ತದೆ ಕೂಡ .ಇಲ್ಲಿ ಪಿಲಿ ಚಾಮುಂಡಿ ದೈವಕ್ಕೆ ಕೂಡ ಆರಾಧನೆ ಇದೆ(C).ಡಾ.ಲಕ್ಷ್ಮೀ ಜಿ ಪ್ರಸಾದ

ಪಟ್ಟೋರಿ ಎಂಬ ಪದಕ್ಕೆ ನೇರವಾದ ಅರ್ಥ ಏನು ಎಂದು ಸಿಗುವುದಿಲ್ಲ.ಆದರೆ ಅಲ್ಲಿ ಪಟ್ಟೋರಿ ಚಾವಡಿ ಕೂಡ ಇದೆ ಆದ್ದರಿಂದ ಅದುಸ್ಥಳೀಯ ಅರಸುಗಳ  ಪಟ್ಟ ಏರುವ ಚಾವಡಿ ಆಗಿದ್ದು ಪಟ್ಟೋರಿ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ .
ಅಲ್ಲಿ ಪಟ್ಟ ಏರಿ ಆಳ್ವಿಕೆ ನಡೆಸಿ ಜನಾನುರಾಗಿಯಾಗಿರುವ ಹೊರಗಿನಿಂದ ಎಂದರೆ ಘಟ್ಟದ ಮೇಲಿನಿಂದ ಬಂದ ಅರಸು /ನಾಯಕ ನೆ ಕಾರಣಾಂತರಗಳಿಂದ ದೈವತ್ವ ಪಡೆದು ಪಟ್ಟೋರಿತ್ತಾಯ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ.ಜೊತೆಗೆ ಈತ ಸ್ಥಳೀಯ ಅರಸುಗಳೊಂದಿಗೆ/ದೈವಗಳೊಂದಿಗೆ  ಸಹೃದಯತೆಯಿಂದ ವರ್ತಿಸಿದ್ದು ಅವರಿಗೂ ತನ್ನೊಂದಿಗೆ ಸ್ಥಾನಮಾನ ಕಲ್ಪಿಸಿದ ಬಗ್ಗೆ ಈ ಕಥಾನಕದಲ್ಲಿ ಸೂಚ್ಯವಾಗಿ ಹೇಳಿದೆ(C).ಡಾ.ಲಕ್ಷ್ಮೀ ಜಿ ಪ್ರಸಾದ

ಈ ದೈವದ ಬಗ್ಗೆ ಬಹಳಷ್ಟು ಶ್ರಮವಹಿಸಿ ಮಾಹಿತಿ ಸಂಗ್ರಹಿಸಿ ಕೊಟ್ಟ ಶ್ರೀಯುತ ಪ್ರವೀಣ್ ಕುಮಾರ್ ಅವರಿಗೆ ಮನಃ ಪೂರ್ವಕ ಕೃತಜ್ಞತೆಗಳು

No comments:

Post a Comment