Monday, 20 June 2016

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 310 -312 ಪುರುಷ ಭೂತಗಳು (c) ಡಾ.ಲಕ್ಷ್ಮೀ ಜಿ ಪ್ರಸಾದ

 ಒಂದೇ ದೈವ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರು ಪಡೆದು ಆರಾಧನೆ ಪಡೆಯುತ್ತದೆ ಎಂಬ ಒಂದುನಂಬಿಕೆ ಇದೆ ಕೆಲವೆಡೆ ಒಂದೇ ದೈವ ಬೇರೆಹೆಸರಿನಲ್ಲಿ ಆರಾಧನೆ ಆಗುವುದೂ ಇದೆ ಉದಾಹರಣೆಗೆ ಮಲರಾಯ ದೈವವನ್ನು ಕುಡ್ಪಲ್ತ್ತದ್ಕದಲ್ಲಿ ಕುದ್ಪಲ್ತ್ತಾಯ ಎಂದು ಕರೆದು ಆರಾಧಿಸುತ್ತಾರೆ ,ಹಾಗೆ ಬೇರೆ ಕಡೆ ಒಂದೇ ದೈವಕ್ಕೆ ಪ್ರಾದೇಶಿಕವಾಗಿ ಸ್ಥಳೀಯ ಹೆಸರು ಸೇರಿಕೊಂಡು ಆರಾಧನೆ ನಡೆಯುವುದು ಇದೆ copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ
ಅದೇ ರೀತಿ ಒಂದೇ ಹೆಸರಿನಲ್ಲಿ ಅನೇಕ ದೈವಗಳಿಗೆ ಆರಾಧನೆ ಇರುವುದು ಕೂಡ ಅನೇಕ ಕಡೆಗಳಲ್ಲಿ ಕಂಡು ಬರುತ್ತದೆ .ಉದಾಹರಣೆಗೆ ಕೆರೆ ಚಾಮುಂಡಿ ಗುಡ್ಡೆ ಚಾಮುಂಡಿ ಒಲಿ ಚಾಮುಂಡಿ ರುದ್ರ ಚಾಮುಂಡಿ ಅಗ್ನಿ ಚಾಮುಂಡಿ ಮೊದಲಾದವುಗಳ ಹೆಸರು ಒಂದೇ ರೀತಿ ಇದ್ದರೂ ಇವರೆಲ್ಲ ಬೇರೆ ಬೇರೆ ದೈವಗಳು ಹಾಗೆಯೇ ಪುರುಷ ಭೂತ ಎಂಬ ಒಂದು ಹೆಸರಿನಲ್ಲಿ ನಾಲ್ಕು ದೈವಗಳಿಗೆ ಆರಾಧನೆ ಇರುವುದು ಕಂಡು ಬಂದಿದೆ.
ಸುಳ್ಯದ ಕಂದ್ರಪ್ಪಾಡಿ ಹಾಗು ಸುತ್ತ ಮುತ್ತ ಕನ್ನಡ ಯಾನೆ ಪುರುಷ ಭೂತದ ಆರಾಧನೆ ಇದೆ ಈ ದೈವದ ಬಗ್ಗೆ ಈಹಿಂದೆಯೇ ಮಾಹಿತಿ ನೀಡಿದ್ದೇನೆ
ಕನ್ನಡ ಯಾನೆ ಪುರುಷ ಭೂತ ಅಲ್ಲದೆ ಇನ್ನು ಮೂರು ಪುರುಷ ಭೂತಗಳಿಗೆ ಆರಾಧನೆ ಇರುವುದು ತಿಳಿದು ಬಂದಿದೆ .
ನಾಥ ಸಂಪ್ರದಾಯದ ಜೋಗಿ ಸಮುದಾಯದ ಜನರನ್ನು ಪುರುಷ  ಎಂದು ಕರೆಯುತ್ತಾರೆ.ಜೋಗಿ ಪುರುಷ ಎಂಬುದೇ ಹ್ರಸ್ವ ಗೊಂಡು ಪುರುಷ /ಪುರ್ಸ ಆಗಿದೆ .copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ
ಹಾಗಾಗಿ ಸ್ಥಳೀಯವಾಗಿ ನಾಥ ಸಂಪ್ರದಾಯದ ಜೋಗಿ ಪುರುಷ ಸಮುದಾಯದ ವ್ಯಕ್ತಿಗಳನ್ನು ಪುರುಷ ಎಂದು ಕರೆಯುವುದು ಸಾಮಾನ್ಯ .
ಹೀಗೆ ಒಬ್ಬ ಜೋಗಿ ಪುರುಷ ಸಮುದಾಯಕ್ಕೆ ಸೇರಿದ ವ್ಯಕ್ತಿ ಕಾಂಬೋಡಿ ಯಲ್ಲಿ ದೈವತ್ವ ಪಡೆದು ಆರಾಧನೆ ಪಡೆಯುವ ಬಗ್ಗೆ ಶರಣ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.ಈ ದೈವ ಸ್ಥಳೀಯ ದೈವವಗಿದ್ದು ಕಾಂಬೋಡಿ ,ಹಾಗೂ ಸುತ್ತು ಮುತ್ತಲಿನ ಒಂದೆರಡು ಪ್ರದೇಶದಲ್ಲಿ ಮಾತ್ರ ಆರಾಧನೆ ಪಡೆಯುತ್ತದೆ.
ಕುರಿಯಾಲ ಗುತ್ತಿನಲ್ಲಿ ಉಗೆದಲ್ತಾಯ ದೈವದ ಆರಾಧನೆ ಆರಂಭವಾದಾಗ ಅಲ್ಲಿನ ಸ್ಥಳೀಯನಾಗಿದ್ದ ಜೋಗಿ ಸಮುದಾಯಕ್ಕೆ ಸೇರಿದ ಒಬ್ಬಾತ ಆ ದೈವವನ್ನು ಅತ್ಯಂತ ಭಕ್ತಿಯಿಂದ ನಂಬಿ ಆರಾಧಿಸುತ್ತಾನೆ .ಆತ ಮುಂದೆ ಉಗ್ಗೆದಲ್ತಾಯ ದೈವದ ಸೇರಿಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ .ಮುಂದೆ ಕುರಿಯಾಲ ಗುತ್ತಿನಲ್ಲಿ ಮಾವ ಅಳಿಯನ ನಡುವೆ ವಿವಾದ ಆಗಿ ಕಾಂಬೋಡಿ ಯಲ್ಲಿ ಒಂದು ಕುಟುಂಬ ನೆಲೆಯಾಗುತ್ತದೆ .ಆಗ ಕುರಿಯಾಲ ಗುತ್ತಿನಿಂದ ಕಾಂಬೋಡಿ ಗೆ ಬರುವ ದಾರಿಯಲ್ಲಿ ಕಾಂಬೋಡಿ ಸಮೀಪ ಒಂದು ಸಣ್ಣ ಸೇತುವೆ ಇರುತ್ತದೆ .ಅಲ್ಲಿ ಮಳೆ ಬಂದು ನೆರೆ ಬಂದು ಪ್ರವಾಹ ಉಕ್ಕಿ ಹರಿದಾಗ ದೈವ ಉಗ್ಗೆದಲ್ತಾಯ ಕ್ಕೆ ಕಾಂಬೋಡಿ ಗೆ ಬರಲು ಕಷ್ಟವಾಗುತ್ತದೆ .ಆಗ ಪುರುಷ/ಪುರ್ಸ ದೈವ ದಾರಿಯಲ್ಲಿ ಒಂದು ಗೆರೆ ಎಳೆದು ಬರಲು ಸಹಾಯ ಮಾಡುತ್ತದೆ .ಇದಕ್ಕೆ ಸಾಕ್ಷಿಯಾಗಿ ಈಗಲೂ ಅಲ್ಲಿ ಒಂದು ಗೆರೆ ಇದೆ ಎಂದು ಶರಣ್ ಶೆಟ್ಟಿ ಅವರು ಹೇಳಿದ್ದಾರೆ

ಗರೋದಿಗಳಲ್ಲಿ ಒಂದು ಜೋಗಿ ಪುರುಷ ದೈವದ ಆರಾಧನೆ ಇರುತ್ತದೆ .ಪ್ರಚಲಿತ ಐತಿಹ್ಯದಂತೆ ಅಲ್ಲಿ ಕೋಟಿ ಚೆನ್ನಯರಿಗೆ ಇತ್ತ ನೈವೇದ್ಯಕ್ಕೆ ಕೈ ಹಾಕಿದ ಜೋಗಿ ಸಮುದಾಯಕ್ಕೆ ಸೇರಿದ ಜೋಗಿ ವ್ಯಕ್ತಿಯೊಬ್ಬ ಮಾಯವಾಗಿ ಅಲ್ಲಿ ಪುರುಷ ದೈವವಾಗಿ ಕೋಟಿ ಚೆನ್ನಯರ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾನೆ.ಇಲ್ಲಿ ಜೋಗಿ ಪುರುಷ ದೈವ ಇಲ್ಲಿ ಹುಚ್ಚ್ಚುಹುಚ್ಚಾಗಿ ವರ್ತಿಸಿ ಹಾಸ್ಯಗಾರನಂತೆ ವರ್ತಿಸುತದೆ .copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ
 ಇನ್ನೊಂದು ಜೋಗಿ ಪುರುಷ ದೈವ ಕೊಡ್ಲ ಮೊಗರ್ ನಲ್ಲಿ ಆರಾಧನೆ ಪಡೆಯುತ್ತದೆ .ಈ ದೈವದ ಬಗ್ಗೆ ಹೆಚ್ಚ್ಚಿನ ಮಾಹಿತಿ ಲಭ್ಯವಾಗಿಲ್ಲ .ಅಲ್ಲಿ ಗದ್ದೆಯಲ್ಲಿ ಗೊಬ್ಬರ ಹಾಕುವಾಗ ಓರ್ವ ವ್ಯಕ್ತಿ ಮಾಯವಾದ ಬಗ್ಗೆ ಐತಿಹ್ಯವಿದೆ.ಆತನದೊಂದು ಕಲ್ಲು ಅಲ್ಲಿ ಗದ್ದೆಯ ನಡುವೆ ಇದೆ  ಈ ಮಾಯವಾದ ವ್ಯಕ್ತಿ ಜೋಗಿ ಸಮುದಾಯಕ್ಕೆ ಸೇರಿದ್ದ್ದು ಆತನೇ ದೈವಾಗಿ ಆರಾಧ ಪಡೆದಿರುವ ಬಗ್ಗೆ ಭೂತ ಕಟ್ಟುವ ಕಲಾವಿದ ಅಪ್ಪಣ್ಣ ಹೇಳಿದ್ದಾರೆ .ಆದರೆ ಈ ದೈವಕ್ಕೆ ಅಲ್ಲಿ ಯಾವುದೇ ನುಡಿಗಟ್ಟು ಅಗಲಿ ಪಾದ್ದನವಾಗಲಿ ಹೇಳುವುದಿಲ್ಲ ಆದ ಕರಣ ಇದಮಿತ್ಥಂ ಎಂದು ಹೇಳುವುದು ಕಷ್ಟ ಸಾಧ್ಯ .
ಅಂತೂ ಒಂದೇ ಪುರುಷ ಎಂಬ ಹೆಸರಿನಲ್ಲಿ ನಾಲ್ಕು ದೈವಗಳಿಗೆ ಆರಾಧನೆ ಇರುವುದು ಇಲ್ಲಿ ಸ್ಪಷ್ಟವಾಗುತ್ತದೆ .copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ
ಕಾಂಬೋಡಿ ಯ ಪುರ್ಸ/ಪುರುಷ ದೈವದ ಮಾಹಿತಿ ನೀಡಿದ ಶರಣ್ ಶೆಟ್ಟಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು


No comments:

Post a Comment