Wednesday, 22 June 2016

ಸಾವಿರದೊಂದು ಗುರಿಯೆಡೆಗೆ 313 ತುಳುನಾಡ ದೈವಗಳು :ಕೊನ್ನೊಟ್ಟು ಕಡ್ತ -ಡಾ.ಲಕ್ಷ್ಮೀ ಜಿ ಪ್ರಸಾದ


ಮಾಹಿತಿ ಮತ್ತು ಚಿತ್ರ ಕೃಪೆ ;ಸಂಕೇತ್ ಪೂಜಾರಿ
 
ತುಳುನಾಡಿನ ದೈವರಧನೆಯ ಸ್ವರೂಪವವೇ ಬಹಳ ವೈಚಿತ್ರ್ಯ ಪೂರ್ಣ,ತುಂಬಾ ಕುತೂಹಲಕರ ಕೂಡ .ಇಲ್ಲಿನ ಸೇರಿಗೆ ದೈವಗಳದು ವಿಶಿಷ್ಟ ಎನಿಸುವ ಕಥಾನಕಗಳನ್ನು ಹೊಂದಿವೆ.ಒಂದೊದ್ದರದ್ದು ಒಂದೊಂದು ವಿಧ ,ಸೇರಿಗೆ ದೈವಗಳಲ್ಲಿ ಭಕ್ತಿಯ ಮೂಲಕ ದೈ ವತ್ವ ಪಡೆದವರಿದ್ದಾರೆ.ದೈವಗಳ ಆರಾಧನೆ ಆರಂಭವನ್ನು ಮಾಡಿದ ಭಕ್ತ ಶ್ರೇಷ್ಟರು ಇದ್ದಾರೆ.ದೇ ಕಡ್ತವಾಲಯ ಕಟ್ಟಿಸಿ ದೈವಗಳಗಿ ನೆಲೆನಿಂತವರಿದ್ದಾರೆ .ದೈವಗಳನ್ನು ಅನನ್ಯವಾಗಿ ನಬಿದ ಭಕ್ತ  ರಿಗೆ ತೊಂದರೆ ಕೊಟ್ಟು ದೈವದ ಆಗ್ರಹಕ್ಕೆ ತುತ್ತಾಗಿಯೂ ಕೆಲವರು ದೈವಗಳಾಗಿದ್ದಾರೆ.
ಇನ್ನು ಕೆಲವರು ದೈವಗಳಿಗೆ ಮೀಸಲಿಟ್ಟ /ಕುಡಿ ಕಟ್ಟಿ ಇಟ್ಟ ವಸ್ತುಗಳಿಗೆ ಕೈ ಹಾಕಿ ಮಾಯವಾಗಿ ಅದೇ ದೈವದ ಸೇರಿಗೆಗೆ ಸಂದಿದ್ದಾರೆ .ದಾರಮ್ಮ ಬಡಿನಲ್ಲಾಳ್ತಿ .ಭಟ್ಟಿ ಭೂತ ಮೊದಲ್ದವರು ಈ ರೀತಿ ದೈವತ್ವ ಪಡೆದವರು
ಇದೇ ರೀತಿ ದೈವದ ಆಗ್ರಹಕ್ಕೆ ತುತ್ತಾಗಿ ದೈವತ್ವ ಪಡೆದು ಆರಾಧಿಸಲ್ಪಡುವ ಶಕ್ತಿ ಕೊನ್ನೊಟ್ಟು ಕಡ್ತ .ಬಿಲ್ಲವರ ಗುತ್ತು ಮನೆಗಳ  ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಯುವ ಸಂಶೋಧಕ ಸಂಕೇತ್ ಪೂಜಾರಿ ಈ ದೈವತದ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ  ಬಡಕೋಡಿನ ಬಿಲ್ಲವರ ದೇವಸ ಮನೆಯಲ್ಲಿ ಈ ದೈವಕ್ಕೆ ಆರಾಧನೆ ಇದೆ.ಕೊನ್ನೊಟ್ಟು ಎಂಬ ಜಾಗದ ಕಡ್ತ ಎಂಬ ವ್ಯಕ್ತಿ ದೈವತ್ವ ಪಡೆದು ಇಲ್ಲಿ ಆರಾಧಿಸಲ್ಪಡುತ್ತಿದ್ದಾನೆ.
ಬಡಕೋಡು ದೇವಸ ಮನೆಯಲ್ಲಿ ಕಡ್ತ ಎಂಬ ವ್ಯಕ್ತಿ ಕೆಲಸಕ್ಕೆ ಇದ್ದನು .ಅಲ್ಲಿ ದೈವಗಳಿಗೆ ಬಿಟ್ಟ ಕೋಳಿಯನ್ನು ತಿಂದು ಆತ ದೈವಗಳ ಆಗ್ರಹಕ್ಕೆ ತುತ್ತಾಗುತ್ತಾನೆ.ಇದರಿಂ: ದಾಗಿ ಆತನನ್ನು ಹುಲಿ ಹಿಡಿದು ಆತ ಮರಣವನ್ನಪ್ಪುತ್ತಾನೆ .ದೈವದ  ಅನುಗ್ರಹಕ್ಕೆ ಸಿಲುಕಿಪಾತ್ರರಾದವರು ಅದೇ ದೈವದ ಸೇರಿಗೆಗೆ ಸಂದು ದೈವಗಳಗಿ ನೆಲೆ ನಿಲ್ಲುವಂತೆ ದೈವದ ಕೋಪಕ್ಕೆ ಸಿಕ್ಕವರು ಕೂಡ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುನಾಡಿನ ಕೆಲವೆಡೆ ಕಂಡು ಬರುತ್ತದೆ ಅಂತೆಯೇ ಇಲ್ಲಿ ಕೂಡ ದೈವಗಕ ಆಗ್ರಹಕ್ಕೆ ಸಿಲುಕಿದ ಕಡ್ತ ದೈವವಾಗಿ ನೆಲೆನಿಲ್ಲುತ್ತಾನೆ .ಆತ ಕೊನ್ನೊಟ್ಟು ಎಂಬ ಪ್ರದೇಶದವನು ಆದ ಕಾರಣ ಆ ದೈವವನ್ನು ಕೊನ್ನೊಟ್ಟು ಕಡ್ತ ಎಂದು ಕರೆಯುತ್ತಾರೆ .ಈತನಿಗೆ ದೇವಸ ಮನೆಯ ಅಂಗಳದಲ್ಲಿ ಒಂದು ಮರದ ಬುಡದಲ್ಲಿ ಕಲ್ಲು ಹಾಕಿ ಆರಾಧಿಸುತ್ತಾರೆ .ಮನೆಯಲ್ಲಿ ಏನಾದರು ಕಳವು ಆದರೆ ಈತನಿಗೆ ಹರಸಿಕೊಂಡರೆ ಆ ವಸ್ತು ಸಿಗುತ್ತದೆ ಎಂಬ ನಂಬಿಕೆ ಇದೆ
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕವಾಗಿ ಚಿಂತನೆ ಮಾಡುದಾದರೆ ಕಡ್ತ ಆಕಸ್ಮಿಕವಾಗಿ ಹುಲಿ ಹಿಡಿದು ದುರಂತವನ್ನಪ್ಪಿರಬೇಕು   ಅದಕ್ಕೆ ಮೊದಲು ಆತ ದೈವಕ್ಕೆ ಬಿಟ್ಟ ಕೋಳಿ ತಿಂದಿದ್ದು ಇದಕ್ಕೆ ದೈವದ ಆಗ್ರಹದ ಕಥಾನಕ ಸೇರಿರಬಹುದು ,ದೈವದ ಆಗ್ರಹಕ್ಕೆ ಸಿಲುಕಿದವರು ದೈವತ್ವ ಪಡೆದು ಆರಾಧನೆ ಪಡೆಯುವುದು ಇಲ್ಲಿನ ವಿಶಿಷ್ಟತೆ ಅಂತೆಯೇ ಕೊನ್ನೊಟ್ಟು ಕಡ್ತ ಕೂಡ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ .-ಡಾ.ಲಕ್ಷ್ಮೀ ಜಿ ಪ್ರಸಾದ 
ಮಾಹಿತಿಮೂಲ :ಸಂಕೇತ್ ಪೂಜಾರಿ(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ)

No comments:

Post a Comment