Monday, 25 July 2016

ಸಾವಿರದೊಂದು ಗುರಿಯೆಡೆಗೆ -318 ತುಳುನಾಡ ದೈವಗಳು:ಬಬ್ಬರ್ಯ 318 ತುಳುನಾಡ ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ

ಒಂದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ಇರುವ ಬಗ್ಗೆ ಈಗಾಗಲೇ ಬರೆದಿದ್ದೆ .ಬಬ್ಬರ್ಯ ಎಂಬ ಹೆಸರಿನಲ್ಲಿ ಕೂಡ ಎರಡು ದೈವಗಳಿಗೆ ಆರಾಧನೆ ಇರುವ ಬಗ್ಗೆ ಭರವಸೆಯ ಯುವ ಸಂಶೋಧಕ ಅಭಿಲಾಷ್ ಚೌಟ ಅವರು ಮಾಹಿತಿ ನೀಡಿದ್ದಾರೆ.
ಉದ್ಯಾವರದಲ್ಲಿ ಅರಸು ದೈವಗಳ ಭೇಟಿಗೆ ಬಬ್ಬರ್ಯ ದೈವ ಬರುವ ಪದ್ಧತಿ ಇದೇ ಅಲ್ಲಿಗೆ ಆಗಮಿಸುವ ಬಬ್ಬರ್ಯ ದೈವದ ವೇಷ ಭೂಷಣಗಳು ಇತರೆಡೆ ಆರಾಧಿ
ಸಲ್ಪಡುವ ಬಬ್ಬರ್ಯ ದೈವಕ್ಕಿಂತ ಭಿನ್ನವಾಗಿದ್ದುದನ್ನು ನಾನು ಈ ಹಿಂದೆಯೇ ಗಮನಿಸಿದ್ದೆ .ಚಿತ್ರ ಕೃಪೆ :ಗಗ್ಗರ around sixteen rituals
ಅಲ್ಲಿಗೆ ಆಗಮಿಸುವ ಬಬ್ಬರ್ಯ ದೈವದ ಮುಖಕ್ಕೆ ಕಪ್ಪು ಬಣ್ಣ ಹಾಗೂ ಆಲಿ ಭೂತಕೆ ಇರುವಂತ ಟೊಪ್ಪಿಗೆ ಮೊದಲಾದ ವೇಷ ಭೂಷಣ ಇದೆ.
ಸಾಮಾನ್ಯವಾಗಿ ಬಬ್ಬರ್ಯ ಭೂತಕ್ಕೆ ಕಪ್ಪು ಬಣ್ಣ ಮುಖಕ್ಕೆ ಹಚ್ಚ್ಚುವುದಿಲ್ಲ .ಆಲಿ ಭೂತದ ಮುಖಕ್ಕೆ ಹಚ್ಚುವ ಕಪ್ಪು ಬಣ್ಣ ಆತನ ಮಾಂತ್ರಿಕ ಶಕ್ತಿಯ ದ್ಯೋತಕವಾಗಿದೆ .©ಡಾ.ಲಕ್ಷ್ಮೀ ಜಿ ಪ್ರಸಾದ
ಬಂಟ್ವಾಳದ ಕಕ್ಕೆ ಪದವು ಬಳಿಒಂದು ಬಬ್ಬರ್ಯ ಹೆಸರಿನ ದೈವಕ್ಕೆ ಆರಾಧನೆ ಇದೆ.ಆದರೆ ಆ ದೈವ ಬಬ್ಬರ್ಯ ಹೆಸರಿನ ಪ್ರಸಿದ್ಧ ದೈವವಲ್ಲ .ಆತನ ವೇಷ ಭೂಷಣ ಹಾಗೂ ಆಲಿ ಭೂತವನ್ನು ಹೋಲುವ ಬಗ್ಗೆ ಅಭಿಲಾಶ್ ಗೌಡ ಅವರು ಮಾಹಿತಿ ನೀಡಿದ್ದಾರೆ .
ಅಲ್ಲಿ ಓರ್ವ ಮುಸ್ಲಿಂ ಮಂತ್ರವಾದಿ ಇದ್ದನು.ಆತನನ್ನು  ಕುಟ್ಟಿ ಬ್ಯಾರಿ ಎಂದು ಕರೆಯುತ್ತಿದ್ದರು.ಆತನ ಉಪಟಳ ಮಿತಿ ಮೀರಿದಾಗ ಆಲಿ ಭೂತವನ್ನು ರಕ್ತೇಶ್ವರಿ ನೀರಿನಲ್ಲಿ ಮುಳುಗಿಸಿ ಮಾಯಮಾಡಿದಂತೆ ಇಲ್ಲಿ ಜುಮಾದಿ ದೈವ ಈತನನ್ನು ಮಾಯಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ .
ಆಲಿ ಭೂತವೇ ಇಲ್ಲಿ ಬಬ್ಬರ್ಯ ಎಂಬ ಹೆಸರಿನಲ್ಲಿ ಆರಾಧನೆ ಪಡೆದಿರುವ ಸಾಧ್ಯತೆ ಕೂಡ ಇದೆ.ಅಥವಾ ಅದೇ ರೀತಿಯ ಹಿನ್ನೆಲೆ ಹೊಂದಿರುವ ಇನ್ನೊಂದು ಶಕ್ತಿ ಬಬ್ಬರ್ಯ ಹೆಸರಿನಲ್ಲಿ ಆರಾಧನೆ ಹೊಂದಿರುವ ಸಾಧ್ಯತೆ ಇದೆ.ಆದರೆ ಈತ ಬಬ್ಬರ್ಯ ಎಂಬ ಹೆಸರಿನ ಪ್ರಸಿದ್ಧ ದೈವತವಲ್ಲ ಎಂಬುದು ಮಾತ್ರ ಸ್ಪಷ್ಟ ,ಈ ಬಗ್ಗೆ ಹೆಚ್ಚ್ಚಿನ ಅಧ್ಯಯನ ಮಾಡಿದರೆ ಹೆಚ್ಚ್ಚಿನ ಮಾಹಿತಿ ತಿಳಿದು ಬರಬಹುದು
ಮಾಹಿತಿ ನೀಡಿದ ಅಭಿಲಾಶ್ ಚೌಟ ಅವರಿಗೆ ಕೃತಜ್ಞತೆಗಳು

No comments:

Post a Comment