Monday, 25 July 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 320 ಕಟ್ಟೆದಲ್ತಾಯ ©ಡಾ.ಲಕ್ಷ್ಮೀ ಜಿ ಪ್ರಸಾದ


                                                        ಚಿತ್ರ ಕೃಪೆ :ಪರಶುರಾಮ ಸೃಷ್ಟಿ
ಒಂದೇ ದೈವ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆಗೊಳ್ವುದು ಸಾಮಾನ್ಯ.ಕೆಲವೊಮ್ಮೆ ಸ್ಥಳೀಯ ಶಕ್ತಿಗಳು ಯಾರೆಂದು ತಿಳಿಯದೆ ಇದ್ದಾಗಲೂ ಇನ್ನೊಂದು ಪ್ರಸಿದ್ಧ ದೈವದೊಂದಿಗೆ ಸಮನ್ವಯಗೊಂದು ಅದೇ ಹೆಸರಿನಲ್ಲಿ ಆರಾಧನೆ ಪಡೆಯುವುದು ಕೂಡ ಇದೆ.
ಕಟ್ಟೆದಲ್ತಾಯ ಇಂಥಹ ಒಂದು ದೈವ .ಬಜ್ಪೆ ಸಮೀಪದ ಪೆರಾರದಲ್ಲಿ ಕಟ್ಟೆದಲ್ತಾಯ ದೈವಕ್ಕೆ ಆರಾಧನೆ ಇದೆ.ಇಲ್ಲಿ .
ಈ ದೈವದ ಬಗ್ಗೆ ಯುವ ಸಂಶೋಧಕ ಅಭಿಲಾಶ್ ಚೌಟ ಅವರು ಮಾಹಿತಿ ನೀಡಿದ್ದಾರೆ .
ಅಲ್ಲಿ ಪ್ರಚಲಿತವಿರುವ ನಂಬಿಕೆಯಂತೆ ಅಣ್ಣಪ್ಪ ದೈವವೇ ಕಟ್ಟೆದಲ್ತಾಯ ಎಂಬ ಹೆಸರಿಂಲ್ಲಿ ಆರಾಧನೆ ಪಡೆಯುತ್ತದೆ.ಪೆರಾರದಲ್ಲಿ ಬಲವಾಂಡಿ ದೈವದ ಪಾತ್ರಿ ಕಟ್ಟದ ನೀರಿಗೆ ಹರಳು ಹೋಗುವ ಸನ್ನಿವೇಶದ ಅಭಿವ್ಯಕ್ತಿ ಇದೆ.ಅಲ್ಲಿನ ಆ ನೀರಿನ ಕಟ್ಟವನ್ನು ಕಾಯುವ ದೈವ ಕಟ್ಟದಲ್ತಾಯ.ಅಲ್ಲಿ ಆತ ಪೊಟ್ಟ ಪಂಜುರ್ಲಿ ಜೊತೆಗೆ ಆರಾಧನೆ ಪಡೆಯುತ್ತಾನೆ
ಕದ್ರಿಯಿಂದ ಧರ್ಮಸ್ಥಳಕ್ಕೆ (ಆಗಿನ ನೆಲ್ಯಾಡಿ ಬೀಡಿನ ಕುಡುಮ ಕ್ಕೆ )ಶಿವಲಿಂಗವನ್ನು ತೆಗೆದುಕೊಂಡು ಅಣ್ಣಪ್ಪ ಹೋಗುವಾಗ ದಾರಿ ಮಧ್ಯ ಪೆರಾರದಲ್ಲಿ ಬಲವಾಂಡಿ ದೈವ ಎದುರಾಗುತ್ತದೆ .ಅಲ್ಲಿ ಅಣ್ಣಪ್ಪನಲ್ಲಿರುವ ಶಿವಲಿಂಗವನ್ನು ಆತ ಸೆಳೆದು ತೆಗುಯುತ್ತಾನೆ ಆಗ ಅವರೊಳಗೆ ಒಂದು ಒಪ್ಪಂದವಾಗುತ್ತದೆ .ಧರ್ಮಸ್ಥಳದ ವಾಕ್ ತೀರ್ಮಾನ ಮಾಡುವ ಹಕ್ಕನ್ನು ಪೆರಾರದ ನೂರ್ದಾಲ ಪಟ್ಟದರಸರಿಗೆ,ಬಲವಾಂಡಿಯ ಬಂಟ ಕಲ್ಲು ಎದುರು ಮಾಡಲು ಅನುಮತಿ ನೀಡುತ್ತಾನೆ.ಅಲ್ಲಿನ ನೀರಿನ ಕಟ್ಟವನ್ನು ಕಾಯುವ ಜವಾಬ್ದಾರಿ ಯನ್ನು ಅಣ್ಣಪ್ಪ ವಹಿಸಿಕೊಳ್ಳುತ್ತಾನೆ ಆದ್ದರಿಂದ ಆತ ಕಟ್ಟದಲ್ತಾಯ ಎಂದು ಕರೆಸಿಕೊಳ್ಳುತ್ತಾನೆ.
ಇಲ್ಲಿ ಕಟ್ಟದಲ್ತಾಯ ದೈವಕ್ಕೆ ಮನುಷ್ಯ ರೂಪಿನ ಮುಖವಾದ /ಮುಗ ಇದೆ,ಪಂಜುರ್ಲಿಗೆ ಹಂದಿಯ ಮುಗ ಇಡುತ್ತಾರೆ ಎಂದು ಅಭಿಲಾಶ್ ಅವರು ಮಾಹಿತಿ ನೀಡಿದ್ದಾರೆ.ಪಡು ಪೆರಾರದಲ್ಲಿ ಕಟ್ಟಲ್ತಾಯ ಪಂಜುರ್ಲಿ ದೈವಸ್ಥಾನವಿದೆ
ಮಾಹಿತಿ ನೀಡಿದ ಅಭಿಲಾಶ್ ಚೌಟ ಅವರಿಗೆ ಧನ್ಯವಾದಗಳು


3 comments:

  1. perara da hatiti rave namma ooru baila magane ide. alli dhoomavati daivastanada bandi nadeyuttade.aga bandi utsavakke namma oorina daiva katadaltaya,potta panjurli daivagala bandara hogi alli nema nadeyuttade.e varshada nemadalli katadaltaya daiva bhayankara gadiyannu tegedukondide

    ReplyDelete
  2. This comment has been removed by the author.

    ReplyDelete