Friday, 30 September 2016

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 326ಮೈಸಂದಾಯ (c)ಡಾ.ಲಕ್ಷ್ಮೀ ಜಿ ಪ್ರಸಾದ

ತುಳು ಜಾನಪದ ಸಾಹಿತ್ಯದಲ್ಲಿ ಅಲ್ಲಲ್ಲಿ ಏಳು ಜನ ಸಿರಿಗಳ ಪ್ರಸ್ತಾಪ ಬರುತ್ತದೆ ಇವರು ಮೇಲಿನ ಸಿರಿ ಲೋಕದ ಕನ್ಯೆಯರು  ಇವರುಗಳು ಒಂದು ದಿನ ಕೊಳದಲ್ಲಿ ಜಲ ಕ್ರೀಡೆ ವಾಡುತ್ತಾ ಇದ್ದರು.ಇವರಲ್ಲಿ ಕಿರಿಯವಳಾದ ಅಬ್ಬಗ ಅಪ್ರತಿಮ ಸುಂದರಿಯಾಗಿದ್ದಳು .ಇವಳ ಸೌಂದರ್ಯಕ್ಕೆ ಮನ ಸೋತ ಈಶ್ವರ ದೇವರು ಒಂದು ಬಿಳಿಯ ತಾವರೆಯ ಹೂವಾಗಿ ಕೊಳದಲ್ಲಿ ಕಾಣಿಸುತ್ತಾರೆ .ಅದನ್ನು ‌ಕೊಯ್ಯಲು ಅಕ್ಕ ಅಬ್ಬಗೆ ನೀರಿನ ನಡುವಿಗೆ ಹೋಗುತ್ತಾಳೆ.ಅಲ್ಲಿ ಈಶ್ವರ ದೇವರು ತನ್ನ ನಿಜ ರೂಪ ತೋರಿ ಅವಳ ಮೈಸಂಗ ಮಾಡುತ್ತಾರೆ .ಆಗ ಉಳಿದ ಆರು ಜನ ಸಿರಿಗಳು ಅವಳನ್ನು ಅಲ್ಲಿಯೇ ಬಿಟ್ಟು ತಮ್ಮ ಲೋಕಕ್ಕೆ ತೆರಳುತ್ತಾರೆ.copy rights reserved (c)Dr Lakshmi g Prasad
ಇತ್ತ ಅಬ್ಬಗನ್ನು ಈಶ್ವರ ದೇವರು ತನ್ನ ಲೋಕ ಕ್ಕೆ‌ಕರೆದೊಯ್ಯುತ್ತಾರೆ .ಅಬ್ಬಗ ಗರ್ಭ ಧರಿಸಿ ಒಂದು ಗಂಡುಮಗುವಿಗೆ ಜನ್ಮ ನೀಡುತ್ತಾಳೆ .ಆ‌ ಮಗುವಿಗೆ ಕಮಲ ಕುಮಾರ ಎಂದು ಹೆಸರು ಇಟ್ಟು ಸಾಕುತ್ತಾರೆ .ಈಶ್ವರ ದೇವರು ದಿನಾಲು ದೆವ ಕೂಟದಿಂದ ಪೂಜೆ ಮುಗಿಸಿ ಬರುವಾಗ ಒಂದು‌ ಕುಡ್ತೆ ಹಾಲು ಒಂದು ಪನ್ನೆ ಹೂ ಬಾಳೆ ಹಣ್ಣು ತರುತ್ತಿದ್ದರು .
ಇದರ ಆಸೆಗೆ ಒಂದು ದೊನ ಕಮಲ ಕುಮಾರ ಮನೆ ಮೆಟ್ಟಿಲು ಇಳಿದು ಕೆಳಗೆ ಹೋಗುತ್ತಾನೆ .ಮನೆಯಲ್ಲಿ ಯಾರು ಗಮನಿಸಿ ರುವುದಿಲ್ಲ.
ಇತ್ತ ಹಳ್ಳವೊಂದರ ಸಮೀಪದಲ್ಲಿ ‌ಒಂದು ಕೋಣ ಈ‌ ಮಗುವನ್ನು ತಿವಿದು ಕೊಲ್ಲುತ್ತದೆ.copy rights reserved (c)Dr Lakshmi g Prasad
ಅಬ್ಬಗೆ‌ ಮಗನನ್ನು ಹುಡುಕಿಕೊಂಡು ‌ಬರುವಾಗ ಕೋಣ ಮಗುವನ್ನು ಕೊಂದಿರುವುದು ತಿಳಿದು ಅ ಕೋಣದ ತಲೆಯನ್ನು ಕಡಿದು ತನ್ನ ಮಗುವಿಗೆ ಜೋಡಿಸಿ ಜೀವ ಕೊಡುತ್ತಾಳೆ.ತಂದೆ ಈಶ್ವರ ದೇವರು ಬರುವಾಗ ಇವನು ಕೋಡು ಆಡಿಸಿಕೊಂಡು ಬರುತ್ತಾನೆ.ವಿಷಯ ತಿಳಿದ ಈಶ್ವರ   ದೇವರು" ಈ ದಿನೊಕ್ಕ್ ಮೂಜಿ ಅವತಾರದ ಬಾಲೆ,ಅಂಚದ್ ಈ ತಿರ್ತ್ ದ ಸಿರಿಲೋಕ ಗ್ ಪೊದು ನಂದಳಿಕೆ ಪನ್ಪುನ ನಾಲ್ ಸಾನಡ್ ದೇವೆರ್ನ ಬಲಬಾಗಡ್,ಬ್ರಹ್ಮೆರ್ನ ಎಡಬಗಡ್ ನೆಲೆ ಅಲ.ನಂಬುನ ಭಕ್ತೆರ್ ಕೊರ್ಪುನ ಒಂಜಿ ಸೆರ್ ಕುಡು,ಒಂಜಿ ತಾರಯಿ,ಕದಿಕೆ ಪಂತಿ ಸ್ವೀಕರ ಮಲ್ತೊಂದು ಶಾಂತವದ್ ಅಕ್ಲೆನ್ ಕಾಪುದ್ ರಕ್ಷಣೆ ಮಂತೊಂದು ಬಲ" ನೀನು ಒಂದು ದಿನಕ್ಕೆ ಮೂರು ಅವತಾರ ಎತ್ತುವ ಕಾರಣಿಕದ ಮಗು ಕೆಳಗಿನ ಸಿರಿಲೊಕ್ಕೆ ಹೋಗು ನಂದಳಿಕೆಯ ನಾಲ್ಕು ಸ್ಥಾನಗಳಲ್ಲಿ ದೇವರ ಬಲಭಾಗದಲ್ಲಿ ಬೆರ್ಮರ ಎಡಭಾಗದಲ್ಲಿ ‌ನೆಲೆಯಾಗಿ ಭಕ್ತರನ್ನು ಅನುಗ್ರಹಿಸು ಬಕ್ತರು ಭಕ್ತಿಯಿಂದ ನೀಡಿದ ಒಂದು ಸೇರು ಹುರುಳಿ ಒಂದು ತೆಂಗಿನಕಾಯಿ, ಗರಿಕೆ ಹುಲ್ಲು ಸ್ವೀಕರಿಸಿ ಅವರನ್ನು ಕಾಪಾಡು" ಎಂದು ಹೇಳಿದರು ಹೀಗೆ ನಂದ ಳಿಕೆಯಲ್ಲಿ ನೆಲೆಯಾಗಿ ನಿಂತ ದೈವ ಮೈ ಸಂದಾಯ ಮಹಿಷ ಎಂದರೆ ಕೋಣ ಎಂದರ್ಥ  ಕೋಣ ತಿವಿಯುವಿಕೆಯ ಮೂಲಕ ದುರಂತ ವನ್ನಪ್ಪಿದ ಕುಮಾರ ದೈವತ್ವ ‌ಪಡೆದು ಆರಾಧನೆ ಪಡೆಯುತ್ತಾನೆ ದುರಂತ ‌ಮತ್ತು‌ದೈವತ್ವ ತುಳು ಸಂಸ್ಕೃತಿ ಯ ವಿಶೆಷತೆ
ಮೈ ಸಂದಾಯ ‌ದೈವದ‌ ಕುರಿತು ಇನ್ನೊಂದು ರೀತಿಯ ಕಥಾನಕವೂ ಇದೆ .
ಇದರ ಪ್ರಕಾರ ಬಾಲೆ ಬಂಗೆರೆ ಮತ್ತು ಗಣಪಗ ಮದುವೆಯಾಗುತ್ತಾರೆ .ಗಣಪಗ ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ಕೊಡುತ್ತಾಳೆ.ಬಾಲೆ ಬಂಗರೆ ಯುದ್ಧಕ್ಕೆ ದಂಡಿನಲ್ಲಿ ಹೋಗುತ್ತಾನೆ .
ಇತ್ತ. ಮಕ್ಕಳು ಸ್ವಲ್ಪ ದೊಡ್ಡವರಾದಾಗ ಅಕ್ಕ ಪಕ್ಕದ ಮಕ್ಕಳ ಜೊತೆ ಆಟಕ್ಕೆ ಹೋಗುತ್ತಾರೆ.ಆಗ ತಂದೆಯ ಇಲ್ಲದ ಮಕ್ಕಳ ಜೊತೆ ನಾವು ಅಡುವುದಿಲ್ಲ ಎಂದು ಹೇಳಿ ಅವರಲ್ಲಿ ಆಡಲು ನಿರಾಕರಿಸುತ್ತಾರೆ ಆಗ‌ಮಕ್ಕಳು ತಮ್ಮ  ತಂದೆ ಎಲ್ಲಿ ಇದ್ದಾರೆ? ಎಂದು ತಾಯಿಯನ್ನು ‌ಕೇಳಿದಾಗ ಯುದ್ಧಕ್ಕೆ ಹೋದ ವಿಚಾರವನ್ನು ತಾಯಿ ಗಣಪಗ ತಿಳಿಸುತ್ತಾಳೆ
ಆಗ ಮಕ್ಕಳು ‌ಹಠ ಹಿಡಿದು ತಂದೆಯನ್ನು ಹುಡುಕಿಕೊಂಡು ಹೋಗುತ್ತಾರೆ.ತಂದೆಯನ್ನು ಕಂಡು ನಮಸ್ಕಾರ ಮಾಡಿ ತೆಂಕು ದಿಕ್ಕಿನಲ್ಲಿ ಯುದ್ಧ ಮಾಡುತ್ತಾರೆ .ಯುದ್ಧ ದಲ್ಲಿ ಸೋಲುತ್ತಾರೆ.ವೈರಿಗಳು ಇವರ ತಲೆಯನ್ನು ಕಡಿದು ತುಂಡು ಮಾಡುತ್ತಾರೆ.
ವಿಷಯ ತಿಳಿದ ತಾಯಿ‌  ಬಂದು ಮಕ್ಕಳ ಬಾಯಿಗೆ ಮೊಲೆ ಹಾಲು ಸುರಿಸಿ ಜೀವ ಕಳೆ ಕೊಟ್ಟು ಕೈಲಾಸಕ್ಕೆ ಹೋಗಿ ಎನ್ನುತ್ತಾಳೆ.ದೊಡ್ಡವನನ್ನು ಮಗು‌ ಮಲ್ಲಾಸುರ ನೀನುಬಡಗು ದಿಕ್ಕಿಗೆ  ಕೈಲಾಸದಲ್ಲಿ ನಂದಿ ಗೋಣ ನಾಗು ಎನ್ನುತ್ತಾಳೆ.ಚಿಕ್ಕವ ನಿಗೆ ನೀನು‌ ದಕ್ಷಿಣ ಕ್ಕೆ ಹೋಗಿ ಗರುಡ ರೂಪ ‌ಪಡೆ ಎಂದು ಹರಸುತ್ತಾಳೆ ಅಂತೆ ದೊಡ್ಡವನು ನಂದಿಗೋಣ ನಾಗಿ ಮೈಸಂದಾಯ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ .copy rights reserved (c)Dr Lakshmi g Prasad

No comments:

Post a Comment