Sunday, 30 October 2016

ಸಾವಿರದೊಂದು ಗುರಿಯೆಡೆಗೆ 327 28ಪಡವೀರನ್,ಚೆಮ್ಮರತಿ (c) Dr.Lakshmi G prasad

ಪಡೆ ಎಂದರೆ ಸೈನ್ಯ ಎಂದರ್ಥ,ಹಾಗಾಗಿ ಪಡೆ ವೀರ ಎಂದರೆ ಯುದ್ಧವೀರ ಎಂದಾಗುತ್ತದೆ.ಆದ್ದರಿಂದ ಪಡವೀರ ತೆಯ್ಯಂ ಮೂಲತಃ ಓರ್ವ ಸಾಹಸಿ ಯುದ್ಧ ವೀರ ಎಂದು ಖಂಡಿತವಾಗಿ ಹೇಳಬಹುದು
ತೋಟ್ಟಂ ಪಾಟ್ (ತುಳುವರ ಪಾಡ್ಡನಕ್ಕೆ ಸಂವಾದಿಯಾಗಿರುವ ರಚನೆ)ಪ್ರಕಾರ ಪಡವೀರನ್ ನ ಮೂಲ ಹೆಸರು ಮನ್ನಪನ್ .ಈತಮನ್ನಪ್ಪನ್ ಕಣ್ಣೂರಿನ ತಾಲಿಪರಂಬದಲ್ಲಿನ ಮಂಗಾಡಿನ ಮೆಲ್ತಾಲಿ ಮನೆತನದ ಕುಮಾರ ಮತ್ತು ಪರಕ್ಕಾಯಿ ಮನೆತನದ ಚಕ್ಕಿ ದಂಪತಿಗಳ ಮಗ .ಅವನು ತುಂಬಾ ಚೇಷ್ಟೆಯ ಕಿಲಾಡಿತನದ ಸ್ವಭಾವ ವನ್ನು ಹೊಂದಿದ್ದನು.ಇದರಿಂದಾಗಿ ಅವನ ಹೆತ್ತವರು ಮತ್ತು ಕುಟುಂಬದವರು ಕೋ ಪಿ ಸಿ ಕೊಂಡು ಬುದ್ದಿ ಹೇಳುತ್ತಾ  ಇದ್ದರು.ಅದರಿಂದಾಗಿ ತನ್ನ ಮನೆಯವರ ಮೇಲೆ ಕೋಪ ದಿಂದ ಮನೆ ಬಿಟ್ಟು ತನ್ನ ಸ್ನೇಹಿತರೊಂದಿಗೆ ಕುಡುಕು ಪ್ರದೇಶಕ್ಕೆ ಪ್ರಯಾಣಿಸುತ್ತಾನೆ.ಮನೆ ಬಿಟ್ಟು ಬರುವಾಗ ತನ್ನ ಆಯುಧಗಳಾದ ಬಿಲ್ಲು ಬಾಣಗಳನ್ನು ಜೊತೆಗೆ ತೆಗೆದುಕೊಂಡು ಬಂದಿದ್ದನು . (c) Dr.Lakshmi G prasad
ದಾರಿ ನಡುವೆ ಅವನ ಸ್ನೆಹಿತರು ಅವನಿಗೆ ಮೋಸ‌ಮಾಡಿ ದಾರಿ‌ನಡುವಿನ ಘೋರ ಕಾಡಿನ ಮಧ್ಯೆ ಬಿಟ್ಟು ಹೋಗುತ್ತಾರೆ. ಆದರೂ ಸ್ವಭಾವತಃ ಸಾಹಸಿಯೂ ಧೈರ್ಯಶಾಲಿಯೂ ಆದ ಮನ್ನಪ್ಪನ್ ಮುಂದುವರಿಯುತ್ತಾನೆ ಏಳು ಪರ್ವತಗಳನ್ನು ದಾಟಿ ಅನೇಕ ಅಪಾಯಗಳನ್ನು ಎದುರಿಸಿ ಕುಡಕುವಿನ ಕತಿವನೂರಲ್ಲಿರುವ  ತನ್ನ ಮಾವ ಮನೆಗೆ ತಲುಪುತ್ತಾನೆ.ಮಾವ ಹಾಗೂ ಕುಟುಂಬ ವರು ಅವನನ್ನು ‌ಪ್ರೀತಿಯಿಂದ ನೊಡಿಕೊಳ್ಳುತ್ತಾರೆ.ಅಲ್ಲಿ ಅವನು ಎಣ್ಣೆಯ ವ್ಯಾಪಾರದ ‌ಮಾಡುತ್ತಾ ಇರುತ್ತಾನೆ.
ಕುಡಕುವಿನಲ್ಲಿರುವ ಹನ್ನೆರಡು ಬೆಟ್ಟಗಳನ್ನು ಹತ್ತಿ ಸುತ್ತಿ ಬರುತ್ತಾನೆ.

ಬೆಟ್ಟದ ಮೇಲಿನ ಕುಡಕಿನಬುಡಕಟ್ಟು ಸಮುದಾಯದ ತಳವರ್ಗದ ಸುಂದರ ಹುಡುಗಿ ಚೆಮ್ಮರತಿಯನ್ನು ಪ್ರೀತಿಸಿದನು ಅವಳು ಕುಡ ಇವನನ್ನು ಇಷ್ಟ ಪಟ್ಟು ಮದುವೆಗೆ ಒಪ್ಪುತ್ತಾಳೆ.ಮನ್ನಪ್ಪನ್ ಮಾವನ ಮನೆ ಮಂದಿ ಇವರನ್ನು ಬೆಂಬಲಿಸಿ‌ಮದುವೆ ಮಾಡುತ್ತಾರೆ.
ವಿವಾಹದ ನಂತರ ಮನ್ನಪ್ಪನ್ ಚೆಮ್ಮರತಿ‌ ಮನೆಯಲ್ಲಿ  ವಾಸಮಾಡುತ್ತಾನೆ.
ಸ್ವಭಾವತ ಮೇಲರಿಮೆಯ ಹಠಮಾರಿ ಹುಡುಗಿ ಚೆಮ್ಮರತಿ ಅವನಲ್ಲಿ ವಿನಾಕಾರಣ ಜಗಳ ತೆಗೆಯುತ್ತಿರುತ್ತಾಳೆ.
ಒಂದು ದಿನ ಕುಡಕುವಿನಲ್ಲಿರುವ ಸೈನಿಕರು ಅವನಲ್ಲಿ‌ ಯುದ್ದಮಾಡಿ‌ ಗೆಲ್ಲುವಂತೆ ಪಂಥ ಹಾಕಿ ಕೆಣಕುತ್ತಾರೆ.
ಆಗ ಚೆಮ್ಮರತಿ ಮನ್ನಪ್ಪನ್ ನಲ್ಲಿ ಈಗಲೇ ಅವರಲ್ಲಿ ಯುಧ್ದಮಾಡಿ ಗೆದ್ದು ಮಲಯರ ಸಾಮರ್ಥ್ಯ ವನ್ನು ತೋರಿಸು ಎಂದು ಹೇಳುತ್ತಾಳೆ.ಆಗ ಅವನು ಊಟವನ್ನು ಕೂಡ ಪೂರ್ಣ ಮಾಡದೆ  ಅರ್ಧದಿಂದಲೇ ಎದ್ದು ಯುದ್ಧಕ್ಕೆ ದೊಡ್ಡದೊಂದು ಕತ್ತಿ ಹಿಡಿದುಕೊಂಡು ಹೊರಡುತ್ತಾನೆ.ಹೋಗುವಾಗ ಮನೆಯ ಬಾಗಿಲಿನ ದಾರಂದಕ್ಕೆ ಅವನ ಹಣೆ ಬಡಿದು ರಕ್ತ ಬರುತ್ತದೆ.ಇದೊಂದು ಅಪಶಕುನವಾಗಿರುತ್ತದೆ  ಆದರೂ ಆತ ಮುಂದುವರಿಯುತ್ತಾನೆ.
ಕುಡಕು ಸೈನ್ಯದೊಂದಿಗೆ ಹೋರಾಡಿ ಗೆಲ್ಲುತ್ತಾನೆ.ಗೆದ್ದು ಹಿಂದೆ ಬರುವಾಗ ತನ್ನ ಚಿನ್ನದ ಉಂಗುರ ಎಲ್ಲೊ ಬಿದ್ದು ಹೋಗಿ ಕಳೆದು ಹೋಗಿತ್ತು  (c) Dr.Lakshmi G prasad
ಉಂಗುರವಿಲ್ಲದೆ ಹೋದರೆ ಚೆಮ್ಮರತಿ ಹಂಗಿಸುತ್ತಾಳೆ ಎಂದು ಆತ ಮತ್ತೆ ಯುದ್ಧ ಭೂಮಿ ಗೆ ಹೋಗಿ ಹುಡುಕುತ್ತಾನೆ.ಈ ಸಂದರ್ಭದಲ್ಲಿ ಕುಡಕು ಸೈನಿಕರು‌ ಮುತ್ತಿ ಅವನನ್ನು ಕೊಲ್ಲುತ್ತಾರೆ.
ನಂತರ ವಿಷಯ ತಿಳಿದ ಚೆಮ್ಮರತಿ ಪಶ್ಚಾತ್ತಾಪ ಪಡುತ್ತಾಳೆ.ಆದರೆ ಕಾಲ‌ಮಿಂಚಿ ಹೋಗಿತ್ತು.
ಮನ್ನಪ್ಪನ್ ಮಾವನ ಮಗ ಅವನ ಅಂತ್ಯ ಸಂಸ್ಕಾರದ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಿ ಚಿತೆಗೆ ಬೆಂಕಿ ಕೊಡುತ್ತಾನೆ.ಚಿತೆ ಉರಿಯುತ್ತಿರುವಾಗ ಚೆಮ್ಮರತಿ ಯು ಆಕಾಶದಲ್ಲಿ ಒಂದು ನಕ್ಷತ್ರ ಕಾಣುತ್ತಿದೆ ನೋಡಿ ಎಂದು ಹೇಳುತ್ತಾಳೆ. ನಡು ಹಗಲು‌ನಕ್ಷತ್ರ ಕಾಣಲು ಹೇಗೆ ಸಾಧ್ಯ? ಎಂದು ಅಚ್ಚರಿ ಗೊಂಡ ಜನರು ಕತ್ತೆತ್ತಿ ಆಕಾಶ ನೋಡಲು ಅವರೆಲ್ಲರ ಕಣ್ತಪ್ಪಿಸಿ ಉರಿಯುವ ಕಾಷ್ಟಕ್ಕೆ ಹಾರಿ ಚೆಮ್ಮರತಿ ಸತಿ ಹೋಗುತ್ತಾಳೆ
‌ಎಲ್ಲ ಕ್ರಿಯೆಗಳ ನಂತರ ಮನ್ನಪ್ಪನ್ ಮಾವನ ಮಗ ಅನ್ನುಕನ್ ಸ್ನಾನ ಮಾಡಿ ಬರುವಾಗ ಮನ್ನಪ್ಪನ್ ದೈವಿಕ ಸ್ವರೂಪ ಹೊಂದಿ ಅವನಿಗೆ ಕಾಣಿಸಿಕೊಳ್ಳುತ್ತಾನೆ  .ಅನ್ನುಕನ್ ಎಲ್ಲರಿಗೆ ಈ ವಿಷಯ ತಿಳಿಸುತ್ತಾನೆ ಮನ್ನಪ್ಪನ್ ದೇವರ ಜೊತೆ ಸೇರಿ ದೈವ ಆಗಿದ್ದಾನೆ ಎಂದು ತಿಳಿದ ಜನರು ಅವನನ್ನು ಆರಾಧಿಸುತ್ತಾರೆ  .ಈತನನ್ನು ಕತಿವನೂರ್ ವೀರನ್ ,ಪಡವೀರನ್ ಎಂದೂ ಕರೆಯುತ್ತಾರೆ (c) Dr.Lakshmi G prasad
‌ ಆಧಾರ
http://indianfolklore.org/TataFellowships/?tag=kerala

No comments:

Post a Comment