Sunday, 30 October 2016

329,30,31 ಮಾಕ್ಕಂಭಗವತಿ,ಚಾತು,ಚೀರು(c)ಡಾ.ಲಕ್ಷ್ಮೀ ಜಿ ಪ್ರಸಾದ

ಮಾಕ್ಕಂ ಭಗವತಿ,ಚಾತು,ಚೀರು
ದುರಂತ ಮತ್ತು ದೈವತ್ವ ಭೂತಾರಾಧನೆ ಯ ಅವಿಭಾಜ್ಯ ಅಂಶಗಳು, ಹಾಗೆಂದು ದುರಂತವನ್ನಪ್ಪಿದ ಎಲ್ಲರೂ ದೈವತ್ವ ಪಡೆಯುವುದಿಲ್ಲ ಅಂತೆಯೇ ಎಲ್ಲ ದೈವಗಳ ಮೂಲಗಳಲ್ಲಿಯೂ ದುರಂತ ಮತ್ತು ದೈವತ್ವವಿದೆ ಎಂದು ಹೇಳಲಾಗದು ಆದರೂ ಅನೇಕ ದೈವಗಳ ಹಿನ್ನೆಲೆಯಲ್ಲಿ ದುರಂತ ‌ಕಥಾನಕಗಳಿವೆ
ಸಾಂಸ್ಕೃತಿಕ ತುಳುನಾಡಿನ ದಕ್ಷಿಣ ಭಾಗಗಳಲ್ಲಿ ಎಂದರೆ ಕಾಸರಗೋಡು ಕಣ್ಣೂರುಗಳಲ್ಲಿ ನೂರಾರು ತೆಯ್ಯಂ ಗಳಿಗೆ ಆರಾಧನೆ ಇದೆ .ಮಾಕ್ಕಂ ಭಗವತಿ ,ಚಾತು, ಚೀರು ದೈವಗಳು ಈ ಪರಿಸರದಲ್ಲಿ ಮಲಯಾಳ ಶೈಲಿಯಲ್ಲಿ ಆರಾಧಿಸಲ್ಪಡುತ್ತಾರೆ.
ಮೂಲತಃ ಇವರು ದುರಂತವನ್ನಪ್ಪಿ ದೈವತ್ವ ಪಡೆದ ಮಾನವರು.
ಮಾಕ್ಕಂ ತುಂಬಾ ಒಳ್ಳೆಯ ಗುಣದ ವನಿತೆ .ಕಣ್ಣನ್ನೂರಿನ ಕುಂಞಿಮಂಗಲದಲ್ಲಿ ಪ್ರಸಿದ್ಧವಾದ ಕಡಂಗೋಟ್ ಕುಟುಂಬದಲ್ಲಿ ಗಂಡ ಹಾಗೂ ಇಬ್ಬರು‌ಮಕ್ಕಳೊಡನೆ ಬದುಕುತ್ತಿದ್ದಳು.
ಆದರೂ ಅವಳ ನಾದಿನಿಯರು ಅವಳಿಗೆ ನಾನಾವಿಧವಾದ ಕಿರುಕುಳ ನೀಡುತ್ತಿದ್ದರು
ಒಂದು ದಿನ ಅವಳನ್ನು ಮತ್ತು ಅವಳ ಮಕ್ಕಳಾದ ಚಾತು‌ಮತ್ತು ಚೀರಿಯರನ್ನು ಒಂದು ಕಾರ್ಯಕ್ರಮ ಕ್ಕೆಂದು ಹೊರಗೆ ಕರೆದುಕೊಂಡು ಹೋಗಿ ಒಂದು ಬಾವಿಗೆ ತಳ್ಳಿ ಕೊಲ್ಲುತ್ತಾರೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಅಲ್ಲಿಂದ ಅವರು ಮನೆಗೆ ಬರುವಷ್ಟರಲ್ಲಿ ಮನೆ ಬೆಂಕಿ‌ಹಿಡಿದು ಉರಿಯುತ್ತಿರುತ್ತದೆ.ಆಗ ಈ ಮೂವರು ದೈವಗಳಾಗಿ ಪರಿವರ್ತನೆ ಗೊಂಡು ದೇವರ ಎಡಬಲಗಳಲ್ಲಿ ನೆಲೆಯಾಗಿರುವುದು ತಿಳಿದು ಬರುತ್ತದೆ ನಂತರ ಅವರನ್ನು ಆರಾಧಿಸುತ್ತಾರೆ
ಮಾಹಿತಿ ಮೂಲ :

ಅನಿಲ್ ನಂಬೂದಿರಿ 

No comments:

Post a Comment