Sunday, 30 October 2016

ಸಾವಿರದೊಂದು ಗುರಿಯೆಡೆಗೆ 332 ಕಂಡನಾರ್ ಕೇಳನ್ (c)ಡಾ,ಲಕ್ಷ್ಮೀ ಜಿ ಪ್ರಸಾದ



ಕಂಡನಾರ್ ಕೇಳನ್  (c)ಡಾ,ಲಕ್ಷ್ಮೀ ಜಿ ಪ್ರಸಾದ
ಕಂಡನಾರ್ ಕೇಳನ್ ಮೂಲತಃ ಓರ್ವ ಬೇಟೆಗಾರ.ಒಮ್ಮೆ ಇದ್ದಿಲಿನ ರಾಶಿಗಾಗಿ ಕಾಡಿಗೆ ಬೆಂಕಿ ಕೊಡುತ್ತಾನೆ.ಆದರೆ ಅವನ ನಿರೀಕ್ಷೆ ಮೀರಿ ಬೆಂಕಿ‌ ಹರಡುತ್ತದೆ.ಅದರಿಂದ ಪಾರಾಗಲು ಒಂದು ಮರವನ್ನು ಏರುತ್ತಾನೆ.ಅವನು‌ಮರ ಏರುವ ಮೊದಲೇ ಎರಡು ಹಾವುಗಳು ಬೆಂಕಿಯ ಕಾವಿಗೆ ನೊಂದು ಮರ ಹತ್ತಿದ್ದವು .ಕಂಡನಾರ ಕೇಲನ್ ಮರ ಹತ್ತಿದಾಗ ಆತನನ್ನು ಕಚ್ಚಿ ಪ್ರತೀಕಾರ ಮಾಡುತ್ತವೆ
ಅವನು ವಿಷವೇರಿ ಸತ್ತು ಮರದಿಂದ ಕೆಳಗೆ ಬೀಳುತ್ತಾನೆ.ಬೆಂಕಿಯ ಕಾವಿಗೆ ಬಳಲಿದ್ದ ಹಾವುಗಳು ಕೂಡ ಸತ್ತು ಅವನ ದೇಹದ ಮೇಲೆ ಬೀಳುತ್ತವೆ. (c)ಡಾ,ಲಕ್ಷ್ಮೀ ಜಿ ಪ್ರಸಾದ
ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದ ಶಿವ ಪಾರ್ವತಿ ಯರು ಇದನ್ನು ನೋಡುತ್ತಾರೆ ಕರುಣೆ ಉಕ್ಕಿ ಬಂದ ಪಾರ್ವತಿ ದೇವಿ ಇವರನ್ನು ಬದುಕಿಸುವಂತೆ ಶಿವನಲ್ಲಿ ಕೇಳಿಕೊಳ್ಳುತ್ತಾಳೆ.ಶಿವ ಅದನ್ನು ಒಪ್ಪದೇ ಇದ್ದರೂ ಅವನಿಗೆ ದೈವತ್ವ ನೀಡಿ ಆರಾಧನೆ ಹೊಂದುವಂತೆ ಕರುಣಿಸುತ್ತಾನೆ .ನಂತರ ಕಂಡನಾರ್ ಕೇಳನ್ ದೈವ/ತೆಯ್ಯಂ ಆಗಿ ಆರಾಧನೆ ಪಡೆಯುತ್ತಾನೆ.  (c)ಡಾ,ಲಕ್ಷ್ಮೀ ಜಿ ಪ್ರಸಾದ
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಆಲೋಚಿಸುವುದಾದರೆ ಬೇಟೆಗಾರನೊಬ್ಬ ಕಾಡ್ಗಿಚ್ಚಿಗೆ ಸಿಲುಕಿ ದುರಂತ ವನ್ನು ಹೊಂದಿದ್ದು ಕಾಲಾಂತರದಲ್ಲಿ ದೈವತ್ವ ಪಡೆದು ಆರಾಧನೆ ಹೊಂದಿರುವ ವಿದ್ಯಮಾನವಿದು
ಮಾಹಿತಿ ಮೂಲ
ಶ್ರೀಜಿತ್ ನಂಬಿಯಾರ್ 

No comments:

Post a Comment