Monday, 31 October 2016

ಸಾವಿರದೊಂದು ಗುರಿಯೆಡೆಗೆ 334,35 ವಿಷ್ಣುಮೂರ್ತಿ‌ಮತ್ತು‌ಪಾಲಂದಾಯಿ ಕಣ್ಣನ್ (c)Dr.Lakshmi G Prasad

ತುಳುನಾಡಿನ ದೈವಗಳಲ್ಲಿ ಹಲವರು ಶಿವಗಣಗಳಾಗಿ ಕಂಡು ಬಂದರೆ ‌ಕೆಲವು ಸಾಧನಾ ಗಣಗಳಾಗಿ ಪರಿಗಣಿಸಲ್ಪಟ್ಟಿವೆ.ಅಂತೆಯೇ ವಿಷ್ಣು ಮೂರ್ತಿ ದೈವ ವಿಷ್ಣುವಿನ ನರಸಿಂಹಾವತಾರದ ಪ್ರತಿರೂಪ ಎಂದು ಹೇಳುತ್ತಾರೆ.
ವಿಷ್ಣು ಮೂರ್ತಿ ದೈವದ ಕಥಾನಕದಲ್ಲಿ‌ ಪಾಲಂತಾಯಿ‌ ಕಣ್ಣ ಎಂಬ ತೀಯ ಸಮುದಾಯದ ಬಡ ಹುಡುಗನ ಕರುಣಾದಾಯಕ ದುರಂತ ಕಥೆಯೂ ಸೇರಿ‌ಕೊಂಡಿದೆ.
ನೀಲೇಶ್ವರ ಸಮೀಪದಲ್ಲಿ ಕೋಲತ್ತನಾಡು ಅರಸನ ಕಾಯಸ್ಥ ನಾಗಿದ್ದ ಬಲಿಷ್ಠ ವ್ಯಕ್ತಿ ‌ಕುರುಪ್/ಕುರುವನಟ್ ಕುರುಪ್  ನಾಯರ್ ಎಂಬಾತನ ಊಳಿಗದವನಾಗಿ ತೀಯ ಸಮುದಾಯದ ಬಡ ಹುಡುಗ ಕಣ್ಣನ್ ಎಂಬವನಿದ್ದ.
ಒಂದು ದಿನ ಮಾವಿನ ಮರ ಹತ್ತಿ ಹಣ್ಣು ತಿಂದು ಗೊರಟನ್ನು‌ ಕೆಳಗೆ ಹಾಕುತ್ತಾನೆ.ಅಲ್ಲಿ‌  ಕುರುವಟ್ ನಾಯರ್ ಮಲಗಿದ್ದನ್ನು ಅವನು ಗಮನಿಸಿರಲಿಲ್ಲ.ಅವನು‌ ಕೆಳಗೆ ಹಾಕಿದ ಗೊರಟು ಅವಳ ಎದೆಯ ಮೇಲೆ ಬಿತ್ತು .ಅವನ ಉದ್ಧಟತನಕ್ಕೆ ಕೋಪಗೊಂಡ ಕುರುವಟ್ ನಾಯರ್ ಅವನನ್ನು ಹೊಡೆದು ಬಡಿದು ಊರಿಂದ ಹೊರಗೆ ಹಾಕುತ್ತಾನೆ.
ಇನ್ನೊಂದು ಐತಿಹ್ಯದ ಪ್ರಕಾರ ಕುರುವನಟ್ ಮಗಳು‌ ತಮ್ಮ ಮನೆ ಹಸುಗಳನ್ನು‌ ಕಾಯುವ ಕೆಳವರ್ಗದ ಬಡ ಹುಡುಗ ಕಣ್ಣನ್ ಅನ್ನು‌ ಪ್ರೀತಿಸುತ್ತಿದ್ದಳು .ಇದು ತಿಳಿದ ಅವಳ ತಂದೆ ‌ಕಣ್ಣನ್ ಅನ್ನು ಹೊಡೆದು ಊರಿಂದ ಓಡಿಸುತ್ತಾನೆ.
ಕುರವಟ್ ನ ದೌರ್ಜನ್ಯ ಕ್ಕೆ ತುತ್ತಾದ ಬಡ ಹುಡುಗನಿಗೆ ಮಂಗಳೂರು ಜಪ್ಪು  ಗುತ್ತಿನ ಒಡತಿ ವಯಸ್ಸಾದ ಕರುಣಾಮಯಿ ಬಿಲ್ಲವ ಮಹಿಳೆ ತಂಡುಲರ್ ಮಾದು ಆಶ್ರಯ ಕೊಡುತ್ತಾಳೆ.ಅವಳ ಇಷ್ಟ ದೈವ ವಿಷ್ಣು ಮೂರ್ತಿಯನ್ನು ದಿನಾಲು ಹಾಲು ನೀರಿಟ್ಟು ಪೂಜಿಸುವ ಕಾಯಕಕ್ಕೆ ನೇಮಿಸುತ್ತಾಳೆ .ಮಕ್ಕಳಿಲ್ಲದ ಅವಳಿಗೆ ಮನೆ ಮಗನಂತೆ ಇರುತ್ತಾನೆ ಕಣ್ಣನ್. (c)Dr.Lakshmi G Prasad
ಅನೇಕ ವರ್ಷಗಳ ನಂತರ ಅವನಿಗೆ ಒಂದು ದಿನ ಕನಸಿನಲ್ಲಿ ಊರಿಗೆ ಹಿಂದಿರುಗು ಎಂದು ಯಾರೋ ಹೇಳಿದಂತೆ ಆಯಿತು.
ಹಾಗಾಗಿ ಹಠ ಹಿಡಿದು ಊರಿಗೆ ಹೊರಡುತ್ತಾನೆ .ಆಗ ಅವನಿಗೆ ಆಶ್ರಯ ‌ಕೊಟ್ಟ ಮಹಿಳೆ ತಾವು ಆರಾಧಿಸುತ್ತಿದ್ದ ವಿಷ್ಣು ಮೂರ್ತಿ ದೈವದ ಕತ್ತಿ‌ಮತ್ತು ಒಲಿಕೊಡೆಯನ್ನು ನೀಡುತ್ತಾಳೆ.
ಅವನ್ನು ಹಿಡಿದುಕೊಂಡು ತನ್ನ ಊರಿಗೆ ಬರುತ್ತಾನೆ ಕಣ್ಣನ್.
ಇದು ತಿಳಿದ‌ ಕುರುವಾಟ್ ಕುರುಪ್ ಮತ್ತು ಆತನ ಅನುಯಾಯಿಗಳು ಅವನನ್ನು ‌ಕೊಲ್ಲಲು ಹೊಂಚುಹಾಕುತ್ತಾರೆ.
ಕಣ್ಣನ್ ಸ್ನಾನ ಮಾಡಲೆಂದು ತನ್ಕತ್ತಿಯನ್ನು  ‌ಕೊಳದ ಬದಿಯಲ್ಲಟ್ಟು ನೀರಿಗೆ ಇಳಿಯುತ್ತಾನೆ.ನಿರಾಯುಧನಾದ ಅವನನ್ನು ಕರುವಾಟ್ ಕುರುಪ್ ಕಡೆಯವರು ಕಡಿದು ಕೊಲ್ಲುತ್ತಾರೆ.
ಕೊಳದ ತಾವರೆ ಹೂಗಳ ಗಿಡಗಳೆಲ್ಲ ತುಂಡಾದವು,ತಾವರೆ ಕೊಳ ಕೆಂಪಾಯಿತು ಎಂದು ವಿವರಣೆ ಇದೆ ಇಲ್ಲಿ ಒಂದು ಹೋರಾಟ ‌ನಡೆಯಿತು ಎಂಬುದು‌ ಸೂಚಿತವಾಗಿದೆ. (c)Dr.Lakshmi G Prasad
ಕಣ್ಣನ್ ಸಾವಿನ ನಂತರ ಕುರುವಾಟ್ ಕುರುಪ್ ನ ಮನೆ ಮಂದಿಗೆಲ್ಲ ನಾನಾವಿಧವಾದ ರೋಗ ರುಜಿನಗಳು ಕಾಡಿದವು
ಆಗ ಕಣ್ಣನ್ ಜೊತೆ ಬಂದ ದೈವದ ಕೋಪ ಇದು ಎಂದು ಕಂಡುಬಂತು ಆದರೂ ಆರಂಭದಲ್ಲಿ ನಾನಾವಿಧವಾದ ಪರೀಕ್ಷೆ ಗಳನ್ನೊಡ್ಡಿ ನಂತರ ಕುರುವಾಟ್ ಕುರುಪ್ ದೈವವನ್ನು ಕೋಲ ಕೊಟ್ಟು ಆರಾದಿಸುತ್ತಾನೆ.
ಇಲ್ಲಿ ವಿಷ್ಣು ಭಕ್ತನಾದ ಪಾಲಂದಾಯಿ ಕಣ್ಣನೇ ದೈವತ್ವ ಪಡೆದು  ವಿಷ್ಣಮೂರ್ತಿ ದೈವವಾಗಿ ಆರಾಧಿಸಲ್ಪಡುತ್ತಾನೆ ಎಂಬ ನಂಬಿಕೆ ಇದೆ
ವಿಷ್ಣು ಮೂರ್ತಿ ಆತನ ಆರಾಧ್ಯ ದೈವ ,ಆತ ವಿಷ್ಣು ಮೂರ್ತಿ ದೈವದ ಸೇರಿಗೆಗೆ ಸಂದು ಪಾಲಂದಾಯಿ ಕಣ್ಣ ಎಂದೇ ಆರಾಧಿಸಲ್ಪಡುತ್ತಾನೆ ಎಂದು ಕೂಡ ಹೇಳುತ್ತಾರೆ (c)Dr.Lakshmi G Prasad

No comments:

Post a Comment