Saturday, 24 December 2016

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು: 337-338 ಜಮೆಯ ಜಮೆಯತಿ ©ಡಾ.ಲಕ್ಷ್ಮೀ ಜಿ ಪ್ರಸಾದ

ಜಮೆಯ ಜಮೆಯತಿ
ಈ ಇಬ್ಬರು ದೈವಗಳಿಗೆ ಉದ್ಯಾವರದಲ್ಲಿ ಆರಾಧನೆ ಇರುವ ಬಗ್ಗೆ ಯುವ ಸಂಶೋಧಕ ಶಂಕರ್ ಕುಂಜತ್ತೂರು ಅವರು ತಿಳಿಸಿದ್ದಾರೆ.
ಇಲ್ಲಿ ಪ್ರಚಲಿತವಿರುವ ನಂಬಿಕೆಯಂತೆ ಉದ್ಯಾವರದಲ್ಲಿ ಮೊದಲು ಆರಾಧನೆ ಪಡೆಯುತ್ತಿದ್ದ ದೈವತಗಳು ಜಮೆಯ ಮತ್ತು ಜಮೆಯತಿ .ಉದ್ಯಾವರಕ್ಕೆ ಅರಸು ದೈವ ಗಳು ಬಂದಾಗ ಅಲ್ಲಿ ಹೋರಾಟವಾಗುತ್ತದೆ.ಅರಸು ದೈವಗಳು ಜಮೆಯ ದೈವವನ್ನು ಸೋಲಿಸುತ್ತವೆ .ಮುಂದೆ ಅಲ್ಲಿ ಅರಸು ದೈವಗಳ ಆರಾಧನೆ ಆರಂಭವಾಗುತ್ತದೆ .ಆದರೆ ಮೂಲತಃ ಅಲ್ಲಿದ್ದ ಜಮೆಯ ಮತ್ತು ಜಮೆಯತಿ ದಂಪತಿ ದೈವತಗಳಿಗೂ ತಂಬಿಲ ನೀಡಿ ಆರಾಧನೆ ಮಾಡುತ್ತಾರೆ
ಅಲೌಕಿಕ ನೆಲೆಯನ್ನು ಬಿಟ್ಟು ಲೌಕಿಕ ನೆಲೆಯಲ್ಲಿ ಆಲೋಚಿಸಿದಾಗ ಜಮೆಯ ಉದ್ಯಾವರ ಪರಿಸರವನ್ನು ಆಳುತ್ತಿದ್ದ ಸ್ಥಳೀಯ ಅರಸು ಅಥವಾ ಬುಡಕಟ್ಟು ನಾಯಕನಿರಬಹುದು ಉದ್ಯಾವರಕ್ಕೆ ಬಂದ  ಅರಸುಗಳು  ಆತನನ್ನು ಸೋಲಿಸಿರುವ ಸಾಧ್ಯತೆ ಇದೆ.ಉದ್ಯಾವರ ಅರಸು ಗಳು ದೈವತ್ವ ಪಡೆದು ಆರಾಧಿಸಲ್ಪಡುವ ಸಂದರ್ಭದಲ್ಲಿ  ಮೊದಲು ಅಲ್ಲಿದ್ದ ನಾಯಕನಿಗೂ ದೈವಿಕತೆ ಸಿಕ್ಕಿ ಆರಾಧನೆ ಆರಂಭವಾಗಿರಬಹುದು ,ಈ ಬಗ್ಗೆ ಹೆಚ್ಚಿನ ಅಧ್ಯಯನ ಕ್ಕೆ ಅವಕಾಶವಿದೆ
ಜಮೆಯ ಜಮೆಯತಿ ದೈವಗಳ ಮಾಹಿತಿ ನೀಡಿದ ಶಂಕರ್ ಕುಂಜತ್ತೂರು ಇವರಿಗೆ ಹೃತ್ಪೂರ್ವಕ ಧನ್ಯವಾದಗಳು

  1. Copy rights reserved ©Dr Lakshmi G Prasad 

No comments:

Post a Comment