Thursday, 13 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 344 ಕಟ್ಟು ಎಡ್ತುನ್ ಕುಟ್ಟಿ © ಡಾ.ಲಕ್ಷ್ಮೀ ಜಿ ಪ್ರಸಾದ

ಭೂತಾರಾಧನೆ ಒಂದು ವಿಶಿಷ್ಠವಾದ ಆರಾಧನಾ ಪದ್ದತಿ .ಇಲ್ಲಿನ ಆರಾಧ್ಯ ದೈವಗಳು ಮಣ್ಣಿನ ಸತ್ಯಗಳೆಂದು ಕರೆಯಿಸಿಕೊಳ್ಳುವ ಶಕ್ತಿಗಳು .ಅದೇ ಮಣ್ಣಿನಲ್ಲಿ ಹುಟ್ಟಿ ಸತ್ಯವನ್ನು ಮೆರೆಸಿದ ಶಕ್ತಿಗಳು ಇವರು .ಹಾಗಾಗಿ ದೈವಗಳಲ್ಲಿ ಹೆಚ್ಚಿನ ನವರು ಮಾನವ ಮೂಲದ ಶಕ್ತಿಗಳು.
ಪ್ರಧಾನ ದೈವವನ್ನು ಭಕ್ತಿಯಿಂದ ಆರಾಧಿಸಿದ ಭಕ್ತರು ಕೆಲವರು ಅದೇ ದೈವದ ಸೇರಿಗೆಗೆ ಸಂದು ಆರಾಧನೆ ಹೊಂದಿರುವುದು ಕೆಲವೆಡೆ ಕಂಡು ಬಂದಿದೆ .ಕಾರಿಂಜೇಶ್ವರ ದೇವಾಲಯ ಕಟ್ಟಿಸಿದ ಬ್ರಾಹ್ಮಣ ಕಾರಿಂಜೆತ್ತಾಯ ಎಂಬ ದೈವವಾಗಿ ಆರಾಧನೆ ಪಡೆಯುತ್ತಾನೆ .ರಕ್ತೇಶ್ವರಿಗೆ ನಿತ್ಯವೂ ದಿಪ ಇಟ್ಟು ಭಕ್ತಿ ಯಿಂದ ಆರಾಧಿಸಿದ ಅಕ್ಕ ಅರಸು ಎಂಬ ಜೈನ ಅರಸಿಅದೇ ದೈವದ ಸೇರಿಗೆಗೆ ಸಂದು  ಅಕ್ಕಚ್ಚು ದೈವವಾಗಿ ಆರಾಧನೆ ಪಡೆಯುತ್ತಾಳ.ಹಿರಿಯಡ್ಕದಲ್ಲಿ ವೀರಭದ್ರ ನನ್ನು ಪ್ರತಿಷ್ಠಾಪಿಸಿ ಆರಾಧಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವವಾಗಿ ನೆಲೆ ನಿಂತಿದ್ದಾನೆ
ಹಾಗೆಯೇ ವೇಟಕರಿಮುಗನ್ ದೈವವನ್ನು ಆರಾಧಿಸಿದ ಹುಡುಗನೊಬ್ಬ ಅದೇ ದೈವದ ಸೇರಿಗೆಗೆ ಸಂದು ಕಟ್ಟು ಎಡ್ತುನ್ ಕುಟ್ಟಿ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ .
ಅ ದೈವದ ಹೆಸರೇ ತಿಳಿಸುವಂತೆ ಆತ ಕಟ್ಟು ಹೊತ್ತುಕೊಂಡು ಹೋಗುವ ಕೆಲಸವನ್ನು ಮಾಡುವ ಹುಡುಗ ಆತ ವೇಟ ಕರಿಮುಗನ್ ದೈವದ ಅನನ್ಯ ಭಕ್ತ ಹಾಗಾಗಿ ದೈವ ಆತನ ಮೇಲೆ ಅನುಗ್ರಹ ಬೀರಿ ಆತನನ್ನು ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ .ಆರಿಕ್ಕಾಡಿಯಲ್ಲಿ ವೇಟಕರಿಮುಗನ್ ದೈವದ ಜೊತೆಗೆ ಈತನಿಗೆ ಆರಾಧನೆ ಇದೆ .ಅಲ್ಲಿ ಕೂಡ ಆತ ಕಟ್ಟನ್ನು ಹೊರುವ ಅಭಿನಯವನ್ನು ಮಾಡುತ್ತಿದ್ದು ಅದು ಅ ದೈವದ ಮೂಲ ಕೆಲಸವನ್ನು ದ್ಯೋತಿಸುತ್ತದೆ ಇಂತಹ ಅದೆಷ್ಟು ಭೂತಗಳು ಇದ್ದಾರೆಯೋ ,ಅ ದೈವಗಳೇ ಬಲ್ಲವು ,ಎಲ್ಲೆಡೆ ಇಂತಹ ಸ್ಥಳೀಯ ದೈವಗಳ ಆರಾಧನೆ ಇದೆ .ಪ್ರತಿ ಮನೆ‌ಮನೆಗೆ ಹೋಗಿ ಭೂತಾರಾಧನೆಯನ್ನು ದಾಖಲಿಸಿ ಅಧ್ಯಯನ ‌ಮಾಡಿದರೆ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮಾಹಿತಿ ದೊರಕೀತು ಆದರೆ ಇಂದಿನ ದಿನಗಳಲ್ಲಿ ಭೂತಗಳ ಹೆಸರುಗಳು ಕೂಡ ತೆರೆಮರೆಗೆ ಸರಿಯುತ್ತಿವೆ ಎಂಬ ವಿಚಾರ ಚಿಂತನೀಯ ವಾಗಿದೆ ಆರಿಕ್ಕಾಡಿಯಲ್ಲಿ ನೂರು ವರ್ಷಗಳ ಹಿಂದ  ನೂರೊಂದು ದೈವಗಳಿಗೆ ಬೇರೆ ಬೇರೆಯಾಗಿ ಭೂತ/ ತೆಯ್ಯಂ  ಕಟ್ಟಿ ಆರಾಧನೆ ಆಗುತ್ತಿತ್ತು. ಈಗ ಅ ದೈವಗಳ ಹೆಸರುಗಳು ಕೂಡ ಕಳೆದು ಹೋಗಿವೆ ಕೇವಲ ಹತ್ತು ಹನ್ನೆರಡು ದೈವಗಳ ಹೆಸರುಗಳು ಮಾತ್ರ ಉಳಿದಿವೆ .ಹೆಸರು ಕಳೆದು ಹೋದವುಗಳನ್ನು ಗಣಗಳು ಎಂಬ ಒಂದು ಪದದಲ್ಲಿ ಅಡಕಗೊಳಿಸಿಬಟ್ಟಿದ್ದಾರೆ ಇಲ್ಲ ಮಾತ್ರ ಈ ಸ್ಥಿತಿ ಇರುವುದಲ್ಲ ಎಲ್ಲೆಡೆ ಇದೇ ಪರಿಸ್ಥಿತಿ ಎದುರಾಗಿದೆ .ಪಾಡ್ದನ ಗಳು ಕಳದು
 ಹೋಗಿವೆ ಮೂಲ ವೇಷಭೂಷಣ ಗಳು ಬದಲಾಗಿವೆ ಹೆಸರುಗಳು ಕೂಡ ಬದಲಾಗಿವೆ ಹೆಚ್ಚಿನ ಹೆಸರುಗಳು ಕಳೆದು ಹೋಗಿವೆ.ಈಗಿನ್ನು ಅಳಿದುಳದಿರುವುದನ್ನಾದರೂ ದಾಖಲಿಸಿ ಅಧ್ಯಯನ ತುರ್ತಾಗಿ ಮಾಡಬೇಕಿದೆ  © ಡಾ.ಲಕ್ಷ್ಮೀ ಜಿ‌ಪ್ರಸಾಸ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು 

No comments:

Post a Comment