Thursday, 13 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 345 ಮಿತ್ತ ಮುಗರಾಯ©ಡಾ.ಲಕ್ಷ್ಮೀ ಜಿ ಪ್ರಸಾದ

 ಬಂಗರಸರಿಗೆ ಯುದ್ದದಲ್ಲಿ ಸಹಾಯ ಮಾಡಿದ ಇಬ್ಬರು ಮುಗೆರರಲ್ಲಿ ಚಿಕ್ಕವನಿಗೆ ಈಗಿನ ಪಟ್ಟತ್ತ ಮುಗರು ಎಂಬ ಲ್ಲಿ ಪಟ್ಟವಾಗುತ್ತದೆ .ಹಿರಿಯಾತ ಯಾರು ಎಂಬ ಬಗ್ಗೆ ಅಸ್ಪಷ್ಟತೆ ಇದೆ ಹಿರಿಯಾತ ಬಡಜ ಆತ ಈಗಿನ ಬಡಾಜೆ ಪರಿಸರದಲ್ಲಿ ಅಡಳಿತ ಮಾಡಿದ ಹಾಗಾಗಿ ಬಡಾಜೆ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ .ಆದರೆ ಬಡಜ ಎಂಬಾತ ಪಟ್ಟದ ಮುಗರನ ದೂರದ ಸಂಬಂಧಿ ಅತ ಶೂರನಾಗಿದ್ದು ಇವರಿಗೆ ಯುದ್ದದಲ್ಲಿ ಸಹಾಯ ಮಾಡಿ ಗೆಲುವಿಗೆ ಸಹಕಾರ ನೀಡಿದ್ದರಿಂದ ಆತನಿಗೆ ಒಂದು ಗ್ರಾಮವನ್ನು ಮುಗೇರ ಸಹೋದರರು ನೀಡಿದರು ಆತನಿಗೆ ನೀಡಿದ ಗ್ರಾಮವು ಬಡಾಜೆ ಎಂದು ಪ್ರಸಿದ್ಧಿಯಾಯಿತು ಎಂಬ ಐತಿಹ್ಯ ವೂ ಇದೆ .ಹಾಗಾದರೆ ಇಬ್ಬರು ಮುಗರ ನಾಯಕರಲ್ಲಿ ಇನ್ನೊಬ್ಬಾತ ಯಾರು ಎಂಬ ಪ್ರಶ್ನೆ ಬರುತ್ತದೆ .ಅದಕ್ಕೆ ಉತ್ತರವಾಗಿ ಮುಗರ ಸಹೋದರರಲ್ಲಿ ಹಿರಿಯಾತ ಮಿತ್ತ ಮುಗರ ಎಂಬ ಐತಿಹ್ಯ ಪ್ರಚಲಿತವಿದೆ. ಚಿಕ್ಕವನು ತನ್ನ ದರಾಡಳಿತದಿಮಸಾಗಿ ಹಾಗೂ ಬ್ರಾಹ್ಮಣ ಹುಡುಗಿಯನ್ನು ಬಲವಂತವಾಗಿ ಮದುವೆಯಾಗ ಬಯಸಿ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ
ಆಗ ಅತಿಮಾನುಷ  ಆತನ ಅಣ್ಣ ಮುಗರ ಕೂಡ ಮಿತ್ತ ಮುಗರಾಯ  ಎಂಬ ಹೆಸರಿನ ದೈವವಾಗುತ್ತಾನೆ .ಮಿತ್ತ ಮುಗೇರ ದೈವಕ್ಕೆ ವರ್ಕಾಡಿಯಲ್ಲಿ ಆರಾಧನೆ ಇದೆ .ಅಣಿ ಕಟ್ಟಿ ಆರಾಧನೆ ಮಾಡುತ್ತಾರೆ .ಈ ದೈವವನ್ನು ನಲಿಕೆಯವರು ಕಟ್ಟುತ್ತಾರೆ .ಗಡಿಯಾಗುವ ಸಂಪ್ರದಾಯ ವಿದೆ ಎಂದು ವಿಜಯಾನಂದ ರೈ ಅವರು ತಿಳಿಸಿದ್ದಾರೆ .ಅಲ್ಲಿ ಪ್ರಚಲಿತವಿರುವ ಐತಿಹ್ಯ ದಲ್ಲಿ ಮಿತ್ತ ಮುಗೇರ ರಾಯ/ ರಾಜ ಪ್ರಜೆಗಳನ್ನು ತೊಂದರೆ ಕೊಡುತ್ತಿದ್ದನು ದಾಳಿ ಮಾಡುತ್ತಿದ್ದನು ದೇಲಂತಡ್ಕ ಸೇರಿದಂತೆ ಏಳು ದೇವಾಲಯ ಗಳ ನಾಶ ಮಾಡಿದ್ದನು ಇದರಿಂದಾಗಿ ನೊಂದ ಜನರು ತಂತ್ರಿಗಳ ಸಹಾಯದಿಂದ ಆತನನ್ನು  ತಾಮ್ರದ ತಂಬಿಗೆಯಲ್ಲಿ ಬಂಧಿಸಿ ದಿಗ್ಬಂಧನ ಮಾಡಿ ಕುಡುಪಿನಲ್ಲಿ ಹೂತು ಹಾಕಿದ್ದರು .ತುಂಬಾ ಸಮಯದ ನಂತರ ಕೊರತಿ ದೈವ ಹೋಗಿ ಅದನ್ನು ಹೊರತೆಗೆದು ಬಿಟ್ಟಾಗ ಆತ ವರ್ಕಾಡಿಗೆ ಬರುತ್ತಾನೆ ಅಲ್ಲಿ ಆತನಿಗೆ ಸ್ಥಾನ ಕಟ್ಟಿ ಆರಾದನೆ ಮಾಡಿದರು.
ದೇಲಂತಡ್ಕ ದಲ್ಲಿ ಒಂದು ಪಾಳು ಬಿದ್ದ ದೇವಾಲಯ ಇದೆ ಇದು ಹೇಗೆ ಪಾಳು ಬಿತ್ತು ಇಲ್ಲಿನ ಆರಾಧ್ಯ ದೇವರು ಯಾರು ? ಅ ವಿಗ್ರಹ / ಲಿಂಗ ಎಲ್ಲಿ ಹೋಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ .
ಅದಿರಲಿ,ತಮ್ಮ ಸ್ವ ಸಾಮರ್ಥ್ಯ ದಿಂದ ಮಾಗಣೆಯ ಒಡೆತನ ಪಡೆದ ಮುಗೇರ ವೀರರು ದೈವತ್ವ ಪಡೆದು ಆರಾಧನೆ ಹೊಂದುತ್ತಾರೆ .ಅಸಾಧಾರಣ ಸಾಹಸ ಮೆರೆದು ದುರಂತವನ್ನಪ್ಪಿದ ವೀರರು  ದೈವತ್ವ ಪಡೆದು ಆರಾಧನೆ ಪಡೆಯುವುದು ತುಳು ಸಂಸ್ಕೃತಿ ಯ ಒಂದು ವೈಶಿಷ್ಟ್ಯ ವೇ ಆಗಿದೆ  .ಮಿತ್ತ ಮುಗರಾಯನಿಗೆ ವರ್ಷದಲ್ಲ
 ಮೂರು ಬಾರಿ ಆರಾಧನೆ ಮಾಡುತ್ತಾರೆ ©ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ವಿಜಯಾನಂದ ರೈ ಯವರಿಗೆ ಹೃತ್ಪೂರ್ವಕ ಧನ್ಯವಾದಗಳು 

No comments:

Post a Comment